ಬುಲೆಟ್ ರಾಜನಾಗೋ ರಾಯಲ್ ಆಸೆ
Team Udayavani, Jul 13, 2018, 6:00 AM IST
ಈಗಿನ ಕಾಲದಲ್ಲಿ ಸದ್ದುಗದ್ದಲಗಳಿಲ್ಲದೇ ಏನೂ ನಡೆಯುವುದಿಲ್ಲ ಅಂತಾರೆ. ಅದೆಷ್ಟೋ ಜನ ಶಾಂತಿ ಶಾಂತಿ ಅಂತಿದ್ರೂ ಕೂಡ ಸದ್ದಿನಲ್ಲಿರೋ ಮಜಾ ಯಾವುದರಲ್ಲಿಯೂ ಇಲ್ಲ. ನನ್ನ ರಾಯಲ್ ಹೀರೋ ಯಾರು ಗೊತ್ತಾ? ಸದ್ದು ಮಾಡ್ಕೊಂಡೇ ನನ್ನ ಮನಗೆದ್ದ ಹೀರೋ, ನನ್ನ ಪ್ರೀತಿಯ ರಾಯಲ್ ಹೀರೋ, ಯಾವಾಗ್ಲೂ ನನ್ನ ಕಾಡ್ತಾ ಇರೋ ಅದೇ “ರಾಯಲ್ ಎನ್‌ಫೀಲ್ಡ್ ಬುಲೆಟ್’! ಸದ್ದು ಮಾಡುತ್ತಲೇ ನನ್ನ ಮನಗೆದ್ದು ಬಿಟ್ಟ ರಾಯಲ್ ಹೀರೋ ಇವನೇ.
ಎಲ್ಲರನ್ನೂ ಮನ ಸೆಳೆಯೋ ಮಾಯೆ ನನ್ನ ರಾಯಲ್ ಹೀರೋನಿಗಿದೆ. ನಾನು ನನ್ನ ಹೀರೋನ ಮೊದಲು ನೋಡಿದ್ದು ಇಷ್ಟಪಟ್ಟಿದ್ದು ಅಂದರೆ, ನನ್ನ ಗೆಳೆಯನೊಬ್ಬ ರೈಡ್ ಮಾಡುತ್ತಿರುವಾಗ. ಅದರ ಲುಕ್, ಅದರ ಖದರ್, ಅದರ ಆ್ಯಟಿಟ್ಯೂಡ್… ಅಬ್ಬಬ್ಟಾ ! ನನಗೂ ಗಾಡಿ ಅಂತ ಬೇಕೆಂದರೆ ಇಂಥದ್ದೇ ಬೇಕು ಎಂದುಕೊಂಡೆ!
ಅಷ್ಟಕ್ಕೂ ಈ ನನ್ನ ಹೀರೋ ಬರೀ ಹುಡುಗರ ಮನಸ್ಸು ಗೆದ್ದಿರೋದಲ್ಲದೇ ಹುಡುಗಿಯರ ಮನಸ್ಸನ್ನೂ ಗೆಲ್ಲುವುದರಲ್ಲಿ ಎತ್ತಿದ ಕೈ ಅನ್ನಿಸಿಕೊಂಡಿದ್ದಾನೆ. ನನ್ನ ಹೀರೋ ಜೊತೆ ಒಂದ್ಸಾರಿ ಸವಾರಿಗೆ ಹೊರಟ್ರೆ ಸಾಕು, ಅದರ ಮಜಾನೇ ಬೇರೆ. ಅವನ ಹೆಸರಿಗೆ ತಕ್ಕಹಾಗೆ ರಾಯಲ್ ಫೀಲ್ ಕೊಡುತ್ತಾನೆ. ಲೈಫ್ನಲ್ಲಿ ಒಂದ್ಸಾರಿ ನನ್ ಹೀರೋ ಜೊತೆ ಸವಾರಿ ಮಾಡಿದರೆ ಅವನ ಪವರ್, ಆ ಖಡಕ್ ಎಂಟ್ರಿ ನಿಮಗೇ ಗೊತ್ತಾಗುತ್ತದೆ. ಅವನೊಂದಿಗೆ ನಾನೇನಾದ್ರೂ ರೋಡ್‌ನಲ್ಲಿ ಎಂಟ್ರಿ ಕೊಟ್ರೆ ಸಾಕು, ಅದೆಂಥ ಮನಃಸ್ಥಿತಿಯಲ್ಲಿದ್ದವರೂ ಒಂದಲ್ಲ ಒಂದು ಬಾರಿ ತಿರುಗಿ ನೋಡಿಯೇ ನೋಡ್ತಾರೆ. ಅಷ್ಟೊಂದು ಪವರ್ ರಾಯಲ್ ಹೀರೋನಿಗಿದೆ. ಗುಡು ಗುಡುಗಿಸ್ತಾನೇ ಅದೆಷ್ಟೋ ಜನರ ನಿದ್ದೆಗೆಡಿಸಿದ್ದಾನೆೆ ಇವನು. ಇವನು ಪಡ್ಡೆ ಹುಡುಗರ ಹೃದಯ ಗೆದ್ದಂತೆ ತನ್ನ ರಾಯಲ್ ಎಂಟ್ರಿಯಿಂದಲೇ ಹುಡುಗಿಯರನ್ನೂ ಸಹ ಸೆಳೆಯುವ ತುಂಟ!
ಕಾಲೇಜಿನಲ್ಲಂತೂ ಇವನದ್ದೇ ಹವಾ. ಈ ನನ್ನ ಹೀರೋನನ್ನು ನೋಡಿ ಹೊಟ್ಟೆ ಉರಿಸಿಕೊಳ್ಳುವವರು ಇದ್ದರೂ ನನ್ನದೇ ಆದ ಖಡಕ್ ಎಂಟ್ರಿಗೆ ನನ್ನ ರಾಯಲ್ ಹೀರೋ ಸಾಥ್ ನೀಡುವನು.
ಶ್ರೀನಿಧಿ ರಾವ್ ಅಂಡಾರು, ದ್ವಿತೀಯ ಪತ್ರಿಕೋದ್ಯಮ ಪದವಿ, ಭುವನೇಂದ್ರ ಕಾಲೇಜು, ಕಾರ್ಕಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.