ವಿವಿಧ ಅನ್ನಗಳು
Team Udayavani, Oct 5, 2018, 6:00 AM IST
ತರಕಾರಿಯಲ್ಲಿ ಮಾಡುವ ಪಲಾವ್, ಬಿಸಿಬೇಳೆ ಬಾತ್, ವಿವಿಧ ರೀತಿಯ ಚಿತ್ರಾನ್ನ ಈಗಿನ ಮಕ್ಕಳಿಗೆ ತುಂಬ ಇಷ್ಟವಾಗುತ್ತದೆ. ತರಕಾರಿಯಲ್ಲಿ ಮಾಡುವ ಪಲಾವ್, ಅನ್ನಗಳು ಆರೋಗ್ಯಕ್ಕೂ ಒಳ್ಳೆಯದು.
ಹಾಲು-ತರಕಾರಿ ಪಲಾವ್
ಬೇಕಾಗುವ ಸಾಮಗ್ರಿ: 1 ಕಪ್ ಬೆಳ್ತಿಗೆ ಅಕ್ಕಿ (ಸೋನಾ ಮಸೂರಿ), ಒಂದೂವರೆ ಕಪ್ ಹಾಲು, 1/2 ಕಪ್ ಕ್ಯಾರೆಟ್, ಬೀನ್ಸ್, ಹಸಿ ಬಟಾಣಿ ಮಿಶ್ರಣ, 1-2 ಲವಂಗ, 2-3 ಹಸಿಮೆಣಸು, 1/4 ಇಂಚು ಉದ್ದದ ಚಕ್ಕೆ, 6-7 ಗೋಡಂಬಿ, 1/4 ಕಪ್ ಎಣ್ಣೆ , 1/2 ಚಮಚ ಸಾಸಿವೆ, ರುಚಿಗೆ ತಕ್ಕಷ್ಟು ಉಪ್ಪು , ಸ್ವಲ್ಪ ಕೊತ್ತಂಬರಿಸೊಪ್ಪು .
ತಯಾರಿಸುವ ವಿಧಾನ: ಅಕ್ಕಿಯನ್ನು ಚೆನ್ನಾಗಿ ತೊಳೆದು ನೀರು ಬಸಿದು ಇಡಿ. ಕ್ಯಾರೆಟ್, ಬೀನ್ಸ್ , ಕೊತ್ತಂಬರಿಸೊಪ್ಪು ಸಣ್ಣಗೆ ಹೆಚ್ಚಿಡಿ. ನಂತರ ಕುಕ್ಕರ್ ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ಬಿಸಿಯಾದಾಗ ಸಾಸಿವೆ ಹಾಕಿ. ಸಾಸಿವೆ ಸಿಡಿದಾಗ ತುಂಡು ಮಾಡಿದ ಚಕ್ಕೆ, ಲವಂಗ, ಗೋಡಂಬಿ ಹಾಕಿ ಹುರಿಯಿರಿ. ನಂತರ ಅಕ್ಕಿ, ಹಾಲು, 1/2 ಕಪ್ ನೀರು ಸೇರಿಸಿ ನಂತರ ಉಪ್ಪು ಹಾಕಿ ನಂತರ ಕುಕ್ಕರ್ ಮುಚ್ಚಳ ಮುಚ್ಚಿ 2-3 ವಿಸಿಲ್ ಕೂಗಿಸಿ. ನಂತರ ತಣಿದ ಮೇಲೆ ತಟ್ಟೆಯಲ್ಲಿ ಹಾಕಿ. ಈರುಳ್ಳಿ-ಮೊಸರು-ಟೊಮೆಟೊ ಗೊಜ್ಜು ಜೊತೆ ತಿನ್ನಲು ರುಚಿ.
ಬಿಸಿಬೇಳೆ ಬಾತ್
ಬೇಕಾಗುವ ಸಾಮಗ್ರಿ: 1 ಕಪ್ ಸೋನಾ ಮಸೂರಿ ಅಕ್ಕಿ, 3/4 ಕಪ್ ತೊಗರಿಬೇಳೆ, 2 ಒಣಮೆಣಸು, 1 ಹಸಿಮೆಣಸು, 1/2 ಚಮಚ ಲವಂಗ, 1/2 ಚಮಚ ಚಕ್ಕೆ, 2 ಕಾಳುಮೆಣಸು, 1/2 ಚಮಚ ಕೊತ್ತಂಬರಿ, 1/2 ಚಮಚ ಉದ್ದಿನಬೇಳೆ, 1/4 ಚಮಚ ಜೀರಿಗೆ, 7-8 ಕಾಳು ಮೆಂತೆ, ಚಿಟಿಕೆ ಅರಸಿನ, 1 ಕಪ್ ಸಣ್ಣಗೆ ಹೆಚ್ಚಿದ ಬೀನ್ಸ್, ಕ್ಯಾರೆಟ್, ಬಟಾಣಿ ಮಿಶ್ರಣ, 1 ಟೊಮೆಟೊ, 1/2 ಚಮಚ ಹುಳಿರಸ, 1/2 ಚಮಚ ಬೆಲ್ಲ , 1 ಈರುಳ್ಳಿ , 1 ಟೊಮೆಟೊ, 1/4 ಕಪ್ ತೆಂಗಿನ ತುರಿ, ಉಪ್ಪು ರುಚಿಗೆ ತಕ್ಕಷ್ಟು , 1/4 ಚಮಚ ಕೆಂಪು ಮೆಣಸು ಪುಡಿ, 2 ಚಮಚ ಎಣ್ಣೆ , 1 ಎಸಳು ಕರಿಬೇವು, ಕೊತ್ತಂಬರಿಸೊಪ್ಪು .
ತಯಾರಿಸುವ ವಿಧಾನ: ಬಾಣಲೆ ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ಬಿಸಿಯಾದಾಗ ಉದ್ದಿನಬೇಳೆ, ಕೊತ್ತಂಬರಿ, ಜೀರಿಗೆ, ಮೆಂತೆ, ಕೆಂಪುಮೆಣಸು ಹಾಕಿ ಹುರಿಯಿರಿ. ನಂತರ ಚಕ್ಕೆ, ಕಾಳುಮೆಣಸು, ಲವಂಗ ಹಾಕಿ ಹುರಿಯಿರಿ. ನಂತರ ತೆಂಗಿನತುರಿ, ಹುಳಿ, ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ. ನಂತರ ಅಕ್ಕಿಯನ್ನು ಕುಕ್ಕರ್‌ನಲ್ಲಿ ಅನ್ನ ಮಾಡಿ ತೆಗೆದು ಬಟ್ಟಲಿಗೆ ಹಾಕಿ. ಸಣ್ಣಗೆ ತುಂಡು ಮಾಡಿದ ಬೀನ್ಸ್ , ಕ್ಯಾರೆಟ್, ಉಪ್ಪು , ಬೆಲ್ಲ , ಮೆಣಸಿನಪುಡಿ, ಸಿಗಿದ ಹಸಿಮೆಣಸು ಹಾಕಿ ಬೇಯಿಸಿ. ನಂತರ ರುಬ್ಬಿದ ಮಸಾಲೆ ಸೇರಿಸಿ ಕುದಿಸಿ. ತೊಗರಿಬೇಳೆ ಮತ್ತು ಬಟಾಣಿಯನ್ನು ಕುಕ್ಕರ್‌ನಲ್ಲಿ ಬೇಯಿಸಿ. ನಂತರ ಬಾಣಲೆ ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ಎಣ್ಣೆ ಬಿಸಿಯಾದಾಗ ಕರಿಬೇವು, ಕೊತ್ತಂಬರಿಸೊಪ್ಪು , ಅರಸಿನ, ಹೆಚ್ಚಿದ ಈರುಳ್ಳಿ, ಟೊಮೆಟೊ ಹಾಕಿ ಸ್ವಲ್ಪ ಹುರಿಯಿರಿ. ನಂತರ ಅನ್ನ ಸೇರಿಸಿ ಮಗುಚಿ. ನಂತರ ಉಪ್ಪು ಹಾಕಿ. ಮಸಾಲೆಭರಿತ ತರಕಾರಿ, ಕಿವುಚಿದ ತೊಗರಿಬೇಳೆ, ಬಟಾಣಿ ಹಾಕಿ ಬಿಸಿಬೇಳೆ ಬಾತ್‌ನ ಹದಕ್ಕೆ ನೀರು ಸೇರಿಸಿ ಕುದಿಸಿ. ನಂತರ ಒಲೆಯಿಂದ ಕೆಳಗಿಳಿಸಿ. ಮೊಸರು ಬಜ್ಜಿಯೊಂದಿಗೆ ಸವಿಯಿರಿ.
ದುಡ್ಲೆಹುಳಿ ಚಿತ್ರಾನ್ನ
ಬೇಕಾಗುವ ಸಾಮಗ್ರಿ: 1 ಕಪ್ ಸೋನಾ ಮಸೂರಿ ಅಕ್ಕಿ, 1 ದುಡ್ಲೆಹುಳಿ, 3-4 ಹಣಸಿಮೆಣಸು, 1 ಎಸಳು ಕರಿಬೇವಿನೆಲೆ, ಸ್ವಲ್ಪ ಕೊತ್ತಂಬರಿಸೊಪ್ಪು , 1/2 ಚಮಚ ಸಾಸಿವೆ, 1/2 ಚಮಚ ಉದ್ದಿನಬೇಳೆ, 2 ಚಮಚ ತೆಂಗಿನ ತುರಿ, 1/4 ಚಮಚ ಅರಸಿನ ಪುಡಿ, ರುಚಿಗೆ ಬೇಕಷ್ಟು ಉಪ್ಪು , 1 ಈರುಳ್ಳಿ, ಹುರಿದ ನೆಲಗಡಲೆ ಬೀಜ 1 ಚಮಚ, 1/4 ಕಪ್ ಎಣ್ಣೆ.
ತಯಾರಿಸುವ ವಿಧಾನ: ಉದುರು ಉದುರಾಗಿ ಅನ್ನ ಮಾಡಿ. ಹಸಿಮೆಣಸು, ಕರಿಬೇವು, ಕೊತ್ತಂಬರಿಸೊಪ್ಪು ಸಣ್ಣಗೆ ಹೆಚ್ಚಿಡಿ. ಬಾಣಲೆ ಒಲೆಯ ಮೇಲಿಡಿ. ಎಣ್ಣೆ ಹಾಕಿ. ಬಿಸಿಯಾದಾಗ ಸಾಸಿವೆ ಹಾಕಿ. ನಂತರ ಉದ್ದಿನಬೇಳೆ, ಹುರಿದ ನೆಲಗಡಲೆ, ಕರಿಬೇವು, ಈರುಳ್ಳಿ ಚೂರು, ಕೊತ್ತಂಬರಿಸೊಪ್ಪು , ಹೆಚ್ಚಿದ ಹಸಿಮೆಣಸು, ಅರಸಿನ ಪುಡಿ ಹಾಕಿ ಚೆನ್ನಾಗಿ ತೊಳಸಿ. ಉರಿ ಸಣ್ಣಗಿರಲಿ. ಉಪ್ಪು , ಆರಿದ ಅನ್ನ, ತೆಂಗಿನ ತುರಿ, ದುಡ್ಲೆಹುಳಿ ರಸ ಬೇಕಾದಷ್ಟು ಹಿಂಡಿ, ಅನ್ನವನ್ನು ಸರಿಯಾಗಿ ತೊಳಸಿ. ನಂತರ ಬಿಸಿಯಾಗಿರುವಾಗಲೇ ಸವಿಯಿರಿ.
ಎಳ್ಳನ್ನ
ಬೇಕಾಗುವ ಸಾಮಗ್ರಿ: 1 ಕಪ್ ಉದುರು ಉದುರಾಗಿರುವ ಅನ್ನ, 1/4 ಕಪ್ ಎಳ್ಳು , 3 ಚಮಚ ಗಸಗಸೆ, 1 ಚಮಚ ಸಾಸಿವೆ, 1 ಚಮಚ ಜೀರಿಗೆ, ಸ್ವಲ್ಪ ಗೋಡಂಬಿ, 4 ಚಮಚ ಒಣ ಕೊಬ್ಬರಿ, 3-4 ಬ್ಯಾಡಗಿ ಒಣಮೆಣಸು, ನೆಲ್ಲಿಕಾಯಿ ಗಾತ್ರದ ಹುಳಿ, ಉಪ್ಪು ರುಚಿಗೆ ತಕ್ಕಷ್ಟು , ರುಚಿಗೆ ತಕ್ಕಷ್ಟು ಬೆಲ್ಲ , 1 ಚಮಚ ಉದ್ದಿನಬೇಳೆ, ಸ್ವಲ್ಪ ಕೊತ್ತಂಬರಿಸೊಪ್ಪು, 3-4 ಚಮಚ ಎಣ್ಣೆ.
ತಯಾರಿಸುವ ವಿಧಾನ: ಬಾಣಲೆ ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ಬಿಸಿಯಾದಾಗ ಎಳ್ಳು, ಗಸಗಸೆ, ಒಣಮೆಣಸು ಹುರಿಯಿರಿ. ಹುರಿದ ಮಿಶ್ರಣವನ್ನು ಪುಡಿಮಾಡಿ. ನಂತರ ಬಾಣಲೆಗೆ ಎಣ್ಣೆ ಹಾಕಿ. ಬಿಸಿಯಾದಾಗ ಸಾಸಿವೆ ಹಾಕಿ. ಸಾಸಿವೆ ಸಿಡಿದಾಗ ಜೀರಿಗೆ ಹಾಕಿ. ನಂತರ ಉದ್ದಿನಬೇಳೆ, ಗೋಡಂಬಿಯನ್ನು ಹಾಕಿ ಹುರಿಯಿರಿ. ಹುರಿದ ಮಿಶ್ರಣಕ್ಕೆ ಹುಳಿರಸ, ಬೆಲ್ಲ , ಉಪ್ಪು ಹಾಕಿ ಕುದಿಸಿ. ನಂತರ ಒಣಕೊಬ್ಬರಿ ಹಾಕಿ ಇಳಿಸಿ. ಸ್ವಲ್ಪ ತಣಿದ ಬಳಿಕ ಅನ್ನಕ್ಕೆ ಹಾಕಿ ಬೆರೆಸಿ. ಮೊಸರಿನೊಂದಿಗೆ ಸವಿಯಿರಿ.
ಸರಸ್ವತಿ ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.