ಕೈತೋಟ ಕಲಿಸಿದ ಪಾಠ


Team Udayavani, Dec 8, 2017, 3:18 PM IST

08-29.jpg

ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಜೀವನ ಮೌಲ್ಯಗಳನ್ನು  ಕಲಿಸಿಕೊಡುವುದಿಲ್ಲ. ಮಕ್ಕಳಿಗೆ ಪಠ್ಯದ ಜ್ಞಾನ, ಪಠ್ಯೇತರ ಜ್ಞಾನ ಸಿಗುವುದಿಲ್ಲ. ಇಂತಹ ಶಿಕ್ಷಣಕ್ಕೆ ಮಕ್ಕಳು ಅದಕ್ಕೆ ತಕ್ಕ ಹಾಗೆ ಹೊಂದಿಕೊಡಿದ್ದಾರೆ. ನಮ್ಮ  ಮಗಳು, ಮಗ ತರಗತಿಯಲ್ಲಿ  ಫ‌ರ್ಸ್ಡ್ ಬರಬೇಕು. ಎಲ್ಲದರಲ್ಲಿಯೂ ತಮ್ಮ ಮಕ್ಕಳೇ ಮುಂದಿರಬೇಕು ಎಂಬುದು ಬಹುತೇಕ ಎಲ್ಲ ಪಾಲಕರ ಆಲೋಚನೆ ಹಾಗೂ ಆಶಯ. ಅದು ಕೂಡ ಸಹಜ. ಆದರೆ, ಕೃಷಿ ಭೂಮಿಯಲ್ಲಿ ತಮ್ಮ ಮಕ್ಕಳು ಸಾಧಿಸಬೇಕು ಎಂದು ಆಲೋಚನೆ ಮಾಡುವವರ ಸಂಖ್ಯೆ ಕಡಿಮೆ. 

ಶಾಲಾ ಕೈತೋಟದಲ್ಲಿ  ಕಲಿತ ಪಾಠಗಳೇ ಕೊನೆಗೆ ಅದುವೇ ಜೀವನಕ್ಕೆ ಆಸರೆಯಾದ ನನ್ನ ಗೆಳೆಯನನ್ನು ನೋಡಿ ನನಗೆ ಬಹಳ ಖುಷಿಯೆನಿಸಿತು. ಈಗಿನ ಕಾಲದಲ್ಲಿ ಕೃಷಿಯಲ್ಲಿ ಆಸಕ್ತಿ ತೋರುವವರು ಬಹಳ ಕಡಿಮೆ. 

ನಾನು ಮತ್ತು ನನ್ನ ಗೆಳೆಯ ಹೈಸ್ಕೂಲ್‌ನಲ್ಲಿ ಒಟ್ಟಿಗೆ ಓದಿದ್ದು. ಅದು ಸರಕಾರಿ ಶಾಲೆಯಲ್ಲ. ಸರಕಾರಿ ಶಾಲೆ ಎಂದರೆ ಈಗ ಮೂಗು ಮುರಿಯುವುದೇ ಹೆಚ್ಚು. ಯಾವುದೇ ರೀತಿಯ ಸೌಲಭ್ಯ ಸರಿಯಾಗಿ ಸಿಗದೆ ಹಿಂದೆ ಉಳಿದಿರುತ್ತವೆಯೆಂದು ಖಾಸಗಿ ಶಾಲೆಗಳ ವ್ಯಾಮೋಹದಿಂದ ಸರಕಾರಿ ಶಾಲೆಗಳಿಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಆಗಿದೆ. ಅದು ಏನೇ ಇರಲಿ, ಒಂಬತ್ತನೆಯ ತರಗತಿಯಲ್ಲಿ ಇರುವಾಗ ನಮ್ಮ ತರಗತಿಯಲ್ಲಿ ಸಣ್ಣ ಸಣ್ಣ ಗುಂಪು ಮಾಡಿಕೊಂಡಿದ್ದೆವು. ಯಾಕೆಂದರೆ, ಅದು ಸಂಜೆಯ ಕೊನೆಯ ತರಗತಿಯಲ್ಲಿ ಶಾಲಾ ಕೈತೋಟ ಮಾಡಲು. ಇದಕ್ಕೆೆ ಎಲ್ಲರೂ ಮೊದಮೊದಲು ಆಸಕ್ತಿ ತೋರಿಸಿದರು. ಕೊನೆಗೆ ಉಳಿದದ್ದು ನನ್ನ ಮತ್ತು ಗೆಳೆಯನ ಗುಂಪು ಮಾತ್ರ. ನಾವು ಸಂಜೆ ಹೊತ್ತಿಗೆ ಆಟವಾಡಲು ಹೋಗದೆ ತೋಟ ನಿರ್ಮಾಣದಲ್ಲಿ ತೊಡಗುತ್ತಿದ್ದೆವು. ಇದಕ್ಕೆಲ್ಲ ನಮಗೆ ಸಹಾಯ ಮಾಡುತ್ತಿದ್ದವರು ನಮ್ಮ ಹಿಂದಿ ಮೇಡಂ. 

ಒಮ್ಮೆ ನಾವು ತೋಟದಲ್ಲಿ ಮಣ್ಣು ಅಗೆಯುತ್ತಿರುವಾಗ ನೀರಿನ ಪೈಪ್‌ ಹಾದು ಹೋಗಿದೆ ಎಂಬುದು ತಿಳಿಯದೆ ಗೆಳೆಯ ಮಣ್ಣು ಅಗೆಯುವಾಗ ಪೈಪ್‌ ಒಡೆದು ಹೋಗಿತ್ತು. ಆದರೆ ಅದು ಗೊತ್ತಿಲ್ಲದೇ ನಡೆಯಿತೆಂದು ಸ್ವತಃ ಮೇಡಂ ಹಣ ಹಾಕಿ ಪೈಪ್‌ ಸರಿ ಮಾಡಿಸಿ ನಮ್ಮನ್ನು ಬಚಾವ್‌ ಮಾಡಿದ್ದರು. ಇಲ್ಲದಿದ್ದರೆ ನಮಗೆ ದೈಹಿಕ ಶಿಕ್ಷಕರಿಂದ ಬೈಗುಳದ ಸರಮಾಲೆಯೆ ಬರುತ್ತಿತ್ತು. 

ಶಾಲಾ ಕೈತೋಟದಲ್ಲಿ ನಾವು ಅಲಸಂಡೆ, ಬೆಂಡೆಕಾಯಿ, ತೊಂಡೆಕಾಯಿ, ಬಸಳೆ, ಮೂಲಂಗಿ, ಬಾಳೆಕಾಯಿ ಇನ್ನಿತರ ತರಕಾರಿಗಳನ್ನು ಬೆಳೆಯುತ್ತಿದ್ದೆವು. ಇದರ ಜೊತೆಗೆ ವನಮಹೋತ್ಸವ ದಿನ ಔಷಧೀಯ ಗಿಡಗಳನ್ನು ನೆಡುತ್ತಿದ್ದೆವು. ಶಾಲೆಯ ಆವರಣದಲ್ಲಿ ಹೂ ಗಿಡಗಳನ್ನು ನೆಡುತ್ತಿದ್ದೆವು. ಎಲ್ಲ ಶಾಲೆಗಳಲ್ಲಿ “ಪರಿಸರ ದಿನ’ದಂದು ಹೂ ಇನ್ನಿತರ ಗಿಡಗಳನ್ನು ನೆಟ್ಟರೂ ಇನ್ನೊಂದು ವರ್ಷಕ್ಕೆ ಇರುವುದಿಲ್ಲ. ಏಕೆಂದರೆ, ಅದರ ಪೋಷಣೆಯನ್ನು ಮಾಡಲು ಯಾರು ಮುಂದಾಗುವುದಿಲ್ಲ. ನಮ್ಮ ಶಾಲೆಯಲ್ಲಿ ನೆಟ್ಟ ಗಿಡಗಳ ಪೋಷಣೆ ಅಚ್ಚುಕಟ್ಟಾಗಿ ಮಾಡುತ್ತಿದ್ದೆವು.  ನಮ್ಮ ಮಧ್ಯಾಹ್ನದ  ಬಿಸಿಯೂಟಕ್ಕೆ ನಮ್ಮ ಶಾಲೆಯಲ್ಲಿ ಬೆಳೆದ ತರಕಾರಿಗಳನ್ನು  ಉಪಯೋಗಿಸುತ್ತಿದ್ದರು. ಕ್ಲಾಸ್‌ಮೇಟ್ಸ್‌ಗಳು ನಮ್ಮನ್ನು ಗಾಂಧಿಪೀಸ್‌ಗಳು ಅಂತ ಹೇಳುತ್ತಿದ್ದರು. ಏಕೆಂದರೆ, ಇದರಲ್ಲಿ ತೊಡಗುತ್ತಿದ್ದದ್ದು ನಾನು ಮತ್ತು ನನ್ನ ಗೆಳೆಯ ಇಬ್ಬರು ಮಾತ್ರ. ಮೇಡಂ, “ತೋಟದ ಕೆಲಸ ಉಂಟು, ಬನ್ನಿ’ ಅಂತ ಹೇಳುವಾಗ ನಾವು ನಾಲ್ಕು ಮಂದಿ ಮಾತ್ರ ಹೋಗುತ್ತಿದ್ದದ್ದು. ಅದಕ್ಕಾಗಿ ಉಳಿದವರಿಗೆ ಕೈದೋಟ ನಿರ್ಮಾಣದಲ್ಲಿ ಆಸಕ್ತಿ ಇರಲಿಲ್ಲ. ನಾವು ಆಟಕ್ಕೆ ಹೋಗಿದ್ದಕ್ಕಿಂತ ಹೆಚ್ಚಾಗಿ ಕೈತೋಟದಲ್ಲಿ ಹೆಚ್ಚು ಇರುತ್ತಿದ್ದೆವು. 

ನಮ್ಮಲ್ಲಿ ಹಾರೆ-ಪಿಕ್ಕಾಸು  ಹಿಡಿಯದವರು ಆ ಕೈತೋಟ ನಿರ್ಮಾಣದಲ್ಲಿ ಹಿಡಿಯಬೇಕಾಯಿತು. ಇದರಿಂದ ನಮಗೇನೂ ನಷ್ಟವಾಗಲಿಲ್ಲ. ಬದಲಾಗಿ ಜೀವನ ಪಾಠವನ್ನು ಕಲಿಸಿಕೊಟ್ಟವು. ಬೇಸಿಗೆ ಕಾಲದಲ್ಲಿ ನೀರು ಹಾಕುವ ಕೆಲಸವು ನಡೆಯುತ್ತಿತ್ತು. ಬೆಳೆದ ತರಕಾರಿ ಗಿಡಗಳಿಗೆ ನಮ್ಮ ಒಂದೊಂದು ಅಡ್ಡ ಹೆಸರು ಇಡುತ್ತಿ¨ªೆವು. ಅದು ಏನೋ ಒಂಥರಾ ಖುಷಿ ಕೊಡುತ್ತಿತ್ತು. ಒಬ್ಬೊಬ್ಬರು ಕೆಲಸ ಹಂಚಿಕೆ ಮಾಡಿ ಮಾಡುತ್ತಿದ್ದೆವು. 

ಒಟ್ಟಾರೆಯಾಗಿ ಹೈಸ್ಕೂಲ್‌ ಮೂರು ವರ್ಷ ಹೋಗಿದ್ದು ಗೊತ್ತಾಗಲೇ ಇಲ್ಲ. ಕೊನೆಯ ದಿನ ಆ ಶಾಲೆ ಹಾಗೂ  ತರಕಾರಿ ತೋಟದೊಂದಿಗೆ ಇದ್ದ ನಮ್ಮ ಸಂಬಂಧ ಬೀಳೊಡುವ ದಿನ ಬಂದೇಬಿಟ್ಟಿತು. ಬಹಳ ಬೇಸರವಾಗುತ್ತಿತ್ತು. ಆದರೂ ಮುಂದಿನ ವಿದ್ಯಾಭ್ಯಾಸಕ್ಕಾಗಿ ಹೋಗಲೇಬೇಕಾಯಿತು. 

ಹೀಗೆ ನಾವು ಬೇರೆ ಬೇರೆ ಕಾಲೇಜುಗಳಿಗೆ ಸೇರಿಕೊಂಡೆವು. ಆದರೆ, ನನ್ನ ಒಬ್ಬ ಗೆಳೆಯ ಮಾತ್ರ ಆ ಕೈತೋಟದಲ್ಲಿ ಕಲಿತ ಕೃಷಿ ಚಟುವಟಿಕೆಗಳನ್ನೇ ಗಟ್ಟಿ ಮಾಡಿಕೊಂಡು ಅದರಲ್ಲಿಯೇ ಆಸಕ್ತಿ ಬೆಳೆಸಿದ. ಮೊನ್ನೆ ಆತ  ಸಿಕ್ಕಿದ್ದ. ಕೃಷಿಯಲ್ಲಿ ಆಸಕ್ತಿ ಬರಲು ಹೇಗೆ ಸಾಧ್ಯವಾಯಿತು ಅಂತ ಕೇಳಿದಾಗ, “ಎಲ್ಲವೂ ಹೈಸ್ಕೂಲ್‌ ಕೈತೋಟ ಕಲಿಸಿದ ಪಾಠ’ ಅಂತ ಹೇಳಿದ. “ನೀವೆಲ್ಲ ಈಗ ಕಾಲೇಜುಗಳಿಗೆ ಸೇರಿಕೊಂಡಿರಿ. ನನಗೆ ಎಸ್‌ಎಸ್‌ಎಲ…ಸಿಯಲ್ಲಿ ಒಳ್ಳೆಯ ಮಾರ್ಕ್ಸ್ ಇತ್ತು. ಆದರೆ ಕಾಲೇಜು ಕಲಿಯಲು ಆಗಲಿಲ್ಲ. ಮನೆಯಲ್ಲಿ ಬಡತನ ಪರಿಸ್ಥಿತಿ ಇತ್ತು’ ಅಂದ. “ಮನೆಯಲ್ಲೇ ಕೂತು ಏನು ಮಾಡುವುದು ಎಂದು ನನ್ನ ತಂದೆಯೊಂದಿಗೆ ಕೃಷಿಯಲ್ಲಿ ತೊಡಗಿಕೊಂಡೆ’ ಎಂದ. “ಈಗ ಟಿಲ್ಲರ್‌ ಇದೆ. ಮನೆಯ ಅಕ್ಕಪಕ್ಕದಲ್ಲಿ ಗದ್ದೆ ಇರುವವರು ಟಿಲ್ಲರ್‌ ಕೆಲಸ ಇದ್ದರೆ ಕರೆಯುತ್ತಾರೆ ಹಾಗೂ ಅಡಿಕೆ ಕೊಯ್ಲು ಕೆಲಸ ಗೊತ್ತು’ ಎಂದು ಬಹಳ ಖುಷಿಯಿಂದ  ಹೇಳಿದ. 

ಶಾಲಾ ಕೈತೋಟದಲ್ಲಿ ಕಲಿತ ಕೃಷಿ ಪಾಠಗಳು ನನ್ನ ಗೆಳೆಯನಿಗೆ ಆಸರೆಯಾಯಿತು. ರ್‍ಯಾಂಕ್‌ ಬರುವುದಕ್ಕಿಂತಲೂ ಜೀವನ ಮೌಲ್ಯವನ್ನು ರೂಢಿಸಿಕೊಂಡ ವ್ಯಕ್ತಿಯಾಗಿ ಬೆಳೆಯಬೇಕಾಗಿರುವುದು  ಮುಖ್ಯ. ಪರೋಪಕಾರದಲ್ಲಿಯೇ ಜೀವನದ ಸಾರ್ಥಕತೆ ಇದೆ ಎಂದು ಎಷ್ಟೋ ಜನರು ಹೇಳುತ್ತಾರೆ. ಇಂದಿನ ಕಾಲದ ಮಗುವಿನಲ್ಲಿ ಮಾನವೀಯ ಮೌಲ್ಯಗಳನ್ನು, ನೈತಿಕತೆಯನ್ನು ಬೆಳೆಸಲಿಕ್ಕೆ ಪ್ರಯತ್ನಿಸಬೇಕು. ಆ ನಿಟ್ಟಿನಲ್ಲಿ ಪಾಲಕರು, ಹಿರಿಯರು, ಶಿಕ್ಷಕರು ಪ್ರಯತ್ನಿಸಬೇಕಾಗುತ್ತದೆ. ಆಗ ಮಾತ್ರ ಸ್ವತ್ಛವಾದ, ಸುಂದರವಾದ, ಸದೃಢವಾದ ಮತ್ತು ಸಹನೀಯವಾದ ಸಮಾಜವನ್ನು ಕಟ್ಟಲಿಕ್ಕೆ ಸಾಧ್ಯವಾಗುತ್ತದೆ. ಅದನ್ನು ಮಾಡುವುದು ನಮ್ಮ ಶಿಕ್ಷಣದ ಮೂಲ ಉದ್ದೇಶವಾಗಬೇಕಾಗಿದೆ. ಮಕ್ಕಳಿಗೆ ಎಳವೆಯಲ್ಲಿಯೇ ಸ್ವಾರ್ಥ ಮನೋಭಾವನೆಯನ್ನು ಹೆತ್ತವರು ಬಿತ್ತಬಾರದು. 

ಸ್ನೇಹಿತರೆ, ಓದು ಕೇವಲ ಜ್ಞಾನಕ್ಕೆ ಸೀಮಿತವಾಗಿರುತ್ತದೆ. ಆದರೆ ಪಠ್ಯೇತರ ಚಟುವಟಿಕೆಗಳೇ ಮುಂದೆ ಒಂದು ದಿನ ಜೀವನಕ್ಕೆ ದಾರಿಯಾಗಬಹುದು.ಆದ್ದರಿಂದ ಯಾವುದೇ ಪಠ್ಯೇತರ ಚಟುವಟಿಕೆಗಳು ಶಾಲಾಕಾಲೇಜಿನಲ್ಲಿ ಅಯೋಜಿಸಿದ್ದರೆ ಅದರಲ್ಲಿ ಪಾಲ್ಗೊಳ್ಳಿ. ಅದು ಮುಂದೆ ಸಾಧನೆಗೆ ಮೆಟ್ಟಿಲು ಆಗಬಹುದು. ಎನ್‌ಎಸ್‌ಎಸ್‌ನಂಥ ಶಿಬಿರ ಬಹಳಷ್ಟು ಮೌಲ್ಯಗಳನ್ನು ಕಲಿಸಿಕೊಡುತ್ತದೆ. ಮಿಸ್‌ ಮಾಡಿಕೊಳ್ಳಬೇಡಿ, ಮುಂದೆ ಒಂದು ದಿನ  ನನ್ನ ಗೆಳೆಯನಿಗೆ ಶಾಲಾ ಕೈತೋಟ ಕಲಿಸಿಕೊಟ್ಟ ಪಾಠದ ತರಹ ನಿಮಗೂ ಸಹಾಯವಾಗುವುದು. ಗೆಳೆಯನ ಅನುಭವವನ್ನು ನನ್ನಲ್ಲಿ ಹೇಳಿದಾಗ ಇದನ್ನು ಹಂಚಿಕೊಳ್ಳಲು ಉದಯವಾಣಿಯ ಯುವಸಂಪದ ಉತ್ತಮ ವೇದಿಕೆ ಅನ್ನಿಸಿತು.

ಮೋಹನ ಕಾನರ್ಪ
ಪತ್ರಿಕೋದ್ಯಮ ವಿಭಾಗ, ಎಸ್‌ಡಿಎಂ ಕಾಲೇಜು , ಉಜಿರೆ

ಟಾಪ್ ನ್ಯೂಸ್

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

1-dm

Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.