ಕೊಡೆ ಕಲೆ


Team Udayavani, Jun 8, 2018, 6:00 AM IST

c-21.jpg

ಮುಂಗಾರು ಆರಂಭವಾಗಿದೆ. ಮಹಿಳೆಯರು ಮತ್ತು ಮಕ್ಕಳು ಬೋರಿಂಗ್‌ ಬ್ಲ್ಯಾಕ್‌ ಬದಲಿಗೆ ಹೊಸ ಹೊಸ ವಿನ್ಯಾಸಗಳ ಕೊಡೆಗಳನ್ನು ಖರೀದಿಸುತ್ತಿದ್ದಾರೆ. ಟ್ರಾನ್ಸ್‌ ಫ‌ರೆಂಟ್‌ (ಪಾರದರ್ಶಕ) ಪ್ಲಾಸ್ಟಿಕ್‌ ಕೊಡೆಗಳು, ಕಾಮನಬಿಲ್ಲಿನ ಬಣ್ಣವುಳ್ಳ ಛತ್ರಿಗಳು, ಮಕ್ಕಳ ಇಷ್ಟದ ಕಾಟೂìನ್‌ ಚಿತ್ರವುಳ್ಳ ಕೊಡೆಗಳು ತುಂಬಾ ಸಮಯ ದಿಂದ ಮಾರುಕಟ್ಟೆ ಯಲ್ಲಿವೆ. ಆದರೆ, ಇದೀಗ ಟ್ರೆಂಡ್‌ ಆಗುತ್ತಿರುವ ಸ್ಟೈಲ್‌ ಎಂದರೆ ರಾಜಸ್ಥಾನಿ ಛತ್ರಿಗಳು.

ಕಸೂತಿ ವೈಭವ
ರಾಜಸ್ಥಾನಿ ಎಂದ ಕೂಡಲೇ ಕಣ್ಣ ಮುಂದೆ ಕೆಂಪು, ನೀಲಿ, ಹಸಿರು, ಕೇಸರಿ, ಹಳದಿಯಂಥ ಗಾಢ ಬಣ್ಣಗಳು ಮೂಡುತ್ತವೆ. ಅಂತೆಯೇ ಇಂಥ ಛತ್ರಿಗಳಲ್ಲಿ ಕೂಡ ಗಾಢ ಬಣ್ಣಗಳ ಚಿತ್ತಾರವಿರಲಿದೆ. ಕಪ್ಪು , ಕಂದು, ಬೂದಿ, ಬಿಳಿಯಂಥ ಬಣ್ಣಗಳ ಬಳಕೆ ಕಾಣಸಿಗುವುದಿಲ್ಲ. ಫ‌ಡ್‌ (ಮೇವಾಡ್‌), ಮಾರು-ಗುರ್ಜರ್‌, ಕಜರಿ ಮುಂತಾದ ಪ್ರಕಾರದ ರಾಜಸ್ಥಾನಿ ಚಿತ್ರಕಲೆಗಳನ್ನು ಛತ್ರಿಯ ಮೇಲೆ ಮೂಡಿಸಲಾಗುತ್ತಿದೆ. ಚಿತ್ರವನ್ನು ಕೇವಲ ಬಣ್ಣಗಳಲ್ಲಿ ಮಾತ್ರವಲ್ಲ, ಕಸೂತಿ ಕೆಲಸದ ಮೂಲಕವೂ ಬಿಡಿಸುತ್ತಾರೆ. ಚಿತ್ರ ಬಿಡಿಸಲು ತಿಳಿದಿದ್ದರೆ ಅಥವಾ ಕಸೂತಿ ಕೆಲಸ ಗೊತ್ತಿದ್ದರೆ ನೀವು ಸಹ ಛತ್ರಿಗಳ ಮೇಲೆ ಚಿತ್ರ ಬಿಡಿಸಿ, ಪ್ರತಿಭೆ ಹಾಗೂ ಕಲೆಯನ್ನು ಪ್ರದರ್ಶಿಸಬಹುದು.

ಸೂರ್ಯ ಪ್ರಭೆಯಲ್ಲೂ ಚೆಂದ
ಇಂಥ ಛತ್ರಿಯನ್ನು ಬಟ್ಟೆಯಿಂದ ತಯಾರಿಸುವ ಕಾರಣ ಇವುಗಳನ್ನು ಹೆಚ್ಚಾಗಿ ಬಿಸಿಲಿದ್ದಾಗ ಬಳಸಲಾಗುತ್ತದೆ. ಮಳೆಗಾಲದಲ್ಲಿ ಬಳಸುವುದಾದರೆ ಇಂಥ ಛತ್ರಿಗಳಲ್ಲಿ ಬಟ್ಟೆಯ ಕೆಳಗಡೆ ಪ್ಲಾಸ್ಟಿಕ್‌ ಪದರ ಇರುವ ಕಾರಣ, ನಮ್ಮ ತಲೆ ಒದ್ದೆ ಆಗುವುದಿಲ್ಲ. ಒಂದು ವೇಳೆ, ಛತ್ರಿಯಲ್ಲಿದ್ದ ಬಟ್ಟೆ ಬಣ್ಣ ಬಿಟ್ಟರೂ ಅದರಿಂದ ನಮ್ಮ ಉಡುಪಿಗೆ ತೊಂದರೆ ಆಗುವುದಿಲ್ಲ.

ಬಣ್ಣಬಣ್ಣದ ಛತ್ರಿಗಳು
3 ಫೋಲ್ಡ್‌ ಅಥವಾ 4 ಫೋಲ್ಡ್‌ಗಳಲ್ಲೂ ರಾಜಸ್ಥಾನಿ ಛತ್ರಿಗಳು ಸಿಗುತ್ತವೆ. ಆರಾಮಾಗಿ ಈ ಪುಟ್ಟ ಕೊಡೆಗಳನ್ನು ಬ್ಯಾಗ್‌ನಲ್ಲಿ ಇಟ್ಟುಕೊಳ್ಳಬಹುದು. ಮದುವೆ, ಸೀಮಂತ, ಹುಟ್ಟುಹಬ್ಬ , ನಿಶ್ಚಿತಾರ್ಥ ಮತ್ತು ಪಾರ್ಟಿಗಳಲ್ಲಿ ಥೀಮ್‌ ಆಗಿಯೂ ಇವುಗಳನ್ನು ಬಳಸುತ್ತಾರೆ. ದಿಬ್ಬಣ ಬರುವಾಗ ಗಂಡಿನ ಕಡೆಯವರು ಇಂಥ ಛತ್ರಿಗಳನ್ನು ಹಿಡಿದಿರುತ್ತಾರೆ. ವಧುವಿನ ಕಡೆಯವರೆಲ್ಲ ಒಂದು ಬಣ್ಣದ ಛತ್ರಿಗಳನ್ನು ಮತ್ತು ವರನ ಕಡೆಯವರೆಲ್ಲ ಇನ್ನೊಂದು ಬಣ್ಣದ ಛತ್ರಿಗಳನ್ನು ಹಿಡಿದು ಫೋಟೊಗೆ ಪೋಸ್‌ ಕೊಡುತ್ತಾರೆ. ನೋಡಲು ಬಹಳ ಗ್ರ್ಯಾಂಡ್‌ ಆಗಿರುವ ಕಾರಣ ವೆಡ್ಡಿಂಗ್‌ ಫೋಟೋಶೂಟ್‌ಗೂ ಇದು ಹೇಳಿ ಮಾಡಿಸಿದಂತಿದೆ!

ಬಗೆ ಬಗೆಯ ಕೊಡೆ
ಇವುಗಳಲ್ಲಿ ಗೆಜ್ಜೆ , ಮಣಿ, ಕನ್ನಡಿ (ಮಿರರ್‌ ವರ್ಕ್‌), ಗೊಂಡೆ (ತುರುಬು ಕಟ್ಟಲು ಬಳಸುವ ಸಿಂಬೆಯಂಥ ಸಾಧನ), ಗಾಜಿನ ಚೂರುಗಳು, ಚಿಕ್ಕಪುಟ್ಟ ಸರಪಳಿ ಮುಂತಾದವುಗಳನ್ನು ಬಳಸಿ ಬಗೆ ಬಗೆಯ ರಂಗೋಲಿಗಳನ್ನು ಬಿಡಿಸಲಾಗುತ್ತದೆ. ಊಹಿಸಲೂ ಸಾಧ್ಯವಾಗದಷ್ಟು ವಿಭಿನ್ನ ಮತ್ತು ವಿಶಿಷ್ಟ ವಿನ್ಯಾಸಗಳಲ್ಲಿ ಇಂಥ ಕೊಡೆಗಳು ಲಭ್ಯ ಇವೆ. ಆನ್‌ಲೈನ್‌ ಮೂಲಕವೂ ಖರೀದಿಸಬಹುದು. ಇಂಥ ಆಲಂಕಾರಿಕ ವಸ್ತುಗಳಿರುವ ಕಾರಣ, ಅವು ಬಿದ್ದುಹೋಗದಂತೆ ಜಾಗ್ರತೆ ವಹಿಸಬೇಕು. 

ಟಾಪ್ ನ್ಯೂಸ್

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Suside-Boy

Putturu: ನೇಣು ಬಿಗಿದು ಆತ್ಮಹತ್ಯೆ

Suside-Boy

Brahamavara: ಹಾರಾಡಿ: ಬಾವಿಗೆ ಹಾರಿ ಆತ್ಮಹ*ತ್ಯೆ

Arrest

Madikeri: ಕುಶಾಲನಗರ ಕಳವು ಪ್ರಕರಣ: ಇಬ್ಬರ ಬಂಧನ

Accident-logo

Bantwala: ಶಾಲಾ ವಾಹನ ಢಿಕ್ಕಿ; ಸ್ಕೂಟರ್‌ ಸವಾರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.