ಬಿಳಿಯ ಬಣ್ಣ ಮತ್ತು ಶುಭ್ರ ಮನ


Team Udayavani, Jul 21, 2017, 5:10 AM IST

Henuoo-00.gif

ಎಂದಿಗೂ ಬೋರ್‌ ಆಗದ ಬಣ್ಣವೆಂದರೆ ಬಿಳಿ ಬಣ್ಣ. ಬಿಳಿಯ ಬಣ್ಣ ಶಾಂತಿಯ ಸಂಕೇತ ಮಾತ್ರವಲ್ಲ ಗೌರವದ ಪ್ರತೀಕವೂ ಹೌದು. ಅಲ್ಲದೆ ಬಿಳಿಬಣ್ಣದ ಉಡುಪುಗಳು ಸರ್ವಕಾಲಕ್ಕೂ ಒಗ್ಗುವ ಫ್ಯಾಷನ್‌ನ ಭಾಗವಾಗಿದೆ. ಅಂತೆಯೇ ಶ್ವೇತ ವರ್ಣದ ಉಡುಪುಗಳನ್ನು ನಾವು ಯಾವಾಗಲಾದರೂ ಎಲ್ಲಿ ಬೇಕಾದರೂ ಧರಿಸಬಹುದು. 

ಯಾವುದೇ ಸಮಾರಂಭವಿರಲಿ, ಮದುವೆ, ಪೂಜೆ-ಪುನಸ್ಕಾರಗಳಲ್ಲಿ ಪಾಲ್ಗೊಳ್ಳುವಾಗ ಬಿಳಿಯ ಉಡುಪುಗಳಿಗೆ ಹೆಚ್ಚು ಪ್ರಾಶಸ್ತ್ಯ. ಮಕ್ಕಳ ಶಾಲಾ ಸಮವಸ್ತ್ರದಲ್ಲೂ ಬಿಳಿ ಬಣ್ಣಕ್ಕೆ ಹೆಚ್ಚು ಮಹತ್ವ ನೀಡಿರುವುದನ್ನು ಕಾಣುತ್ತೇವೆ. ಬಿಳಿ ಬಣ್ಣವು ಮಕ್ಕಳಲ್ಲಿ ಶುಚಿತ್ವ ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಸಿನೆಮಾ ನಟರು, ಕ್ರೀಡಾಪಟುಗಳು, ರಾಜಕಾರಣಿಗಳಿಗೂ ಬಿಳಿ ಉಡುಪೆಂದರೆ ಅಚ್ಚುಮೆಚ್ಚು. ಇವು ಎಲ್ಲ ವರ್ಣದವರಿಗೂ, ಎಲ್ಲ ವಯೋಮಾನದವರಿಗೂ, ಎಲ್ಲ ಕಾಲಕ್ಕೂ ಚೆನ್ನಾಗಿಯೇ ಒಪ್ಪುತ್ತವೆ. ಇಂಟರ್‌ವ್ಯೂ, ಆಫೀಶಿಯಲ್‌ ಫ‌ಂಕ್ಷನ್‌ ಏನೇ ಇದ್ದರೂ ಹೆಚ್ಚಾಗಿ ಪುರುಷರು ಮಾತ್ರವಲ್ಲದೆ ಯುವತಿಯರು ಕೂಡ ಬಿಳಿ ಫಾರ್ಮಲ್‌ ಶರ್ಟ್‌ ಧರಿಸುತ್ತಾರೆ. ಈ ರೀತಿಯ ಫಾರ್ಮಲ್‌ ಮಾತ್ರವಲ್ಲದೆ ಕ್ಯಾಶುವಲ್‌ ಡ್ರೆಸ್‌ ಜತೆಗೂ ಬಿಳಿ ಡ್ರೆಸ್‌ಗಳು ಮ್ಯಾಚ್‌ ಆಗುತ್ತವೆ. ಬಿಳಿ ಬಣ್ಣ ಸೂರ್ಯನ ಬಿಸಿಲನ್ನು ಹೀರಿ ಕೊಳ್ಳುವುದಿಲ್ಲ ಎನ್ನುವುದು ನಮಗೆಲ್ಲ ತಿಳಿದ ಸಂಗತಿ. ಹಾಗಾಗಿ ಬೇಸಿಗೆಗೆ ಬಿಳಿಯ ಉಡುಪುಗಳು ಹೆಚ್ಚು ಕಂಫ‌ರ್ಟೆಬಲ್‌ ಆಗಿರುತ್ತವೆ. ಇಂದು ಮಾರುಕಟ್ಟೆಯಲ್ಲಿ ಬಣ್ಣ ಬಣ್ಣದ ವೈವಿಧ್ಯಮಯ ಉಡುಪುಗಳಿದ್ದರೂ ಬಿಳಿ ಬಣ್ಣದ ಉಡುಪುಗಳಿಗೆ ಬೇಡಿಕೆ ಕುಗ್ಗುವುದೇ ಇಲ್ಲ. 

ನಿರ್ವಹಣೆ
ಬಿಳಿಬಣ್ಣದ ಹಾಗೂ ನಸುಬಣ್ಣದ ಅಂಗಿ-ಪ್ಯಾಂಟು, ಸಲ್ವಾರ್‌ಗಳನ್ನು ತೊಟ್ಟರೆ ಸ್ವಲ್ಪ ಹೆಚ್ಚೇ ಜಾಗ್ರತೆ ವಹಿಸಬೇಕಾಗುತ್ತದೆ. ಯಾಕೆಂದರೆ, ಬಿಳಿ ಉಡುಪುಗಳ ನಿರ್ವಹಣೆ ಇತರ ಬಣ್ಣದ ಉಡುಪುಗಳಂತಲ್ಲ. ಬಸ್ಸಿನಲ್ಲಿ ಪ್ರಯಾಣಿಸುವಾಗ, ಉದ್ಯೋಗದ ಸ್ಥಳಗಳಲ್ಲಿ, ಸಭೆ-ಸಮಾರಂಭಗಳಲ್ಲಿ ಓಡಾಡುವಾಗ, ಕುಳಿತುಕೊಳ್ಳುವಾಗ ಡ್ರೆಸ್‌ಗಳ ಮೇಲೆ, ಬೆನ್ನಿನ ಜಾಗದಲ್ಲಿ ಆಗುವ ಕೊಳೆ, ಧೂಳು, ಊಟ-ತಿಂಡಿ ಸೇವಿಸುವಾಗ ಆಗುವ ಜಿಡ್ಡಿನ ಕಲೆಗಳನ್ನು ಎಷ್ಟು ಒಗೆದರೂ ಅದು ಬಿಡಲೊಲ್ಲದು. ಎಷ್ಟೇ ಉಜ್ಜಿ, ತಿಕ್ಕಿ ತೊಳೆದರೂ ಕೆಲವು ಕಲೆ ಹೋಗುವುದೇ ಇಲ್ಲ. ಬಿಳಿ ಬಟ್ಟೆಗಳನ್ನು ಒಗೆಯುವಾಗಲೂ ಜಾಗ್ರತೆ ವಹಿಸಬೇಕಾಗುತ್ತದೆ. ಇತರ ಎಲ್ಲ ಬಟ್ಟೆಗಳೊಂದಿಗೆ ಬಿಳಿ ಡ್ರೆಸ್ಸುಗಳನ್ನು ಒಗೆಯು ವಂತೆಯೂ ಇಲ್ಲ. ಸಪರೇಟ್‌ ಆಗಿ ವಾಶ್‌ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಇತರ ಕಲರ್‌ ಬಟ್ಟೆಗಳ ಬಣ್ಣ ತಾಗಿ ಬಿಳಿಬಟ್ಟೆ ಹಾಳಾಗುತ್ತದೆ. ಮಳೆಗಾಲದಲ್ಲಿಯೂ ಬಿಳಿ ಬಟ್ಟೆಗಳು ಅಷ್ಟೊಂದು ಸೂಕ್ತವಲ್ಲ. ಒಗೆದ ಬಳಿಕ ನೀಲಿ ಇಲ್ಲವೆ ಉಜಾಲಾ ನೀರಿನಲ್ಲಿ ಅದ್ದಿ ಒಣಗಿಸಿದರೆ ಹೊಸದರಂತೆ ಹೊಳೆಯುತ್ತವೆ!

ಬಿಳಿ ಶರ್ಟ್‌ಗಳು
ಎಲ್ಲ ಬಣ್ಣದ ಪ್ಯಾಂಟ್‌ಗಳಿಗೂ ಹೊಂದಿಕೊಳ್ಳುವುದೆಂದರೆೆ ಬಿಳಿ ಬಣ್ಣದ ಶರ್ಟ್‌ ಗಳು. ಆದ್ದರಿಂದ ಪ್ರತಿ ಪುರುಷನ ಬಳಿ ಬಿಳಿ ಬಣ್ಣದ ಶರ್ಟ್‌ ಇದ್ದರೆ ಉತ್ತಮ. ಬಿಳಿ ಶರ್ಟ್‌ಗಳು ಪುರುಷರಿಗೆ ಗೌರವದ ವ್ಯಕ್ತಿತ್ವವನ್ನು ನೀಡುತ್ತವೆ. ತುಂಬು ತೋಳಿನ ಬಿಳಿ ಶರ್ಟ್‌ಗೆ ಇಸಿŒ ಹಾಕಿ ಬಿಳಿ, ನಸು ಹಳದಿ ಧೋತಿಯೊಂದಿಗೆ ಧರಿಸಿದರೆ ಸಮಾರಂಭಗಳಲ್ಲಿ ವಿಶೇಷ ಲುಕ್‌ ನೀಡುತ್ತದೆ. ಜೀನ್ಸ್‌ ಗಳಿಗೂ ಇವು ಹೊಂದಿಕೆಯಾಗುತ್ತವೆ. ಆಫೀಸು, ಮದುವೆ, ಪಾರ್ಟಿ, ಸಮಾರಂಭಗಳಲ್ಲಿ ಬಿಳಿ ಶರ್ಟ್‌ ಗಳನ್ನು ತೊಟ್ಟುಕೊಳ್ಳುವುದು ಪುರುಷನನ್ನು ಶಿಸ್ತಾಗಿ ಕಾಣಿಸುವುದರ ಜೊತೆಗೆ ಎಲ್ಲರ ನಡುವೆ ಎದ್ದು ಕಾಣಿಸುವಂತೆ ಮಾಡುತ್ತದೆ. ಸ್ನೇಹಿತರೊಂದಿಗಿನ ಚಿಕ್ಕಪುಟ್ಟ ಪಾರ್ಟಿಗಳಿಗೆ, ಪಿಕ್‌ನಿಕ್‌ಗೆ ಹೋಗು ವಾಗಲೂ ಬಿಳಿ ಬಣ್ಣದ ಟೀ ಶರ್ಟ್‌ ಧರಿಸಿ ಕೊಳ್ಳಬಹುದು. ಫ್ರೆಶ್‌ ಅನುಭವ ನೀಡುತ್ತದೆ.

ಸಲ್ವಾರ್‌ಗಳು, ಕುರ್ತಾಗಳು
ಮಹಿಳೆ ಧರಿಸುವ‌ ವೈವಿಧ್ಯಮಯ ಉಡುಪುಗಳಲ್ಲಿ ಶ್ವೇತ ವರ್ಣದ ಸಲ್ವಾರ್‌, ಸೀರೆ, ಟಾಪ್‌, ಕುರ್ತಾ, ಶರ್ಟ್‌, ಗೌನ್‌, ಅನಾರ್ಕಲಿ ಸೂಟ್‌ಗಳು, ಆಫ್ ಶೋಲ್ಡರ್‌ ಡ್ರೆಸ್‌ಗಳು ಇತರ ಬಣ್ಣಗಳಿಗಿಂತಲೂ ಅತೀ ಹೆಚ್ಚು ಮನಮೋಹಕ. ಫ್ರಾಕ್‌ ಎಂದಾಕ್ಷಣ ನಮ್ಮ ಮನಸ್ಸಿಗೆ ಬರುವುದು ಬಿಳಿ ಬಣ್ಣದ ಫ್ರಾಕ್‌. ಫ್ರಾಕ್‌ಗಳಲ್ಲಿ ವಿವಿಧ ವಿನ್ಯಾಸದ ಕಾಟನ್‌, ನೆಟ್ಟೆಡ್‌, ಸಿಲ್ಕ್, ಲೇಸ್‌ನ ಫ್ರಾಕ್‌ಗಳು ಇತರ ಬಣ್ಣದ ಫ್ರಾಕ್‌ಗಳಿಗಿಂತ ಹೆಚ್ಚು ಆಕರ್ಷಕವಾಗಿ ಕಾಣಿಸುತ್ತವೆ. ಬಿಳಿ ಶರ್ಟ್‌ ಮತ್ತು ಟಾಪ್‌ಗ್ಳು ಕಪ್ಪು ಹಾಗೂ ನೀಲಿ ಬಣ್ಣದ ನಾರ್ಮಲ್‌ ಪ್ಯಾಂಟ್‌ ಹಾಗೂ ಜೀನ್ಸ್‌ ಪ್ಯಾಂಟ್‌ಗಳಿಗೆ ವಿಶೇಷ ಆಕರ್ಷಕ ಲುಕ್‌ ನೀಡುತ್ತವೆ. ಯಾವುದೇ ಪ್ಯಾಂಟ್‌, ಪಟಿಯಾಲ, ಲೆಗ್ಗಿನ್‌ ಎಲ್ಲದಕ್ಕೂ ಬಿಳಿ ಟಾಪ್‌ಗ್ಳು ಚೆಂದ ಕಾಣಿಸುತ್ತವೆ. ಅಲ್ಲದೆ ಯಾವುದೇ ಡಾರ್ಕ್‌ ಕಲರ್‌ನ ಉದ್ದನೆಯ ಸ್ಕರ್ಟ್‌ಗೂ ಬಿಳಿ ಬಣ್ಣದ ಕ್ರಾಪ್‌ಟಾಪ್‌ ಹಾಕಿಕೊಳ್ಳಬಹುದು. ಲೇಸ್‌ ವರ್ಕ್‌ನ ಶಾರ್ಟ್‌ ಟಾಪ್‌ಗ್ಳು ಸಿಂಪಲ್‌ ಮತ್ತು ಗ್ರಾÂಂಡ್‌ ಎರಡೂ ಬಗೆಗಳಲ್ಲಿಯೂ ಲಭಿಸುತ್ತವೆ. ನೆಕ್‌ನ ಭಾಗದಲ್ಲಿ ವಿವಿಧ ಡಿಸೈನ್‌ಗಳಲ್ಲಿ ಅಂದರೆ ಇಲಾಸ್ಟಿಕ್‌ನೊಂದಿಗೆ ನೆರಿಗೆ ನೆರಿಗೆಯಿಂದ ಸ್ಟಿಚ್‌ ಮಾಡಿದವು ಹೆಚ್ಚಿನ ಮೆರುಗನ್ನು ಕೊಡುವುದು.
.ಬಿಳಿ ಶರ್ಟ್‌ ಧರಿಸಿ ಜೀನ್ಸ್‌ ಹಾಕಿ ಶೂ ಹಾಕಿದರೆ ರಿಚ್‌ ಲುಕ್‌  ನೀಡುತ್ತದೆ.
.ಬಿಳಿ ಚಿಕನ್‌ ಕುರ್ತಾಗೆ ಅಥವಾ ಬಿಳಿ ಸಲ್ವಾರ್‌ಗೆ ಬಾಂದಿನಿ ಶಾಲು ಹಾಕಿ ಜ್ಯುವೆಲ್ಲರಿ ಹಾಕಿಕೊಂಡರೆ ಟ್ರೆಡೀಶನಲ್‌ ಲುಕ್‌ ನೀಡುತ್ತದೆ.
.ಫ್ಲವರ್‌ ಪ್ರಿಂಟ್‌ ಇರುವ ಅಥವಾ ಡಾರ್ಕ್‌ ಬಣ್ಣದ ಪ್ಲೆನ್‌ ಸ್ಕರ್ಟ್‌ ಬಿಳಿ ಶರ್ಟ್‌ ಜತೆಗೆ ತುಂಬ ಚೆನ್ನಾಗಿ ಕಾಣುತ್ತದೆ.
.ಬಿಳಿ ನೆಟ್ಟೆಡ್‌ ಟಾಪಿಗೆ ಶೋಲ್ಡರ್‌ಗಳನ್ನು ಮತ್ತು ಕುತ್ತಿಗೆಯ ಭಾಗಗಳನ್ನು ಮಾತ್ರ ನೆಟ್‌ಬಟ್ಟೆ ಮತ್ತು ಉಳಿದ ಭಾಗಗಳಿಗೆ ದಪ್ಪ ಲೈನಿಂಗ್‌ ಬಟ್ಟೆಗಳಿಂದ ಕೂಡಿದವುಗಳು ಸೂಪರ್‌ ಲುಕ್‌ ನೀಡುತ್ತವೆ.

– ಸ್ವಾತಿ

ಟಾಪ್ ನ್ಯೂಸ್

udupi-Kota-Mee

Udupi: ಕಸ್ತೂರಿ ರಂಗನ್‌ ವರದಿ ಬಗ್ಗೆ ಯಾರೂ ಆತಂಕಪಡಬೇಕಿಲ್ಲ: ಕೋಟ ಶ್ರೀನಿವಾಸ ಪೂಜಾರಿ

siddanna-2

Congress ಗ್ಯಾರಂಟಿ ಸುಳ್ಳು ಎಂದು ಸಾಬೀತು ಮಾಡಿ: ಮೋದಿಗೆ ಸಿದ್ದರಾಮಯ್ಯ ಸವಾಲು

BJP FLAG

BJP; ಈ ವಾರವೇ ವಕ್ಫ್ ಹೋರಾಟ: ಅಧಿವೇಶನಕ್ಕೂ ಬಿಸಿ…ಹೇಗಿರಲಿದೆ ಪ್ರತಿಭಟನೆ?

1-USAA

America; ಭಾರತಕ್ಕೆ 84.40 ಕೋ.ರೂ. ಮೌಲ್ಯದ 1,400 ಕಲಾಕೃತಿ ವಾಪಸ್‌

mob

Bengaluru; ಮೊಬೈಲ್‌ಗಾಗಿ ಜಗಳ ಮಾಡಿದ ಮಗನ ಹೊಡೆದು ಕೊಂ*ದ ಅಪ್ಪ !

Dinesh-Gundurao

Covid Scam: ನ್ಯಾ.ಕುನ್ಹಾ ವರದಿಯಲ್ಲಿ ಕೋವಿಡ್‌ ಅವ್ಯವಹಾರ ಉಲ್ಲೇಖ: ದಿನೇಶ್‌ ಗುಂಡೂರಾವ್‌

1-manipura

Manipur ಉದ್ವಿಗ್ನ: ಇಬ್ಬರು ಸಚಿವರು,ಐವರು ಶಾಸಕರ ಮನೆಗಳಿಗೆ ಬೆಂಕಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ

Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ

8

ಗಂಭೀರ್‌ ಅವರ ಯಾತನೆಯ ತರಬೇತಿ ಶೈಲಿ ಭಾರತಕ್ಕೆ ಹೊಂದಲ್ಲ: ಟಿಮ್‌ ಪೇನ್‌

udupi-Kota-Mee

Udupi: ಕಸ್ತೂರಿ ರಂಗನ್‌ ವರದಿ ಬಗ್ಗೆ ಯಾರೂ ಆತಂಕಪಡಬೇಕಿಲ್ಲ: ಕೋಟ ಶ್ರೀನಿವಾಸ ಪೂಜಾರಿ

siddanna-2

Congress ಗ್ಯಾರಂಟಿ ಸುಳ್ಳು ಎಂದು ಸಾಬೀತು ಮಾಡಿ: ಮೋದಿಗೆ ಸಿದ್ದರಾಮಯ್ಯ ಸವಾಲು

BJP FLAG

BJP; ಈ ವಾರವೇ ವಕ್ಫ್ ಹೋರಾಟ: ಅಧಿವೇಶನಕ್ಕೂ ಬಿಸಿ…ಹೇಗಿರಲಿದೆ ಪ್ರತಿಭಟನೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.