ಸುಮ್ಮನೆ ಬಸ್ಕಿ ತೆಗೆಯಿರಿ!
Team Udayavani, Feb 1, 2019, 12:30 AM IST
“ಗಣಪತಿ ನಮಸ್ಕಾರ’ ಎನ್ನುವ ಯೋಗಾಸನವಿದು. ಭಾರತೀಯರ ಬ್ರಾಹ್ಮಿ ಪ್ರಾಣಾಯಾಮದ ಒಂದು ಆಯಾಮವೇ ಬಸ್ಕಿ ವಿಧಾನ. ಸೂರ್ಯನಿಗೆ ಅಭಿಮುಖವಾಗಿ ನಿಂತುಕೊಳ್ಳಬೇಕು. ದೀರ್ಘವಾಗಿ ಉಸಿರನ್ನು ಎಳೆದುಕೊಳ್ಳಬೇಕು. ನಾಲಿಗೆಯನ್ನು ಬಾಯಿಯ ಒಳಭಾಗದಲ್ಲಿ ಅಂದರೆ ಮೇಲಿನ ಹಲ್ಲಿನ ಹಿಂಭಾಗದಲ್ಲಿರಿಸಿ. ಎಡ ಕೈಯ ಹೆಬ್ಬೆರಳು ಮತ್ತು ತೋರು ಬೆರಳಿನಿಂದ ಬಲ ಕಿವಿಯ ಹಾಲೆಯನ್ನು ಹಾಗೂ ಬಲ ಕೈಯ ಹೆಬ್ಬೆರಳು ಮತ್ತು ಕಿರುಬೆರಳಿನಿಂದ ಎಡಕಿವಿಯ ಹಾಲೆಯನ್ನು ಹಿಡಿದುಕೊಳ್ಳಬೇಕು. ನಂತರ ಉಸಿರನ್ನು ಒಳಗೆ ಎಳೆದು ಹೊರಗೆ ಬಿಡಬೇಕು. ಎರಡೂ ಕಿವಿಯ ಹಾಲೆಯನ್ನು ಒತ್ತುತ್ತ ಕುಳಿತುಕೊಳ್ಳುವ ಭಂಗಿಯಲ್ಲಿ ನೇರವಾಗಿ ಬಗ್ಗಬೇಕು. ಉಸಿರನ್ನು ಹಾಗೆಯೇ ಹಿಡಿದಿಟ್ಟುಕೊಂಡು ನಿಧಾನವಾಗಿ ಎದ್ದುನಿಲ್ಲುತ್ತ ಉಸಿರು ಬಿಡಬೇಕು. ಕೈಯನ್ನು ಕಿವಿಯಿಂದ ತೆಗೆಯಬಾರದು ಹಾಗೂ ನಾಲಿಗೆಯ ಸ್ಥಿತಿಯೂ ಹಾಗೆಯೇ ಇರಬೇಕು. ಹೀಗೆ ದಿನಕ್ಕೆ ಹದಿಮೂರರಿಂದ ಇಪ್ಪತ್ತೂಂದು ಬಾರಿ ಬಸ್ಕಿ ಹೊಡೆದರೆ ಸುಮಾರು ಮೂರು ತಿಂಗಳ ಒಳಗೆ ಉತ್ತಮ ಫಲಿತಾಂಶ ಕಾಣಬಲ್ಲಿರಿ.
ಇತ್ತೀಚೆಗೆ ಮದುವೆ ಸಮಾರಂಭದಲ್ಲಿ ಬಹಳ ಹುರುಪಿನಿಂದ ಓಡಾಡುತ್ತಿದ್ದ ಶಾಲಿನಿ ಆಂಟಿಯನ್ನು ನೋಡಿ ಬಹಳ ಸಂತೋಷ ಹಾಗೂಗು ಆಶ್ಚರ್ಯವಾಯಿತು. ಸುಮಾರು ಒಂದು ತಿಂಗಳ ಹಿಂದೆ ದೂರವಾಣಿ ಮೂಲಕ ಕರೆ ಮಾಡಿ ತನಗೆ ಮಂಡಿನೋವು, ಹಲವಾರು ರೀತಿಯಲ್ಲಿ ಔಷಧೋàಪಚಾರ ಎಲ್ಲ ಆಯಿತು. ಏನೂ ಪ್ರಯೋಜನವಾಗಿಲ್ಲ. ಈಗ ಮಂಡಿ ಬಾತಿದೆ ಹಾಗೂ “ಟಕಟಕ’ ಎಂದು ಶಬ್ದ ಬರುತ್ತಿದ್ದು, ಓಡಾಡಲು ಬಹಳ ಕಷ್ಟವಾಗುತ್ತಿದೆ. ಪಟ್ಟಣದ ನುರಿತ ವೈದ್ಯತಜ್ಞರಲ್ಲಿ ಪರೀಕ್ಷೆ ಮಾಡಿಸಿದಾಗ ಎಲುಬು ಸವೆತವಾಗಿದೆ. ಮಂಡಿ ಚಿಪ್ಪು$ ಬದಲಾವಣೆಯಾಗಬೇಕಿದೆ. ಆದ್ದರಿಂದ, ಶಸ್ತ್ರಕ್ರಿಯೆಗೆ ತಯಾರಾಗಿ ಎಂದಿದ್ದಾರೆ. ಹಾಗೆ ನಾವೆಲ್ಲ ಮಾನಸಿಕವಾಗಿ ಶಸ್ತ್ರಕ್ರಿಯೆಗೆ ತಯಾರಾಗುತ್ತಿದ್ದೇವೆ. ಇನ್ನು ನಾಲ್ಕು ತಿಂಗಳಲ್ಲಿ ಶಸ್ತ್ರಚಿಕಿತ್ಸೆ ಮಾಡುವುದೆಂದು ಸುಮಾರು ಅರುವತ್ತು ವರ್ಷ ವಯಸ್ಸಿನ ಆಂಟಿ ನೊಂದು ನುಡಿದಿದ್ದರು. ಈಗ ಇಲ್ಲಿ ನೋಡಿದರೆ ಮಂಡಿನೋವು ಇದ್ದಂತೆ ಕಾಣುತ್ತಿಲ್ಲ, ಅಲ್ಲದೆ ಮುಖದಲ್ಲಿ ಹೊಸ ಚೈತನ್ಯವನ್ನು ಕಂಡು, ಆಂಟಿಯಲ್ಲಿ ಇದರ ಬಗ್ಗೆ ತಿಳಿದುಕೊಳ್ಳಲು ಬಹಳ ಉತ್ಸುಕಳಾಗಿದ್ದೆ. ಸಮಯ ನೋಡಿ, “”ಆಂಟಿ ಹೇಗಿದ್ದೀರಾ? ಆರಾಮವಾ? ನನಗೆ ನಿಮ್ಮಲ್ಲಿ ಸ್ವಲ್ಪ$ ಮಾತಾಡಬೇಕಿತ್ತು” ಎಂದು ಕೇಳಿದೆ. ನಗುತ್ತ, ಆರಾಮವಾಗಿದ್ದೇನೆ. ಊಟಕ್ಕೆ ಎಲೆ ಹಾಕಿದ್ದಾರೆ ಬಾ ಪಂಕ್ತಿಯಲ್ಲಿ ಜೊತೆಯಲ್ಲಿ ಕುಳಿತು ಊಟಮಾಡುತ್ತ ಮಾತನಾಡೋಣ’ ಎಂದಾಗ ನನಗೆ ಇನ್ನಷ್ಟು ಕುತೂಹಲ! ತಡೆಯಲಾಗದೆ, “”ಏನು? ನೀವು ಕೆಳಗೆ ಕುಳಿತು ಊಟ ಮಾಡೋದಾ? ಏನು ಆಂಟಿ ತಮಾಷೆ ಮಾಡುತ್ತಿದ್ದೀರಾ? ನಿಮಗೆ ಮಂಡಿ ನೋವಲ್ಲವೇ?” ಎಂದು ಕೇಳಿದೆ.
ಆರಾಮವಾಗಿ ಕುಳಿತು ಊಟ ಮಾಡುತ್ತ¤ ಆಂಟಿ ಈ ರೀತಿ ಹೇಳಿದರು. “‘ಹೌದು, ಮಂಡಿನೋವು ಇತ್ತು, ವೈದ್ಯರು ಆಪರೇಷನ್‌ಗೆ ಸಲಹೆಯನ್ನೂ ಕೊಟ್ಟಿದ್ದರು. ಆದರೆ ನೋಡು, ದೇವರ ದಯೆ; ಈಗ ಮಂಡಿನೋವು ವಾಸಿಯಾಗಿದೆ. ಕುತೂಹಲ ತಡೆಯಲಾಗದೆ ಹೇಗೆ ಪವಾಡವೇನಾದರೂ ಆಯಿತೇ? ನನಗೆ ಅರ್ಥವೇ ಆಗುತ್ತಿಲ್ಲ” ಎಂದೆ. ಆಗ ಅವರು ನಗುತ್ತ¤, “”ಮಂಡಿನೋವು ತಡೆಯಲಾಗದ ನಾನು ಸುಮಾರು ಎಪ್ಪತ್ತೆರಡು ವರ್ಷ ವಯಸ್ಸಿನ, ಯೋಗಾಭ್ಯಾಸದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸದಾ ಚಟುವಟಿಕೆಯಲ್ಲಿರುವ ಆತ್ಮೀಯರಲ್ಲಿ ನನ್ನ ಸಮಸ್ಯೆಯನ್ನು ಹೇಳಿಕೊಂಡಾಗ, ಅದಕ್ಕೆ ಯಾಕೆ ಇಷ್ಟು ಚಿಂತೆ? ದಿನಾ “ಬಸ್ಕಿ’ ತೆಗಿ. ಒಂದು ತಿಂಗಳು ಕಳೆದಾಗ ನಿನ್ನ ನೋವೆಲ್ಲÉ ವಾಸಿ ಯಾ ಗುತ್ತೆ” ಎಂದ ರಂತೆ. ಹೇಗಿ ದ್ದರೂ ಆಪ ರೇಷನ್‌ಗೆ ತಯಾರಾದ ನಾನು ಧೈರ್ಯ ಮಾಡಿ ಕಿಟಕಿಯ ಮೇಲಿನ ಸರಳನ್ನು ಹಿಡಿದು ಮೆಲ್ಲಗೆ ಬಸ್ಕಿ ತೆಗೆಯಲು ಪ್ರಯತ್ನಿಸಿದೆ. ನಾಲ್ಕು ಬಸ್ಕಿ ತೆಗೆದೆ. ದಿನಕ್ಕೆ ಎರಡು ಬಾರಿ ತೆಗೆಯುತ್ತ¤, ಸುಮಾರು 15 ದಿನ ಗಳ ಬಳಿಕ ಹದಿನೈದು ಬಸ್ಕಿ ತೆಗೆಯು ವಲ್ಲಿ ಸಫಲಳಾದೆ ಹಾಗೂ ಕಾಲು ನೋವು ಕಡಿಮೆ ಯಾಗುತ್ತ¤ ಬಂತು. ಈಗ ನಾನು ಕೆಳಗಿನ ಸರಳನ್ನು ಹಿಡಿದು ಇಪ್ಪತ್ತು ಬಸ್ಕಿ ತೆಗೆಯುತ್ತ ಇದ್ದೇನೆ. ಕಾಲುನೋವು ಮುಕ್ಕಾಲು ಭಾಗ ಕಡಿಮೆಯಾಗಿದೆ. ಇದರಿಂದ ಸ್ಫೂರ್ತಿಗೊಂಡ ನಾನು ಯೋಗ ತರಗತಿಗೂ ಹೋಗುತ್ತಿದ್ದೇನೆ. ಆಪರೇಷನ್‌ನ ಬಾಗಿಲಿಗೆ ತಲುಪಿದ ನನ್ನನ್ನು ಹಿರಿಯರ ಸಲಹೆ ಮತ್ತು ಯೋಗವೇ ಕಾಪಾಡಿತು” ಎಂದು ಕೃತಜ್ಞತೆಯಿಂದ ನುಡಿದು, ನನಗೂ ಅವರನ್ನು ಪರಿಚಯಿಸಿದರು.
ಬಹಳ ಆಸಕ್ತಿಯಿಂದ ಅವರನ್ನು ಭೇಟಿಯಾದಾಗ, ಅವರು ತಮ್ಮ ಹಲವಾರು ಅನುಭವಗಳನ್ನು ನನ್ನಲ್ಲಿ ಹಂಚಿಕೊಂಡರು. ಪರಿಚಿತ ಬ್ಯಾಂಕ್ ಮ್ಯಾನೇಜರ್‌ಗೆ, ಸ್ನೇಹಿತರ ಪತ್ನಿಗೆ ಹಾಗೂ ಪಕ್ಕದ ಮನೆಯ ಸ್ನೇಹಿತರಿಗೆ- ಹೀಗೆ ಅನೇಕರಿಗೆ ಇವರ ಸಲಹೆಯಂತೆ ಬಸ್ಕಿ- ಗಣಪತಿ ನಮಸ್ಕಾರ ತೆಗೆದು ಮಂಡಿನೋವು ವಾಸಿಯಾಗಿದೆ ಎಂದು ತಿಳಿಯಿತು. ಬಸ್ಕಿಯ ಜೊತೆ ಮಂಡಿನೋವಿನ ಶಮನಕ್ಕೆ ಪೂರಕವಾದ ಇತರ ಯೋಗಾಸನಗಳನ್ನು ಮಾಡುವುದರಿಂದಲೂ ಬಹಳ ಬೇಗನೆ ಗುಣಮುಖವಾಗುವುದು.
ಇದರ ಬಗ್ಗೆ ಇನ್ನೂ ಮಾಹಿತಿಗಾಗಿ ಯೋಗದ ಗುರುವನ್ನು ಅವರು ಭೇಟಿ ಮಾಡಿಸಿದಾಗ ಈ ಕೆಳಗಿನಂತೆ ಮಾಹಿತಿಯು ದೊರಕಿತು.
“ಗಣಪತಿ ನಮಸ್ಕಾರ’ ಎನ್ನುವ ಯೋಗಾಸನವಿದು. ಭಾರತೀಯರ ಬ್ರಾಹ್ಮಿà ಪ್ರಾಣಾಯಾಮದ ಒಂದು ಆಯಾಮವೇ ಬಸ್ಕಿ ವಿಧಾನ. ಸೂರ್ಯನಿಗೆ ಅಭಿಮುಖವಾಗಿ ನಿಂತುಕೊಳ್ಳಬೇಕು. ದೀರ್ಘವಾಗಿ ಉಸಿರನ್ನು ಎಳೆದುಕೊಳ್ಳಬೇಕು. ನಾಲಿಗೆಯನ್ನು ಬಾಯಿಯ ಒಳಭಾಗದಲ್ಲಿ ಅಂದರೆ ಮೇಲಿನ ಹಲ್ಲಿನ ಹಿಂಭಾಗದಲ್ಲಿರಿಸಿ. ಎಡ ಕೈಯ ಹೆಬ್ಬೆರಳು ಮತ್ತು ತೋರು ಬೆರಳಿನಿಂದ ಬಲ ಕಿವಿಯ ಹಾಲೆಯನ್ನು ಹಾಗೂ ಬಲ ಕೈಯ ಹೆಬ್ಬೆರಳು ಮತ್ತು ಕಿರುಬೆರಳಿನಿಂದ ಎಡಕಿವಿಯ ಹಾಲೆಯನ್ನು ಹಿಡಿದುಕೊಳ್ಳಬೇಕು. ನಂತರ ಉಸಿರನ್ನು ಒಳಗೆ ಎಳೆದು ಹೊರಗೆ ಬಿಡಬೇಕು. ಎರಡೂ ಕಿವಿಯ ಹಾಲೆಯನ್ನು ಒತ್ತುತ್ತ ಕುಳಿತುಕೊಳ್ಳುವ ಭಂಗಿಯಲ್ಲಿ ನೇರವಾಗಿ ಬಗ್ಗಬೇಕು. ಉಸಿರನ್ನು ಹಾಗೆಯೇ ಹಿಡಿದಿಟ್ಟುಕೊಂಡು ನಿಧಾನವಾಗಿ ಎದ್ದುನಿಲ್ಲುತ್ತ ಉಸಿರು ಬಿಡಬೇಕು. ಕೈಯನ್ನು ಕಿವಿಯಿಂದ ತೆಗೆಯಬಾರದು ಹಾಗೂ ನಾಲಿಗೆಯ ಸ್ಥಿತಿಯೂ ಹಾಗೆಯೇ ಇರಬೇಕು. ಹೀಗೆ ದಿನಕ್ಕೆ ಹದಿಮೂರರಿಂದ ಇಪ್ಪತ್ತೂಂದು ಬಾರಿ ಬಸ್ಕಿ ಹೊಡೆದರೆ ಸುಮಾರು ಮೂರು ತಿಂಗಳ ಒಳಗೆ ಉತ್ತಮ ಫಲಿತಾಂಶ ಕಾಣಬಲ್ಲಿರಿ.
ರೆಫ್ಲೆಸ್ಯೂಲೆಜಿ ಎಂದರೆ ವಿಜಾnನದ ಒಂದು ಭಾಗ. ಇದರಲ್ಲಿ ಹೇಳುವ ಹಾಗೆ ನಮ್ಮ ಒತ್ತಡ ಕಡಿಮೆ ಮಾಡಿ ಮೆದುಳನ್ನು ಸುಧಾರಿಸಲು ಕಿವಿಯನ್ನು ಒತ್ತಲಾಗುತ್ತದೆ. ಕಿವಿಯ ಮೇಲೆ ಇರುವ ಕೆಲವು ಬಿಂದುಗಳು ದೇಹದ ಅಂಗಗಳಿಗೆ ನೇರವಾಗಿ ಸಂಪರ್ಕ ಸಾಧಿಸಿ ನೋವು-ಒತ್ತಡ ನಿವಾರಿಸಿ ತಟಸ್ಥವಾಗಿರುವಂತೆ ನೋಡಿಕೊಳ್ಳುತ್ತದೆ. ಬಲ ಕಿವಿಯನ್ನು ಒತ್ತಿದಾಗ ಆಕ್ಯುಪ್ರಷರ್ ಬಿಂದುಗಳು ಎಡಭಾಗದ ಮೆದುಳು ಮತ್ತು ಪಿಟ್ಯುಟರಿ ಗ್ರಂಥಿಯನ್ನು ಚುರುಕಾಗಿಸುತ್ತದೆ. ಹಾಗೆಯೇ ಎಡ ಕಿವಿಯನ್ನು ಒತ್ತಿದಾಗ ಬಲಭಾಗದ ಮೆದುಳು ಚುರುಕಾಗುತ್ತದೆ. ಇದರಿಂದಾಗಿ ಜಾnನ ಗ್ರಹಿಸಲು, ಜಾnಪಕಶಕ್ತಿ ವೃದ್ಧಿಸಲು ಸಹಾಯಕ ಅಲ್ಲದೇ ಆಲೋಚನಾಶಕ್ತಿ, ಸೃಜನಶೀಲತೆ ವೃದ್ಧಿಸುತ್ತದೆ. ದೇಹದಲ್ಲಿ ವಿದ್ಯುತ್ ಸಂಚಾರವಾಗಿ ಇಡೀ ಅಂಗಾಂಗ ಚುರುಕಾಗುವುದಲ್ಲದೇ ಹೃದಯ ಬಡಿತ ಜಾಸ್ತಿಯಾಗಿ ರಕ್ತ ಸಂಚಾರ ಸುಗಮವಾಗುತ್ತದೆ. ಇದರಿಂದ ತಲೆಯಿಂದ ಕಾಲಿನ ಬೆರಳ ತುದಿಯವರೆಗೂ ರಕ್ತಪರಿಚಲನೆ ಸಮರ್ಪಕವಾಗುತ್ತದೆ. ಉಸಿರಾಟದ ವೇಗ ಜಾಸ್ತಿಯಾಗಿ ಶ್ವಾಸಕೋಶ ಶುದ್ಧವಾಗುತ್ತದೆ ಹಾಗೂ ಮೀನಖಂಡಗಳ ಸೆಳೆತ ಜಾಸ್ತಿಯಾಗಿ ನರಗಳ ದೌರ್ಬಲ್ಯದಿಂದ ಪಾರಾಗಬಹುದು. ದೇಹದ ಪ್ರತಿಯೊಂದು ಮೂಳೆಗಳಿಗೂ ಚಾಲನೆ ದೊರೆತು ಸಂದುಗಳ ಜೋಡಣೆ ಸಮರ್ಪಕವಾಗುತ್ತದೆ. ಮನಸ್ಸು ಶಾಂತವಾಗಿ ಏಕಾಗ್ರತೆಯೂ ವೃದ್ಧಿಸುತ್ತೆ.
ಎಲ್ಲಾ ವಯೋಮಾನದವರೂ ಮಾಡಬಹುದಾದ ಯೋಗಾಸನವಿದು. ಬಸ್ಕಿ ತೆಗೆಯುವಾಗ ದೇಹದ ಎರಡೂವರೆ ಪಟ್ಟು ಭಾರ ನಮ್ಮ ಮೊಣಕಾಲಿಗೆ ಬೀಳುವುದರಿಂದ ಅರುವತ್ತು ವರ್ಷ ಮೇಲ್ಪಟ್ಟವರು, ಮಂಡಿನೋವು ಇತ್ಯಾದಿ ಸಮಸ್ಯೆಗಳಿರುವವರು ಆಧಾರಕ್ಕಾಗಿ ಕಿಟಕಿಯ ಸರಳುಗಳು, ಮೇಜು, ಮಂಚ ಇತ್ಯಾದಿಗಳನ್ನು ಆಧಾರವಾಗಿ ಹಿಡಿದು ಪ್ರಯತ್ನಿಸಬೇಕು. ಪ್ರಾರಂಭದಲ್ಲಿ 3-4, ಹೀಗೆ ಪ್ರಯತ್ನಮಾಡುತ್ತ ಹದಿನಾಲ್ಕರವರೆಗೆ ತೆಗೆದರೆ ಸಾಕು. ಅರುವತ್ತು ವರ್ಷಕ್ಕಿಂತ ಕೆಳಗಿನವರು ಕನಿಷ್ಟ ಇಪ್ಪತ್ತೂಂದು ಬಸ್ಕಿ ತೆಗೆದರೆ ಉತ್ತಮ ಪ್ರಯೋಜನ ಕಾಣಬಹುದು. ಆರೋಗ್ಯದ ಸಮಸ್ಯೆ ಇಲ್ಲದವರೂ ಆರೋಗ್ಯಕ್ಕಾಗಿ ಬಸ್ಕಿ ತೆಗೆದು ಉತ್ತಮ ಆರೋಗ್ಯವನ್ನು ಪಡೆಯಬಹುದು.
ಬಾಲ್ಯದಲ್ಲಿ ಮಗ್ಗಿ ಹೇಳದಿದ್ದರೆ, ಪದ್ಯ ಕಂಠಪಾಠ ಮಾಡದಿದ್ದರೆ ಅಥವಾ ಇನ್ನಿತರ ತರಲೆಗಳೇನಾದರೂ ಮಾಡಿದರೆ “ಬಸ್ಕಿ’ಯ ರೂಪದಲ್ಲಿರುತ್ತಿತ್ತು ಅಂದಿನ ಶಿಕ್ಷೆ. ಆದರೆ, ಅದುವೇ ಇಂದು ಆರೋಗ್ಯಕ್ಕೆ ವರದಾನವಾಗಿದೆ. ಇನ್ಯಾಕೆ ತಡ, ನೀವೂ ಹೊಡಿಯಿರಿ ಬಸ್ಕಿ, ಪಡೆಯಿರಿ ಉತ್ತಮ ಆರೋಗ್ಯವನ್ನ.
ಗೀತಾಲಕ್ಷ್ಮೀ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Karnataka By Poll Results: ಜೆಡಿಎಸ್ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?
Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.