ವ್ಯಾನಿಟಿ ಬ್ಯಾಗ್‌


Team Udayavani, Jan 13, 2017, 3:45 AM IST

bag.jpg

ವ್ಯಾನಿಟಿ ಬ್ಯಾಗ್‌ ಒಯ್ಯದೇ ಇರುವ ಹೆಂಗಸರು ಯಾರು ಇದ್ದಾರೆ? ಕಾಲೇಜು ಲಲನಾಂಗೆಯರಿಂದ ಹಿಡಿದು ಗೃಹಿಣಿ, ಉದ್ಯೊಗಸ್ಥ ಮಹಿಳೆ, ಹಿರಿಯ ಮಹಿಳೆಯರು ಹೀಗೆ ಎಲ್ಲರೂ ಸಾಮಾನ್ಯವಾಗಿ ಹೊರಗೆ ಹೋಗುವಾಗಲೆಲ್ಲ ವ್ಯಾನಿಟಿ ಬ್ಯಾಗ್‌ ಅವರ ಹೆಗಲೇರಿ ಕುಳಿತಿರುತ್ತದೆ. ವ್ಯಾನಿಟಿ ಬ್ಯಾಗ್‌ ಮಹಿಳೆಯರ ಸದಾ ಜೊತೆಗಿರುವ ಆಪ್ತ ಸಂಗಾತಿಗಳಲ್ಲಿ ಒಂದು. ಅಲ್ಲದೆ, ಹೆಣ್ಮಕ್ಕಳಿಗೆ ಮನೆಯಿಂದ ಹೊರಗೆ ಹೋಗುವಾಗ ಕೈಯಲ್ಲೊಂದು ಪರ್ಸ್‌ ಅಥವಾ ಬ್ಯಾಗ್‌ ಇಲ್ಲದಿದ್ದರೆ ಏನೋ ಕಳೆದುಕೊಂಡಿದ್ದೇನೆ ಅನ್ನುವ ಭಾವನೆ. 

ಹೆಂಗಳೆಯರ ಜಂಬದ ಬ್ಯಾಗ್‌ ಬರೀ ಅಂದಕ್ಕಷ್ಟೇ ಅಲ್ಲ, ಹಲವಾರು ಅನುಕೂಲಕ್ಕೂ ಬಳಕೆಯಾಗುವ ಸಾಧನ. ಈ ಬ್ಯಾಗ್‌ನಲ್ಲಿ ಏನೇನೆಲ್ಲ ಇರುವುದಿಲ್ಲ ಹೇಳಿ? ದುಡ್ಡು , ಪರ್ಸ್‌ನಿಂದ ಹಿಡಿದು ಮೊಬೈಲ್‌, ಮನೆಯ ಕೀ, ಗಾಡಿಯ ಕೀ, ಕಪಾಟಿನ ಕೀಗಳು ಭದ್ರವಾಗಿ ಕುಳಿತಿರುತ್ತವೆ. ಇನ್ನು ಮಹಿಳೆಯರ ಬ್ಯಾಗ್‌ ಎಂದ ಮೇಲೆ ಕೇಳಬೇಕೆ, ಮೇಕಪ್‌ ವಸ್ತುಗಳೇ ಅದರಲ್ಲಿ ಹೆಚ್ಚಾಗಿ ಕಾಣಸಿಗುವುದು. ಮಹಿಳೆಯರ ಪುಟ್ಟ ವಿಶ್ವವೇ ಇದರ ಉದರದಲ್ಲಿರುತ್ತದೆ. ಲಿಪ್‌ಸ್ಟಿಕ್‌, ಪೌಡರ್‌, ಬಿಂದಿ, ಬಳೆ, ಬಾಚಣಿಗೆ, ಕನ್ನಡಿ, ಕಚೀìಪು, ಹೇರ್‌ಕ್ಲಿಪ್ಸ್‌ , ರಬ್ಬರ್‌ಬೈಂಡ್‌, ನೈಲ್‌ಪಾಲಿಶ್‌… ಹೀಗೆ ಇನ್ನೂ ಏನೇನೋ. 

ಬ್ಯಾಗ್‌ನಲ್ಲೂ ಹಲವಾರು ವಿಧಗಳು ಇವೆ. ಬ್ಯಾಗ್‌ಗಳನ್ನು ತಯಾರಿಸುವ ವಸ್ತುಗಳಿಗನುಗುಣವಾಗಿ ಬೀಚ್‌ ಬ್ಯಾಗ್‌, ಜೂಟ್ನಿಂದ ಮಾಡಿದ ಬ್ಯಾಗ್‌, ನೈಲಾನ್‌ ಬ್ಯಾಗ್‌, ಪೌಚ್‌, ಕ್ಲಚ್‌, ಬ್ರೈಡಲ್‌, ಪಾಲಿಸ್ಟರ್‌ ಮೆಸೆಂಜರ್‌ ಬ್ಯಾಗ್‌, ಮೆಸೆಂಜರ್‌ ಬ್ಯಾಗ್‌ಗಳು ಲಭ್ಯವಿವೆ. ಎಲ್ಲಾ ಬಗೆಯ ಬಣ್ಣ, ಸ್ಟೈಲ್‌ ಹಾಗೂ ಗಾತ್ರದಲ್ಲಿ  ಹಲವು ವಿಧದ ಬ್ಯಾಗುಗಳು ಫ್ಯಾಷನ್‌ ಲೋಕ ಮಾರುಕಟ್ಟೆಗೆ ಪರಿಚಯಿಸಿದೆ.

ಇಂದಿನ ಮಹಿಳೆಯರಲ್ಲಿ ದಿನನಿತ್ಯದ ಬಳಕೆಗೆ ಒಂದು, ಶಾಪಿಂಗ್‌ಗೆ ಒಂದು, ಸಮಾರಂಭಗಳಿಗೆ ತೆರಳುವಾಗ ಮತ್ತೂಂದು, ಅಲ್ಲದೆ ಟೂವ್ಹೀಲರ್‌ನಲ್ಲಿ ಪ್ರಯಾಣಿಸುವಾಗ ಹೊಂದಿಕೆಯಾಗುವಂತಹ ಬ್ಯಾಗ್‌ ಹೀಗೆ ವಿವಿಧ ವೆರೈಟಿಯ ಬ್ಯಾಗ್‌ಗಳ ಸಂಗ್ರಹವೇ ಇರುತ್ತದೆ. ಬ್ಯಾಗ್‌ಗಳು ಡ್ರೆಸ್‌ಗಳ ಮ್ಯಾಚಿಂಗ್‌ ಕಲರ್‌ನಲ್ಲಿದ್ದರೆ ಆಹಾ… ಅದರ ಲುಕ್ಕೇ ಬೇರೆ! ದಿನನಿತ್ಯದ ಬಳಕೆಗೆ ನೀರಿನಲ್ಲಿ ತೊಳೆಯುವ ಬ್ಯಾಗುಗಳನ್ನು ಖರೀದಿಸುವುದು ಒಳ್ಳೆಯದು. ಬೀಚ್‌ ಬ್ಯಾಗ್‌ನಂತಹವುಗಳು ನೀರಿನಲ್ಲಿ ತೊಳೆದರೂ ಬಣ್ಣ ಕಳೆದುಕೊಳ್ಳುದಿಲ್ಲ. ಅಲ್ಲದೆ ದಿನನಿತ್ಯದ ಬಳಕೆಗೆ ಕಪ್ಪು ಅಥವಾ ಕಂದು ಬಣ್ಣದ ಬ್ಯಾಗುಗಳ ಆಯ್ಕೆ ಉತ್ತಮ. ಇವು ಎಲ್ಲ ಬಣ್ಣದ ಡ್ರೆಸ್ಗೂ ಹೊಂದಿಕೊಳ್ಳುತ್ತವೆ! ಅಷ್ಟೇ ಅಲ್ಲದೆ, ಬ್ಯಾಗ್‌ನ ಗಾತ್ರ, ಬಣ್ಣ, ಆಕಾರವೂ ಸೌಂದರ್ಯ ಮತ್ತು ಫ್ಯಾಶನ್‌ಗೆ ಕಾಂಪ್ಲಿಮೆಂಟ್‌ ನೀಡುತ್ತದೆ.

– ಎಸ್‌. ಎನ್‌

ಟಾಪ್ ನ್ಯೂಸ್

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು;

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು

Delhi; Roads should be like Priyanka Gandhi’s cheeks: BJP leader’s statement criticized

Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ

4(1

Snuff: ನಶ್ಯ ತಂದಿಟ್ಟ ಸಮಸ್ಯೆ

Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್‌ʼ ಟ್ರೇಲರ್‌ ಔಟ್- ಮಿಂಚಿದ ಅಕ್ಷಯ್

Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್‌ʼ ಟ್ರೇಲರ್‌ ಔಟ್- ಮಿಂಚಿದ ಅಕ್ಷಯ್

Six Naxalites to be brought into the mainstream soon: Process is fast

Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು

11-heart

Heart Rate Control: ಹೃದಯ ಬಡಿತದ ನಿಯಂತ್ರಣದಲ್ಲಿ ಆಧುನಿಕ ಹೃದಯ ಲಯ ಸಾಧನಗಳ ಅಗತ್ಯ ಪಾತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

15-

Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು;

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು

Delhi; Roads should be like Priyanka Gandhi’s cheeks: BJP leader’s statement criticized

Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ

4(1

Snuff: ನಶ್ಯ ತಂದಿಟ್ಟ ಸಮಸ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.