ಬೆಳಗಿನ ಜಾವದ ಒಂದು ಕನಸು


Team Udayavani, May 29, 2018, 1:36 PM IST

belagina-java.jpg

ಕನಸಿಗೆ ಬಣ್ಣವಿಲ್ಲ. ಅಲ್ಲಿ ಇಂಥದ್ದೇ ಪಾತ್ರಗಳು ಬರುತ್ತವೆ ಎನ್ನುವ ಮುನ್ಸೂಚನೆಯೂ ಇರುವುದಿಲ್ಲ. ಒಮ್ಮೊಮ್ಮೆ ಕನಸು ಬಿದ್ದಾಗ, ನಾವೇ ಅಲ್ಲಿ ಪಾತ್ರಗಳಾಗಿರುತ್ತೇವೆ. ಇಂದೋ ನಿನ್ನೆಯೋ ನಡೆದ ಘಟನೆಗಳಿಗೆ ಸಮೀಪದಲ್ಲೇ ಕನಸುಗಳೂ ಬಿದ್ದು, ವಾಸ್ತವವನ್ನೇ ಬುಡಮೇಲು ಮಾಡುವುದುಂಟು. ಇಲ್ಲೊಬ್ಬ ಅಕೌಂಟೆನ್ಸಿ ಹುಡುಗನ ಕನಸೂ ಅಂಥದ್ದೇ… 

ಕನಸು ಎಂಬುದು ಒಂದು ವಿಶೇಷ ಅನುಭವ. ನಿ¨ªೆಯಲ್ಲಿ ಹೆಚ್ಚಿನವರಿಗೆ ಕನಸು ಬೀಳುತ್ತದೆ. ಕನಸಿನಲ್ಲಿ ನಾವು ಕೇಳಿರದ, ನೋಡಿರದ ಪ್ರದೇಶಕ್ಕೆ ಹೋಗುತ್ತೇವೆ. ಕೆಲವರು ಕನಸಿನಲ್ಲಿ ಖುಷಿಯಿಂದ ತೇಲಾಡುತ್ತಿರುತ್ತಾರೆ. ಇನ್ನು ಕೆಲವರು ದುಃಖದಿಂದ ಗೋಳಾಡುತ್ತಾರೆ. ಕನಸಿನಲ್ಲಿ ಮಾತಾಡುವವರೂ ಇ¨ªಾರೆ. ಕೆಲವೊಮ್ಮೆ ತಾವು ಹಗಲು ಮಾತಾಡಿದ್ದನ್ನೇ ಕನಸಿನಲ್ಲಿ ಬಡಬಡಿಸುತ್ತಿರುತ್ತಾರೆ. ಯಾವುದೋ ಸಭೆ- ಸಮಾರಂಭಕ್ಕೆ ಹೋದಂತೆ, ಎತ್ತರದ ಪ್ರದೇಶದಿಂದ ಯಾರೋ ನಮ್ಮನ್ನು ಕೆಳಕ್ಕೆ ತಳ್ಳಿದಂತೆ. ಇನ್ನು ಅನೇಕ ರೀತಿಯ ವಿಚಿತ್ರವಾದ ಕನಸು ಬೀಳುವುದು ಸಹಜ. ನಾವು ಕಂಡ ಕನಸನ್ನು ಬೆಳಗ್ಗೆ ಎದ್ದು ಇನ್ನೊಬ್ಬರಲ್ಲಿ ಹೇಳಬೇಕೆನ್ನುವಷ್ಟರಲ್ಲಿ ಮರೆತು ಹೋಗಿರುತ್ತದೆ.

   ನಾನು ದ್ವಿತೀಯ ಪಿಯುಸಿಯ ಪರೀಕ್ಷೆ ಮುಗಿಸಿ ರಜೆಯಲ್ಲಿ¨ªೆ. ಒಂದು ದಿನ ರಿಸಲ್ಟ… ದಿನದಂದು ಎಲ್ಲ ವಿದ್ಯಾರ್ಥಿಗಳು ಕಾಲೇಜಿಗೆ ಹಾಜರಾಗುವಂತೆ, ಕಾಲೇಜಿನಿಂದ ಕರೆ ಬಂತು. ಅದರಂತೆಯೇ ನಾವು ರಿಸಲ್ಟ್ನಂದು ಕಾಲೇಜಿಗೆ ಹೋದೆವು. ನಾನು ಎಲ್ಲರೊಂದಿಗೆ ನಮ್ಮ ಕ್ಲಾಸಿನಲ್ಲಿ ರಿಸಲ್ಟ್ ಏನಾಗಿರಬಹುದೋ ಎಂದು ಕುತೂಹಲ ಮತ್ತು ಭಯದಿಂದ ಕುಳಿತಿ¨ªೆ. ಅಷ್ಟರಲ್ಲಿ ನಮ್ಮ ಕ್ಲಾಸಿಗೆ ಬಂದ ಅಕೌಂಟೆನ್ಸಿ ಸರ್‌ ನಮ್ಮೆಲ್ಲರ ಅಂಕಗಳನ್ನು ಓದಿ ಹೇಳಿದರು. ರಿಸಲ್ಟ… ಕೇಳಿ ನಾನಂತೂ ಬೆಚ್ಚಿಬಿ¨ªೆ. ಏಕೆಂದರೆ, ನಮ್ಮ ಕ್ಲಾಸಿನಲ್ಲಿ ನನ್ನನ್ನೂ ಸೇರಿದಂತೆ ಇಪ್ಪತ್ತು ವಿದ್ಯಾರ್ಥಿಗಳು ಫೇಲಾಗಿ¨ªೆವು. ನಾನು ಅಳ್ಳೋದಕ್ಕೆ ಶುರುಮಾಡಿದೆ. ಅಷ್ಟರಲ್ಲಿ ಪೊಲೀಸ್‌ ವ್ಯಾನ್‌ ನಮ್ಮ ಕಾಲೇಜಿಗೆ ಬಂತು. ಪೊಲೀಸ್‌ ಇನ್‌ಸ್ಪೆಕ್ಟರ್‌ ನೇರವಾಗಿ ನಮ್ಮ ಕ್ಲಾಸಿಗೇ ಬಂದು ನಾವೆಲ್ಲರೂ ಬೆರಗಾಗುವಂಥ ವಿಚಾರವನ್ನು ಹೇಳಿದರು.

  ಅದೇನೆಂದರೆ, ಸರ್ಕಾರವು ಪಬ್ಲಿಕ್‌ ಪರೀಕ್ಷೆಯಲ್ಲಿ ಫೇಲಾದವರನ್ನು ಜೈಲಿಗೆ ಹಾಕುವಂತೆ ಹೊಸ ಕಾನೂನನ್ನು ಜಾರಿಗೆ ತಂದಿದೆ ಎಂದು. ನಮ್ಮೆಲ್ಲರ ಅಳುವನ್ನೂ ಲೆಕ್ಕಿಸದೇ, ಇನ್‌ಸ್ಪೆಕ್ಟರ್‌ ತಮ್ಮ ಪೊಲೀಸ್‌ ವ್ಯಾನ್‌ನಲ್ಲಿ ಕರಕೊಂಡು ಹೋದರು. ಯಾವುದೇ ವಿಚಾರಣೆಯೂ ಇಲ್ಲದೇ ನಮ್ಮನ್ನು ನೇರವಾಗಿ ಸೆಂಟ್ರಲ್‌ ಜೈಲಿಗೆ ಹಾಕಲಾಯಿತು. ಅಲ್ಲಿ ಹೋಗಿ ನೋಡಿದರೆ, ನಮ್ಮಂತೆಯೇ ಫೇಲಾದ ರಾಜ್ಯದ ಸಾವಿರಾರು ವಿದ್ಯಾರ್ಥಿಗಳು ಜೈಲಿನಲ್ಲಿದ್ದರು. ನಾನು ಮತ್ತು ನನ್ನ ಸಹಪಾಠಿಗಳನ್ನು ಒಂದೇ ಕೋಣೆಗೆ ಹಾಕಿದರು. ಸ್ವಲ್ಪ ಹೊತ್ತು ಅತ್ತೆ. ಮತ್ತೆ ಎಲ್ಲರಂತೆ ನಾನೂ ಸುಮ್ಮನಾದೆ. 

   ಸ್ವಲ್ಪ ಹೊತ್ತಿನ ನಂತರ ನಮಗೆ ಅಧಿಕಾರಿಯೊಬ್ಬರು ಬಿಳಿವಸ್ತ್ರ, ಊಟದ ತಟ್ಟೆ ಮತ್ತು ಲೋಟವನ್ನು ನೀಡಿದರು. ಜೈಲಿನ ರಾಗಿಮು¨ªೆಯಂತೂ ಬಹಳ ಚೆನ್ನಾಗಿತ್ತು. ರಾತ್ರಿಯಿಡೀ ಸೊಳ್ಳೆಯ ಕಾಟ. ಅಂತೂ ಇಂತೂ ಬೆಳಗಾಯಿತು. ಬೆಳಗ್ಗೆ ಏಳುವಷ್ಟರಲ್ಲಿ ಒಬ್ಬರು ಪೊಲೀಸ್‌ ಅಧಿಕಾರಿ ಬಂದು ಒಂದು ಸಿಹಿಸುದ್ದಿಯನ್ನು ಹೇಳಿದರು. ಅದೇನೆಂದರೆ, ಸರ್ಕಾರವು ಮೂವತ್ತಕ್ಕಿಂತ ಅಧಿಕ ಅಂಕ ಪಡೆದವರಿಗೆ ಜಾಮೀನಿನ ಮೂಲಕ ಬಿಡುಗಡೆ ಹೊಂದುವ ಅವಕಾಶವನ್ನು ನೀಡಿದೆ ಎಂದು. ಹೆಚ್ಚಿನವರಿಗೆ ಇದು ಖುಷಿಯಾಗದಿದ್ದರೂ ನನಗಂತೂ ಸಂತೋಷಕ್ಕೆ ಪಾರವೇ ಇಲ್ಲದಂತಾಯಿತು. ಏಕೆಂದರೆ, ನಾನು ಮೂವತ್ತೂಂದು ಅಂಕ ಪಡೆದಿ¨ªೆ. ಹೀಗಾಗಿ, ಜಾಮೀನು ಪಡೆದು ಬಿಡುಗಡೆಯಾದೆ. ನಾನು ಜೈಲಿನಿಂದ ಹೊರಗೆ ಬರುತ್ತಿದ್ದಂತೆ ಅಮ್ಮನ ಜೋರಾದ ಧ್ವನಿ ಕಿವಿಗೆ ಅಪ್ಪಳಿಸಿತು.

“ಲಕ್‌R, ಏತ್‌ ಪೊರ್ತು ಜೆಪ್ಪುನು? ಲಕ್ಕರೆ ನನಲಾ ಪುಲ್ಯಾತಾj?’ 
(ಏಳು ಎಷ್ಟು ಹೊತ್ತು ಮಲಗ್ತಿà? ಏಳಲು ಇನ್ನೂ ಬೆಳಗಾಗಿಲ್ವಾ?) ಎಂದು. ಆಗ ತಿಳಿಯಿತು: ನಾನು ಕಂಡದ್ದು ಕನಸು ಎಂದು.

   ಬೆಳಗ್ಗೆ ಕಂಡ ಕನಸು ನಿಜವಾಗುವುದು ಎಂಬ ಹಿರಿಯರ ಮಾತು ನನ್ನ ಪಾಲಿಗೆ ಸುಳ್ಳಾಯಿತು. ನಾನು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅಕೌಂಟೆನ್ಸಿಯಲ್ಲಿ ನೂರಕ್ಕೆ ತೊಂಬತ್ತೈದು ಅಂಕ ಪಡೆದು ಪಾಸಾಗಿ¨ªೆ.
   ಹೀಗೆ ನನ್ನ ಕನಸು ವಿಚಿತ್ರವಾಗಿದ್ದರೂ ಅದನ್ನು ನೆನೆದಾಗಲೆಲ್ಲ ನಗು ಬರುವುದು.

– ಕೌಸ್ತುಭಾ ಶೆಟ್ಟಿ, ಮುಂಡ್ಕೂರು ಪ್ರಥಮದರ್ಜೆ ಕಾಲೇಜು, ಕಟೀಲು

ಟಾಪ್ ನ್ಯೂಸ್

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

Fish-Agriculture

Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

Singapore: ಇಂದಿನಿಂದ ವಿಶ್ವ ಚೆಸ್‌: ಗುಕೇಶ್‌-ಲಿರೆನ್‌ ಮುಖಾಮುಖಿ

Singapore: ಇಂದಿನಿಂದ ವಿಶ್ವ ಚೆಸ್‌: ಗುಕೇಶ್‌-ಲಿರೆನ್‌ ಮುಖಾಮುಖಿ

MNG-illgal-Sand

Mangaluru: ಅಕ್ರಮ ಮರಳುಗಾರಿಕೆ; ಪ್ರಶ್ನಿಸಿದ ಯುವಕನಿಗೆ ಗಂಭೀರ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

Fish-Agriculture

Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.