ಎಲ್ಲಿ ಹೋದರು ಮದುವೆಯ ಮುನ್ನಾ ದಿನ ಬರುತ್ತಿದ್ದ ಬಂಧುಗಳು!


Team Udayavani, Dec 28, 2018, 6:00 AM IST

liveminta11a.jpg

ನನ್ನ ಕಿರಿ ನಾದಿನಿಯ ಜೀವದ ಗೆಳತಿ ನಮಗೂ ಗೆಳತಿಯಾಗಿದ್ದಾಳೆ. ನಿನ್ನೆ ಅವಳ ಮಗಳ ಮದುವೆ ಮಂಗಳೂರಿನಲ್ಲಿ ನಡೆಯಿತು. ನಮ್ಮ ಮದುವೆಗೆ ಅವಳು ಪತಿಸಮೇತ ಬಂದಿದ್ದಳು. ಹಾಗಾಗಿ, ನಾವು ಹೋಗದಿದ್ದರೆ ಚೆನ್ನಾಗಿರುವುದಿಲ್ಲ ಎಂದು ಮದುವೆಗೆ ಹೊರಟೆವು. ಮಂಗಳೂರಿನಲ್ಲಿ ಎಲ್ಲಿ ಎಂದು ನಾನು ಆಮಂತ್ರಣ ಪತ್ರಿಕೆ ಓದಿರಲಿಲ್ಲ. ವಧೂ-ವರರ ಹೆಸರೂ ಮರೆತುಹೋಗಿತ್ತು. ಆದರೆ, ಮುಹೂರ್ತ 12.30ರ ನಂತರ ಎಂದು ಗೊತ್ತಿತ್ತು. ಗಂಡ ಸಭಾಂಗಣದ ಹೆಸರು ರಮಣ ಪೈ ಹಾಲ್‌ ಎಂದು ನೆನಪಿಸಿಕೊಂಡು ಹೇಳಿದರು. ಮಡಿಕೇರಿಯ ಹಳ್ಳಿಯೊಂದರಲ್ಲಿ ಇರುವ ನಮಗೆ ಮಂಗಳೂರಿನ ಪರಿಚಯ ಅಷ್ಟಾಗಿ ಇಲ್ಲ. 

ನಾವು ಅಲ್ಲಿಗೆ ತಲಪುವಾಗ ಮಧ್ಯಾಹ್ನದ ಹೊತ್ತು. ಸಭಾಂಗಣ ಖಾಲಿ. ಎಲ್ಲರೂ ಊಟಕ್ಕೆ ಹೋಗಿದ್ದರು. ವೇದಿಕೆಯಲ್ಲಿ ಮಾತ್ರ ಮದುಮಗ-ಮದುಮಗಳನ್ನು, ಅವರ ತಂದೆ-ತಾಯಂದಿರನ್ನು ಜನರು ಸುತ್ತುವರಿದಿದ್ದರು. ಗಂಡನ ಹತ್ತಿರ ಹೇಳಿದೆ, “”ಹೇಗೂ ಮುಹೂರ್ತ ಇರುವುದು ತಡವಾಗಿ. ಮೊದಲು ಊಟ ಮುಗಿಸಿ ಆಮೇಲೆ ವಧೂವರರನ್ನು ಹಾರೈಸಲು ಹೋಗೋಣ”. ಕೆಳಗಿನ ಅಂತಸ್ತಿನಲ್ಲಿ ಊಟದ ಹಾಲ್‌. ಎಲ್ಲರೂ ಎಲೆಯ ಮುಂದೆ ಕೂತಿದ್ದರು. ಅದಾಗಲೇ ಎಲೆಗಳಿಗೆ ಪಲ್ಯ, ಕೋಸಂಬರಿ ಬಡಿಸಿಯಾಗಿತ್ತು. ಕೊನೆಗೂ ನನಗೊಂದು ಕಡೆಯಲ್ಲಿ, ಗಂಡನಿಗೊಂದು ಕಡೆಯಲ್ಲಿ ಜಾಗ ಸಿಕ್ಕಿತು. ನನ್ನ ನಾದಿನಿ ಎಲ್ಲಿ ಕೂತಿದ್ದಾಳೆಂದು ಕೂತಲ್ಲಿಂದಲೇ ಕಣ್ಣಾಡಿಸಿದೆ. ಎಲ್ಲೂ ಕಾಣಲಿಲ್ಲ. ಮಾತ್ರವಲ್ಲ, ಪರಿಚಿತ ಬಂಧುಗಳೂ ಇರಲಿಲ್ಲ. ಸಂಶಯ ಬಂದು ಪಕ್ಕ ಕುಳಿತವರಲ್ಲಿ ಕೇಳಿದೆ, “”ವಧು ಮಂಗಳೂರಿನವಳಲ್ವಾ?” ಎಂದು. ಅವರು ಹೇಳಿದರು, “”ವಧು ಭೋಪಾಲಿನವಳು, ವರ ಮಂಗಳೂರಿನವನು. ಮಂಗಳೂರಿನವರ ಒಂದು ಮದುವೆ ಇಂದು ಇಲ್ಲೇ ಹತ್ತಿರದಲ್ಲಿ ಇರುವ ಟಿಎಮ್‌ಎ ಪೈ ಕನ್ವೆನ್ಶನ್‌ ಸೆಂಟರ್‌ನಲ್ಲಿ ಇದೆ. ನಾನು ಈ ಮದುವೆಗೆಂದು ಹೊರಟವನು ತಪ್ಪಿ ಆ ಮದುವೆಗೆ ಹೋಗಿದ್ದೆ”. 

“”ಓಹ್‌! ನಾವು ಅಲ್ಲಿಗೆ ಹೋಗಬೇಕಾದವರು ತಪ್ಪಿ ಇಲ್ಲಿಗೆ ಬಂದಿದ್ದೇವೆ” ಎನ್ನುತ್ತ ಎದ್ದೆ. ಆಗ ಅನ್ನ ಬಡಿಸುತ್ತ ಬಂದರು. “”ಹೇಗೂ ಬಂದಿದ್ದೀರಿ. ಊಟಕ್ಕೆ ಕೂತಿದ್ದೀರಿ. ಇನ್ನು ಊಟ ಮುಗಿಸಿಕೊಂಡೇ ಹೋಗಿ” ಎಂದರು ಅವರು. ನಾನು ಅದಕ್ಕೆ ಕಿವಿಗೊಡದೆ ಗಂಡನ ಬಳಿ ಓಡಿಹೋಗಿ, “”ಟಿ. ಎಮ್‌. ಎ. ಪೈ ಹಾಲ್‌ಗೆ ನಡೆಯಿರಿ. ನಾವು ಭಾಗವಹಿಸಬೇಕಾಗಿರುವ ಮದುವೆ ಇದಲ್ಲ” ಎಂದು ಹೇಳಿದೆ. ಈಗಲೇ ತಡವಾಯಿತು. ನಡೆದು ಹೋದರೆ ಇನ್ನೂ ತಡವಾಗುತ್ತದೆ ಎಂದು ಅಟೊ ಮಾಡಿಕೊಂಡು ಹೋದೆವು. ಅದೊಂದು ಹಲವು ಅಂತಸ್ತಿರುವ ಬೃಹತ್‌ ಕಟ್ಟಡ. ಒಳಹೊಕ್ಕೊಡನೆ ಎಡಭಾಗದಲ್ಲಿ ಏನೋ ಕಾರ್ಯಕ್ರಮ ನಡೆಯುವುದು ಕಂಡಿತು. ಅದೇ ಮದುವೆ ನಡೆಯುವ ಜಾಗ ಇರಬಹುದು ಎಂದುಕೊಂಡು ಒಳಹೊಕ್ಕೆವು. ಬಾಗಿಲ ಬುಡದಲ್ಲಿ ಯೂನಿಫಾರ್ಮ್ ತೊಟ್ಟ ಇಬ್ಬರು ಯುವಕರು ಕಲ್ಲಂಗಡಿ ಹಣ್ಣಿನ ಜ್ಯೂಸ್‌ ಹಿಡಿದು ನಿಂತಿದ್ದರು. “”ಇಲ್ಲಿ ನಡೆಯುತ್ತಿರುವುದು ಮದುವೆಯಾ?” ಕೇಳಿದೆವು. “”ಯೆ ಎಂಗೇಜ್‌ ಮೆಂಟ್‌ ಹೈ. ಊಪರ್‌ ಶಾದಿ ಹೈ” ಎಂದೇನೋ ಹಿಂದಿಯಲ್ಲಿ ಹೇಳುತ್ತ ಮೇಲಕ್ಕೆ ಕೈ ತೋರಿಸಿದರು. ಎಲಿವೇಟರ್‌ನಲ್ಲಿ ಮೇಲೆ ಹೋದೆವು. ಅಲ್ಲಿ ಮಜ್ಜಿಗೆ ನೀರು ಹಿಡಿದು ಕೆಲವು ಹುಡುಗರು ನಿಂತಿದ್ದರು. ಸಭಾಂಗಣದಲ್ಲಿ ನೆರೆದವರ ವೇಷಭೂಷಣ ನೋಡುವಾಗ ಇದು ನಮ್ಮ ಬಂಧುಗಳ  ಮದುವೆ ಅಲ್ಲ ಎಂದು ಗೊತ್ತಾಯಿತು. “ಇದು ಯಾರ ಮದುವೆ?’ ಆ ಹುಡುಗರಲ್ಲಿ ಕೇಳಿದೆ. ಹೌದು, ನಮಗೆ ಸಂಬಂಧಿಸಿದ ಮದುವೆ ಅಲ್ಲವೇ ಅಲ್ಲ.

ಕೆಳಗಿಳಿದು ಏನಾದರಾಗಲಿ ಎಂದು ಮೊದಲು ಹೊಕ್ಕ ಹಾಲ್‌ನೊಳಗೆ ನುಗ್ಗಿದೆವು. ವಧೂವಿನ ತಾಯಿ ಅಂದರೆ ನಮ್ಮ ಗೆಳತಿ ಮಂಟಪದ ಎದುರಲ್ಲಿ ನಿಂತಿರುವುದು ಕಂಡಿತು. “”ಬದುಕಿದೆಯಾ ಬಡ ಜೀವವೇ” ಎಂದು ವೇದಿಕೆಗೆ ಹೋಗಿ ಮದುಮಕ್ಕಳಿಗೆ ಶುಭಾಶಯ ಹೇಳಿ ಊಟಕ್ಕೆ ಹೋದೆವು. ವಿಷಯ ಏನೆಂದರೆ, ಅಲ್ಲಿ ಬಡಿಸುವವರು ಉತ್ತರಭಾರತದಿಂದ ಹೊಸದಾಗಿ ಬಂದವರು. ಅವರಿಗೆ ಕನ್ನಡ ಮಾತಾಡುವುದು ಬಿಡಿ, ಅರ್ಥವೇ  ಆಗುತ್ತಿರಲಿಲ್ಲ. ಹಾಗಾಗಿ ಅವರು ಸುಳ್ಳು ಹೇಳಿದರು ಎಂದು ನಾವು ಅವರನ್ನು ಬೈಯುವ ಹಾಗೆ ಇರಲಿಲ್ಲ. ಅದೂ ಅಲ್ಲದೆ ಆ ಒಂದು ಕಟ್ಟಡದಲ್ಲಿ ಏಕಕಾಲಕ್ಕೆ ನಾಲ್ಕೈದು ಮದುವೆಗಳು ನಡೆಯುತ್ತವಂತೆ! ಇದು ನಮಗೆ ಗೊತ್ತಿರಲಿಲ್ಲ. ಊಟ ಮಾಡುತ್ತಿರುವಾಗ ನನಗೆ ಇಪ್ಪತ್ತೇಳು ವರ್ಷಗಳ ಹಿಂದೆ ನನ್ನ ಮದುವೆ ನನ್ನ ತವರುಮನೆಯಲ್ಲಿ ನಡೆದದ್ದು ನೆನಪಾಯಿತು.

ಅಂದು ಮದುವೆ ಹೆಚ್ಚಾಗಿ ಮನೆಯಲ್ಲೇ ನಡೆಯುತ್ತಿತ್ತು. ನನ್ನ ಮದುವೆ ನಿಶ್ಚಯವಾದ ಕೂಡಲೇ ಮಗಳ ಮದುವೆ ಹೇಗೆ ನಡೆಸುವುದಪ್ಪಾ ಎಂದು ಹೆದರಿದ ತಂದೆಗೆ ನಮ್ಮ ನೆರೆಹೊರೆಯವರು, ಬಂಧುಗಳು, “ನೀವೇನೂ ಚಿಂತಿಸಬೇಡಿ. ನಾವೆಲ್ಲ ನಿಮ್ಮ ಜೊತೆ ಇದ್ದೇವೆ’ ಎಂದು ಧೈರ್ಯ ತುಂಬಿದರು. ಮದುವೆಗೆ ಏನೆಲ್ಲ ಸಿದ್ಧತೆಗಳಾಗಬೇಕು ಎಂಬ ಮಾಹಿತಿ ಕೊಡಲು ಅಜ್ಜನ ಮನೆಯಿಂದ ಅಜ್ಜಿ ತಿಂಗಳಿರುವಾಗಲೇ ಬಂದರು. ಆ ಸಮಯದಲ್ಲಿ ಕೂಲಿಯಾಳುಗಳೂ ರಜೆ ತಗೊಳ್ಳದೆ ಒಲೆ ಹೂಡುವುದು, ಚಪ್ಪರ ಹಾಕುವುದು, ತಾತ್ಕಾಲಿಕ ಸ್ನಾನದ ಮನೆ ನಿರ್ಮಿಸುವುದು… ಇತ್ಯಾದಿ ಕೆಲಸಗಳನ್ನು ಓಡಾಡುತ್ತ ತಮ್ಮ ಮನೆಮದುವೆಯಂತೆ ಬೆಳಗಿನಿಂದ ರಾತ್ರಿ ತನಕ ಮಾಡಿದರು. ಅಡುಗೆ ಮಾಡಲು ಬೇಕಾದ ಪಾತ್ರೆಗಳನ್ನು ಹತ್ತಿರದ ಮನೆಯವರು ಒದಗಿಸಿದರು. ಮದುವೆಯ ಮುನ್ನಾ ದಿನ ಮದುಮಗನಿಲ್ಲ ಎಂಬುದೊಂದು ಬಿಟ್ಟರೆ ಅಂದು ಮದುವೆ ಕಾರ್ಯಕ್ರಮದಲ್ಲಿ ನಡೆಯುವ ಸಂಭ್ರಮವೆಲ್ಲ ಇತ್ತು. ನೆರೆಹೊರೆಯವರು, ಬಂಧು-ಮಿತ್ರರಿಂದ ಕೂಡಿದ ಮನೆ ಹಾಸ್ಯ, ನಗು, ಚಟಾಕಿಗಳಿಂದ ಕಳೆಗಟ್ಟಿತ್ತು. 

ರಾತ್ರಿಯಾಗುತ್ತಲೇ ಬಂದವರೆಲ್ಲರೂ ಮರುದಿನಕ್ಕೆ ಬೇಕಾದ ತರಕಾರಿ ಹೆಚ್ಚಿದರು. ನಿದ್ರೆಯ ಪರಿವೆಯಿಲ್ಲದೆ ಇಡೀ ಇರುಳು ವಧೂವರರು ಕುಳಿತುಕೊಳ್ಳುವ ಮಂಟಪ ನಿರ್ಮಾಣ ಮಾಡಿದರು. ಚಪ್ಪರದ ಕಂಬಗಳಿಗೆ ಬಣ್ಣದ ಕಾಗದ ಅಂಟಿಸಿದರು. ಮಾವಿನ ಎಲೆಗಳಿಂದ ಸುತ್ತಲೂ ತೋರಣ ಕಟ್ಟಿದರು. ಮದುವೆ ದಿನ ಸೀರೆ ಉಡಿಸುವುದು, ಜಡೆ ಹೆಣೆಯುವುದು, ಹೂ ಮುಡಿಸುವುದು ಇತ್ಯಾದಿ ನನ್ನ ಸರ್ವಾಲಂಕಾರವನ್ನು ಯಾವ ಬ್ಯುಟೀಶಿಯನ್‌ಗಳಿಗೂ ಕಡಿಮೆ ಇಲ್ಲದಂತೆ ನನ್ನ ಅತ್ತೆ ಅಂದರೆ ಸೋದರಮಾವನ ಹೆಂಡತಿ ಮಾಡಿದರು. ನೆರೆಹೊರೆಯವರು, ಬಂಧುಗಳು ಸೇರಿ ಊಟ ಬಡಿಸುವ ಕಾರ್ಯವನ್ನು ಬಹಳ ಅಚ್ಚುಕಟ್ಟಾಗಿ ನೆರವೇರಿಸಿಕೊಟ್ಟರು. ಪಾತ್ರೆ, ತಟ್ಟೆಗಳನ್ನು ಮನೆಕೆಲಸದ ಹೆಂಗಸರು ನಾವು ಕೊಟ್ಟ ಸೀರೆಯನ್ನು ಉಟ್ಟು ಸರಬರ ಸದ್ದು ಮಾಡುತ್ತ ಸಂತಸದಿಂದ ತೊಳೆದರು. ಒಟ್ಟಿನಲ್ಲಿ ನನ್ನ ತಂದೆಗೆ ಮನೆಯಲ್ಲಿ ಮಗಳ ಮದುವೆ ಮಾಡಲು ಕಷ್ಟವಾಗಲಿಲ್ಲ. ಊರವರ, ಬಂಧುಬಳಗದವರ ಸಹಕಾರದಿಂದ ನನ್ನ ಮದುವೆ ಹೂ ಎತ್ತಿದಂತೆ ನಡೆದು ಹೋಯಿತು. 

ಈಗ ನನ್ನ ಮಗ ಮದುವೆಯ ಹೊಸ್ತಿಲಲ್ಲಿ ನಿಂತಿದ್ದಾನೆ. ನನ್ನ ತಂದೆ ಮಾಡಿದಂತೆ ನನಗೆ ಅವನ ಮದುವೆಯನ್ನು -ಮನೆ ದೊಡ್ಡದಿದ್ದರೂ- ಮನೆಯಲ್ಲಿ ಮಾಡಲು ಸಾಧ್ಯವಿಲ್ಲ. ಏಕೆಂದರೆ, ಕೇಳಿದಷ್ಟು ಸಂಬಳ ಕೊಟ್ಟರೂ ಕೂಲಿಯಾಳುಗಳು ಸಿಗುವುದಿಲ್ಲ. ಅಂದಿನಂತೆ ಈಗ ನೆಂಟರಿಷ್ಟರು ಮದುವೆಯ ಹಿಂದಿನ ದಿನ ಬರುವುದಿಲ್ಲ. ತರಕಾರಿ ಹೆಚ್ಚಲು, ಬಡಿಸಲು ನೆರೆಹೊರೆಯವರನ್ನೂ ಆಶ್ರಯಿಸುವ ಹಾಗೆ ಇಲ್ಲ. ಹಳ್ಳಿಗಳಲ್ಲಿರುವ ಸಹಕಾರ ಪದ್ಧತಿ ಎಂದೋ ನಿಂತು ಹೋಗಿದೆ. ಜಾಗತೀಕರಣದ ಈ ಕಾಲದಲ್ಲಿ ಎಲ್ಲರೂ ಅವರವರ ಸ್ವಂತ ಕೆಲಸಗಳಲ್ಲಿ ಬ್ಯುಸಿ. ಎಲ್ಲವೂ ವ್ಯವಹಾರ ಆಗಿರುವ ಇಂದಿನ ದಿನಗಳಲ್ಲಿ ಅಂದಿನ ಪ್ರೀತಿ, ಸೌಹಾರ್ದ, ಸಹಕಾರ ಕಾಣಲು ಸಾಧ್ಯವಿಲ್ಲ. ಈಗ ಮದುವೆಯಲ್ಲಿ ಆಡಂಬರ ಇದೆ. ಆಪ್ತತೆ ಇಲ್ಲ. 

– ಸಹನಾ ಕಾಂತಬೈಲು

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.