ಬಗೆಬಗೆ ಚಟ್ನಿಗಳು
Team Udayavani, Jan 31, 2020, 4:03 AM IST
ವಿವಿಧ ತರಕಾರಿ, ಹಣ್ಣು, ಸಿಪ್ಪೆ ಇತ್ಯಾದಿಗಳನ್ನು ಬಳಸಿ ವೈವಿಧ್ಯಮಯವಾಗಿ ಚಟ್ನಿಗಳನ್ನು ತಯಾರಿಸುವುದರಿಂದ ನಾಲಿಗೆಯ ರುಚಿ ವೃದ್ಧಿಸುವುದರೊಡನೆ ಆರೋಗ್ಯಕ್ಕೂ ಬಹಳ ಉತ್ತಮ. ಇಲ್ಲಿವೆ ಬಹಳ ಸುಲಭವಾಗಿ ತಯಾರಿಸಬಹುದಾದ ಚಟ್ನಿಗಳು.
ಬಾಳೆಹೂವಿನ ಚಟ್ನಿ
ಬೇಕಾಗುವ ಸಾಮಗ್ರಿ: ಹೆಚ್ಚಿದ ಬಾಳೆಮೋತೆ- ಒಂದು, ಹುಣಸೆಹಣ್ಣು- ಒಂದು ಚಮಚ, ತೆಂಗಿನತುರಿ- ಒಂದೂವರೆ ಕಪ್, ಉದ್ದಿನಬೇಳೆ- ಮೂರು ಚಮಚ, ಇಂಗು- ಒಂದು ಚಮಚ, ಕೆಂಪುಮೆಣಸು- ಐದು, ಉಪ್ಪು ರುಚಿಗೆ.
ತಯಾರಿಸುವ ವಿಧಾನ: ಹೆಚ್ಚಿಟ್ಟ ಬಾಳೆಮೋತೆಗೆ ನೀರು ಸೇರಿಸಿ ಐದು ನಿಮಿಷ ಇಟ್ಟು ನಂತರ ನೀರು ಬಸಿದು ಪುನಃ ಬೇಕಷ್ಟು ನೀರು ಸೇರಿಸಿ ಬೇಯಿಸಿಕೊಳ್ಳಿ. ಬಾಣಲೆಗೆ ಎರಡು ಚಮಚ ಎಣ್ಣೆ ಹಾಕಿ ಉದ್ದಿನಬೇಳೆ, ಇಂಗು, ಕೆಂಪುಮೆಣಸನ್ನು ಹುರಿದು ಮಿಕ್ಸಿಗೆ ಹಾಕಿ. ನಂತರ ತೆಂಗಿನತುರಿ, ಬೇಯಿಸಿಟ್ಟ ಬಾಳೆಮೋತೆ, ಉಪ್ಪು ಮತ್ತು ಹುಣಸೆಗಳನ್ನು ಸೇರಿಸಿ ರುಬ್ಬಿ. ಮಿಕ್ಸಿಂಗ್‌ಬೌಲ್‌ಗೆ ಹಾಕಿ. ಬೇಕಷ್ಟು ನೀರು ಸೇರಿಸಿ ಹದಮಾಡಿಕೊಂಡು ಬೆಳ್ಳುಳ್ಳಿ ಸೇರಿಸಿದ ಸಾಸಿವೆ ಒಗ್ಗರಣೆಯನ್ನು ಕರಿಬೇವಿನ ಜೊತೆ ನೀಡಿ.
ನೆಲ್ಲಿಕಾಯಿ ಚಟ್ನಿ
ಬೇಕಾಗುವ ಸಾಮಗ್ರಿ: ನೆಲ್ಲಿಕಾಯಿ- ಎರಡು, ತೆಂಗಿನತುರಿ- ಒಂದು ಕಪ್, ಹಸಿಮೆಣಸಿನಕಾಯಿ- ಎರಡು, ಉಪ್ಪು ರುಚಿಗೆ.
ತಯಾರಿಸುವ ವಿಧಾನ: ಬೀಜದಿಂದ ಬೇರ್ಪಡಿಸಿದ ನೆಲ್ಲಿಕಾಯಿಗೆ ತೆಂಗಿನತುರಿ, ಉಪ್ಪು, ಹಸಿಮೆಣಸಿನಕಾಯಿ ಮತ್ತು ಬೇಕಷ್ಟು ನೀರು ಸೇರಿಸಿ ರುಬ್ಬಿ ಮಿಕ್ಸಿಂಗ್‌ಬೌಲ್‌ಗೆ ಹಾಕಿ. ನಂತರ, ಉದ್ದಿನಬೇಳೆ ಮತ್ತು ಇಂಗು ಸೇರಿಸಿದ ಸಾಸಿವೆ ಒಗ್ಗರಣೆಯನ್ನು ಕರಿಬೇವಿನ ಜೊತೆ ನೀಡಿ.
ಕೆಸುವಿನ ದಂಟಿನ ಚಟ್ನಿ
ಬೇಕಾಗುವ ಸಾಮಗ್ರಿ: ನಾರು ತೆಗೆದು ಹೆಚ್ಚಿದ ಕೆಸುವಿನದಂಟು- ಒಂದು ಕಪ್, ಹುಣಸೆಹಣ್ಣು- ಒಂದು ಚಮಚ, ಬೆಲ್ಲ- ಒಂದು ಚಮಚ, ಧನಿಯ- ಎರಡು ಚಮಚ, ಇಂಗು- ಅರ್ಧ ಚಮಚ, ಕೆಂಪುಮೆಣಸು- ನಾಲ್ಕು, ತೆಂಗಿನತುರಿ- ಒಂದು ಕಪ್, ಉಪ್ಪು ರುಚಿಗೆ.
ತಯಾರಿಸುವ ವಿಧಾನ: ಕೆಸುವಿನದಂಟಿಗೆ ಹುಣಸೆಹಣ್ಣು, ಉಪ್ಪು, ಬೆಲ್ಲ ಮತ್ತು ಬೇಕಷ್ಟು ನೀರು ಸೇರಿಸಿ ಬೇಯಿಸಿಕೊಳ್ಳಿ. ಬಾಣಲೆಗೆ ಎರಡು ಚಮಚ ಎಣ್ಣೆ ಹಾಕಿ, ಧನಿಯಾ, ಇಂಗು, ಕೆಂಪುಮೆಣಸು- ಇವುಗಳನ್ನು ಹುರಿದು ಮಿಕ್ಸಿಗೆ ಹಾಕಿ. ನಂತರ, ಬೇಯಿಸಿಟ್ಟ ಕೆಸುವಿನದಂಟು ಮತ್ತು ತೆಂಗಿನತುರಿ ಮತ್ತು ರುಚಿಗೆ ಬೇಕಷ್ಟು ಉಪ್ಪು ಸೇರಿಸಿ ರುಬ್ಬಿ ಮಿಕ್ಸಿಂಗ್‌ಬೌಲ್‌ಗೆ ಹಾಕಿ. ಬೆಳ್ಳುಳ್ಳಿ ಸೇರಿಸಿದ ಸಾಸಿವೆ ಒಗ್ಗರಣೆಯನ್ನು ಕರಿಬೇವಿನ ಜೊತೆ ಇದಕ್ಕೆ ನೀಡಿ.
ದಾಳಿಂಬೆ ವಿದ್ ಪುದಿನಾ ಚಟ್ನಿ
ಬೇಕಾಗುವ ಸಾಮಗ್ರಿ: ದಾಳಿಂಬೆ- ಎಂಟು ಚಮಚ, ಪುದಿನ- ಆರು ಚಮಚ, ಶುಂಠಿ- ಅರ್ಧ ಇಂಚು, ಹಸಿಮೆಣಸಿನಕಾಯಿ- ಮೂರು, ತೆಂಗಿನತುರಿ- ಒಂದು ಕಪ್, ಲಿಂಬೆರಸ ಮತ್ತು ಉಪ್ಪು ರುಚಿಗೆ ಬೇಕಷ್ಟು.
ತಯಾರಿಸುವ ವಿಧಾನ: ತೆಂಗಿನತುರಿಗೆ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ ರುಬ್ಬಿ ಮಿಕ್ಸಿಂಗ್‌ಬೌಲ್‌ಗೆ ಹಾಕಿ, ಲಿಂಬೆರಸ ಸೇರಿಸಿ ಮಿಶ್ರಮಾಡಿ, ಉದ್ದಿನಬೇಳೆ ಸೇರಿಸಿದ ಸಾಸಿವೆ ಒಗ್ಗರಣೆ ನೀಡಿ.
ಗೀತಸದಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಭಾರತೀಯ ಸಂಸ್ಕೃತಿ ಮತ್ತು ಭಗವದ್ಗೀತೆ ಕುರಿತು ಕೆ.ಪಿ.ಪುತ್ತೂರಾಯ ಉಪನ್ಯಾಸ
BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್
ಶ್ರೀಕೃಷ್ಣ ಮಠದಲ್ಲಿ ಡಿ.25ಕ್ಕೆ ನ್ಯಾಯಾಂಗದಲ್ಲಿ ಭಗವದ್ಗೀತೆ ಪ್ರಸ್ತುತತೆಯ ವಿಶೇಷ ಸಂವಾದ
New Appointment: ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಿಸಿದ ಕೇಂದ್ರ ಸರ್ಕಾರ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.