ಅಭಿಮಾನದ ಭುವನೇಶ್ವರಿ ಮೇಡಂ


Team Udayavani, Oct 6, 2017, 12:21 PM IST

06-SAP-11.jpg

ಆಗಷ್ಟೇ ನನ್ನ ಮೇಡಂನ ಪ್ರಾಧ್ಯಾಪಕ ಜೀವನದ ಬೀಳ್ಕೊಡುಗೆ ಸಮಾರಂಭ ಕಳೆದು ಒಂದು ದಿನವಷ್ಟೇ ಮಾಸಿತ್ತು. ಹೀಗೆ ವಾಟ್ಸಾಪ್‌ನಲ್ಲಿ ಆ ಕಾರ್ಯಕ್ರಮದ ಫೊಟೋಗಳನ್ನು ಹಾಕಿ ಕಾಲಹರಣ ಮಾಡುತ್ತಿ¨ªಾಗ ಥಟ್ಟನೆ ನನ್ನ ಪಿಯುಸಿ ಗೆಳತಿಯು, “”ಇವರಿಗೆ ಅಷ್ಟು ಬೇಗ ಬೀಳ್ಕೊಡುಗೆಯೇ?” ಎಂದು ಸಂದೇಶ ಕಳುಹಿಸಿದ್ದನ್ನು ನೋಡಿ ನನಗೆ ಆಶ್ಚರ್ಯ ತಂದಿತ್ತು ! ಈ ಮಾತು ಪ್ರಸ್ತಾಪಿಸಲೊಂದು ಕಾರಣವಿದೆ. ನಾನೊಂದು ಕಾಲೇಜು, ಆಕೆ ಇನ್ನೊಂದು ಕಾಲೇಜು, ಪುತ್ತೂರಿನ ನಿವಾಸಿ, ಹೆಚ್ಚೆಂದರೆ ಪುತ್ತೂರಿನ ಶಿಕ್ಷಕ ವೃಂದದ ಚಚ್ಚೌಕದೊಳಗೆ ಎಲ್ಲಾ ಶಿಕ್ಷಕರ ಮುಖ ಪರಿಚಯವಿರುವುದು ಮಾಮೂಲು. ಆದರೆ ಈ ಶಿಕ್ಷಕಿ ಅದ್ಯಾವುದೋ ಕಾಲೇಜಿನ ವಿದ್ಯಾರ್ಥಿಗೆ ಹೇಗೆ ಪರಿಚಿತ? ಸಂಬಂಧವಿದೆ ಎಂದಾದರೆ ಆ ಬಂಧ ಮೂಡಿಸಿರಬಹುದಾದ ವಸ್ತು ಯಾವುದಾಗಿರಬಹುದು? ಎಂದು ಯೋಚಿಸಿದಾಗ ಸಿಕ್ಕ ಉತ್ತರ ಸಾಹಿತ್ಯದ ಸಂಬಂಧ. ಹೌದು, ಅವರೆಲ್ಲ ಅನತಿ ದೂರದಲ್ಲಿದ್ದರೂ ಇವರ ಬರವಣಿಗೆಗೋ, ಹಾಸ್ಯ ಲೇಖನಕ್ಕೋ ಮರುಳಾಗಿ ಅವರನ್ನೇ ಜೀವನದ ಹಾದಿಗೆ ಸಾಹಿತ್ಯದ ಮುಂದಾಳುವಾಗಿ ಸೂಚಿಸಿಕೊಂಡಿದ್ದರೆ, ನಾನು ಆ ಸಾಹಿತ್ಯದ ಹಾದಿಯ ಹೆದ್ದಾರಿಯೊಂದಿಗೆ ಪದವಿ ಜೀವನವನ್ನು ಜೊತೆಜೊತೆಗೇ ಅನುಭವಿಸಿದ್ದು ನನ್ನ ಪಾಲಿನ ಅದೃಷ್ಟ. ಇಷ್ಟೆಲ್ಲ ಸುಳಿವು ನೀಡುವಾಗಲೇ ಗೊತ್ತಾದೀತು ಆ ವ್ಯಕ್ತಿ ಯಾರೂಂತಾ? ಅವರೇ ಕನ್ನಡದ ಕುವರಿ, ಕನ್ನಡದ ಪ್ರಖ್ಯಾತ ಹಾಸ್ಯ ಲೇಖಕಿ, ಅರ್ಥಶಾಸ್ತ್ರ ಪ್ರಾಧ್ಯಾಪಕಿ ಭುವನೇಶ್ವರಿ ಹೆಗಡೆಯವರು.

ಅವರನ್ನ ಕಂಡಾಗ ಏನೋ ಸಂತೋಷ. ಒಂಥರ ಆತ್ಮೀಯತೆ ಉಕ್ಕಿ ಹರಿಯುತ್ತದೆ. ಅಷ್ಟೊಂದು ಮುಗ್ಧತೆ-ವಿನಯತೆ ಎಲ್ಲವೂ ಒಂದಾಗಿ ಅವೆಲ್ಲವೂ ಪದಗಳಾಗಿ ಅವರ ನಾಲಿಗೆಯಿಂದ ಸದಾ ಚಿಮ್ಮುತ್ತಿರುತ್ತದೆ. ಪದವಿ ಶಿಕ್ಷಣದ ಆವರಣಕ್ಕೆ ಒಳಹೊಕ್ಕೊಡನೆ ಪ್ರವೇಶಾತಿಯಲ್ಲಿ ಆದ ಎಡವಟ್ಟಿನಿಂದಾಗಿ ಮೊದಲಾಗಿ ಪರಿಚಯವಾದವರೇ ಇವರು. ಅಂದಿನ ಸ್ನೇಹಪರತೆ ವಿಸ್ತಾರಗೊಂಡಿತೇ ಹೊರತು ಇಂದಿಗೂ ಒಂದಿಂಚೂ ಕಳೆಗುಂದಿಲ್ಲ. ಹೀಗೆ ಅವರನ್ನ ಅರಸಿ ಹೋಗಿ ಮಾತನಾಡಿದೆ. ಅವರೂ ಬಹಳ ಆತ್ಮೀಯರಾಗಿ ಮಾತನಾಡಿದರು. ಸಂಬಂಧ ಬರೀ ನಿಮಿಷ¨ªಾದರೂ ಅವರ ಮಾತುಗಾರಿಕೆ ಸುದೀರ್ಘ‌ ಸಂಬಂಧಗಳ ಪುರಾವೆಗಳಂತಿತ್ತು. ಎಲ್ಲವೂ ಆಯಿತು, ಕಾಲೇಜು ಪ್ರಾರಂಭವಾಯಿತು. ಪೀರಿಯೆಡ್‌ ಸಾಗಿ ಮುಂದೆ ಹೋಗುತ್ತಿರಲು ಅರ್ಥಶಾಸ್ತ್ರ ವಿಷಯದ ಅವಧಿ ಬಂದಾಗ ತರಗತಿಗೆ ಇವರ ಆಗಮನ. ಎಲ್ಲರೊಂದಿಗೆ ನನ್ನ ಕುಶಲ ಸಮಾಚಾರ ವಿಚಾರಿಸಿದರು. ತರಗತಿಯ ಅವಧಿ ಕಳೆದೊಡನೆ ನಡೆದೇ ಬಿಟ್ಟರು ಹೊರಕ್ಕೆ. ಹಮ್ಮು ಬಿಮ್ಮಿಲ್ಲದ ನಡಿಗೆ ! ಪ್ರವೇಶಾತಿಯ ಆರಂಭದಲ್ಲೆ ಅವರು ಹೇಳಿದಂತೆ ಪ್ರಥಮ ಸೆಮಿಸ್ಟರ್‌ನ ಪಠ್ಯಪುಸ್ತಕವನ್ನು ಉಚಿತವಾಗಿಯೇ ನೀಡಿದರು. ಕಾಲೇಜಿನ ಅಲಿಖೀತ ಶಾಸನದಂತೆ ತರಗತಿಗೆ ಆಗಮಿಸುವ ಎಲ್ಲಾ ಶಿಕ್ಷಕರಿಗೂ ಅವರವರ ಪ್ರವಚನ, ಹಾವಭಾವದ ಅನುಸಾರವಾಗಿ ಅಡ್ಡ ನಾಮವ ಸೂಚಿಸುವ ಪರಿ ಇದ್ದದ್ದೇ. ನಮ್ಮ ಮೇಡಂ ವಯಸ್ಸಿನಲ್ಲಿ ಹಿರಿಯರಾಗಿದ್ದು , ಅವರ ಮಾತಿನ ಮುಗ್ಧತೆಯನ್ನು ಕಂಡುಕೊಂಡ ಗೆಳೆಯರೆಲ್ಲರೂ ಎಲ್ಲರಂತೆ ಇವರಿಗೂ ಒಂದು ಹೆಸರನ್ನು ನಮ್ಮ ಕಡೆಯಿಂದ ನೇತುಬೀಳಿಸಿದರು. ಆದರೆ ನಾ ಅದರ ಕಡೆ ವಾಲಿದವನೇ ಅಲ್ಲ. ಅದಲ್ಲದೇ ಆ ಯೋಚನೆಯ ಗುಂಗಿಗೆ ಇಳಿದವನೇ ಅಲ್ಲ. ಏಕೆಂದರೆ, ಅವರನ್ನು ಕಂಡಾಗಲೆಲ್ಲ ಗೌರವದ ಭಾವನೆ ನನ್ನ ಮನದಿಂದ ಹೊರಸೂಸುತ್ತಿತ್ತು.

ಇಷ್ಟೆಲ್ಲ ವಿಚಾರಗಳೆಲ್ಲವೂ ಕಳೆದಿದ್ದರೂ ಅವರ ಸಾಹಿತ್ಯದ ಸಾಧನೆಯ ಬಗ್ಗೆ ನನ್ನ ಮಂಕುಬುದ್ಧಿಗೆ ಜ್ಞಾನವಾಗುವಷ್ಟರಲ್ಲಿ ತಡವಾಗಿತ್ತು. ಅವರು ಬರೆದ ಒಂದೊಂದು ಗ್ರಂಥವೂ ಅಪೂರ್ವ ಪರಿಣಾಮ ಬೀರುವಂತಾದ್ದು. ಎಂಥದು ಮಾರಾಯೆ, ನಕ್ಕು ಹಗುರಾಗಿ, ವಲಲ ಪ್ರತಾಪ, ಹಾಸಾ ಭಾಸಾ, ಬೆಟ್ಟದ ಭಾಗೀರಥಿ, ಮುಗುಳು, ಕೈಗುಣ ಬಾಯಿಗುಣ, ಪುಟ್ಟಿಯ ಪಟ್ಟೆ ಹುಲಿ, ಮಾತಾನಾಡಲು ಮಾತೇ ಬೇಕು- ಇವೆಲ್ಲವೂ ಪುಸ್ತಕ ರೂಪದಲ್ಲಿದ್ದರೆ, ಅನೇಕ ಪತ್ರಿಕೆಗಳಿಗೆ ಅಂಕಣಕಾರ್ತಿಯಾಗಿಯೂ ಸೇವೆ ಸಲ್ಲಿಸಿದವರಿವರು. ಅದಲ್ಲದೆ ಇವರ ಅನೇಕ ಪ್ರಬಂಧಗಳು ಶಾಲಾ ಪಠ್ಯಗಳಲ್ಲಿ ಕಾಣಬಹುದಾಗಿದೆ. ಇನ್ನು ಅವರ ಸಾಧನೆಗಳ ಮೈಲಿಗಳನ್ನೇ ಗುರುತಿಸಿಕೊಂಡು ಶ್ರೀಧರ ಪ್ರಶಸ್ತಿ, ಬಿಗ್‌ ಎಫ್ ಎಮ್‌ನ ಬಿಗ್‌ ಕನ್ನಡತಿ ಪ್ರಶಸ್ತಿ, ಹುಬ್ಬಳ್ಳಿಯ ಅವ್ವ ಪ್ರತಿಷ್ಠಾನದ ಅವ್ವ ಪ್ರಶಸ್ತಿಗಳು ಮುಡಿಗೇರಿವೆ. ಹಲವಾರು ಕ್ಷೇತ್ರದಲ್ಲಿ ತೊಡಗುವವರಾಗಿದ್ದರಿಂದ ಗುರುತಿಸಿ ಹೆಸರಿಸಿದ ರೀತಿಯೇ ಬೇರೆ. ಅದೆಷ್ಟೋ ಸಾಧನಾ ಕಿರೀಟಗಳು, ಸನ್ಮಾನ ಪತ್ರಗಳು ಅವರ ಮನೆಯ ಗಾಜಿನ ಕಪಾಟುಗಳಲ್ಲಿ ತುಂಬಿಹೋಗಿವೆ.ಆಳ್ವಾಸ್‌ ನುಡಿಸಿರಿಯ ವೇದಿಕೆಯಲ್ಲಿನ ಭಾಷಣದಿಂದ ತೊಡಗಿ ಆಕಾಶವಾಣಿಯ ನೇರಪ್ರಸಾರದ ಕಾರ್ಯಕ್ರಮದ ವರೆಗೂ ಹೊನಲು ಹರಿಸುತ್ತಿದ್ದಾರೆ. ತಮ್ಮ ಹಾಸ್ಯ ಬಿತ್ತರಗೊಳಿಸಲು ಅವೆಷ್ಟೋ ಘನ ವೇದಿಕೆಯ ಪಾಂಡಿತ್ಯ ವಹಿಸಿದ ಇವರು ಕೇವಲ ಈ ನಾಡಿಗೆ ಸೀಮಿತವಾಗಿರಿಸದೇ ವಿದೇಶಗಳಲ್ಲಿಯೂ ತಮ್ಮ ಸಾಹಿತ್ಯ ಪ್ರಪಂಚದ ಡೇರೆಯನ್ನ ತೆರೆದಿಟ್ಟವರು. ಕೇವಲ ಬಾಯಿಮಾತಿನಲ್ಲೇ ಕಲ್ಪನಾಧಾರಿತವಾಗಿ ಕಾಣುತ್ತಿದ್ದ- ಕೇಳುತ್ತಿದ್ದ ಖ್ಯಾತ ಸಾಹಿತಿಯಾದ ವೈದೇಹಿಯವರು ಹಾಗೂ ಹನಿಗವನಗಳ ಒಡೆಯ ಡುಂಡಿರಾಜ್‌ರವರನ್ನು ಕಾಲೇಜಿನ ಕಾರ್ಯಕ್ರಮಕ್ಕೆ ಆಮಂತ್ರಿಸುವ ಮೂಲಕ ಆ ಮಹಾನ್‌ ವ್ಯಕ್ತಿಗಳ ನೇರ ದರ್ಶನ ಮಾಡಿಸಿದವರು ಇವರೇ. ಹೀಗೇ ಒಂದೇ ಎರಡೆ? ಹತ್ತಾರು ಹಾಸ್ಯ ಲೇಖನಗಳ ಒಡತಿ, ಹಾಸ್ಯ ಭಾಷಣಕ್ಕೆಂದೇ ಹೆಸರಾದವರು, ಸಾಹಿತ್ಯ ಲೋಕವನ್ನು ಆಕ್ರಮಣಗೈದವರು. ಅವರೇ ನಮ್ಮ ಭುವನೇಶ್ವರಿ ಮೇಡಂ.

ಅವರ ಹಾಸ್ಯ ಬರವಣಿಗೆ ಮೂಲಕವೇ ತನ್ನ ಓದುಗರ ಬಳಗವನ್ನೇ ಕಟ್ಟಿಕೊಂಡ ಇವರಿಗೆ ಅಭಿಮಾನಿಗಳ ಸಹಯೋಗದಲ್ಲಿ ಊರ ಮಹಾಜನರ ಮಧ್ಯದಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಅಲ್ಲದೇ ಮೇಡಂ ಈ ಹಿಂದೆ ಕಳೆದ ಸಾಹಿತ್ಯ ಜೀವನದಲ್ಲಿ ಇತರರು ತಮ್ಮ ಬಗ್ಗೆ ಆಡುವ ಮಾತ ತಿಳಿಯಲು ಬನಸಿರಿ ಅಭಿನಂದನಾ ಗ್ರಂಥದ ಬಿಡುಗಡೆಯೂ ಅಂದೇ ಆಗಿತ್ತು. ಒಟ್ಟಿನಲ್ಲಿ ಎಲ್ಲರೂ ಕಾತರರಾದ ಆ ಶುಭಗಳಿಗೆ ಬಂದೇ ಬಿಟ್ಟಿತು. ಕಾರ್ಯಕ್ರಮ ಆರಂಭವಾಗಿತ್ತು. ನನ್ನನ್ನೂ ಸೇರಿ ಅವರ ಓದುಗರ ಬಳಗ- ಶಿಷ್ಯ ಬಳಗ ಒಂದೇ ಮಂಟಪದಡಿ ನೆರೆದಿತ್ತು. ಅಭಿನಂದನಾ ಗ್ರಂಥವಾದ ಬನಸಿರಿಯನ್ನು ಅನಾವರಣಗೊಳಿಸಲು ಅದನ್ನು ಪಲ್ಲಕ್ಕಿಯಲ್ಲಿ ವೇದಿಕೆಯತ್ತ ಹೊತ್ತೂಯ್ಯವ ವಿಶೇಷ ಸಾಹಸಕ್ಕೆ ನಾನೂ ಕೂಡ ಕೈಜೋಡಿಸಿದೆ. 

ಗಣೇಶ ಕುಮಾರ್‌
ಪತ್ರಿಕೋದ್ಯಮ ವಿಭಾಗ ವಿ. ವಿ. ಕಾಲೇಜು, ಮಂಗಳೂರು

ಟಾಪ್ ನ್ಯೂಸ್

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

BGV-CM-SS

Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ

Frud

Mangaluru: ಆನ್‌ಲೈನ್‌ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ

MCC-BankArrest

Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್‌ ಅಧ್ಯಕ್ಷನ ಬಂಧನ

Ashok-Vijayendra

Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್‌ ಉತ್ಸವ’ ಮಾಡಲ್ಲ: ಬಿಜೆಪಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

BGV-CM-SS

Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ

Frud

Mangaluru: ಆನ್‌ಲೈನ್‌ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.