ವಿಶಿಷ್ಟವಾದ ಹುಟ್ಟುಹಬ್ಬ ಆಚರಣೆ
Team Udayavani, Sep 27, 2019, 5:00 AM IST
ಅಂದು ನನ್ನ 14ನೆಯ ವರ್ಷದ ಹುಟ್ಟುಹಬ್ಬ. ಸಾಮಾನ್ಯವಾಗಿ ಎಲ್ಲರೂ ತಮ್ಮತಮ್ಮ ಹುಟ್ಟುಹಬ್ಬವನ್ನು ಮನೆಯಲ್ಲಿಯೇ ಕುಟುಂಬದವರೊಂದಿಗೆ ಅಥವಾ ಸ್ನೇಹಿತರೊಂದಿಗೆ ಸಿಹಿಹಂಚುವ ಮೂಲಕ ಅಥವಾ ದೊಡ್ಡ ಹೊಟೇಲ್‌ಗಳಲ್ಲಿ ಅದ್ದೂರಿಯಾಗಿ ಇಲ್ಲವೇ ಮತ್ತೂ ಕೆಲವರು ಅನಾಥಾಶ್ರಮ, ವೃದ್ಧಾಶ್ರಮಗಳಲ್ಲಿ ಆಚರಿಸುತ್ತಾರೆ. ಹೀಗೆ ನಾನೂ ನನ್ನ ಹುಟ್ಟು ಹಬ್ಬವನ್ನು ಅನಾಥಾಶ್ರಮದಲ್ಲಿ ಆಚರಿಸಲು ನಿರ್ಧರಿಸಿದ್ದೆ.
ಹುಟ್ಟುಹಬ್ಬದಂದು ನನ್ನ ಕುಟುಂಬದೊಂದಿಗೆ ಒಂದು ಅನಾಥಾಶ್ರಮಕ್ಕೆ ಭೇಟಿಕೊಟ್ಟೆವು. ಅಲ್ಲಿ ಮಕ್ಕಳೆಲ್ಲ ಆಟವಾಡುತ್ತಿದ್ದರು. ಅಲ್ಲಿಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದ ಒಬ್ಬ ಮೇಡಂ ಮತ್ತು ಅನಾಥ ಮಕ್ಕಳನ್ನು ನೋಡಿಕೊಳ್ಳುತ್ತಿದ್ದ ಅಕ್ಕಂದಿರನ್ನು ನೋಡುವಾಗ ಆಶ್ರಮ ಒಂದು ಕುಟುಂಬದಂತೆ ಕಾಣುತ್ತಿತ್ತು. ಒಮ್ಮೆಲೇ ನಮ್ಮನ್ನು ನೋಡಿ ಅವರೆಲ್ಲ ಏನೋ ಖುಷಿಯಾದಂತೆ, ನನ್ನ ಬಳಿ ಓಡೋಡಿ ಬಂದು, “ಅಕ್ಕಾ’ ಎಂದು ಕರೆದು ನನ್ನನ್ನು ಒಳಕ್ಕೆ ಎಳೆದುಕೊಂಡೇ ಹೋದರು. ಬಳಿಕ ನಾನು ತಂದಿದ್ದ ಕೇಕ್ ಕತ್ತರಿಸಿದಾಗ ಎಲ್ಲರಲ್ಲೂ ಒಂದು ಲವಲವಿಕೆ ಕಂಡಿತು. ನಾನು ನಂತರ ಬಲೂನನ್ನು ಊದಿ ಮಕ್ಕಳಿಗೆಲ್ಲ ಕೊಟ್ಟೆ. ಅವರೆಲ್ಲ ಅದನ್ನು ತಮ್ಮ ಬದುಕಿನಲ್ಲಿ ನೋಡಿಯೇ ಇಲ್ಲವೆಂಬಂತೆ ಆಡುತ್ತಿದ್ದರು. ಅವರೊಂದಿಗೆ ಸಮಯ ಸರಿದದ್ದೇ ತಿಳಿಯಲಿಲ್ಲ. ಕೊನೆಗೆ ಹೊರಡಲನುವಾದಾಗ ಇಬ್ಬರು ನಮ್ಮನ್ನು ಬೀಳ್ಕೊಡಲು ಗೇಟಿನವರೆಗೆ ಬಂದರು. ಒಬ್ಬ, “ಅಮ್ಮಾ, ನೀನು ಹೋಗುತ್ತೀಯಾ?’ ಎಂದು ಕೇಳಿದ ತತ್‌ಕ್ಷಣವೇ ಇನ್ನೊಬ್ಬ, “ನೀನು ಹೋಗು, ಬರಬೇಡ’ ಎಂದು ನನ್ನನ್ನು ಸಿಟ್ಟಿನಿಂದ ನೂಕಿದ. ನಾನು ಇವನ್ನೆಲ್ಲ ನೋಡುತ್ತ ಏನೂ ಮಾತನಾಡದೇ ಸುಮ್ಮನೇ ಮನೆಗೆ ಹಿಂತಿರುಗಿದೆ.
ಪ್ರತಿಯೊಂದು ಜೀವಿಗೂ ಭಾವನೆಗಳಿರುತ್ತವೆ. ನಾನು ಇಂಥದ್ದೊಂದು ಒಳ್ಳೆಯ ಜೀವನಪಾಠ ಅನಾಥ ಮಕ್ಕಳಿಂದ ಕಲಿತೆ. ಅವರೊಂದಿಗೆ ನಾನು ಕಳೆದ ಆ ಸಮಯ, ಭಾವನೆಗಳು ಜೀವನದಲ್ಲೆಂದೂ ಮರೆಯಲಾಗದ ಸಂಗತಿ.
ಚಂದ್ರಿಕಾ ಕಾಮತ್
ದ್ವಿತೀಯ ವಿಜ್ಞಾನ
ಅಮೃತಭಾರತಿ ಪದವಿಪೂರ್ವ ಕಾಲೇಜು, ಹೆಬ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Allu Arjun; ತಪ್ಪು ಮಾಹಿತಿ, ಚಾರಿತ್ರ್ಯ ಹರಣಕ್ಕೆ ಯತ್ನ: ರೇವಂತ್ ರೆಡ್ಡಿಗೆ ತಿರುಗೇಟು
R Ashwin: ಅಶ್ವಿನ್‌ಗೆ ಖೇಲ್ ರತ್ನ; ಕ್ರೀಡಾ ಸಚಿವರಿಗೆ ಸಂಸದರಿಂದ ಪತ್ರ
Virat Kohli: ಬಾಕ್ಸಿಂಗ್ ಡೇ ಟೆಸ್ಟ್‌ಗೂ ಮುನ್ನ ವಿರಾಟ್ ನೂತನ ಕೇಶ ವಿನ್ಯಾಸ
Hala Modi; ಮಿನಿ ಹಿಂದೂಸ್ಥಾನಕ್ಕೆ ಸಾಕ್ಷಿಯಾಗುತ್ತಿದ್ದೇನೆ: ಕುವೈಟ್ ನಲ್ಲಿ ಮೋದಿ
Kumble: ಯುವಕನ ಕೊಲೆ; ಆರು ಮಂದಿ ಅಪರಾಧಿಗಳು ಡಿ. 23ರಂದು ಶಿಕ್ಷೆ ತೀರ್ಪು ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.