ಅಪ್ಪ-ಅಮ್ಮ ಇಟ್ಟ ಹೆಸರು ಗಂಡನ ಮನೆಗೆ ಹೋದಾಗ ಬದಲಾಗುವುದೇಕೆ? 


Team Udayavani, Jul 14, 2017, 3:45 AM IST

SDfdbghjkl.jpg

ಈ ಸಲ ನಮ್ಮ ಬದುಕಿನಲ್ಲಿ ದಿನವೂ ನಾವು ಬಳಸುವ ಹೆಸರಿನ ಬಗ್ಗೆ ಬರೆಯುತ್ತಿದ್ದೇನೆ. ಮನೆಯಲ್ಲಿ ಕರೆಯುವ ಹೆಸರು, ಶಾಲಾ ರೆಕಾರ್ಡ್‌ನಲ್ಲಿ ಹೆಸರು, ಗೆಳೆಯ/ಗೆಳತಿಯರು ಕರೆಯುವ ಹೆಸರು ಹೀಗೆ ನಾನಾ ಬಗೆಗಳಿವೆ. ಹೆಣ್ಣುಮಕ್ಕಳಿಗಾದರೋ ಇನ್ನೂ ಒಂದಿದೆ, ಗಂಡನ ಮನೆಯ ಹೆಸರು!  

ಹೆಸರಿನಲ್ಲೊಂದು ಸ್ವಾರಸ್ಯವಿದೆ. ಅದು ಮೂಲದಿಂದ ತೊಡಗಿ ಹೇಗೆ ಪಯಣಿಸಿತು ಎಂಬುದನ್ನು ಅವಲೋಕಿಸುವುದೇ ಒಂದು ಚೆಂದ. ಹುಟ್ಟುವ ಮೊದಲೇ ಕೆಲವರು ಹೆಸರು ಇಡಬಹುದು. ಹುಟ್ಟಿದ ಬಳಿಕ ಸಾಮಾನ್ಯವಾಗಿ ಎಲ್ಲರ ಹೆಸರು ಪುಟ್ಟ/ಪುಟ್ಟಿ ಆಗಿರುತ್ತದೆ. ಮಗುವಾಗಿರುವಾಗ ಕರೆದದ್ದೇ ಹೆಸರು. ಬೇಕು, ಬೇಕಾದ ಹೆಸರು ಇಟ್ಟುಕೊಳ್ಳುವ ಸ್ವಾತಂತ್ರ್ಯವೂ ಇದೆ. ಕರೆದ ಹೆಸರೇ ಚೆಂದ. ಮುದ್ದು ಮಾಡಲು ಬೇಕಾಗಿ ಅನಿಸಿದ ಹೆಸರುಗಳನ್ನೆಲ್ಲ ಬಳಸಿ ಕರೆದರೂ ಅಸಂಗತವೆನ್ನಿಸುವುದಿಲ್ಲ. ಇಲ್ಲೆಲ್ಲ ಹೆಸರು ಗೌಣ, ಭಾವ ಮಾತ್ರ ಮುಖ್ಯ. 
 
ಹಾಗೆ ನೋಡಿದರೆ, ನಮಗೇಕೆ ಹೆಸರು?  ಉತ್ತರ ಸರಳ : ಒಂದು ವ್ಯಕ್ತಿ ಆತನೇ ಎಂದು ಗುರುತಿಸಲು ಅದರ ಆವಶ್ಯಕತೆ ಇದೆ. ಚಿಕ್ಕವರಿದ್ದಾಗ ನಮಗೆಲ್ಲ ಮನೆಯ ಮುದ್ದಿನ ಹೆಸರುಗಳೆಂದರೆ ತುಂಬ ಅಭಿಮಾನ. ಬೆಳೆಯುತ್ತ ಅವೇ ಹೆಸರುಗಳು, ಬೇರೆಯವರ ಬಾಯಿಯಲ್ಲಿಯೂ ಕೇಳಿಸಿದರೆ ಮುಜುಗರ ತರುತ್ತವೆ. ಅಡ್ಡ ಹೆಸರುಗಳನ್ನು ಸ್ನೇಹವಲಯದಲ್ಲಿ ಮಾತ್ರ ಕರೆಯಿಸಿಕೊಳ್ಳಲು ಆಸೆ. ಉಳಿದ ಕಡೆಯಲ್ಲಿ ತನ್ನದೇ ವ್ಯಕ್ತಿತ್ವದ ಛಾಪು ಒತ್ತುವ ತನ್ನದಾದ “ರೆಕಾರ್ಡಿ’ನ ಹೆಸರೇ ಬೇಕು! ಆರಂಭದಲ್ಲಿ ಕೇವಲ ಗುರುತಿಸುವ ಉದ್ದೇಶಕ್ಕೆಂದು ಇಟ್ಟ ಹೆಸರು, ಮುಂದೆ ತನ್ನತನದ ಛಾಪು ಒತ್ತುವಲ್ಲಿವರೆಗೆ ಸಾಗುವುದು ಸುಲಭದ ಪಯಣವೇನಲ್ಲ. “ಹೆಸರು ಮಾಡು ಮಗು’, “ಅಪ್ಪ, ಅಮ್ಮನ ಹೆಸರು ಉಳಿಸು ಮಗು’ ಅನ್ನುವಲ್ಲೆಲ್ಲ ನಾವು, ತನ್ನತನದ ಛಾಪನ್ನು  ಹೆಸರಿಗೆ ಗಂಟು ಹಾಕಿಯೇ ಮಾತಾಡಿರುತ್ತೇವೆ. 
 
ಹೆಣ್ಣಿನ ಹೆಸರಿನ ಗೊಂದಲ

ಆದರೆ, ಈ ಹೆಸರು ಕೆಲವೊಮ್ಮೆ ಹೆಣ್ಣಿಗೆ ವಿನಾಕಾರಣ ಗೊಂದಲ ಉಂಟುಮಾಡುತ್ತದೆ. ಹೆಸರಿನ ಗೊಂದಲ ಹೆಣ್ಣಿಗೆ ಏಕೆಂದರೆ, ನಮ್ಮ ಸಮಾಜದಲ್ಲಿ ಆಕೆ ಇರಬೇಕಾದ್ದು ತಂದೆ ಇಲ್ಲವೆ ಗಂಡನ ನೆರಳಿನಲ್ಲಿ. ಕೆಲವೊಮ್ಮೆ ಸಮಾಜ ಸಂಪ್ರದಾಯಗಳು  ಇನ್ನೂ ಮುಂದುವರಿದು, ಮದುವೆಯನ್ನು ಮರುಹುಟ್ಟಾಗಿಸುತ್ತದೆ. ಹಾಗೆ ಮಾಡಿದರೆ, ಅವಳ ಆವತ್ತಿನವರೆಗಿನ “ಅಸ್ತಿತ್ವವನ್ನೇ ಇಲ್ಲ’ವಾಗಿಸುವ ಪ್ರಯತ್ನ ಮಾಡಿದಂತಾಗುವುದಿಲ್ಲವೆ? ಹೀಗೆ ಮರುಜನ್ಮ ಪಡೆಯುವ ಅಗತ್ಯವಾದರೂ ಏನು? ಅಂತೂ ಹೆಣ್ಣು ಅಲ್ಲಿಯವರೆಗೆ ತನ್ನದಾಗಿಸಿಕೊಂಡಿದ್ದ ಹೆಸರಿಗೇ ಬಂತು ಸಂಚಕಾರ. ಕೆಲವರು, ಪೂರ್ಣ ಹೆಸರನ್ನೇ ಬದಲಾಯಿಸುವ ಪೂರ್ಣ ಅಸ್ತಿತ್ವವನ್ನೇ ಪರಿವರ್ತನೆ ಮಾಡಿಕೊಳ್ಳುತ್ತಾರೆ. ಹೆಚ್ಚಿನವರಿಗೆ ಪೂರ್ಣ ಹೆಸರನ್ನು ಅಲ್ಲದಿದ್ದರೂ ಎರಡನೆಯ ಹೆಸರನ್ನಂತೂ ಬದಲಾವಣೆ ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ.
ಒಂದೊಮ್ಮೆ ಹಿಂತಿರುಗಿ ನೋಡಿದರೆ, ಹೆಸರಿಗೆ ಸಂಬಂಧಿಸಿದ ಸಂಗತಿಗಳು ಪುರಾಣಕಾಲದಲ್ಲಿಯೇ ಇದ್ದವು. ವಂಶದ ಹೆಸರು ಅದನ್ನು ಮುಂದುವರಿಸಬೇಕಾದ ಸಂಪ್ರದಾಯ  ತ್ರೇತಾಯುಗದಲ್ಲಿ ಗಂಡಿಗೆ ಮೀಸಲಾಗಿತ್ತು. ದ್ವಾಪರಯುಗದ ಬೆಳವಣಿಗೆ ಕುತೂಹಲಕಾರಿಯಾಗಿದೆ. ಒಂದು ಜನಾಂಗ ಅಥವಾ ರಾಜ್ಯದ ಹೆಸರಿನ ಮೂಲಕ ಗುರುತಿಸಿಕೊಳ್ಳುವಿಕೆ ಇತ್ತು. ಉದಾಹರಣೆಗೆ, ಕುಂತಲ ದೇಶದ ರಾಜಕುಮಾರಿ ಪೃಥೆ, ಕುಂತಿಯಾದಂತೆ, ಗಾಂಧಾರದ ರಾಜಕುಮಾರಿ ಗಾಂಧಾರಿಯಾದಳು. ಅದೇ ಯುಗದ ಮುಂದಿನ ಜನಾಂಗ ತಂದೆಯ ಹೆಸರನ್ನೇ ಮಗಳಲ್ಲಿ ಕಾಣಲಾರಂಭಿಸಿತ್ತು. ದ್ರುಪದನ ಮಗಳು ದ್ರೌಪದಿಯಾಗಲಿಲ್ಲವೆ?

ಅದು ಬಿಡಿ, ಈ ದಿನಗಳಲ್ಲಿ ಜಗತ್ತಿನ ಬಹಳ ಭಾಗಗಳಲ್ಲಿ, ಭಾರತವೂ ಸೇರಿ ಸಭಾಂಗಣದಲ್ಲಿ ಕೂಡ “ಮಿಸ್ಸಸ್‌- ಇಂತಹವರು’ ಅಂತ ಗಂಡನ ಹೆಸರನ್ನು ಜೋಡಿಸಿ ಕರೆಯುವ ರೂಢಿ. ಆತನ ವ್ಯಕ್ತಿತ್ವದ ಛಾಪನ್ನು ಹೆಂಡತಿಗೂ ನೀಡುವುದು ಖಂಡಿತ ತಪ್ಪೇನಲ್ಲ, ಆದರೆ ಆಕೆಯ ಅಸ್ತಿತ್ವವನ್ನೇ ಇಲ್ಲವಾಗಿಸುವುದು ಸರಿಯೆ? 

ಅಷ್ಟರವರೆಗೆ, ಶಾಲಾ ಕಾಲೇಜುಗಳಲ್ಲಿ , ತನ್ನೂರಿನಲ್ಲಿ ಗುರುತಿಸಿಕೊಂಡ ಹೆಸರನ್ನು ಪೂರ್ಣ ಇಲ್ಲವೇ ಭಾಗಶಃ ಬದಲಾಯಿಸಿಕೊಳ್ಳಲು ಕೆಲವರಿಗೆ ಕಸಿವಿಸಿ. ತಾನು ತಾನಾಗಿ ಉಳಿಯದ ಭೀತಿ ಇಲ್ಲಿ ಕಾಡುತ್ತಿರುತ್ತದೆ. ಹೊಸ ಜೀವನಕ್ಕೆ ಕಾಲಿರಿಸುವ ಆತಂಕ ಮದುವೆಯ ಸಮಯದಲ್ಲಿ ಗಂಡು-ಹೆಣ್ಣು ಇಬ್ಬರಲ್ಲೂ ಕಂಡರೂ, ತನ್ನತನವನ್ನೂ ಕಳೆದುಕೊಳ್ಳುವ ಕಳವಳ ಹೆಸರು ಬದಲಾವಣೆಯಿಂದಲೇ ಹೆಣ್ಣಿನಲ್ಲಿ ಮೊದಲ್ಗೊಳ್ಳುತ್ತದೆ! ಕಾಣದ ಬದುಕಿಗೆ ಕಾಲಿಡುವ ಭಯದ ಜೊತೆಗೆ, ತನ್ನೆಲ್ಲ ದಾಖಲೆಪತ್ರಗಳಲ್ಲಿ ತನ್ನ ಹೆಸರನ್ನು ಬದಲಾಯಿಸಿಕೊಂಡು ಹೊಸಬಳಾಗುವ ಗೊಂದಲವೂ ಜೊತೆಗೆ ! ಇವೆಲ್ಲ ಮದುವೆಯಿಂದಲೇ ಪ್ರಾರಂಭವೋ? ಖಂಡಿತ ಅಲ್ಲ. 
    
ಹುಟ್ಟಿದಾಗಲೇ ಆಕೆಯ ಮೇಲೆ ತನ್ನ ವ್ಯಕ್ತಿತ್ವದ ಛಾಪನ್ನು ತಂದೆ ಸ್ಥಾಪಿಸಿ ಬಿಡುತ್ತಾನೆ. ಹಾಗಾಗಿಯೇ ಮದುವೆಯಾಗುವವನು ತನ್ನ ಪತ್ನಿಯ ಮೇಲಿರುವ ಬೇರೊಬ್ಬ ವ್ಯಕ್ತಿಯ ಛಾಪನ್ನ ಬದಲಿಸಿ ತನ್ನದು ಮಾಡಿಕೊಳ್ಳುತ್ತಾನೆ! ವ್ಯಕ್ತಿತ್ವದ ಛಾಪು ಹೆಸರಿನ ಮೊಹರಿಗಿಂತ ಹೆಚ್ಚು ಬೆಲೆಯುಳ್ಳದ್ದಲ್ಲವೆ? ಮಕ್ಕಳ ವ್ಯಕ್ತಿತ್ವದಲ್ಲಿ ತಮ್ಮತನ, ತಮ್ಮ ಉತ್ತಮ ಧ್ಯೇಯಗಳನ್ನು ಅಚ್ಚುಕಟ್ಟಾಗಿ ಬೆಳೆಸಿ, ಅವರ ಹೆಸರಿನಲ್ಲಿ ಯಾರ ಛಾಪೂ ಮೂಡಿಸದೆ, ಅವರನ್ನು ಅವರನ್ನಾಗಿ ಬೆಳೆಸಿದರೆ ಈ ಹೆಸರು ಬದಲಾವಣೆಯ ಗೊಂದಲ ನಿಂತು, ಪ್ರತಿಯೊಬ್ಬರ ಹೆಸರು ಕೇವಲ ಅವರವರದೇ ಆಗಿ ಉಳಿಯಬಹುದೇನೋ!

(ಲೇಖಕಿ ಎಂ. ಡಿ. ಪದವೀಧರೆಯಾಗಿದ್ದು ಮಂಗಳೂರಿನ ಕೆ. ಎಸ್‌. ಹೆಗ್ಡೆ ಮೆಡಿಕಲ್‌ ಅಕಾಡೆಮಿಯಲ್ಲಿ ಪ್ರೊಫೆಸರ್‌ ಆಗಿದ್ದಾರೆ.)

ರಶ್ಮಿ ಕುಂದಾಪುರ

ಟಾಪ್ ನ್ಯೂಸ್

infosys

Mysuru: ಇನ್ಫೋಸಿಸ್‌ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್‌ ಫ್ರಂ ಹೋಂ

Darshan-kannada

Professional Life: ಚಿತ್ರರಂಗಕ್ಕೆ ನಟ ದರ್ಶನ್‌ ಮರುಪ್ರವೇಶ!

TB-Jayachndra

Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ

Arrest

Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ

CS-Shadakshari

Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್‌.ಷಡಾಕ್ಷರಿ ಮನವಿ

vidhana-Soudha

Response to Demand: ಬಿಸಿಯೂಟ ನೌಕರರಿಗೆ ಇಡುಗಂಟು: ಸರಕಾರದ ಮಾರ್ಗ ಸೂಚಿ ಪ್ರಕಟ

Koppala–women

Tragedy: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲೂ ಬಾಣಂತಿ, ಶಿಶು ಸಾವು: ಕುಟುಂಬಸ್ಥರ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

infosys

Mysuru: ಇನ್ಫೋಸಿಸ್‌ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್‌ ಫ್ರಂ ಹೋಂ

Darshan-kannada

Professional Life: ಚಿತ್ರರಂಗಕ್ಕೆ ನಟ ದರ್ಶನ್‌ ಮರುಪ್ರವೇಶ!

TB-Jayachndra

Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ

Arrest

Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ

CS-Shadakshari

Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್‌.ಷಡಾಕ್ಷರಿ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.