ಎಲ್ಲಿ ಹೋದಳು ನಿದ್ರಾದೇವಿ!


Team Udayavani, Oct 6, 2017, 1:35 PM IST

06-SAP-18.jpg

ಅಬ್ಟಾ ! ಕಣ್ಣವೆಗಳು ದಣಿಯುವಷ್ಟು ನಿದ್ದೆ ಮಾಡಬೇಕು, ಬಾಲ್ಯದಲ್ಲಿ ಮಲಗಿ ನಿದ್ರಿಸಿ ಕನಸಿನ ಲೋಕದಲ್ಲಿ ಪಯಣಿಸಿ ಬಂದ ಹಾಗೆ. ಚಂದಿರನೂರು, ಅಲ್ಲಿರುವ ಸಹಸ್ರಾರು ತಾರೆಯರು, ಮಿರಮಿರನೆ ಮಿಂಚುವ ಅಪ್ಸರೆಯರ ನಡುವೆ ನಾವು ಎನಿಸುವಷ್ಟರ ಮಟ್ಟಿಗಿನ ನಿದ್ದೆಯೊಂದು ಬಂದು ಆವರಿಸಿ ಬಿಡಬೇಕು. ಯಾವ ಗದ್ದಲ, ಗೊಂದಲ, ಆತಂಕಗಳ ಹಂಗಿರದೇ ನಿರ್ಭಿಡೆಯಿಂದ ನಿದ್ರಿಸುವುದು ಸಾಧ್ಯವಾಗಬೇಕು. ಬೆಳಗ್ಗೆ ಎದ್ದು ದಡಬಡಿಸಿ ಮನೆಗೆಲಸ ಮುಗಿಸಿಕೊಂಡು ಮಕ್ಕಳ ಊಟದ ಬುತ್ತಿ ಕಟ್ಟಿ ವ್ಯಾನ್‌ ಬರುವಷ್ಟರಲ್ಲಿ ಅವರನ್ನು ರೆಡಿ ಮಾಡಿಸಿ ಅವರಿಗಿಂತಲೂ ಮೊದಲು ನಾನು ರೆಡಿಯಾಗಿ… ಉಫ್! ಬದುಕು ಬರೀ ನಡೆಯುತ್ತಿಲ್ಲ. ಓಡುತ್ತಿದೆ ಎಂಬ ಧಾವಂತದ ನಡುವೆಯೂ ಕನಸು ಬೀಳಲೂ ಬಿಡುವು ಕೊಡದಂತೆ ನಿದ್ರಿಸಬೇಕು! ಆಹಾ, ಹಾಗೆ ಬರುವ ನಿದ್ದೆಯ ಕಲ್ಪನೆಯೂ ಎಷ್ಟು ಸೊಗಸು!

ಹೆಣ್ಣು ಕಣªಣಿಯೇ ನಿದ್ದೆ ಹೋಗುವುದು ಬಹುಶಃ ತನ್ನ ಮದುವೆಯವರೆಗೆ ಮಾತ್ರವೇ ಇರಬಹುದೇನೋ. ಅದರಲ್ಲೂ ತೀರಾ ಕಟ್ಟುಕಟ್ಟಳೆಯ, ಸಾಂಪ್ರದಾಯಿಕ ಮನೆಗಳಾದರೆ ನಸುಕು ಹರಿಯುವ ಮೊದಲೇ ಎದ್ದೇಳಬೇಕು. ನೆನಪಿದೆ ನನಗೆ, ನಾವು ಚಿಕ್ಕವರಿದ್ದಾಗಲೆಲ್ಲ ಬೆಳಗ್ಗೆ ಆರೂವರೆಯ ನಂತರವೂ ಮಲಗಿದ್ದರೆ, ಅಪ್ಪ ಥೇಟ್‌ ಶಾಲೆಯಲ್ಲಿ ಹಾಜರಿ ಕರೆದಂತೆ ನಮ್ಮ ಹೆಸರು ಕರೆಯಲಾರಂಭಿಸುತ್ತಿದ್ದರು. ಅಪ್ಪಿತಪ್ಪಿ ಜ್ವರ ಬಂದಿದ್ದರೆ ಮಾತ್ರ ಹಗಲು ಮಲಗಲು ಅವಕಾಶ. ಹಾಗಾಗಿ, “ದೇವರೇ, ಒಮ್ಮೆ ಜ್ವರ ಬರಬಾರದೆ!’ ಎಂದು ಹಂಬಲಿಸುತ್ತಿದ್ದುದೂ ಇತ್ತು. ಆದರೆ, ಆ ಜ್ವರ ಬಂದರಾದರೋ ನಿದ್ದೆಯ ಮಾತುಗಳಿರಲಿ, ಮಲಗಿರುವುದೇ ದೊಡ್ಡ ಹಿಂಸೆ.

ಅದೇನೇ ಇರಲಿ, ಮದುವೆಯ ನಂತರದ ಹಲವು ಜವಾಬ್ದಾರಿಗಳ ನಡುವೆ ನಿದ್ದೆಗೆಡುವುದೂ ಒಂದು ಸಾಧನೆಯೇ. ವಿದ್ಯಾರ್ಥಿ ದೆಸೆಯಲ್ಲಿ ಪರೀಕ್ಷೆಗೆ ಓದಲೆಂದು ನಿದ್ದೆಗೆಟ್ಟಂತಲ್ಲ , ಅದಕ್ಕಾದರೂ ಒಂದು ಅರ್ಥವಿರುತ್ತದೆ. ಕಡೆಯಪಕ್ಷ ಪಟ್ಟ ಪ್ರಯತ್ನಕ್ಕೆ ಉತ್ತಮ ಅಂಕಗಳು ಬಂದಿರುತ್ತವೆ. ಆ ಸಂಭ್ರಮದಲ್ಲಿ ನಿದ್ದೆಗೆಡುವ ಕಷ್ಟ ಮರೆತು ಹೋಗುತ್ತದೆ. ಅಲ್ಲಿ ಸಾಧನೆಯ ಹಂಬಲವಿರುತ್ತದೆ. ಸಾಧಿಸಿದ ಖುಷಿಯಿರುತ್ತದೆ. ಆದರೆ, ಒಂದೊಮ್ಮೆ ವೈವಾಹಿಕ ಬದುಕಿಗೆ ಕಾಲಿಟ್ಟ ನಂತರ ನಮ್ಮ ನಿದ್ದೆಯ ಮೇಲಿನ ಅಧಿಕಾರ ಸಂಪೂರ್ಣವಾಗಿ ನಮ್ಮ ಕೈಜಾರಿ ಹೋಗಿರುತ್ತದೆ. ಬೆಳಗ್ಗೆ ಅಮ್ಮ “ಕಾಫಿ ರೆಡಿ’ ಎಂದು ಕೂಗಿದ ಮೇಲೆ ಎದ್ದೇಳುವ ಅಭ್ಯಾಸವಿದ್ದವರಾದರೂ ಮದುವೆಯ ನಂತರ ಎಲ್ಲರಿಗಿಂತ ಮೊದಲೇ ಏಳಲೇಬೇಕು. ಹಾಲು ಕಾಯಿಸಿ ಕಾಫಿ/ಟೀ ತಯಾರಿಸುವ ಕೆಲಸ ಅವಳದೇ.

ಗರ್ಭದಲ್ಲಿ ಶಿಶುವೊಂದು ರೂಪು ತಾಳಿದ ಮೇಲೆ ನಿದ್ದೆಯ ಕಥೆ ದೇವರಿಗೇ ಪ್ರೀತಿ. ಹಗಲಲ್ಲೇ ಕೆಲಸ ಮಾಡುವಾಗಲೂ ತೂಗಿ ಬರುವ ನಿದ್ದೆ ರಾತ್ರಿಯಾದಂತೆ ಕಣ್ಣೆವೆಗಳೊಡನೆ “ಠೂ’ ಬಿಟ್ಟವರಂತೆ ದೂರವಾಗುತ್ತದೆ. ಆ ಸಂದರ್ಭದಲ್ಲಿ ಮಗುವಿನಂತೆಯೇ ರಚ್ಚೆ ಹಿಡಿಯುವ ಮನಸ್ಸು , ನಮಗೇನಾಗುತ್ತಿದೆ ಎಂಬುದು ಅರ್ಥವಾಗದ ಭಾವನೆಗಳ ಹೊಯ್ದಾಟ. ಎಲ್ಲರ ಮೇಲೂ ಸಿಡಿಮಿಡಿಗುಟ್ಟಿ ರೇಗುವಂತೆ ಬದಲಾಗುವ ಭಾವ… ಇವೆಲ್ಲದರ ಜೊತೆಗೆ ಅಮ್ಮನ ಉದರ ತನ್ನ ಬಯಲೆಂಬಂತೆಯೇ ಫ‌ುಟ್‌ಬಾಲ್‌ ಆಡುವ ಶಿಶು! ಅಬ್ಟಾ , ಹಾಗೂ ಹೀಗೂ ನಿದ್ದೆ ಹತ್ತಿತೋ ಮಧ್ಯರಾತ್ರಿಯಲ್ಲಿ ಧಡಕ್ಕನೆ ಎಚ್ಚರವಾಗಿರುತ್ತದೆ. ಮೀನಖಂಡದಲ್ಲಿ ಹೇಳಲಾಗದ ನೋವು, ಸೆಳೆತ. ಕಾಲು ಮಡಚಲೂ ಆಗದು, ಬಿಡಿಸಲೂ ಆಗದು. ಇದರ ಜೊತೆಗೆ ವೈದ್ಯರು ಬೇರೆ ನಿರ್ಬಂಧ ವಿಧಿಸಿರುತ್ತಾರೆ. ಸದಾ ಎಡಗಡೆಗೇ ತಿರುಗಿಕೊಂಡು ಮಲಗಿ ಎಂಬುದಾಗಿ. ನಮಗಿಷ್ಟ ಬಂದಂತೆ ಬೋರಲಾಗಿಯೋ ಮಕಾಡೆಯೋ ಮಲಗಿ ನಿದ್ದೆಯ ಮಜಾ ಅನುಭವಿಸುತ್ತಿದ್ದವರಿಗೀಗ ಮಲಗುವ ಭಂಗಿಯಲ್ಲಿಯೂ ಬದಲಾವಣೆ.

ಮಗು ಒಡಲಿಂದ ಮಡಿಲಿಗೆ ಬಂದ ಮೇಲೆ ಬದುಕು ಇನ್ನೂ ಬದಲಾಗುತ್ತದೆ. ಇನ್ನು ಮೇಲಿಂದ ನಾವೇನೇ ಪಣ ತೊಟ್ಟರೂ ರಾತ್ರಿ ಮಲಗಿದವರು ಬೆಳಗ್ಗೆಯೇ ಏಳುವುದು ಎಂಬಂತಿಲ್ಲ. ಮನೆಗೆಲಸ ಮುಗಿಸಿ ಇನ್ನೇನು ಲೈಟ್‌ ಆಫ್ ಮಾಡಿದೆವು ಎಂಬಷ್ಟರಲ್ಲಿ ಜೋಲಿಯೊಳಗಿನ ಮಗು ಕುಸುಕುಸು ಎನ್ನಲಾರಂಭಿಸುತ್ತದೆ. ಅದಕ್ಕೆ ಪೂರ್ತಿ ಎಚ್ಚರ! ಅಕಸ್ಮಾತ್‌ ಮಗು ನಿದೆª ಮಾಡಿದರೂ ನಾವು ನಮ್ಮ ಪಾಡಿಗೆ ಗೊರಕೆ ಹೊಡೆಯಲಾಗುವುದಿಲ್ಲ. ಕಡೆಯ ಪಕ್ಷ ನಾಲ್ಕು ಬಾರಿಯಾದರೂ ಎದ್ದೇಳುವುದು ಅನಿವಾರ್ಯ. ಅಲಾರಾಂ ಹಾಡಲಾಂಭಿಸಿದರೆ, ನಿದ್ದೆಯ ಮೂಡ್‌ನ‌ಲ್ಲಿ ಅದರ ತಲೆಯ ಮೇಲೊಂದು ಮೊಟಕಿ ಹಾಗೆಯೇ ಮುಸುಕೆಳೆದೇವು, ಆದರೆ ಕಂದಮ್ಮನನ್ನು ಕಾಳಜಿ ಮಾಡಲೇಬೇಕಲ್ಲ ! ಅದರ ಸಲುವಾಗಿ ಬದಲಾಗಲೇಬೇಕು.

ಮೊದಲ ಮಗುವನ್ನಾದರೂ ಹೇಗಾದರೂ ಸಂಭಾಳಿಸಿಯೇವು, ಆದರೆ, ಎರಡನೆಯ ಮಗುವಾಗುವಾಗ ಎಲ್ಲವನ್ನೂ, ಎಲ್ಲರನ್ನೂ ನಿಭಾಯಿಸುವ ಹೊಣೆಯೂ ನಮ್ಮದೇ ಆಗಿರುತ್ತದೆ. ಆ ಅವಧಿಯಂತೂ ಬಹಳ ಕಠಿಣ. ಮನೆಯಲ್ಲಿ ಹಿರಿಯ ಜೀವವೊಂದು ಇದ್ದರೆ ಪರವಾಗಿಲ್ಲ. ಸ್ವಲ್ಪವಾದರೂ ನೆಮ್ಮದಿ ದೊರಕೀತು. ಇಲ್ಲದೇ ಇದ್ದರೆ ಅವಳ ಕಥೆಯೇ ಬದಲಾಗಿರುತ್ತದೆ.

ದುಡಿಯುವ ಮಹಿಳೆಯ ಉದಾಹರಣೆ ತೆಗೆದುಕೊಳ್ಳಿ. ಹಗಲಿಡೀ ಹೊರಗಿನ ದುಡಿಮೆ. ಬಿಡುವಿನ ವೇಳೆಯೆಂಬುದೇ ಕಡಿಮೆ. ಬೆಳಗ್ಗೆ ಎದ್ದಲ್ಲಿಂದ ರಾತ್ರಿ ಹನ್ನೊಂದರವರೆಗೂ ಅವಳ ಕಾಲಿನ ಚಕ್ರ ಸುತ್ತುತ್ತಲೇ ಇರಬೇಕು. ಮನೆಯಲ್ಲಿ ಗಂಡಸರು ಹಗಲು ವಿಶ್ರಾಂತಿ ಪಡೆದಂತೆ ಹೆಣ್ಣಿಗೆ ವಿಶ್ರಾಂತಿಯ ಅವಕಾಶವಿರುವುದಿಲ್ಲ. ಆಫೀಸಿನಿಂದ ಬಂದ ತಕ್ಷಣ ಸುಸ್ತಾಗಿದೆಯೆಂದು ದಿನಂಪ್ರತಿ ಹೆಣ್ಣು ಮಲಗಿದರೆ ಅವಳ ಕುರಿತ ಅಭಿಪ್ರಾಯವೇ ಬದಲಾಗುತ್ತದೆ. ಎಷ್ಟೇ ದಣಿದಿರಲಿ, ಶರೀರ ಮೊಂಡು ಮಾಡುತ್ತಿರಲಿ, ಅವಳದೇ ಆದ ಜವಾಬ್ದಾರಿಗಳಿಗೆ ಅವಳು ತಲೆಕೊಡಲೇಬೇಕು. ಅವಳು ಯಂತ್ರವಾಗಿ ಬಿಡುತ್ತಾಳೆ.

ಮಕ್ಕಳ ವಿದ್ಯಾಭ್ಯಾಸದ ಹಂತದಲ್ಲೂ ಅವರನ್ನು ಬೆಳಿಗ್ಗೆ ಎಬ್ಬಿಸಬೇಕೆಂದರೆ, ಅಮ್ಮನೂ ಎದ್ದೇಳಬೇಕು. ಮಕ್ಕಳು ಓದುತ್ತಿದ್ದಾರೆಂಬುದನ್ನು ಖಾತ್ರಿಪಡಿಸಿಕೊಳ್ಳುವುದು ಅವಳದೇ ಕರ್ತವ್ಯ. ಏನೇ ವ್ಯತ್ಯಾಸವಾದರೂ ಮೊದಲು ಹಂಗಿಸಲ್ಪಡುವವಳೂ ಅವಳೇ. ಬರಬರುತ್ತಾ ನಿದ್ದೆಯೂ ಅವಳೊಂದಿಗೆ ಮುನಿಸಿಕೊಂಡು ದೂರವಾಗಿರುತ್ತದೆ. ಅವಳ ಯಾವ ತ್ಯಾಗಗಳಿಗೂ ಬೆಲೆಯಿಲ್ಲವೆಂಬಂತೆ ಬದುಕು ಅವಳನ್ನು ಕಿಚಾಯಿಸಲಾರಂಭಿಸಿದರೆ, ದಿನದಿನವೂ ಹೈರಾಣಾಗುವ ಸರದಿ ಅವಳದೇ ಆಗಿರುತ್ತದೆ. ತನ್ನ ಮೂಲಭೂತ ಅಗತ್ಯಗಳಲ್ಲೊಂದಾದ ನಿದ್ದೆಯ ವಿಚಾರದಲ್ಲೇ ಹೊಂದಾಣಿಕೆ ಮಾಡಿಕೊಂಡು ಬದುಕು ಸವೆಸಿದರೂ “ಕುಟುಂಬಕ್ಕಾಗಿ, ಮನೆಗಾಗಿ ನೀನೇನು ಮಾಡಿದೆ?’ ಎಂಬ ಪ್ರಶ್ನೆ ಅವಳನ್ನು ಸದಾ ಬಾಧಿಸುತ್ತದೆ. ಹೆಂಡತಿ ಸದಾ ತಮಾಷೆಯ ವಸ್ತುವೆಂಬಂತೆ, ಬದುಕಿನ ಅತಿದೊಡ್ಡ ಸಮಸ್ಯೆಯೆಂಬಂತೆ ಪ್ರತಿಪಾದಿಸಿ ಹಾಸ್ಯ ಸಂದೇಶಗಳನ್ನು ನಿರಂತರವಾಗಿ ರವಾನೆ ಮಾಡುವವರಿಗೆ ತಾವು ಮದುವೆಯಾಗಿರುವ ಕಾರಣಕ್ಕೇ ಅವಳ ಬದುಕಲ್ಲಾದ ಬದಲಾವಣೆಗಳು ಕೊಂಚವೂ ಕಾಣಲಾರದೇ?

ಆರತಿ ಪಟ್ರಮೆ

ಟಾಪ್ ನ್ಯೂಸ್

Why is there a hesitation to name the M. Chinnaswamy stand after Shantha Rangaswamy? What is the controversy?

M. Chinnaswamy ಸ್ಟಾಂಡ್‌ಗೆ ಶಾಂತಾ ರಂಗಸ್ವಾಮಿ ಹೆಸರಿಡಲು ಯಾಕೆ ಹಿಂದೇಟು? ಏನಿದು ವಿವಾದ?

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

iPhone: ಕೈತಪ್ಪಿ ಕಾಣಿಕೆ ಹುಂಡಿಗೆ ಬಿದ್ದ ಐಫೋನ್… ಇದು ದೇವರ ಸೊತ್ತು ಎಂದ ಸಿಬಂದಿ

iPhone: ಕೈತಪ್ಪಿ ಕಾಣಿಕೆ ಹುಂಡಿಗೆ ಬಿದ್ದ ಐಫೋನ್… ಇದು ದೇವರ ಸೊತ್ತು ಎಂದ ಸಿಬ್ಬಂದಿ

Have you updated your Aadhar Card?: Then you must read this news!

Aadhar Card: ಆಧಾರ್‌ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!

ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ

ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ

Rey Mysterio Sr

Rey Mysterio Sr: ಖ್ಯಾತ ರೆಸ್ಲರ್‌ ರೇ ಮಿಸ್ಟೀರಿಯೊ ಸೀನಿಯರ್‌ ಇನ್ನಿಲ್ಲ

WPL 2025: ವನಿತಾ ಪ್ರೀಮಿಯರ್‌ ಲೀಗ್‌ ದಿನಾಂಕ ಅಂತಿಮ; ಬೆಂಗಳೂರಿನಲ್ಲಿಲ್ಲ ಪಂದ್ಯಗಳು

WPL 2025: ವನಿತಾ ಪ್ರೀಮಿಯರ್‌ ಲೀಗ್‌ ದಿನಾಂಕ ಅಂತಿಮ; ಬೆಂಗಳೂರಿನಲ್ಲಿಲ್ಲ ಪಂದ್ಯಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Why is there a hesitation to name the M. Chinnaswamy stand after Shantha Rangaswamy? What is the controversy?

M. Chinnaswamy ಸ್ಟಾಂಡ್‌ಗೆ ಶಾಂತಾ ರಂಗಸ್ವಾಮಿ ಹೆಸರಿಡಲು ಯಾಕೆ ಹಿಂದೇಟು? ಏನಿದು ವಿವಾದ?

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

3

Mangaluru: ಸಹಬಾಳ್ವೆ ಬೆಸೆಯುತ್ತಿದೆ ‘ಕುಸ್ವಾರ್‌’

iPhone: ಕೈತಪ್ಪಿ ಕಾಣಿಕೆ ಹುಂಡಿಗೆ ಬಿದ್ದ ಐಫೋನ್… ಇದು ದೇವರ ಸೊತ್ತು ಎಂದ ಸಿಬಂದಿ

iPhone: ಕೈತಪ್ಪಿ ಕಾಣಿಕೆ ಹುಂಡಿಗೆ ಬಿದ್ದ ಐಫೋನ್… ಇದು ದೇವರ ಸೊತ್ತು ಎಂದ ಸಿಬ್ಬಂದಿ

2(1

Kumbra ಜಂಕ್ಷನ್‌ನಲ್ಲಿ ಈಗ ಸೆಲ್ಫಿ ಪಾಯಿಂಟ್‌ ಆಕರ್ಷಣೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.