ಜನುಮ ದಿನ
Team Udayavani, Feb 1, 2019, 12:30 AM IST
ಎಲ್ಲರ ಜೀವನದಲ್ಲೂ ಜನುಮ ದಿನ ಅಂದರೆ ಏನೋ ಖುಷಿ. ಅದರಲ್ಲೂ ನಮ್ಮಂತಹ ವಿದ್ಯಾರ್ಥಿಗಳಿಗೆ ಹೇಳಬೇಕೆ? ನಾವೆಲ್ಲ ಶಾಲೆಯಲ್ಲಿ ಇರುವಾಗ ಚಾಕಲೇಟ್ ಹಂಚುವ ಪದ್ಧತಿ ಇತ್ತು. ಆಗ ಎಲ್ಲರಿಗೂ ಒಂದೊಂದು ಚಾಕಲೇಟ್ ; ಆದರೆ, ಟೀಚರ್ ಮತ್ತು ಕ್ಲೋಸ್ ಫ್ರೆಂಡ್ಸ್‌ಗಳಿಗೆ ಎರಡೆರಡು. ಆಗ ಶಾಲೆಗೆ ಕಲರ್‌ಡ್ರೆಸ್ ಹಾಕಿ ಹೋಗೋದು ಅಂದರೆ ಏನೋ ಒಂಥರ ಗತ್ತು. ಆ ದಿನ ಎಲ್ಲರೂ ಒಳ್ಳೆ ದುಂಬಿಗಳ ರೀತಿಯಲ್ಲಿ ನಮ್ಮ ಹಿಂದೆಮುಂದೆ ಸುತ್ತುತ್ತ ಇರ್ತಾರೆ. ಅದು ಆಗ ನಮ್ಮಲ್ಲಿ ದೊಡ್ಡ ಹೀರೋ/ಹೀರೋಯಿನ್ ಎನ್ನುವ ಭಾವನೆ ಮೂಡಿಸುತ್ತದೆ.
ಬೆಳೆಯುತ್ತ ಬೆಳೆಯುತ್ತ ಪ್ರಾಥಮಿಕ ಶಾಲೆ ಮುಗಿಯಿತು, ಹೈಸ್ಕೂಲ್ ಬಂತು. ಈಗ ಹುಟ್ಟಿದ ಹಬ್ಬಕ್ಕೆ ಚಾಕಲೇಟ್ ಸಾಕಾಗುವುದಿಲ್ಲ. ಅದರೊಂದಿಗೆ ಪಾರ್ಟಿಯೂ ಬೇಕು. ಹೀಗೆ ಒಂದು ಸಲ ನಾನು ನನ್ನ ಬರ್ತ್‌ಡೇಗೆ ಪೆಪ್ಸಿ ಪಾರ್ಟಿ ಕೊಟ್ಟಿದ್ದೆ ; ಅದು ಒಂದು ಸಣ್ಣ ಅಂಗಡಿಯಲ್ಲಿ ! ಆಗ ನನ್ನೊಂದಿಗೆ ನನ್ನ ಗೆಳತಿ ಮತ್ತು ನನ್ನ ಸೀನಿಯರ್ ಒಟ್ಟು ಐದು ಜನ ಇದ್ದರು. ಅವರಿಗೆ ಪಾರ್ಟಿ ಕೊಟ್ಟೆ. ನಾನು ಸ್ವಲ್ಪ ಅವಸರ ಸ್ವಭಾವದವಳು. ಪೆಪ್ಸಿ ತಿನ್ನುವಾಗ ಒಂದೇ ಬಾರಿ ಎಳೆದುಬಿಟ್ಟೆ. ಅದು ಹೋಗಿ ನನ್ನ ಸೀನಿಯರ್ ಮೇಲೆ ಕ್ಷೀರಾಭಿಷೇಕದ ರೀತಿಯಾಯಿತು. ಅವರು ಹುಸಿಮುನಿಸು ತೋರಿದರು. ನಾನು ನಕ್ಕಿದ್ದೇ ನಕ್ಕಿದ್ದು!
ಹೀಗೆ ಒಂದೊಂದು ಸಿಹಿಯಾದ ನೆನಪುಗಳನ್ನೊಳಗೊಂಡಿರುತ್ತದೆ ಈ ಜನುಮ ದಿನ. ಈಗ ಕಾಲೇಜಿನಲ್ಲಿ ಕೇಕ್ ತಂದು ಬರ್ತ್‌ಡೇ ಆಚರಣೆ ಮಾಡ್ತಾರೆ. ಆ ದಿನ ಯಾರು ಯಾವ ರೀತಿ ಗಿಫ್ಟ್ ಕೊಡ್ತಾರೆ, ಯಾವ ರೀತಿ ಸರ್‌ಪ್ರೈಸ್ ಕೊಡ್ತಾರೆ ಎಂದು ಹೇಳುವುದು ಕೊಂಚ ಕಷ್ಟ.
ಆದರೆ, ಈಗೀಗ ಕೆಲವರು ಹುಟ್ಟಿದ ಹಬ್ಬ ಎಂದು ಅತಿಯಾಗಿ ಆಚರಣೆ ಮಾಡ್ತಾರೆ. ಅನಗತ್ಯ ಕೇಕ್‌ನ್ನು ತಂದು ತಿನ್ನದೆ ಎಸೆಯುವವರಿದ್ದಾರೆ. ಇಂಥ ಆಡಂಬರ ಅನಗತ್ಯ. ಹುಟ್ಟಿದ ದಿನವೆನ್ನುವುದು ಮುಂದಿನ ಬದುಕಿಗೆ ಸ್ಫೂರ್ತಿಯನ್ನು ನೀಡುವಂತಾಗಬೇಕು. ಕೇವಲ ಒಂದು ದಿನದ ಸಂಭ್ರಮವಾಗಿ ಸೀಮಿತಗೊಳ್ಳಬಾರದು.
ಅಂದ ಹಾಗೆ, ಹುಟ್ಟಿದ ದಿನ ಯಾರಾದರೂ ಸೇವಾಕಾರ್ಯ ಮಾಡಿ ಅರ್ಥಪೂರ್ಣವಾಗಿ ಆಚರಿಸಿದ್ದಿದೆಯೆ?
ಪ್ರೇಕ್ಷಾ
ದ್ವಿತೀಯ ಬಿ. ಇ., ಶ್ರೀಮಧ್ವ ವಾದಿರಾಜ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬಂಟಕಲ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.