ಸ್ನೇಹದ ಮತ್ತೂಂದು ಮುಖ
Team Udayavani, Jul 28, 2017, 7:00 AM IST
ಸ್ನೇಹಕ್ಕೆ ಸ್ನೇಹ, ಪ್ರೀತಿಗೆ ಪ್ರೀತಿ, ನಾನು ಸ್ನೇಹ ಜೀವಿ, ನೀನೂ ಸ್ನೇಹ ಜೀವಿ’ ಅನ್ನೋ ಸಿಪಾಯಿ ಮೂವಿಯ ಆಲ್ ಟೈಮ್ ಹಿಟ್ ಸಾಂಗ್ ನಿಮಗೆಲ್ಲಾ ಗೊತ್ತೆ ಇದೆ ಅಲ್ವಾ ಫ್ರೆಂಡ್ಸ್ . ಸ್ನೇಹಕ್ಕಾಗಿ ಪ್ರಾಣ ಕೊಡೋರೂ ಇರ್ತಾರೆ, ಇಲ್ಲ , ತಮ್ಮ ಬೇಳೆ ಬೇಯಿಸಿಕೊಳ್ಳೊಕೆ ಸ್ನೇಹವೆಂಬ ಮುಖವಾಡವನ್ನು ಧರಿಸಿಕೊಂಡು ಜೊತೆಗೆ ಇದ್ದು ಬೆನ್ನಿಗೆ ಚೂರಿ ಹಾಕೋರು ನಮ್ಮ ನಿಮ್ಮ ನಡುವೆ ಇರ್ತಾರೆ. ಇದ್ನ ನೀವೆಲ್ಲಾ ಒಪ್ಪಿಕೊಳ್ತೀರಾ ಅಂದುಕೋತೀನಿ. ಇವತ್ತು ಒಂದು ಇಂಟರೆಸ್ಟಿಂಗ್ ರಿಯಲ್ ಸ್ಟೋರಿಯೊಂದನ್ನು ನಿಮ್ಮ ಜೊತೆ ಶೇರ್ ಮಾಡೋಕೆ ಇಷ್ಟಪಡ್ತೀನಿ.
ಗೀತಾ ಮತ್ತು ಅಂಜಲಿ ಒಂದೇ ಊರಿನವರಲ್ಲ, ಒಂದೇ ಕಾಲೇಜಿನವರೂ ಅಲ್ಲ , ಆದ್ರೆ ಪ್ರಾಣಕ್ಕೆ ಪ್ರಾಣ ಕೊಡೋ ಸ್ನೇಹಿತೆಯರು ಅನ್ನೋ ಮಾತುಗಳು ಅವ್ರ ಸ್ನೇಹದ ಬಗ್ಗೆ ಎಲ್ಲೆಲ್ಲೂ ಹರಿದಾಡುತ್ತಿದ್ದವು. ಬಾಲ್ಯದ ಸ್ನೇಹಿತರಲ್ಲ, ಕುಟುಂಬದಿಂದ ಪರಿಚಿತವಾಗಿರೋ ಸಂಬಂಧನೂ ಅಲ್ಲ, ಆದ್ರೆ ದೇವರು ಬೆಸೆದ ಬಂಧ ಅನ್ನೋ ದೊಡ್ಡ ದೊಡ್ಡ ಮಾತುಗಳು ಗೀತಾ ಮತ್ತು ಅಂಜಲಿ ಸ್ನೇಹದ ಬಗೆಗಿನ ಮಾತುಗಳು ನನ್ನ ಕಿವಿಗೂ ಬಿದ್ದಿತ್ತು. ಹಾಗೇ ನಾನು ನೋಡಿದಂತೆ ಅವರಿಬ್ಬರ ಒಡನಾಟವೂ ಕೂಡ ಹಾಗೇನೆ ಇತ್ತು ಅನ್ನಿ. ಒಂದೇ ಕಂಪೆನಿಯಲ್ಲಿ ಕೆಲ್ಸ, ಒಂದೇ ಶಿಫ್ಟ್, ಒಂದೇ ಕಡೆ ವಾಸ್ತವ್ಯ, ಎಲ್ಲಿಗೆ ಹೋದ್ರೂ ಎಲ್ಲಿಗೆ ಬಂದ್ರೂ ಜೊತೆಯಲಿ ಜೊತೆ ಜೊತೆಯಲಿ ಅನ್ನೋ ಸಂಬಂಧ ಅವ್ರದ್ದು. ಅಂತಹ ಕುಚುಕು ಫ್ರೆಂಡ್‌ಶಿಪ್ ಅವ್ರದ್ದು.
ಒಬ್ಬರ ಮೇಲೆ ಒಬ್ಬರಿಗೆ ಊಹಿಸೋಕೆ ಸಾಧ್ಯವಾಗದಷ್ಟು ನಂಬಿಕೆ. ಹಾಗಾಗಿ, ಪರ್ಸನಲ್ ವಿಷ್ಯಗಳನ್ನು ಕೂಡ ಪರಸ್ಪರ ಶೇರ್ ಮಾಡ್ಕೊಳ್ತಿದ್ರು. ಅವ್ರ ಗೆಳೆತನ ನೋಡಿ ಕೆಲವರು ತುಂಬಾನೇ ಖುಷಿ ಪಡ್ತಿದ್ರೆ ಮತ್ತೆ ಕೆಲವರು ಇಂಥ ಸ್ನೇಹ ನಮಗೆ ಸಿಗಲಿಲ್ವಲ್ಲ ಅಂತ ಅಸೂಯೆ ಪಡ್ತಿದ್ರು. ಎಸ್, ಹೀಗೇ ದಿನನಿತ್ಯ ಅವರಿಬ್ಬರ ಕ್ಲೋಸ್‌ನೆಸ್, ಅವ್ರ ಕೆಲ್ಸ , ಅವ್ರ ಹುಡುಗಾಟಗಳು, ತರೆಲ ತಮಾಷೆಗಳು, ಆಗಾಗ ಸ್ವಲ್ಪ ಹುಸಿ ಮುನಿಸು, ಜಗಳ ಆಫೀಸ್‌ನಲ್ಲಿದ್ದ ಎಲಿಗೂ ಸಖತ್ ಮನರಂಜನೆಯನ್ನು ಕೊಡ್ತಿತ್ತು. ಒಂದೇ ತಾಯಿ-ಮಕ್ಕಳು ಕೂಡ ಈ ಥರ ಇರೋಲ್ಲ ಅಂತ ಕಂಪೆನಿಯ ಬಾಸ್ ಕೂಡ ಅವ್ರ ಸ್ನೇಹಕ್ಕೆ ಶಹಬ್ಟಾಸ್ ಗಿರಿಯನ್ನ ಕೊಟ್ಟಿದ್ರು.
“ನಿಮ್ಮಿಬ್ಬರ ಈ ಸ್ನೇಹ ಯಾವಾಗಲೂ ಹೀಗೆ ಇರ್ಲಿ’ ಅಂತ ಪ್ರತಿಯೊಬ್ಬರು ಶುಭ ಹಾರೈಸಿ ದೃಷ್ಟಿ ತೆಗೆಯುತ್ತಿದ್ದರು. ಅಂತಹ ಗೆಳೆತನ ಅವರದ್ದು. ಇದುವರೆಗೂ ಅವರ ಅತ್ಯಮೂಲ್ಯ ಸ್ನೇಹದ ಬಗ್ಗೆ ಕೇಳಿ ನೀವೂ ಖುಷಿ ಪಟ್ಟಿರಬೇಕು.
ಹೀಗೆ ದೃಷ್ಟಿ ತೆಗೆಯೋ ಥರ ಇದ್ದ ಸ್ನೇಹದ ಹಿಂದೆ ಇದ್ದ ಕರಾಳ ಮುಖವನ್ನು ಪರಿಚಯ ಮಾಡಿಸುತ್ತೇನೆ. ನಿಮ್ಗೆ ಗೊತ್ತೆ ಇದೇ ಅಲ್ವಾ – ಎಲ್ಲಿ ಜಗಳ ಇರುತ್ತೂ ಅಲ್ಲಿ ಜಾಸ್ತಿ ಪ್ರೀತಿ ಇರುತ್ತೆ ಅಂತ. ಆದ್ರೆ ಇಲ್ಲಿ ನಿಷ್ಕಲ್ಮಶ ಸ್ನೇಹದ ಹಿಂದಿದ್ದದ್ದು ಮುಖವಾಡವನ್ನು ಧರಿಸಿದ ರಕ್ಕಸತನ. ದುಶ್ಮನ್ ಕಹಾ ಹೇ ಅಂದ್ರೆ ಬಗಲ್ ಮೇ ಅನ್ನೋ ಹಾಗೇ, ಪಕ್ಕದಲ್ಲೇ ಹರಿತವಾದ ಕತ್ತಿ ಇಟ್ಟುಕೊಂಡು ಅದನ್ನೇ ಹೂ ಅಂತ ಅನ್ಕೊಂಡು ಮಲಗಿದ್ದ ಪರಿಸ್ಥಿತಿ ಅಂಜಲಿಯದಾಗಿತ್ತು. ಒಂದು ದಿನ ಇಬ್ಬರ ನಡುವೆ ಯಾವುದೋ ಒಂದು ಸಣ್ಣ ವಿಷಯಕ್ಕೆ ಜಗಳವಾಗಿದೆ. ಮಾತಿಗೆ ಮಾತು ಬೆಳೆದು ಇಬ್ಬರ ಮುನಿಸು ಸ್ನೇಹವನ್ನ ಕತ್ತರಿಸಿ ಬಿಟ್ಟಿದೆ. ಕಾಮನ್ ಆಗಿ ಈ ವಿಷಯ ಆಫೀಸ್‌ನಲ್ಲಿ ಒಬ್ಬರಿಂದ ಒಬ್ಬರಿಗೆ ಕಡ್ಲೆಪುರಿ ಥರಾ ಹಂಚಿಹೊಯ್ತು. ಕೆಲವರು ಕೋಪವನ್ನು ತಣ್ಣಗಾಗಿಸಿ ಇಬ್ಬರನ್ನು ಒಂದು ಮಾಡೋ ಪ್ರಯತ್ನವನ್ನ ಮಾಡಿರಬಹುದು. ಮತ್ತೆ ಕೆಲವರು ಉರಿಯೋ ಬೆಂಕಿಗೆ ತುಪ್ಪ ಸುರಿಯೋ ಪ್ರಯತ್ನವನ್ನು ಕೂಡ ಮಾಡಿದ್ರೂ ಅನ್ನಿ. ಬಟ್ ಒಬ್ಬಳ ಮೈಂಡ್‌ಸೆಟ್, ನೀಚತನ ಎಷ್ಟಿತ್ತು ಅಂದ್ರೆ, ನೀವೂ ಕೂಡ ಒಂದ್ಸಲ ಯಾರ ಜೊತೆಯಾದರೂ ಸ್ನೇಹ ಮಾಡ್ಬೇಕು ಅಂದ್ರೆ ಯೋಚೆ° ಮಾಡ್ತಿರಾ. ಎಸ್, ಅಂಥ ಖತರ್ನಾಕ್ ಫ್ರೆಂಡ್ ಅವ್ಳು. ಆಗ್ಲೆ ಹೇಳಿದೆನಲ್ಲ, ಒಬ್ಬರನ್ನು ಬಿಟ್ಟು ಒಬ್ಬರು ಎಲ್ಲಿಗೂ ಹೋಗಲ್ಲ, ಎಲ್ಲವನ್ನ ಶೇರ್ ಮಾಡ್ಕೊಳ್ತಾರೆ ಅಂತ. ಅದೇ ಇಲ್ಲಿ ಮುಳುವಾಗಿತ್ತು ನೋಡಿ ಅಂಜಲಿಗೆ.
ಇಬ್ಬರು ಒಬ್ಬರ ಮೇಲೆ ಒಬ್ಬರೂ ಇಟ್ಟಿದ್ದ ನಂಬಿಕೆಗೆ ನಿಷ್ಕಲ್ಮಶ ಸ್ನೇಹದ ಮುಖವಾಡ ಧರಿಸಿದ್ದ ಗೀತಾ ನಂಬಿಕೆ ದ್ರೋಹವನ್ನು ಮಾಡಿದು. ಆಫೀಸ್ ಅದ್ಮೇಲೆ ಒಬ್ಬರ ಬಗ್ಗೆ ಒಬ್ರು ಮಾತನಾಡಿಕೊಳ್ಳೋದು ಕಾಮನ್ ಅಲ್ವಾ. ಹಾಗೇ ಅಂಜಲಿ ಕೂಡ ಯಾವುದೋ ಒಂದು ಕೆಟ್ಟ ಗಳಿಗೆಯಲ್ಲಿ ಕಂಪೆನಿ ಬಾಸ್ ಬಗ್ಗೆ ಏನ್ ಮಾತನಾಡಿಬಿಟ್ಟಿದ್ದಾಳೆ. ಅದನ್ನು ಗೀತಾ ರೆಕಾರ್ಡ್ ಮಾಡಿ ಇಟ್ಕೊಂಡಿದ್ದಳು. ದಿನ ಕಳೆದಂತೆ ಒಬ್ಬಳ ಮುಖ ಕಂಡ್ರೆ ಒಬ್ಬಳಿಗೆ ಆಗದಷ್ಟು ದ್ವೇಷ, ಕೋಪ, ಅಸಹ್ಯತನ ಇಬ್ಬರಲ್ಲೂ ಬಂದು ಬಿಟ್ಟಿತ್ತು. ಅಂಜಲಿಯನ್ನು ಹೇಗಾದ್ರೂ ಮಾಡಿ ಕೆಲಸದಿಂದ ತೆಗೆಸಬೇಕು ಅನ್ನೋ ಹಠಕ್ಕೆ ಗೀತಾ ಬೀಳ್ತಾಳೆ. ಅದಕ್ಕೆ ಸೊಪ್ಪು ಹಾಕುವಂಥ ಮತ್ತೂಂದು ಕ್ಯಾರೆಕ್ಟರ್ ಆಫೀಸಿಗೆ ಎಂಟ್ರಿ ಕೊಡುತ್ತೆ.
ಉರಿಯೋ ಬೆಂಕಿಗೆ ತುಪ್ಪ ಸುರಿಯೋ ಕೆಲ್ಸವನ್ನ ಖತರ್ನಾಕ್ ಕಿಲಾಡಿ ಲೇಡಿ ಮಾಡ್ತಾಳೆ. ಅವಳ ಮಾತಗಳನ್ನು ಕೇಳಿ ಮತ್ತಷ್ಟೂ ತಲೆಕೆಡಿಸಿಕೊಂಡ ಗೀತಾ ಅವ್ಳು ಇರೋ ಕಡೆ ನನೆY ಕೆಲ್ಸ ಮಾಡೋಕೆ ಆಗಲ್ಲ ಅಂತ ಹೇಳ್ತಾಳೆ. ಜೊತೆಗೆ ಅಂಜಲಿ ಬಾಸ್ ಬಗ್ಗೆ ಮಾತ್ನಾಡಿದ್ದ ವೇಳೆ ಮಾಡ್ಕೊಂಡಿದ್ದ ಆಡಿಯೋ ರೆಕಾರ್ಡ್‌ನ್ನು ಗೀತಾ ನಂದಿನಿಗೂ ಕೇಳಿಸ್ತಾಳೆ. ಅದನ್ನ ಕೇಳಿಸಿಕೊಂಡ ನಂದಿನಿ ಇದೊಂದೇ ಪೂ›ಫ್ ಸಾಕು ಅವಳಿಗೆ ಗೇಟ್‌ಪಾಸ್ ಕೊಡೋಕೆ ಅನ್ನೋ ಪ್ಲಾನ್ ಕೊಟ್ಟ ಮೇಲೆ ಗೀತಾ ಡೈರೆಕ್ಟ್ ಹೋಗಿ ಬಾಸ್‌ಗೆ ಆಡಿಯೋ ಕೇಳಿಸಿಯೇಬಿಡ್ತಾಳೆ. ಇದನ್ನು ಕೇಳಿಸಿಕೊಂಡ ಬಾಸ್ ಕೆಂಡಾಮಂಡಲರಾಗಿ ಆಫೀಸ್‌ನ ಎಲ್ಲಾ ಸಿಬ್ಬಂದಿಗಳ ನಡುವೆ ಆಕೆಗೆ ಸಿಕ್ಕಾಪಟ್ಟೆ ಅವಮಾನ ಮಾಡಿ ಕೆಲ್ಸದಿಂದ ಕಿತ್ತೂಗೆಯುತ್ತಾರೆ. ಆವತ್ತೇ ಅಲ್ಲಿಂದ ಕಣ್ಣೀರು ಹಾಕ್ಕೊಂಡು ಹೊರ ನಡೆದ ಅಂಜಲಿ ಎಂದೂ ಕೂಡ ಗೀತಾಳನ್ನ ಸಂಪರ್ಕಿಸೋ ಪ್ರಯತ್ನವನ್ನಾಗಲಿ ಅಥವಾ ಯಾಕೀ ಥರ ನಮ್ಮ ಸ್ನೇಹಕ್ಕೆ ನನ್ನ ನಂಬಿಕೆಗೆ ಮೋಸ ಮಾಡೆª ಅನ್ನೋ ಪ್ರಶ್ನೆಯನ್ನ ಕೇಳ್ಳೋಕೂ ಹೋಗಿಲ್ಲ.
ಮತ್ತೂಂದು ವಿಷ್ಯ ಹೇಳಲೇಬೇಕು- ಬರೀ ಅಂಜಲಿ ಬಾಸ್ ಬಗ್ಗೆ ಮಾತ್ನಾಡಿದ್ದನ್ನು ಮಾತ್ರ ರೆಕಾರ್ಡ್ ಮಾಡಿಲ್ಲ ಕಣ್ರೀ ಗೀತಾ, ಆಫೀಸ್‌ಲ್ಲಿ ಆಕೆ ಯಾರ ಬಗ್ಗೆ ಮಾತನಾಡಿದ್ದಾಳ್ಳೋ ಅವೆಲ್ಲವನ್ನ ರೆಕಾರ್ಡ್ ಮಾಡಿಟ್ಟುಕೊಂಡಿದ್ದಾಳೆ. ಆಫೀಸ್‌ನಲ್ಲಿ ಇವಳು ಯಾರು ಏನೇ ಮಾತನಾಡಿದ್ರೂ ಅದನ್ನು ರೆಕಾರ್ಡ್ ಮಾಡ್ಕೊಳ್ಳೋ ಕೊಳಕು ಮನಸ್ಸಿನ ಜಂತು ಗೀತಾ. ಈಕೆ ಒಂಥರಾ ಸಮಯ ಸಾಧಕಿ. ತಾನ್ ಹೇಳಿದ್ದು, ಕೇಳಿದ್ದು ಮಾಡ್ಲಿಲ್ಲ ಅಂದ್ರೆ ಮುಗ್ಧತೆ ಹಿಂದಿರೋ ಘೋರ ಮುಖದ ಪರಿಚಯ ಮಾಡಿಸುತ್ತಾಳೆ. ಈಕೆಯ ಒಳಸಂಚಿನಿಂದಾಗಿ ಈಗ ಒಂದು ಹುಡ್ಗಿ ತನ್ನ ಕೆಲಸವನ್ನು ಕಳೆದುಕೊಂಡು ಕಷ್ಟ ಪಡ್ತಿದ್ದಾಳೆ. ಹೀಗೆ, ಇನ್ನೆಷ್ಟು ಜನರ ಜೀವನದ ಜೊತೆ ಈಕೆ ಆಟ ಆಡ್ತಾಳ್ಳೋ ಗೊತ್ತಿಲ್ಲ.
ಹಾಗಾಗಿ, ಈ ಸ್ಟೋರಿಯಿಂದ ಪ್ರತಿಯೊಬ್ಬರಿಗೂ ನನ್ನ ಒಂದು ಸಲಹೆ ಏನಂದ್ರೆ, ನಿಮ್ಮ ಜೊತೆ ಯಾರೇ ಎಷ್ಟೇ ಕ್ಲೋಸ್ ಆಗಿ ಇದ್ರು ಪರ್ಸನಲ್ ವಿಷಯಗಳನ್ನು ಅತೀವ ಆಗಿ ನಂಬಿ ಶೇರ್ ಮಾಡ್ಕೊಬೇಡಿ. ಬೇರೆಯವರ ಬಗ್ಗೆ ಯಾವತ್ತೂ¤ ಇಂಥವರ ಮುಂದೆ ಹಗುರವಾಗಿ ಕೆಟ್ಟದಾಗಿ ಮಾತನಾಡಬೇಡಿ. ಅವರಿಂದ ನಿಮಗೆ ಎಷ್ಟೇ ಹರ್ಟ್ ಆಗಿದ್ರೂ, ಅವ್ರ ಪರ್ಸನಲ್ ವಿಷ್ಯಗಳು ನಿಮಗೆ ಗೊತ್ತಿದ್ರೂ ಕೂಡ ಶೇರ್ ಮಾಡಬೇಡಿ, ಯಾಕಂದ್ರೆ ಯಾವ ಹುತ್ತದಲ್ಲಿ ಯಾವ ಹಾವು ಇರುತ್ತೋ ಯಾವನಿಗೆ ಗೊತ್ತು ಅಲ್ವಾ?
– ಮಧುಶ್ರೀ
ಬೆಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ
Belthangady: ಈ ಪುಟ್ಟ ಪೋರನಿಗಿದೆ 300 ವಿದೇಶಿ ಹಣ್ಣಿನ ಗಿಡ ಪರಿಚಯ!
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.