ಸರ್ಕಾರಿ ಬಸ್ಸಿನ ಪಯಣ
Team Udayavani, Nov 22, 2019, 4:48 AM IST
ಸಾಂದರ್ಭಿಕ ಚಿತ್ರ
ಇರುವ ಭಾಗ್ಯವ ನೆನೆದು ಬಾರೆನೆಂಬುದನ್ನು ಬಿಡು ಹರುಷಕ್ಕಿದೆ ದಾರಿ ಡಿವಿಜಿಯವರ ಈ ವಾಕ್ಯವನ್ನು ಕೇಳಿದಾಗ ಥಟ್ಟನೆ ನೆನಪಿಗೆ ಬರುವುದು ಸರ್ಕಾರಿ ಬಸ್ಸು. ಬಡ ಹಾಗೂ ಮಧ್ಯಮ ವರ್ಗದ ಜನರ ಪಾಲಿಗೆ ಅಂಬಾರಿಯಂತಿರುವ ಸರಕಾರಿ ಬಸ್ಸಿನ ಪಯಣದ ಅನುಭವ ವಿಶೇಷವಾದುದು. ತುಂತುರು ಮಳೆಯ ಸಂದರ್ಭದಲ್ಲಿ ಬಸ್ಸಿನ ಕಿಟಕಿ ಬದಿಯಲ್ಲಿ ಕುಳಿತು ಪಯಣಿಸುವಾಗ ಸಿಗುವ ಮುದವೇ ಬೇರೆ. ಇಂತಹ ಸರ್ಕಾರಿ ಬಸ್ಸು ಬಡವರ ಪಾಲಿನ ಐಷಾರಾಮಿ ವಾಹನವೂ ಹೌದು, ಹಲವಾರು ಸರ್ಕಾರಿ ಬಸ್ಸುಗಳು ಹವಾನಿಯಂತ್ರಕ ಇಲ್ಲದ, ಹವಾನಿಯಂತ್ರಕದ ಅನಿವಾರ್ಯತೆ ಇಲ್ಲದ ಜನರು ಪ್ರಯಾಣಿಸುವ ವಾಹನವೂ ಹೌದು.
ಅತಿ ಹೆಚ್ಚಾಗಿ ಬೈಗುಳ ತಿನ್ನುವುವುದು ಎಂದರೆ ಬಸ್ಸು. ನಾವು ಎಲ್ಲಾದರೂ ಬಸ್ಸಿನಲ್ಲಿ ಹೋಗಲು ನಿಶ್ಚಯಿಸಿ ಬಸ್ಸಿಗಾಗಿ ಕಾಯುತ್ತಿರುವ ಸಮಯದಲ್ಲಿ, ಒಂದು ವೇಳೆ ಅದು ಅಷ್ಟ ರ ಲ್ಲಿಯೇ ಹೋಗಿದ್ದರೆ “ಯಾವಾಗಲೂ ಲೇಟಾಗಿ ಬರುವ ಹಾಳಾದ ಬಸ್ ಇವತ್ತು ಬೇಗ ಹೋಗಿದೆ’ ಎಂಬ ಬೈಗುಳ! ಕೆಲವೊಮ್ಮೆ ಬಸ್ ಸಮಯಕ್ಕೆ ಸರಿಯಾಗಿ ಬಾರದೇ ತಡವಾಗಿ ಬಂದರೆ “ಯಾವಾಗಲೂ ಬೇಗ ಬರುವ ಬಸ್ ಇವತ್ತು ಇನ್ನೂ ಬಂದೇ ಇಲ್ಲ. ಚಾಲಕನಿಗೆ ಸಮಯಪ್ರಜ್ಞೆಯೇ ಇಲ್ಲ’ ಎನ್ನುವಂಥ ಮಾತುಗಳು. ನಮ್ಮಲ್ಲಿ ಸಮಯಕ್ಕೆ ಸರಿಯಾಗಿ ತಲುಪುವಂತೆ ವಾಹನ ಚಲಾಯಿಸಬಹುದಾದ, ಸೂಕ್ತವಾದ ರಸ್ತೆಗಳು ಇವೆಯೆ? ಒಂದು ವೇಳೆ ಸರಿಯಾದ ರಸ್ತೆ ಇದ್ದರೂ ಅದರಲ್ಲಿರುವ ವಾಹನದಟ್ಟಣೆ ಏನು ಕಡಿಮೆಯೆ? ಇವೆಲ್ಲವನ್ನು ಅರಿತು ಅಥವಾ ಅರಿಯದೆ ನಾವು ಸದಾ ಬಸ್ಸನ್ನು ಹೀಗಳೆಯುತ್ತೇವೆ. ಅತ್ತ ಇಳಿಯುವ ಪ್ರಯಾಣಿಕರನ್ನು ಇಳಿಯಲು ಬಿಡದೆ, ಇತ್ತ ಹತ್ತುವವರನ್ನು ಹತ್ತಲು ಬಿಡದೆ, ಮುದುಕರು, ಎಳೆಯರು ಎನ್ನದೆ ತಾವು ಸೀಟನ್ನು ಕಾಯ್ದಿªರಿಸಲು ಪೇಚಾಡುವ ಪರಿ, ಅದು ರಾಜಕೀಯದಲ್ಲಿ ಪದವಿಗಾಗಿ ಪೈಪೋಟಿ ನಡೆಸುವ ನಾಯಕರಿಗಿಂತ ಕಡಿಮೆಯೇನಲ್ಲ. ಇನ್ನೂ ಇದಕ್ಕೆ ಅಪವಾದವಾಗಿರುವ ಕೆಲವು ಮಹಾನುಭಾವರಿರುತ್ತಾರೆ. ಬಸ್ಸನ್ನು ಹತ್ತುವ ಗೋಜಿಗೆ ಹೋಗದೆ ಬಸ್ಸಿನ ಕಿಟಕಿಯಿಂದಲೇ ತಮ್ಮ ಕರವಸ್ತ್ರವನ್ನೋ, ಬ್ಯಾಗನ್ನೋ ಸೀಟಿನ ಮೇಲೆ ಬಿಸಾಕಿ ಆಸನವನ್ನು ಕಾಯ್ದಿರಿಸುವ ಮೇಧಾವಿಗಳು. ಒಂದು ವೇಳೆ ಆ ಆಸನದಲ್ಲಿ ಯಾರಾದರೂ ಕುಳಿತಿದ್ದರೆ, ಅವರ ಆವೇಶವನ್ನು ಗಮನಿಸಬೇಕು. ತಾವೇ ಹಣ ಕೊಟ್ಟು ಆಸನವನ್ನು ಖರೀದಿಸಿದವರಂತೆ ವರ್ತಿಸುತ್ತಾರೆ .
ಬಹುಶಃ ಕೆಲ ವಿದ್ಯಾರ್ಥಿಗಳು ಇದಕ್ಕೆ ಸಂಬಂಧಪಡದ ವ್ಯಕ್ತಿ ಗಳು. ಬಸ್‌ಪಾಸ್ ಇರುವ ಕಾರಣ ಅವರಿಗೂ ತಮ್ಮ ಶಿಕ್ಷಣಸಂಸ್ಥೆಗಳಿಗೆ ಹೋಗಲು ಸರ್ಕಾರಿ ಬಸ್ ಬೇಕು. ಒಂದು ಪಂಗಡದವರು ಬಸ್ ಖಾಲಿ ಇರಲೆಂದು ಆಶಿಸುತ್ತಾರೆ. ಮತ್ತೂಂದು ವಿಧದವರು ಬಸ್ ರಶ್ ಇರಲೆಂದು ಬಯಸುತ್ತಾರೆ. ಯಾಕೆಂದರೆ, ಇಂತಹ ವಿದ್ಯಾರ್ಥಿಗಳಿಗೆ ಬೇಕಾಗುವುದು ಸೀಟ್ ಅಲ್ಲ. ಅವರಿಗೆ ಫುಟ್‌ಬೋರ್ಡ್ ಇದ್ದರೆ ಸಾಕು. ಬಸ್ ಖಾಲಿ ಇದ್ದರೂ ಫುಟ್‌ಬೋರ್ಡಿನಲ್ಲಿ ನಿಲ್ಲುವ ಅಥವಾ ನೇತಾಡುವ ವಿದ್ಯಾರ್ಥಿ ಮಹಾಶಯರಿಗೇನು ಕಡಿಮೆಯಿಲ್ಲ. ಇನ್ನು ಕೆಲವರು ಮೊದಲು ಬಸ್ಸನ್ನು ಹತ್ತುವವನ ಬಳಿ ನನಗೊಂದು ಸೀಟ್ ಇಡು ಎಂದು ಹೇಳಿ ತಾವು ನಿಧಾನವಾಗಿ ಬಸ್ಸನ್ನೇರುತ್ತಾರೆ. ಇನ್ನು ಬೆಳಗ್ಗಿನ ತರಗತಿಗಳಿಗೆ ಸಮಯಕ್ಕೆ ಸರಿಯಾಗಿ ನಾವು ತಲುಪದಿದ್ದರೆ ಉಪನ್ಯಾಸಕರಿಗೆ ನಾವು ಹೇಳುವ ಸರ್ವೇಸಾಮಾನ್ಯ ಕಾರಣ, “ಸರ್/ಮೇಡಮ್, ಬಸ್ ಲೇಟು !’
ಹರ್ಷಿತ್ ಮುಂಡಾಜೆ
ಅಂತಿಮ ಎಂ. ಕಾಂ., ಸರ ಕಾರಿ ಪ್ರಥಮದರ್ಜೆ ಕಾಲೇಜು, ಬೆಳ್ತಂಗಡಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.