ಅಣ್ಣನಿಗೊಂದು ಪತ್ರ
Team Udayavani, Jan 11, 2019, 12:30 AM IST
ಪ್ರೀತಿಯ ಸಹೋದರನಲ್ಲಿ, ನಾನು ಬೇಡುವ ಆಶೀರ್ವಾದಗಳು. ನಾನು ಕ್ಷೇಮವಾಗಿದ್ದೇನೆ, ನೀನು ಕ್ಷೇಮವಾಗಿರುವೆ ಎಂದು ಭಾವಿಸುತ್ತೇನೆ. ಮೊದಲನೆಯದಾಗಿ, ಹುಟ್ಟುಹಬ್ಬದ ಶುಭಾಶಯಗಳು. ಹಾಗೂ ನಿನ್ನ ಮುಂದಿನ ಜೀವನವು ಇನ್ನೂ ಸುಖಕರವಾಗಿರಲಿ ಎಂದು ಆಶಿಸುತ್ತೇನೆ.
ಅಣ್ಣ , ನಾನು ಈ ಮೂಲಕ ನಿನಗೆ ನನ್ನ ಪುಟ್ಟ ಥ್ಯಾಂಕ್ಯೂ ಹೇಳಬಯಸುತ್ತೇನೆ. ಯಾಕೆಂದರೆ, ಅಣ್ಣ-ತಂಗಿ ಪ್ರೀತಿ ಎನ್ನುವುದೇ ಹಾಗೆ. ಅವರಿಬ್ಬರ ನಡುವಿನ ಬಾಂಧವ್ಯದ ಬಗ್ಗೆ ವರ್ಣಿಸಲು ಪದಗಳೇ ಸಾಲದು. ಕೆಲವರು ತಮ್ಮ ಅಣ್ಣಂದಿರೊಂದಿಗೆ ಕಾಲ ಕಳೆಯುವುದನ್ನು ಕಂಡಾಗ ನನಗೂ ಒಬ್ಬ ಅಣ್ಣ ಇರಬೇಕಾಗಿತ್ತು ಎಂದೆನಿಸುತ್ತಿತ್ತು. ನಾನು ನನ್ನ ಅಪ್ಪ ಅಮ್ಮನಿಗೆ ಒಬ್ಬಳೇ ಮಗಳು. ಆದ್ದರಿಂದ ನನಗೆ ಸಂಬಂಧಿಕರಲ್ಲಿ ಅಣ್ಣತಂಗಿಯನ್ನು ಕಂಡಾಗ ನನಗೆ ಅಣ್ಣನಿಲ್ಲವೆಂಬ ಬೇಸರ ಕಾಡುತ್ತಿತ್ತು. ನೀನು ಬಂದಮೇಲೆ ನನಗೆ ಅಣ್ಣನಿಲ್ಲವೆಂಬ ಭಾವನೆ ಕಾಡಲಿಲ್ಲ. ಒಂದು ವೇಳೆ ಒಡಹುಟ್ಟಿದ ಅಣ್ಣ ಇದ್ದರೂ ಸಹ ನಿನ್ನಿಂದ ದೊರೆತ ಅಣ್ಣನೆಂಬ ಪ್ರೀತಿ, ಮಮತೆ, ವಾತ್ಸಲ್ಯ ಆತನಿಂದ ದೊರೆಯದು ಎಂದೆನಿಸುತ್ತದೆ. ನಾನು ನಿನ್ನ ರಕ್ತ ಸಂಬಂಧಿ, ಒಡಹುಟ್ಟಿದವಳಲ್ಲದಿದ್ದರೂ ಸಹ ಅಣ್ಣ ಎಂದು ಕರೆದಾಗ ನೀನು ತೋರುವ ಅಕ್ಕರೆ, ವಾತ್ಸಲ್ಯ, ಕಾಳಜಿ- ಇವೆಲ್ಲವೂ ಹೇಳತೀರದು. ಅಣ್ಣ-ತಮ್ಮ, ಅಕ್ಕ-ತಂಗಿ, ಅಕ್ಕ-ತಮ್ಮ ಈ ಎಲ್ಲ ಸಹೋದರತ್ವದ ಬಾಂಧವ್ಯಕ್ಕಿಂತಲೂ ಅಣ್ಣ-ತಂಗಿಯ ಬಾಂಧವ್ಯ ಬಹಳ ಶ್ರೇಷ್ಠವಾದುದು. ಅಲ್ಲಿ ಅವರಿಬ್ಬರ ನಡುವಿನ ಆತ್ಮೀಯತೆ, ಎಷ್ಟೇ ತರೆಲ-ತುಂಟಾಟಗಳಿದ್ದರೂ ಒಬ್ಬರನ್ನೊಬ್ಬರು ಬಿಟ್ಟಿರಲಾಗದಂತಹ ಬಾಂಧವ್ಯ ಇವೆಲ್ಲವೂ ಎಷ್ಟು ಹೇಳಿದರೂ ಮುಗಿಯದಂತಹ ಪ್ರೀತಿ. ಈ ಪ್ರೀತಿ ಚಿರಕಾಲದವರೆಗೂ ಹೀಗೆ ಇರಲಿ.
ಇನ್ನು , ಮೊನ್ನೆ ನವೆಂಬರಿಗಷ್ಟೇ ನಮ್ಮಿಬ್ಬರ ಅಣ್ಣತಂಗಿ ಬಾಂಧವ್ಯಕ್ಕೆ ಎರಡು ವರ್ಷಗಳಾಯಿತು. ಈ ಎರಡು ವರ್ಷದ ಬಾಂಧವ್ಯದಲ್ಲಿ ನಿನ್ನೊಂದಿಗೆ ಕಳೆದ ಪ್ರತಿಕ್ಷಣವೂ ಮರೆಯಲಾಗದಂತಹ ಸಿಹಿ ಕ್ಷಣಗಳು. ನಿನ್ನೊಂದಿಗೆ ಮುನಿಸಿಕೊಂಡಿದ್ದಿರಬಹುದು, ನನ್ನ ಅತಿಯಾದ ಮಾತುಗಳಿಂದ ನಿನಗೆ ಕೋಪ ಬಂದರೂ ಸಹ ನೀನು ತಾಳ್ಮೆಯಿಂದ ಆಲಿಸಿದ್ದಿರಬಹುದು. ಇವೆಲ್ಲವೂ ಮರೆಯಲಾಗದಂತಹ ಕ್ಷಣಗಳು. ಕಣ್ಣು ಮುಚ್ಚಿದಾಗ ಅಕ್ಷಿಪಟಲದಲ್ಲಿ ನಿನ್ನೊಂದಿಗೆ ಕಳೆದ ಪ್ರತಿ ಕ್ಷಣಗಳು ಒಮ್ಮೆಗೆ ಹಾದುಹೋಗುತ್ತದೆ.
ಅಣ್ಣನೆಂಬವನು ತಾಯಿತಂದೆಯನ್ನೇ ಮೀರಿಸುವ ಪ್ರೀತಿ, ವಾತ್ಸಲ್ಯವನ್ನು ತೋರುತ್ತಾನೆ. ಆದರೆ, ನೋಡುವ ಕಣ್ಣುಗಳಷ್ಟೇ ಅದನ್ನು ಅನುಮಾನಿಸುತ್ತದೆ. ಇಂದು ಈ ಅನುಮಾನದಿಂದ ನೋಡುವ ಕಣ್ಣುಗಳಿಂದಾಗಿ ನೀನು ಕಣ್ಣೆದುರು ಇದ್ದರೂ ಅಣ್ಣ ಎಂದು ಕರೆಯಲಾಗುತ್ತಿಲ್ಲ ಎಂಬ ನೋವಿದೆಯಾದರೂ ಇಂದಿಗೂ ನಾವಿಬ್ಬರು ಅಣ್ಣ-ತಂಗಿಯರು ಎಂಬ ಮಾತು ಖುಷಿ ಕೊಡುವಂತಹದು.
ಯಶಸ್ವಿ
ಪ್ರಥಮ ಪಿಯುಸಿ,
ಕಪಿತಾನಿಯೋ ಪದವಿಪೂರ್ವ ಕಾಲೇಜು, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.