ವ್ಯಕ್ತಿತ್ವದ ವ್ಯಾಖ್ಯಾನ ಮಾಡುವ ಬಿಗಿಲ್
Team Udayavani, Feb 7, 2020, 4:58 AM IST
ತಮಿಳಿನ ಬಿಗಿಲ್ ಚಿತ್ರ ಕಲಾತ್ಮಕವಾಗಿಯೂ ಚೆನ್ನಾಗಿದೆ. ಕಮರ್ಷಿಯಲ್ ಧೋರಣೆಯಲ್ಲಿ ನೋಡಿದರೂ ಚೆನ್ನಾಗಿದೆ. ಅಟ್ಲೀ ಕುಮಾರ್ ನಿರ್ದೇಶನದ ಈ ಚಿತ್ರ ಕಳೆದ ಆಕ್ಟೋಬರ್‌ನಲ್ಲಿ ತೆರೆಕಂಡಿತು. “ಎÇÉಾ ಮಹಿಳೆಯರಿಗೋಸ್ಕರ ಸಮರ್ಪಿಸಲಾದ ಚಿತ್ರ’ ಎಂದು ನಿರ್ಮಾಪಕರು ಹೇಳಿಕೊಂಡಿದ್ದಾರೆ.
ಈ ಚಿತ್ರದಲ್ಲಿ ತಮಿಳು ನಟ ವಿಜಯ್ ದ್ವಿಪಾತ್ರದಲ್ಲಿ ನಟನಾಗಿ ನಟಿಸಿ¨ªಾರೆ. ಆದರೆ, ಅವರೊಬ್ಬರೇ ನಾಯಕ ನಟ ಎನ್ನುವಂತಿಲ್ಲ. ಸಿನಿಮಾದಲ್ಲಿ ಬರುವ ಪ್ರತಿಯೊಂದು ಪಾತ್ರವೂ ಪ್ರಮುಖವಾಗಿ ಕಾಣುತ್ತದೆ. ಪ್ರೇಮಕತೆಯಾದರೂ, ಸಾಹಸ ದೃಶ್ಯಗಳು ಮತ್ತು ಹಾಡುಗಳೊಂದಿಗೆ ಚಿತ್ರವು ಕಲಾತ್ಮಕವಾಗಿ ಮೂಡಿಬಂದಿದೆ. ಆದ್ದರಿಂದಲೇ ಚಿತ್ರ ಮೊದಲಿನಿಂದ ಕೊನೆಯವರೆಗೂ ವೀಕ್ಷಕರ ಕುತೂಹಲವನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಮಹಿಳಾ ಫುಟ್‌ಬಾಲ್ ತಂಡಕ್ಕೆ ಮಾರ್ಗದರ್ಶನ ನೀಡುವ ಕೋಚ್ ಒಬ್ಬರ ಹಿನ್ನೆಲೆಯನ್ನು ಆಧರಿಸಿ ಸಾಗುವ ಚಿತ್ರವಿದು. ಅದೇ ವೇಳೆಗೆ ಹೆಣ್ಣುಮಕ್ಕಳ ಮೇಲೆ ಆಗುವ ಶೋಷಣೆಯನ್ನೂ ಸೂಕ್ಷ್ಮವಾಗಿ ತಿಳಿಸುವ ದೃಶ್ಯಗಳೂ ಮನಮುಟ್ಟುತ್ತವೆ. ಎಡರು ತೊಡರುಗಳನ್ನು ಮೆಟ್ಟಿ ನಿಂತು ಸಾಧನೆಯ ಹಾದಿಯನ್ನು ಆಯ್ಕೆ ಮಾಡಿಕೊಳ್ಳುವ ಮಹಿಳೆಯರು ಸದಾ ಮಾದರಿಯಾಗಿ ನಿಲ್ಲುತ್ತಾರೆ. ಅಂತಹ ಸಂದೇಶ ಈ ಚಿತ್ರದಲ್ಲಿ ಇರುವುದರಿಂದ ನಿಜಕ್ಕೂ ಸಕಾರಾತ್ಮಕ ಚಿತ್ರವೆನಿಸಿತು. ಈ ಚಿತ್ರದ ಹಾಡುಗಳೂ ಅದ್ಭುತವಾಗಿವೆ. ಅದರಲ್ಲೂ “ಸಿಂಗಪೆಣ್ಣೆ …’ ಎಂಬ ಹಾಡು ಮತ್ತೆ ಮತ್ತೆ ಗುನುಗುವಂತಿದೆ.
ಒಬ್ಬ ವ್ಯಕ್ತಿಯನ್ನು ಮೇಲ್ನೋಟದಲ್ಲಿಯೇ ಅಳೆಯಬಾರದು ಎಂದು ಹೇಳುವ ಸಿನಿಮಾ ಇದು. “ನಾನು ದಪ್ಪ ಇದ್ದೇನೆ, ಕಪ್ಪಾಗಿದ್ದೇನೆ’ ಎಂದೆಲ್ಲ ಕೀಳರಿಮೆ ಹೊಂದಿರುವ ಬಹಳಷ್ಟು ಜನರಿಗೆ, “ಸಾಧನೆಗೆ ಸೌಂದರ್ಯ ಮುಖ್ಯವಲ್ಲ , ಬದಲಾಗಿ ಸಾಧಿಸುವ ಛಲ ಇರಬೇಕು’ ಎಂಬ ಸಂದೇಶ ಸಾರುತ್ತದೆ.
ಗ್ರೀಷ್ಮಾ ಭಂಡಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.