ಹೆಸರುಕಾಳು ವೈವಿಧ್ಯ
Team Udayavani, Dec 14, 2018, 6:00 AM IST
ಹೆಸರುಕಾಳು ಪ್ರೊಟೀನ್‌ಯುಕ್ತ ಧಾನ್ಯ. ಇದು ರೋಗನಿರೋಧಕ ಶಕ್ತಿ ಹೊಂದಿದೆ. ಆರೋಗ್ಯಕರವಾದ ಈ ಕಾಳಿನಿಂದ ರುಚಿಕರ ಸಾರು, ಪಂಚರತ್ನ, ಪತ್ರೊಡೆ, ಪೊಂಗಲ್ ಮುಂತಾದ ರೆಸಿಪಿಗಳನ್ನು ತಯಾರಿಸಬಹುದು.
ಹೆಸರುಕಾಳಿನ ಕೊಟ್ಟೆ ಕಡುಬು
ಬೇಕಾಗುವ ಸಾಮಗ್ರಿ: 5-6 ಗಂಟೆ ನೆನೆಸಿದ ಹೆಸರುಕಾಳು 1 ಕಪ್, ತೆಂಗಿನ ತುರಿ- 1 ಕಪ್, ಒಣಮೆಣಸಿನ ಕಾಯಿ 6-7, ಉಪ್ಪು ರುಚಿಗೆ, ಹುಣಸೆಹಣ್ಣು ಗೋಲಿಗಾತ್ರ, ಹಲಸಿನ ಎಲೆಯ ದೊನ್ನೆ/ಇಡ್ಲಿ ಬಟ್ಟಲು.
ತಯಾರಿಸುವ ವಿಧಾನ: ತೆಂಗಿನತುರಿ, ಒಣ ಮೆಣಸಿನಕಾಯಿ, ಹುಣಸೆ, ಉಪ್ಪು ಹಾಕಿ ಒಟ್ಟಿಗೆ ನಯವಾಗಿ ರುಬ್ಬಿ. ನಂತರ ಇದಕ್ಕೆ ಹೆಸರುಕಾಳು ತೊಳೆದು ಹಾಕಿ ಸ್ವಲ್ಪ ತರಿ ತರಿಯಾಗಿ ರುಬ್ಬಿರಿ. ಹಲಸಿನ ಎಲೆಯ ಕೊಟ್ಟೆಯಲ್ಲಿ ಇಲ್ಲವೆ ಇಡ್ಲಿ ತಟ್ಟೆಯಲ್ಲಿ ಹಾಕಿ ಹಬೆಯ ಪಾತ್ರೆಯಲ್ಲಿಟ್ಟು ಇಪ್ಪತ್ತು ನಿಮಿಷ ಬೇಯಿಸಿರಿ. ಇದಕ್ಕೆ ಎಣ್ಣೆ ಹಾಕಿ ಸವಿದರೆ ಬಲು ರುಚಿ. ಬೇಯಿಸುವ ಮೊದಲು ನೀರುಳ್ಳಿ ಇಲ್ಲವೆ ಇಂಗಿನ ನೀರು ಹಾಕಿದರೆ ಇನ್ನೂ ಸ್ವಾದಿಷ್ಟವಾಗುವುದು.
ಹೆಸರುಕಾಳಿನ ವರ್ನ (ಸಾರು)
ಬೇಕಾಗುವ ಸಾಮಗ್ರಿ: ಹೆಸರುಕಾಳು- 1/4 ಕಪ್, ತೆಂಗಿನತುರಿ- 1/4 ಕಪ್, ಹಸಿ ಮೆಣಸಿನಕಾಯಿ- 1, ಒಣಮೆಣಸಿನಕಾಯಿ- 2, ಅರಸಿನ ಹುಡಿ- 1/2 ಚಮಚ, ಉಪ್ಪು ರುಚಿಗೆ, ಒಗ್ಗರಣೆಗೆ ಎಣ್ಣೆ , ಸಾಸಿವೆ, ಕರಿಬೇವು, ಜೀರಿಗೆ, ಹುಣಸೆಹಣ್ಣು ಸ್ವಲ್ಪ .
ತಯಾರಿಸುವ ವಿಧಾನ: ಮೊದಲು ಹೆಸರುಕಾಳು ಬೇಯಿಸಿಡಿ. ನಂತರ ಒಣಮೆಣಸಿನಕಾಯಿ ಹುರಿದು ಹುಣಸೆಹಣ್ಣು, ತೆಂಗಿನ ತುರಿ ಸೇರಿಸಿ ನಯವಾಗಿ ರುಬ್ಬಿ. ಕೊನೆಗೆ ಹೆಸರುಕಾಳು ಹಾಕಿ ರುಬ್ಬಿದ ನಂತರ ಪಾತ್ರೆಗೆ ಹಾಕಿ. ಉದ್ದಕ್ಕೆ ಸೀಳಿದ ಮೆಣಸಿನಕಾಯಿ, ಅರಸಿನ, ಉಪ್ಪು ಹಾಕಿ ಕುದಿಸಿರಿ. ಎಣ್ಣೆಯಲ್ಲಿ ಸಾಸಿವೆ, ಕರಿಬೇವು, ಜೀರಿಗೆ ಒಗ್ಗರಣೆ ಮಾಡಿ ಹಾಕಿದರೆ ಹೆಸರುಕಾಳಿನ ವರ್ನ ತಯಾರಿ. ಅನ್ನದೊಂದಿಗೆ ಕಲಸಿ ಊಟ ಮಾಡಬಹುದು.
ಹೆಸರುಕಾಳಿನ ಪತ್ರೋಡೆ
ಬೇಕಾಗುವ ಸಾಮಗ್ರಿ: ಪತ್ರೋಡೆ ಎಲೆ (ಕೆಸುವಿನ ಎಲೆ) 8-12, ನೆನೆಸಿದ ಹೆಸರುಕಾಳು, ತೆಂಗಿನತುರಿ- ಒಂದೂವರೆ ಕಪ್, ಹುರಿದ ಒಣಮೆಣಸಿನ ಕಾಯಿ 8-10, ರುಚಿಗೆ ಉಪ್ಪು , ಹುಣಸೆಹಣ್ಣು- 2 ಗೋಲಿ ಗಾತ್ರ, ಇಂಗು ನೀರು- 1 ಚಮಚ.
ತಯಾರಿಸುವ ವಿಧಾನ: ತೆಂಗಿನತುರಿ, ಹುಣಸೆ, ಒಣಮೆಣಸಿನಕಾಯಿ, ಉಪ್ಪು , ತೊಳೆದ ಹೆಸರುಕಾಳು ಎಲ್ಲವನ್ನು ಒಟ್ಟಿಗೆ ನಯವಾಗಿ ರುಬ್ಬಿ ಇಂಗು ನೀರು ಬೆರೆಸಿ ದಪ್ಪ ಮಸಾಲೆ ತೆಗೆದಿಡಿ.
ಶುಚಿಗೊಳಿಸಿದ ಕೆಸುವಿನೆಲೆಯ ಹಿಂಭಾಗದಲ್ಲಿ ಮಸಾಲೆ ಸವರಿ ಒಂದರ ಮೇಲೆ ಒಂದರಂತೆ ಮೂರು ಮೂರು ಎಲೆ ಇಟ್ಟು ಸುರುಳಿ ಸುತ್ತಿ. ಹಬೆಯ ಪಾತ್ರೆಯಲ್ಲಿ ನೀರು ಕಾದ ಮೇಲೆ ಅದರ ಜಾಲರಿ ಮೇಲೆ ಪತ್ರೋಡೆಗೆ ಸ್ವಲ್ಪ ಗಾಯಮಾಡಿ 25 ನಿಮಿಷ ಬೇಯಿಸಿ ತೆಗೆಯಿರಿ. ಊಟಕ್ಕೆ, ತಿಂಡಿಗೆ ಬಲು ರುಚಿ. (ಬೆಲ್ಲ, ಕೊತ್ತಂಬರಿ, ಸ್ವಲ್ಪ ಅಕ್ಕಿ ಹಾಕಿಯೂ ಪತ್ರೋಡೆ ಮಾಡಬಹುದು)
ಪತ್ರೋಡೆ ಸ್ಲೆ„ಸ್ ಮಾಡಿ ರವಾದಲ್ಲಿ ಮುಳುಗಿಸಿ ತವಾದ ಮೇಲೆ ಕಾಯಿಸಿ ಸೇವಿಸಬಹುದು.
ಹೆಸರುಕಾಳಿನ ಪಂಚರತ್ನ
ಬೇಕಾಗುವ ಸಾಮಗ್ರಿ: ಹೆಸರುಕಾಳು- 1/2 ಕಪ್, ಹಸಿಮೆಣಸಿನಕಾಯಿ- 1, ಟೊಮೆಟೊ- 1, ನೀರುಳ್ಳಿ- 1, ರುಚಿಗೆ ಉಪ್ಪು , ಒಗ್ಗರಣೆಗೆ ಒಣಮೆಣಸಿನಕಾಯಿ- 2, ಬೆಳ್ಳುಳ್ಳಿ ಎಸಳು 4-5, ಎಣ್ಣೆ.
ತಯಾರಿಸುವ ವಿಧಾನ: ಹೆಸರುಕಾಳು ಬೇಯಿಸಿ ಪಾತ್ರೆಗೆ ಹಾಕಿ. ನೀರುಳ್ಳಿ ಟೊಮೆಟೊ ಎಣ್ಣೆಯಲ್ಲಿ ಬಾಡಿಸಿ ಹೆಸರುಕಾಳಿಗೆ ಹಾಕಿ ಮೆಣಸಿನಕಾಯಿ ಉದ್ದಕ್ಕೆ ಸೀಳಿ ಹಾಕಿ ಉಪ್ಪು ಸೇರಿಸಿ ಕುದಿಸಿರಿ. ಬೆಳ್ಳುಳ್ಳಿ , ಒಣಮೆಣಸಿನಕಾಯಿ ಒಗ್ಗರಣೆ ಮಾಡಿ ಹಾಕಿ ಮುಚ್ಚಿಡಿ. ಅನ್ನ, ಚಪಾತಿಯೊಂದಿಗೆ ಸ್ವಾದಿಷ್ಟಕರ ಪಂಚರತ್ನ ತಯಾರು.
ಹೆಸರುಕಾಳು ಹುಗ್ಗಿ (ಪೊಂಗಲ್)
ಬೇಕಾಗುವ ಸಾಮಗ್ರಿ: ಹೆಸರುಕಾಳು- 1 ಕಪ್, ಅಕ್ಕಿ- 1/2 ಕಪ್, ಬೆಲ್ಲ- 1 ಕಪ್ (ಚೂರು ಮಾಡಿದ್ದು), ತೆಂಗಿನಕಾಯಿ ತುರಿ- ಒಂದೂವರೆ ಕಪ್, ಏಲಕ್ಕಿ ಸ್ವಲ್ಪ , ಒಣದ್ರಾಕ್ಷಿ 8-10, ಗೇರು ಬೀಜ ಚೂರು ಸ್ವಲ್ಪ , ತುಪ್ಪ – 2 ಚಮಚ.
ತಯಾರಿಸುವ ವಿಧಾನ: ಹೆಸರುಕಾಳು ಬಾಣಲೆಯಲ್ಲಿ ಹುರಿದು ತಣಿದ ಮೇಲೆ ಮಿಕ್ಸಿ ಜಾರ್‌ನಲ್ಲಿ ಹಾಕಿ ಒಂದು ಸುತ್ತು ತೆಗೆದು ಸಿಪ್ಪೆ ಬೇರ್ಪಡಿಸಿಡಿ. ಕುಕ್ಕರ್‌ನಲ್ಲಿ ಹೆಸರುಕಾಳು, ಅಕ್ಕಿ , ಬೆಲ್ಲ ಹಾಕಿ ಬೇಯಿಸಿ. ತೆಂಗಿನತುರಿ, ಏಲಕ್ಕಿ, ತುಪ್ಪದಲ್ಲಿ ಹುರಿದ ದ್ರಾಕ್ಷಿ , ಗೇರುಬೀಜ ಚೂರು ಹಾಕಿ ಕುದಿಸಿ ಒಲೆ ಆರಿಸಿರಿ. ಬಿಸಿ ಇರುವಾಗ ತಿನ್ನಬಹುದು. ದೋಸೆ, ಚಪಾತಿಯೊಂದಿಗೆ ಸೇವಿಸಿದರೆ ಬಲು ಸೊಗಸು. ಬೇಕಿದ್ದರೆ ಬಾಳೆಹಣ್ಣಿನ ಚೂರು ಬೆರೆಸಬಹುದು. ಹೆಸರುಕಾಳಿನ ಬದಲು ಹೆಸರುಬೇಳೆಯನ್ನೂ ಉಪಯೋಗಿಸಬಹುದು.
ಎಸ್. ಜಯಶ್ರೀ ಶೆಣೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ
Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ
PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್
Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ
Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.