ಪ್ರಸಂಗ: ಬಾಲಲೀಲೆ
Team Udayavani, Nov 30, 2018, 6:00 AM IST
ಬಾಲ್ಯದ ಜೀವನ ಸುಂದರವಾದ, ಸಂತೋಷದಿಂದ ಕೂಡಿದ ನೆನಪುಗಳಾಗಿರುತ್ತದೆ. ಬಾಲ್ಯದಲ್ಲಿ ಕಲಿತ ಶಿಕ್ಷಣ ನಮ್ಮ ಮುಂದಿನ ಜೀವನದ ಭವಿಷ್ಯವನ್ನು ರೂಪಿಸಬಲ್ಲದು. ಬಾಲ್ಯದಲ್ಲಿ ನಡೆದ ದಾರಿ, ತಿಂದ ತಿಂಡಿಗಳು, ಆಟವಾಡಿದ ಸ್ಥಳಗಳು, ಜಗಳವಾಡಿದ ಕ್ಷಣಗಳು, ಕುಣಿದು ಕುಪ್ಪಳಿಸಿದ ನೃತ್ಯಗಳು ಇಂದು ಕೇವಲ ದೃಶ್ಯದಂತೆ ಕಾಣುತ್ತದೆ. ಯಾವುದೇ ಜಾತಿ, ಮತ, ಧರ್ಮಭೇದವಿಲ್ಲದೆ ಸ್ನೇಹಿತರು ಗುಂಪಾಗಿ ಖುಷಿ ಖುಷಿಯಿಂದ ನಲಿದಾಡುತ್ತಿದ್ದೆವು. ಆ ಒಂದು ಬಾಲ್ಯದ ಪಯಣ ಬಾನಲ್ಲಿ ಹಾರುವ ಹಕ್ಕಿಗಳ ಗುಂಪುಗಳಂತಿತ್ತು. ಬಾಲ್ಯದಲ್ಲಿ ಶಿಕ್ಷಕರು ನಮಗೆ ಬಹಳ ಹತ್ತಿರವಾಗುತ್ತಿದ್ದರು. ನಮ್ಮ ಮನೆಯವರ, ನೆರೆಹೊರೆಯವರ ಮತ್ತು ಆ ಶಾಲೆಗೆ ಒಳಪಟ್ಟ ಊರಿನ ಎಲ್ಲರ ಪರಿಚಯ ಇರುತ್ತಿತ್ತು. ನಮ್ಮ ಮನೆಯಿಂದ ಸರಿಸುಮಾರು ಮೂರು ಕಿ.ಮೀ. ದೂರ ಶಾಲೆಗೆ ಹೋಗಲು ಇರುವುದರಿಂದ ನಮ್ಮಾಚೆಯಿಂದ ಸುಮಾರು ಹತ್ತು ಮಕ್ಕಳು ಗುಂಪಾಗಿ ಹೋಗುತ್ತಿದ್ದೆವು. ಹೆಣ್ಣು-ಗಂಡು ಎಂಬ ಭೇದವಿಲ್ಲದೆ ಗುಂಪಾಗಿ ಸ್ನೇಹಿತರೊಡನೆ ಶಾಲೆಗೆ ಹೋಗುವ ಅವಸರವೇ ವೇಗದೂತ ಬಸ್ಸಿನಂತೆ ಇರುತ್ತಿತ್ತು. ಶಾಲೆಗೆ ತಲುಪಿದ ನಂತರ ತರಗತಿಯ ಗೆಳೆಯರು ಬೇರೆಯೇ ಇರುತ್ತಾರೆ. ಒಂದೆಡೆ ಊರಿನ ಶಾಲೆಗೆ ಒಟ್ಟಿಗೆ ಬರುವ ಸ್ನೇಹಿತರಾದರೆ, ಇನ್ನೊಂದೆಡೆ ತರಗತಿಯಲ್ಲಿ ಒಟ್ಟಿಗೆ ಕಲಿತು ಓದುವ ಮತ್ತು ಆಟವಾಡುವ ಸ್ನೇಹಿತರು. ತರಗತಿಯಲ್ಲಿ ಕಲಿಯುವವರು ಒಂದು ಗುಂಪಾದರೆ, ಕಡಿಮೆ ಅಂಕ ಪಡೆಯುವವರ ಇನ್ನೊಂದು ಗುಂಪು. ತರಗತಿಯ ಹೊರಗೆ ಅಂಗಳದಲ್ಲಿ ಇವೆರಡೂ ಗುಂಪು ಒಂದಾಗಿ ಆಟದಲ್ಲಿ ಮಗ್ನರಾಗುತ್ತಿದ್ದರು. ಬಾಲ್ಯದಲ್ಲಿ ಅಂಜಿಕೆ, ಕೋಪ ಇಂತಹ ಕೆಟ್ಟ ಭಾವನೆಗಳು ಉದ್ಭವಿಸುವುದು ಬಹಳ ಕಡಿಮೆ. ಬಾಲ್ಯದ ಸ್ನೇಹಿತರೆಂದರೆ ನಮ್ಮ ಕಷ್ಟ-ಸುಖವನ್ನು ಮತ್ತು ನಮ್ಮ ಗುಣನಡತೆಯನ್ನು ಸರಿಯಾಗಿ ಅರಿತುಕೊಂಡಿರುತ್ತಾರೆ. ತರಗತಿಯ ಹೊರಗೆ ಹೋಗಬೇಕಾದರೆ ಒಟ್ಟಿಗೆ ಹೋಗುವುದು, ಒಟ್ಟಿಗೆ ಶೌಚಾಲಯಕ್ಕೆ ಹೋಗುವುದು, ಒಟ್ಟಿಗೆ ಊಟ ಮಾಡುವುದು, ಟೀಚರ್ ಮನೆ ಕೆಲಸ ಕೊಟ್ಟರೆ ಯಾರೂ ಮಾಡದೇ ಒಂದು ಶಿಕ್ಷಕರ ಸಪೂರವಾದ ಬೆತ್ತದಿಂದ ಎಲ್ಲರೂ ಒಟ್ಟಿಗೆ ಪೆಟ್ಟು ತಿನ್ನುವುದು ಇನ್ನಿತರ ನಾನಾ ಸಂದರ್ಭಗಳಲ್ಲಿ ಒಟ್ಟಿಗೆ ಗುಂಪಾಗಿ ಇರುವುದೇ ಬಾಲ್ಯದ ಸ್ನೇಹಿತರು.
ಹೀಗೆಯೇ ಒಂದೊಂದು ತರಗತಿಯನ್ನು ಕಳೆದು ಮೇಲೆ ಬಂದಂತೆ ಕೊನೆಗೆ ಇಡೀ ಶಾಲೆಗೆ ಏಳನೇ ತರಗತಿಯಲ್ಲಿ ಸೀನಿಯರ್ ಆಗಿ ಬಿಡುತ್ತೇವೆ. ಶಾಲೆಯ ಹಲವು ಜವಾಬ್ದಾರಿಗಳು ಒಬ್ಬೊಬ್ಬರ ಮೇಲೆ ಇರುತ್ತದೆ. ಸರಕಾರಿ ಶಾಲೆ ಆದುದರಿಂದ ಸ್ವಲ್ಪ ಮಕ್ಕಳು ಇದ್ದಂತಹ ಶಾಲೆ, ಶಾಲಾ ನಾಯಕ, ಉಪನಾಯಕ, ವಿರೋಧ ಪಕ್ಷದ ನಾಯಕರು ಮತ್ತು ಮಂತ್ರಿಮಂಡಲ ಎಲ್ಲವೂ ನಮ್ಮ ಸ್ನೇಹಿತರೇ. ಬೆಳಿಗ್ಗೆ ಬೇಗ ಬರುವುದು, ಶಾಲೆಯ ಬೀಗ ತೆಗೆಯುವುದು, ಶಿಸ್ತು ಮಂತ್ರಿ ಶಿಸ್ತನ್ನು ಕಾಪಾಡುವುದು, ಸ್ವತ್ಛತಾ ಮಂತ್ರಿ ಸ್ವತ್ಛತೆಯನ್ನು ನೋಡಿಕೊಳ್ಳುವುದು- ಇವೆಲ್ಲವನ್ನು ನೋಡಿಕೊಳ್ಳಲು ನಾವು ಒಟ್ಟಾಗಿ ಹೋಗುತ್ತಿದ್ದೆವು. ಮುಖ್ಯ ಶಿಕ್ಷಕರು ಹೊರಗೆ ಹೋಗಿದ್ದಾಗ ಅವರ ಚೇಂಬರ್‌ನಲ್ಲಿ ಕುಳಿತುಕೊಳ್ಳುವುದು, ನೀರಿನ ಟ್ಯಾಂಕ್ ಶಿಕ್ಷಕರ ಕಚೇರಿಯಲ್ಲಿ ಇದ್ದುದರಿಂದ ಬೇಕಂತಲೇ ಅದರ ನೀರನ್ನು ಬಿಟ್ಟು ಅದನ್ನು ಗುಡಿಸಿ ಹೊರಗೆ ಹಾಕಲು ತರಗತಿ ಬಿಟ್ಟು ಹೋಗುವುದು, ಕಸಕ್ಕೆ ಬೆಂಕಿ ಹಾಕಲು ಒಂದು ಗಂಟೆ ತೆಗೆದುಕೊಳ್ಳುವುದು, ಒಂದು ಪಪ್ಪಾಯಿ ಮರದಿಂದ ಪಪ್ಪಾಯಿ ತೆಗೆಯಲು ಎಲ್ಲರೂ ಒಟ್ಟಾಗಿ ಹೋಗಿ ಮರದಡಿಯಲ್ಲಿ ನಿಂತುಕೊಳ್ಳುವುದು, ಸಂಜೆಯ ವೇಳೆಯಲ್ಲಿ ಒಟ್ಟಾಗಿ ಫುಟ್‌ಬಾಲ್ ಆಡುವುದು, ಮಧ್ಯಾಹ್ನದ ಹೊತ್ತು ಗೆಳೆಯರ ಮನೆಗೆ ಹೋಗುವುದು ಇನ್ನಿತರ ಸಂದರ್ಭಗಳನ್ನು ನೆನಪಿಸಿಕೊಂಡಾಗ ಮತ್ತೆ ಬಾಲ್ಯದ ಕಡೆಗೆ ಮರಳುವ ಅನ್ನಿಸುತ್ತೆ. ಸಂಜೆ ಶಾಲೆಬಿಟ್ಟು ಮನೆಗೆ ಹೋಗುವಾಗ ಎಲ್ಲರೂ ಗುಂಪಾಗಿ ಹೋಗಿ ಒಬ್ಬೊಬ್ಬರು ಅವರವರ ಮನೆ ಬಂದಾಗ ತೆರಳುವುದು, ಗುಡ್ಡಗಾಡು ಪ್ರದೇಶವಾದುದರಿಂದ ಗುಡ್ಡೆಯಲ್ಲಿ ಸಿಗುತ್ತಿದ್ದ ನೇರಳೆ, ಮಾವು, ಸರೋಳಿ, ಗೇರುಬೀಜ, ಚೂರಿಕಾಯಿ, ಕೇಪುಳ ಹಣ್ಣು, ಅಂಬಡೆ ಇನ್ನಿತರ ಹಲವು ಕಾಯಿಗಳನ್ನು ತಿಂದುಕೊಂಡು ಮೆಲ್ಲನೆ ಮನೆ ಕಡೆಗೆ ಸಾಗುತ್ತಿದ್ದೆವು. ಈಗ ಯುವಕರಾಗಿ ಕಾಲೇಜಿನಲ್ಲಿ ಸಿಗುವ ಸಂತೋಷಕ್ಕಿಂತ ಬಾಲ್ಯದಲ್ಲಿ ಸ್ನೇಹಿತರೊಡನೆ ಕಳೆದ ಕ್ಷಣಗಳು ಜೀವನದಲ್ಲಿ ಮರೆಯಲಾಗದ ಕ್ಷಣಗಳು.
ಶ್ರೀಕಾಂತ್ ಪೂಜಾರಿ
ತೃತೀಯ ಬಿ.ಕಾಂ. ವಿವೇಕಾನಂದ ಪದವಿ ಕಾಲೇಜು, ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.