ಕಾಲೇಜಿನಲ್ಲಿ ಸ್ವಚ್ಛ ಭಾರತ ಕನಸು


Team Udayavani, Jul 5, 2019, 5:00 AM IST

14

ಒಮ್ಮೆ ವಿದೇಶಕ್ಕೆ ಹೋಗಿ ಬಂದವರೆಲ್ಲ ಮೊದಲು ಹಾಡಿ ಕೊಂಡಾಡುವುದೇ ಅಲ್ಲಿನ ಸ್ವಚ್ಛತೆಯ ಬಗ್ಗೆ. “ಅಯ್ಯೋ, ನಮ್ಮ ಭಾರತ ಎಷ್ಟು ಹೊಲಸಿನಿಂದ ಕೂಡಿದೆಯಲ್ಲ , ಎಲ್ಲೆಲ್ಲಿಯೂ ಕಸ’ ಅಂತ ನಮ್ಮ ತಾಯ್ನಾಡನ್ನು ದೂರುತ್ತೇವೆ.

ಹಾಗಾದ್ರೆ ಇಲ್ಲಿ ಕಸ ಹಾಕುವವರು ಯಾರು? ಅದು ತನ್ನಿಂತಾನೇ ಉತ್ಪತ್ತಿಯಾಗುತ್ತದೆಯೆ? ವಿದೇಶದಲ್ಲಿದ್ದಾಗ ಅಲ್ಲಿ ಒಂದು ಕಸ ಕೂಡ ಹಾಕದವರು ವಿಮಾನ ನಿಲ್ದಾಣ ಬಿಟ್ಟು ಭಾರತಕ್ಕೆ ಕಾಲಿಟ್ಟ ಕೂಡಲೇ ತಿಂದುಂಡ ಖಾಲಿ ಪ್ಲಾಸ್ಟಿಕ್‌ ಶೀಷೆಗಳನ್ನು ಎಲ್ಲೆಂದರಲ್ಲಿ ಬಿಸಾಕ್ತೇವೆ. ವಿದ್ಯಾವಂತರೆಂದು ಹಣೆಪಟ್ಟಿ ಹೊತ್ತ ನಾವು ಮಾಡುವುದು ಅನಾಗರಿಕತೆಯ ಪರಮಾವಧಿಯಲ್ಲವೆ? ನಮ್ಮ ಮನೆಯನ್ನು ನಾವು ಅದೆಷ್ಟು ಸ್ವತ್ಛವಾಗಿಡುತ್ತೇವೆ. ಯಾಕೆಂದರೆ, ಅದು ನನ್ನದು ಅನ್ನೋ ಭಾವನೆ ಇರುತ್ತದಲ್ಲವೆ?

ಹಾಗೆಯೇ ಯಾವಾಗ ದೇಶ ನಮ್ಮದು ಎಂಬ ಭಾವನೆ ನಮ್ಮಲ್ಲಿ ಮೂಡುತ್ತದೆಯೋ ಆಗ ನಾವು ಈ ಬಗ್ಗೆ ಗಹನವಾಗಿ ಚಿಂತಿಸಲು ಪ್ರಾರಂಭಿಸುತ್ತೇವೆ. ಸ್ವತ್ಛತೆ ಅನ್ನೋದು ದೈವತ್ವಕ್ಕೆ ಹತ್ತಿರವಾದುದು ಎಂಬ ಮಾತಿದೆ. ಅದು ಸ್ವಯಂಪ್ರೇರಣೆಯಿಂದ ಪ್ರಾರಂಭವಾಗಬೇಕೇ ಹೊರತು ಇತರರ ಒತ್ತಾಯದಿಂದಲ್ಲ.

ಇತ್ತೀಚಿನ ದಿನಗಳಲ್ಲಂತೂ ಸ್ವತ್ಛತೆಯ ಬಗ್ಗೆ ಅರಿವು ಮೂಡಿಸುವ ಹಲವಾರು ಕಾರ್ಯಕ್ರಮಗಳನ್ನು ಮಾಡುವ ಮೂಲಕ ಪ್ರತಿಯೊಬ್ಬ ನಾಗರಿಕನಲ್ಲೂ ಪ್ರಜ್ಞೆ ಮೂಡಿಸುವಂತಹ ಕಾರ್ಯ ಶ್ಲಾಘನೀಯ.

ಇದಕ್ಕೊಂದು ಉದಾಹರಣೆ ಕೇಂದ್ರ ಸರ್ಕಾರವು ಕಳೆದ ವರ್ಷ ಸ್ವತ್ಛ ಭಾರತ್‌ ಸಮ್ಮರ್‌ ಇಂಟರ್ನ್ಶಿಪ್‌ ಎಂಬ ಬ್ಯಾನರ್‌ ಅಡಿಯಲ್ಲಿ ಕೆಲವು ಸ್ವಚ್ಛತಾ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಮಾಡುವಂತೆ ದೇಶದ ಯುವಜನತೆಗೆ ಕರೆ ನೀಡಿತ್ತು. ಇದಕ್ಕೆ ಪ್ರತಿಯಾಗಿ ಹಲವಾರು ಉತ್ಸಾಹಿ ತರುಣರು ತಮ್ಮದೇ ಆದ ತಂಡಗಳನ್ನು ಕಟ್ಟಿಕೊಂಡು ನಿಗದಿತ ಅವಧಿಗಳ ಕಾರ್ಯವನ್ನು ಪೂರೈಸಿ ದೇಶಕ್ಕೆ ತಮ್ಮದೇ ಆದ ಸೇವೆಗೈದರು.

ಪ್ರತಿಯೊಂದು ಕಾರ್ಯವನ್ನು ನಾವು ಇನ್ನೊಬ್ಬರು ಮಾಡಲಿ ಅಂತ ಕಾಯುವ ಮೊದಲು ನಾವೇ ಅದನ್ನು ಮಾಡಿ ತೋರಿಸಿ ಇತರರಿಗೆ ಮಾದರಿಯಾಗಬೇಕು. ಯಾವುದೇ ಫ‌ಲಾಪೇಕ್ಷೆಯಿಲ್ಲದೆ ಮಾಡುವ ಇಂತಹ ಕಾರ್ಯಗಳು ಸದಾ ನಮಗೆ ಆತ್ಮತೃಪ್ತಿಯನ್ನೂ ನೀಡುತ್ತದೆ. ಇಡೀ ದೇಶವನ್ನೇ ಬದಲಾಯಿಸಲು ನಮ್ಮಿಂದ ಸಾಧ್ಯವಿಲ್ಲದಿದ್ದರೂ ನಮ್ಮ ಸುತ್ತಮುತ್ತಲಿನ ಜನರ ಮನಸ್ಥಿತಿಯನ್ನು ಬದಲಾಯಿಸುವ ಮೂಲಕ ಹೊಸ ಭಾಷ್ಯವನ್ನೇ ಬರೆಯಬಹುದು. Think globally act locally ಅನ್ನೋ ಮಾತಿದೆ. ನಾವು ಪಿಯುಸಿಯಲ್ಲಿರುವಾಗ ಕಾಲೇಜಿನಲ್ಲಿ ಮಾಡಿದ ಅರಿವಿನ ಹೆಜ್ಜೆ ಎಂಬ ಕಾರ್ಯಕ್ರಮ ಈ ನಿಟ್ಟಿನಲ್ಲಿ ಬಹಳ ಯಶಸ್ವಿಯಾಯಿತು. ಧರ್ಮಸ್ಥಳದ ಧರ್ಮಾಧಿಕಾರಿಗಳ ಆಶಯವೂ ನಮ್ಮೆಲ್ಲ ಕಾಲೇಜು ಕ್ಯಾಂಪಸ್‌ಗಳನ್ನೂ ಶೂನ್ಯ ಕಸ ವಲಯಗಳನ್ನಾಗಿ ಮಾಡುವುದಾಗಿತ್ತು. ನಮ್ಮ ಕಾಲೇಜಿನಲ್ಲೂ ಪ್ರಾಂಶುಪಾಲರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವಂತೆಯೂ ಹಾಗೂ ಪ್ರತಿಯೊಂದು ವಿಭಾಗದಿಂದಲೂ ಒಂದೊಂದು ಕಾರ್ಯಕ್ರಮವನ್ನು ಮಾಡುವಂತೆ ಸೂಚಿಸಲಾಗಿತ್ತು. ಈ ಬಗ್ಗೆ ನಮ್ಮ ಮೆಚ್ಚಿನ ಶಿಕ್ಷಕರೊಬ್ಬರು ಬಂದು ಅರಿವು ಮೂಡಿಸಿದ್ದರು. ಅವರ ಪ್ರೇರಣೆಯಿಂದ ಹಾಗೂ ನಮ್ಮ ತರಗತಿಯವರ ಉತ್ಸಾಹದಿಂದ ಮೂಡಿ ಬಂದದ್ದೇ ಅರಿವಿನ ಹೆಜ್ಜೆ ಸ್ವಚ್ಚತೆಯ ಕಡೆಗೆ ಎಂಬ ಸಣ್ಣ ಅಭಿಯಾನ. ಇದರಲ್ಲಿ ವಿದ್ಯಾರ್ಥಿಗಳೇ ತಯಾರಿಸಿದ್ದ ಸುಮಾರು 40 ಕ್ಕೂ ಹೆಚ್ಚು ಸ್ವತ್ಛತೆಯ ಬಗೆಗಿನ ಭಿತ್ತಿಪತ್ರಗಳು ಅನಾವರಣಗೊಂಡವು. ಮೊದಲ ಹೆಜ್ಜೆ ನಮ್ಮಿಂದಲೇ ಪ್ರಾರಂಭವಾಗಬೇಕು ಎಂಬ ನಿಟ್ಟಿನಲ್ಲಿ ನಮ್ಮ ತರಗತಿ ಕೋಣೆಯನ್ನು ನಾವೇ ಸ್ವತ್ಛಗೊಳಿಸುವ ಮೂಲಕ ಪ್ರತಿಜ್ಞೆ ಯನ್ನೂ ಕೈಗೊಂಡೆವು. ಕಾಲೇಜಿನ ಸ್ವಚ್ಛತಾ ಸಿಬ್ಬಂದಿಗಳಿಗೆ ಗೌರವಾರ್ಪಣೆಯನ್ನೂ ಮಾಡಿದೆವು. ನಮ್ಮ ಕಾಲೇಜಿನಲ್ಲೇ ವಿದ್ಯಾರ್ಥಿಗಳು ಮಾಡಿದ ಗೋಡೆ, ಡೆಸ್ಕ್ ಬರಹಗಳು, ಹಾಕಿದ್ದ ಕಸಗಳ ರಾಶಿಯ ಪೋಟೋ ತೆಗೆದು ಅದನ್ನು ಪ್ರದರ್ಶಿಸಿದೆವು. ಕೆಲವೊಂದು ಲೆಕ್ಕಾಚಾರಗಳ ಮೂಲಕ ನಮ್ಮ ಅರಿವಿಲ್ಲದೇ ಉತ್ಪತ್ತಿಯಾಗುವ ಸಣ್ಣ ಸಣ್ಣ ಕಸಗಳು ಎಷ್ಟು ದೊಡ್ಡ ತಲೆನೋವಾಗಿ ಪರಿಣಮಿಸುತ್ತದೆಯೆಂಬ ಕಟು ಸತ್ಯವನ್ನು ಬಿಚ್ಚಿಟ್ಟೆವು.

1000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡರು. ನಂತರ ನಡೆದ ಆರೋಗ್ಯಕರ ಬೆಳವಣಿಗೆಗಳು ಆಶ್ಚರ್ಯಕರ. ಪ್ರತಿಯೊಂದು ತರಗತಿಯಲ್ಲೂ ವಿದ್ಯಾರ್ಥಿಗಳು ಹಾಕುತ್ತಿದ್ದ ಕಸದ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ ಎಂಬ ಮಾಹಿತಿ ದೊರೆಯಿತು. ನಮ್ಮೆಲ್ಲರ ಖುಷಿಗೆ ಎಣೆಯೇ ಇರಲಿಲ್ಲ. ಏನೋ ಒಂದು ಬದಲಾವಣೆ ತಂದ ಹುರುಪು,ಸಾರ್ಥಕತೆ ಪ್ರತಿಯೊಬ್ಬರ ಮುಖದಲ್ಲೂ ಎದ್ದು ಕಾಣುತ್ತಿತ್ತು. “ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ ‘ ಎನ್ನುವಂತೆ ಪ್ರತಿಯೊಂದು ಕೆಲಸವನ್ನು ಮಾಡುವಾಗ ಅಡ್ಡಿ ಆತಂಕಗಳು ಇದ್ದದ್ದೇ. ಆದರೆ, ಪರಿಶ್ರಮ ಮತ್ತು ಛಲವಿದ್ದರೆ ಎಲ್ಲಾ ಕಾರ್ಯಗಳು ಎಗ್ಗಿಲ್ಲದಂತೆ ನಡೆಯುತ್ತದೆ.

ರಶ್ಮಿ ಯಾದವ್‌ ಕೆ.
ದ್ವಿತೀಯ ಪತ್ರಿಕೋದ್ಯಮ ವಿಭಾಗ
ಎಸ್‌ಡಿಎಂ ಪದವಿ ಕಾಲೇಜು, ಉಜಿರೆ

ಟಾಪ್ ನ್ಯೂಸ್

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Darshan (3)

Renukaswamy ಹ*ತ್ಯೆ ಸ್ಥಳದಲ್ಲಿ ದರ್ಶನ್‌ ಇದ್ದ ಚಿತ್ರ ಲಭ್ಯ: ಪರಂ

ravi-kumar

BJP ಸೋಲಿಗೆ ರಾಜ್ಯಾಧ್ಯಕ್ಷ ಒಬ್ಬರೇ ಹೊಣೆಯಲ್ಲ: ಎನ್‌. ರವಿಕುಮಾರ್‌

1-nikkki

JDS ಕಳೆದುಕೊಂಡಲ್ಲೇ ಹುಡುಕುತ್ತೇನೆ: ನಿಖಿಲ್‌ ಕುಮಾರಸ್ವಾಮಿ

Renukacharya

Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

1-ewew

ಸಂಗೀತ ವಿವಿಯಲ್ಲಿ ಕೋರ್ಸ್‌ ಆರಂಭ: ಕುಲಪತಿ ನಾಗೇಶ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

CT RAVI 2

C T Ravi; ಸನಾತನ ಧರ್ಮ ಉಳಿದರೆ ದೇಶದ ಉಳಿವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.