ಚಳಿಗಾಲಕ್ಕಾಗಿ ವಿಶೇಷ ಹೇರ್‌ಪ್ಯಾಕ್‌ಗಳು


Team Udayavani, Jan 27, 2017, 3:45 AM IST

Aloe-alu-mask.jpg

ಚಳಿಗಾಲ ಬಂತೆಂದರೆ ಕೂದಲು ಒಣಗುವುದು, ಒರಟಾಗುವುದು, ಅಧಿಕ ತಲೆಹೊಟ್ಟು , ತುರಿಕೆ, ಕೂದಲು ತುದಿ ಟಿಸಿಲೊಡೆಯುವುದು- ಹೀಗೆ ಒಂದಲ್ಲಾ ಒಂದು ರೀತಿಯಲ್ಲಿ ಕೂದಲಿನ ತೊಂದರೆಗಳು ಕಂಡುಬರುತ್ತವೆ.

ಹಾಂ! ಚಳಿಗಾಲದಲ್ಲಿ ಕೂದಲಿಗೆ ಅಧಿಕ ಪೋಷಕಾಂಶಗಳು ಅವಶ್ಯ.ಆದ್ದರಿಂದಲೇ ಚಳಿಗಾಲಕ್ಕಾಗಿಯೇ ಕೆಲವು ವಿಶೇಷ ಹೇರ್‌ಪ್ಯಾಕ್‌ಗಳನ್ನು ಈ ಕೆಳಗೆ ನೀಡಲಾಗಿದೆ.

ಎಲೋವೆರಾ-ಆಲೂಗಡ್ಡೆ-ಜೇನಿನ ಹೇರ್‌ಮಾಸ್ಕ್
ಎರಡು ಆಲೂಗಡ್ಡೆಗಳ ಸಿಪ್ಪೆ ತೆಗೆದು, ಕತ್ತರಿಸಿ, ಮಿಕ್ಸರ್‌ನಲ್ಲಿ ತಿರುವಿ ರಸ ತೆಗೆಯಬೇಕು. ಇದಕ್ಕೆ 10 ಚಮಚ ಎಲೋವೆರಾ (ಕುಮಾರೀ) ಗಿಡದ ಎಲೆಯ ತಿರುಳು ಬೆರೆಸಬೇಕು. ತದನಂತರ 8 ಚಮಚ ಶುದ್ಧ ಜೇನು ಸೇರಿಸಿ ಚೆನ್ನಾಗಿ ಕಲಕಬೇಕು. ಇದನ್ನು ಕೂದಲಿಗೆ ಲೇಪಿಸಿ ಮಾಲೀಶು ಮಾಡಿ ಹೇರ್‌ಮಾಸ್ಕ್ ಮಾಡಬೇಕು. ಕೂದಲಿಗೆ ಶವರ್‌ ಕ್ಯಾಪ್‌ ಹಾಕಿ 45 ನಿಮಿಷಗಳ ಬಳಿಕ ಬೆಚ್ಚಗಿನ ನೀರಿನಿಂದ ಕೂದಲು ತೊಳೆಯಬೇಕು. ಹೀಗೆ ವಾರಕ್ಕೆ 1-2 ಬಾರಿ ಈ ಹೇರ್‌ಮಾಸ್ಕ್ ಬಳಸಿದರೆ ಕೂದಲು ಮೃದು, ಸ್ನಿಗ್ಧ , ಸೊಂಪಾಗಿ ಬೆಳೆಯುತ್ತದೆ. ಜೊತೆಗೆ ತಲೆಕೂದಲಿನಲ್ಲಿ ಹೊಟ್ಟು , ಗುಳ್ಳೆ , ತುರಿಕೆಗಳು ಉಂಟಾಗುವುದಿಲ್ಲ.

ತೆಂಗಿನಕಾಯಿ ಹಾಲು ಮತ್ತು ಜೇನಿನ ಹೇರ್‌ಪ್ಯಾಕ್‌
ಅರ್ಧ ತೆಂಗಿನಕಾಯಿಯ ತುರಿಗೆ ಸ್ವಲ್ಪ ನೀರು ಬೆರೆಸಿ ಮಿಕ್ಸರ್‌ನಲ್ಲಿ ತಿರುವಿ ದಪ್ಪ ರಸ ತೆಗೆಯಬೇಕು. 1/2 ಕಪ್‌ ಈ ದಪ್ಪ ತೆಂಗಿನ ಹಾಲಿಗೆ 10 ಚಮಚ ಜೇನು ಬೆರೆಸಿ ಚೆನ್ನಾಗಿ ಬೆರೆಸಬೇಕು. ತದನಂತರ ಕೂದಲಿಗೆ ಲೇಪಿಸಿ ಚೆನ್ನಾಗಿ ಮಾಲೀಶು ಮಾಡಿ, ತಲೆಕೂದಲನ್ನು ಶವರ್‌ ಕ್ಯಾಪ್‌ನಿಂದ ಕವರ್‌ ಮಾಡಬೇಕು. ಒಂದು ಗಂಟೆಯ ಬಳಿಕ ಬೆಚ್ಚಗಿನ ನೀರಲ್ಲಿ ಕೂದಲು ತೊಳೆಯಬೇಕು.

ಈ ಹೇರ್‌ಪ್ಯಾಕ್‌ ಕೂದಲು ಒಣಗಿ ಕಾಂತಿಹೀನವಾಗಿರುವಾಗ ಹಾಗೂ ಕೂದಲ ತುದಿ ಟಿಸಿಲೊಡೆಯುವವರಲ್ಲಿ ಚಳಿಗಾಲದಲ್ಲಿ ಬಳಸಲು ಸುಯೋಗ್ಯವಾದ ಹೇರ್‌ಪ್ಯಾಕ್‌ ವಾರಕ್ಕೆ 1-2 ಬಾರಿ ಬಳಸಬಹುದು.

ಮೆಂತ್ಯೆಕಾಳು ಮತ್ತು ಸಾಸಿವೆ ಎಣ್ಣೆಯ ಹೇರ್‌ಪ್ಯಾಕ್‌
ಕಾಲು ಕಪ್‌ ಮೆಂತೆಯನ್ನು ರಾತ್ರಿ ಬಿಸಿನೀರಿನಲ್ಲಿ ನೆನೆಸಿ ಇಡಬೇಕು. ಮರುದಿನ ಬೆಳಿಗ್ಗೆ ಸ್ವಲ್ಪ ಹಾಲು ಬೆರೆಸಿ ನಯವಾಗಿ ಅರೆಯಬೇಕು. ಅದಕ್ಕೆ 10 ಚಮಚ ಸಾಸಿವೆ ಎಣ್ಣೆ ಬೆರೆಸಿ ಚೆನ್ನಾಗಿ ಮಿಶ್ರಮಾಡಿ ದಪ್ಪ ಪೇಸ್ಟ್‌ ತಯಾರಿಸಿ ತಲೆಕೂದಲಿಗೆ ಹಚ್ಚಿ ಒಂದು ಗಂಟೆಯ ಬಳಿಕ ನೀರಿನಲ್ಲಿ ತೊಳೆಯಬೇಕು.

ಬಾಳೆಹಣ್ಣು-ಮೊಟ್ಟೆ ಹೇರ್‌ಪ್ಯಾಕ್‌
ಚೆನ್ನಾಗಿ ಕಳಿತ ಎರಡು ಬಾಳೆಹಣ್ಣನ್ನು ತೆಗೆದುಕೊಂಡು ಚೆನ್ನಾಗಿ ಮಸೆಯಬೇಕು. ಅದಕ್ಕೆ ಚೆನ್ನಾಗಿ ಗೊಟಾಯಿಸಿದ ಎರಡು ಮೊಟ್ಟೆಯ ಪೇಸ್ಟನ್ನು ಬೆರೆಸಿ ಕಲಕಬೇಕು. 10 ಹನಿ ನಿಂಬೆರಸ ಸೇರಿಸಿ ಮಿಶ್ರಮಾಡಿ ಕೂದಲಿಗೆ ಲೇಪಿಸಬೇಕು.  1/2 ಗಂಟೆ ಬಳಿಕ ಈ ಹೇರ್‌ಪ್ಯಾಕ್‌ನ್ನು ಬಿಸಿನೀರಲ್ಲಿ ತೊಳೆಯಬೇಕು.

ವಾರಕ್ಕೆ 1-2 ಬಾರಿ ಈ ಹೇರ್‌ಪ್ಯಾಕ್‌ ಬಳಸಿದರೆ ಒಣಗಿದ ಕೂದಲು ಕಾಂತಿಯುತವಾಗುತ್ತದೆ ಮತ್ತು ಕೂದಲಿಗೆ ಅಧಿಕ ಪೋಷಕಾಂಶ ದೊರೆತು ಕೂದಲು ಉದುರುವುದು ನಿವಾರಣೆಯಾಗುತ್ತದೆ.

ಬೆಣ್ಣೆಹಣ್ಣು ಹಾಗೂ ಜೇನಿನ ಹೇರ್‌ಪ್ಯಾಕ್‌
ಚೆನ್ನಾಗಿ ಕಳಿತ ಬೆಣ್ಣೆಹಣ್ಣನ್ನು ಮಸೆದು ಪೇಸ್ಟ್‌ ತಯಾರಿಸಿ, ಅದಕ್ಕೆ 10 ಚಮಚ ಜೇನುತುಪ್ಪ , 10 ಹನಿ ಆಲಿವ್‌ತೈಲ ಅಥವಾ ತಾಜಾ ಹಸಿ ಕೊಬ್ಬರಿ ಎಣ್ಣೆ ಬೆರೆಸಬೇಕು. ಇದನ್ನು ಚೆನ್ನಾಗಿ ಮಿಶ್ರಮಾಡಿ ಕೂದಲಿಗೆ ಲೇಪಿಸಬೇಕು. ಅರ್ಧ ಗಂಟೆಯ ಬಳಿಕ ಬಿಸಿನೀರಿನಲ್ಲಿ ಕೂದಲು ತೊಳೆಯಬೇಕು.

ಇದು ಸಹ ಕೂದಲಿಗೆ ಚಳಿಗಾಲದಲ್ಲಿ ಅವಶ್ಯವಿರುವ ಅಧಿಕ ಪೋಷಕಾಂಶಗಳನ್ನು ಒದಗಿಸಿ, ಕೂದಲು ಒಣಗುವುದು, ಒರಟಾಗುವುದು, ಉದುರುವುದು ಮೊದಲಾದ ತೊಂದರೆಗಳನ್ನು ನಿವಾರಣೆ ಮಾಡುತ್ತದೆ.

ಚಳಿಗಾಲಕ್ಕೆ ಕೂದಲ ಆರೈಕೆ ಇಂತಿರಲಿ
*ನಿತ್ಯ ಅಥವಾ ಎರಡು ದಿನಗಳಿಗೊಮ್ಮೆ ಮೆಂತ್ಯೆ , ಒಂದೆಲಗ, ಕರಿಬೇವು ಎಲೆಗಳನ್ನು ಹಾಕಿ ಕುದಿಸಿ ಇಟ್ಟ ಕೊಬ್ಬರಿ ಎಣ್ಣೆಯನ್ನು ಲೇಪಿಸಿದರೆ ಹಿತಕರ.
*ಡ್ರೈಯರ್‌ಗಳನ್ನು ಬಳಸಿ ಕೂದಲು ಒಣಗಿಸುವುದು ಹಿತಕರವಲ್ಲ.
*ಚಳಿಗಾಲದ ಸಮಯದಲ್ಲಿ ಹೇರ್‌ ಸ್ಟ್ರೇಯ್‌r ನಿಂಗ್‌ ಅಥವಾ ಹೇರ್‌ ಕರ್ಲಿಂಗ್‌ ಮುಂತಾದ ವಿನ್ಯಾಸಗಳನ್ನು ಅಧಿಕವಾಗಿ ಪ್ರಯೋಗಿಸಿದರೆ ಕೂದಲು ಕಾಂತಿ ಕಳೆದು ಒರಟು ಹಾಗೂ ರೂಕ್ಷವಾಗುತ್ತದೆ.
*ತೀಕ್ಷ್ಣ ಶ್ಯಾಂಪೂ, ರಾಸಾಯನಿಕಗಳ ಬದಲಾಗಿ ಮೃದು ಗುಣಯುಕ್ತ ಶ್ಯಾಂಪ್ಯೂ, ಗಿಡಮೂಲಿಕೆಗಳ ಶ್ಯಾಂಪೂ ಹಾಗೂ ಮೇಲೆ ತಿಳಿಸಿದರುವ ಹೇರ್‌ಪ್ಯಾಕ್‌ಗಳು ಕೂದಲ ಕಾಂತಿ ವರ್ಧಿಸಿ, ಸೌಂದರ್ಯ ರಕ್ಷಿಸುತ್ತದೆ.

– ಡಾ| ಅನುರಾಧಾ ಕಾಮತ್‌

ಟಾಪ್ ನ್ಯೂಸ್

1-urmila

Actor; ಖ್ಯಾತ ನಟಿ ಉರ್ಮಿಳಾ ಕೊಠಾರೆ ಅವರ ಕಾರು ಹರಿದು ಓರ್ವ ಸಾ*ವು

Yadgiri: ನಗರ ಪೊಲೀಸರ ಕಾರ್ಯಾಚರಣೆ… 7 ಲಕ್ಷ ರೂ. ಮೌಲ್ಯದ 22 ಬೈಕ್ ವಶ

Yadgir: ನಗರ ಪೊಲೀಸರ ಕಾರ್ಯಾಚರಣೆ… 7 ಲಕ್ಷ ರೂ. ಮೌಲ್ಯದ 22 ಬೈಕ್ ವಶ

Qatar: ಕತಾರ್‌ ರಾಜಕುಮಾರಿಯ ಹಿಂಬಾಲಿಸಿ, ಗಿಫ್ಟ್ ಕೊಟ್ಟು ಕಿರುಕುಳ… ಚಾಲಕನಿಗೆ ಶಿಕ್ಷೆ

Qatar: ಕತಾರ್‌ ರಾಜಕುಮಾರಿಯ ಹಿಂಬಾಲಿಸಿ, ಗಿಫ್ಟ್ ಕೊಟ್ಟು ಕಿರುಕುಳ… ಚಾಲಕನಿಗೆ ಶಿಕ್ಷೆ

priyank-kharge

Bidar contractor ಆತ್ಮಹ*ತ್ಯೆ ಪ್ರಕರಣ: ಸ್ವತಂತ್ರ ತನಿಖೆಗೆ ಪ್ರಿಯಾಂಕ್ ಖರ್ಗೆ ಒಲವು

T20: ಗೆಲ್ಲುವ ಹಂತದಲ್ಲಿದ್ದ ಶ್ರೀಲಂಕಾವನ್ನು ಹಿಡಿದು ನಿಲ್ಲಿಸಿದ ಕಿವೀಸ್‌…

T20: ಗೆಲ್ಲುವ ಹಂತದಲ್ಲಿದ್ದ ಶ್ರೀಲಂಕಾವನ್ನು ಹಿಡಿದು ನಿಲ್ಲಿಸಿದ ಕಿವೀಸ್‌…

1-fish

Manvi; ರಾಜಲಬಂಡ ಅಣೆಕಟ್ಟೆಯಲ್ಲಿ ಕಂಡು ಬಂದ ಭಾರಿ ಗಾತ್ರದ ಮೀನುಗಳು

Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ

Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Court-1

Kasaragod: ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರ ಕೊ*ಲೆ ಪ್ರಕರಣ

1-urmila

Actor; ಖ್ಯಾತ ನಟಿ ಉರ್ಮಿಳಾ ಕೊಠಾರೆ ಅವರ ಕಾರು ಹರಿದು ಓರ್ವ ಸಾ*ವು

Yadgiri: ನಗರ ಪೊಲೀಸರ ಕಾರ್ಯಾಚರಣೆ… 7 ಲಕ್ಷ ರೂ. ಮೌಲ್ಯದ 22 ಬೈಕ್ ವಶ

Yadgir: ನಗರ ಪೊಲೀಸರ ಕಾರ್ಯಾಚರಣೆ… 7 ಲಕ್ಷ ರೂ. ಮೌಲ್ಯದ 22 ಬೈಕ್ ವಶ

Qatar: ಕತಾರ್‌ ರಾಜಕುಮಾರಿಯ ಹಿಂಬಾಲಿಸಿ, ಗಿಫ್ಟ್ ಕೊಟ್ಟು ಕಿರುಕುಳ… ಚಾಲಕನಿಗೆ ಶಿಕ್ಷೆ

Qatar: ಕತಾರ್‌ ರಾಜಕುಮಾರಿಯ ಹಿಂಬಾಲಿಸಿ, ಗಿಫ್ಟ್ ಕೊಟ್ಟು ಕಿರುಕುಳ… ಚಾಲಕನಿಗೆ ಶಿಕ್ಷೆ

priyank-kharge

Bidar contractor ಆತ್ಮಹ*ತ್ಯೆ ಪ್ರಕರಣ: ಸ್ವತಂತ್ರ ತನಿಖೆಗೆ ಪ್ರಿಯಾಂಕ್ ಖರ್ಗೆ ಒಲವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.