ಅಂಗನವಾಡಿಗೆ ಹೋಗುತ್ತಿದ್ದ ದಿನಗಳವು!
Team Udayavani, Sep 21, 2018, 6:00 AM IST
ನೆನಪುಗಳು ಅಂದರೇನೇ ಹಾಗೆ. ಮನಸ್ಸಿಗೆ ಖುಷಿ ನೀಡುವಂತಹ ಅನೇಕ ನೆನಪುಗಳು ಒಂದು ಕಡೆಯಾದರೆ, ಮನಸ್ಸಿನಿಂದ ಮಾಸಿ ಹೋಗಬೇಕೆನಿಸುವ ನೆನಪುಗಳು ಇನ್ನೊಂದು ಕಡೆ. ಬಾಲ್ಯ ಎನ್ನುವುದು ಸವಿನೆನಪುಗಳ ಬುತ್ತಿ ಅಂತಾನೆ ಹೇಳಬಹುದು ಅಲ್ವೆ? ನಾವು ಮಾಡಿದ ತುಂಟಾಟ, ಚೇಷ್ಟೆಗಳು, ಗೊತ್ತಿಲ್ಲದೆ ಮಾಡಿರುವ ಅವಾಂತರಗಳು ಇವೆಲ್ಲವೂ ಆ ಬುತ್ತಿಯೊಳಗೆ ಸೇರಿಕೊಂಡು ಸುಮ್ಮನೆ ಮೆಲುಕು ಹಾಕಿಕೊಂಡು ಕೂರುವಾಗ ನಮಗೆ ನಗೆಯ ರಸದೂಟವನ್ನು ಬಡಿಸುತ್ತದೆ.
ನಾನು ಅಂಗನವಾಡಿಗೆ ಹೋಗುತ್ತಿದ್ದ ಸಮಯದಲ್ಲಿ ನಡೆದ ಘಟನೆಯಿದು. ನಮ್ಮ ಟೀಚರ್ ನಮಗೆಲ್ಲ ಕೆಲವು ಸ್ಪರ್ಧೆಗಳನ್ನು ಏರ್ಪಡಿಸಿದ್ದರು. ಅವುಗಳಲ್ಲಿ ಓಟ, ಕಪ್ಪೆ ಜಿಗಿತ, ನೆನಪಿನ ಶಕ್ತಿ ಆಟಗಳಂತಹ ಸ್ಪರ್ಧೆಗಳು ಕೆಲವು. ನಾವೆಲ್ಲ ಆ ಸ್ಪರ್ಧೆಗಳಲ್ಲಿ ಭಾಗವಹಿಸಿದೆವು ಹಾಗೂ ವಿಜೇತರಾದೆವು. ಒಂದು ದಿನ ಬಹುಮಾನ ವಿತರಣಾ ಸಮಾರಂಭವನ್ನು ಕೂಡ ಏರ್ಪಡಿಸಿದ್ದರು. ಆ ದಿನ ನನ್ನ ಗೆಳತಿಯೊಬ್ಬಳು ಬಂದಿರಲಿಲ್ಲ. ಹಾಗಾಗಿ ಅವಳ ಬಹುಮಾನ ಟೀಚರ್‌ನ ಬಳಿಯೇ ಉಳಿದಿತ್ತು. ಮರುದಿನ ಬಂದ ನನ್ನ ಗೆಳತಿಗೆ ಟೀಚರ್ ಅವಳಿಗೆ ಸೇರಬೇಕಾಗಿದ್ದ ಬಹುಮಾನವನ್ನು ಕೊಟ್ಟರು. “ಅವಳಿಗೆ ಬಹುಮಾನ ಕೊಟ್ಟರು. ಆದರೆ ನನಗೆ ಕೊಡಲಿಲ್ಲ’ ಎನ್ನುವ ಬೇಸರದಿಂದ ಮುಖ ಗಂಟು ಹಾಕಿಕೊಂಡು ಮೂಲೆಯಲ್ಲಿ ಕೂತೆ. ನನ್ನ ಗೆಳತಿಗೆ ಬಹುಮಾನ ಕೊಟ್ಟ ದಿನ ನನಗೂ ಕೊಡಲೇಬೇಕಿತ್ತು ಅನ್ನುವ ಸಣ್ಣ ಹೊಟ್ಟೆ ಉರಿ ಅಂತ ಹೇಳಬಹುದೇನೋ ಇದಕ್ಕೆ. ಕುಂಬಳಕಾಯಿ ಥರ ಆಗಿದ್ದ ನನ್ನ ಮುಖವನ್ನು ನೋಡಿದ ಟೀಚರ್‌ಗೆ ನನ್ನ ಬೇಸರಕ್ಕೆ ಕಾರಣ ಏನು ಅಂತ ಗೊತ್ತಾಯೊ¤à ಏನೋ. ತಮ್ಮಲ್ಲಿ ಹೆಚ್ಚಿಗೆ ಉಳಿದಿದ್ದ ಬಹುಮಾನವನ್ನು ನನಗೆ ತಂದು ಕೊಟ್ಟರು. ನನಗೆ ಎಷ್ಟು ಖುಷಿಯಾಯಿ ತೆಂದರೆ ನನ್ನ ಗೆಳತಿಯ ಹತ್ತಿರ “ನನಗೆ ಇನ್ನೊಂದು ಬಹುಮಾನ’ ಅಂತ ಹೇಳಿಕೊಂಡು ಕುಣಿದೆ. ಇದು ನನ್ನ ಚೇಷ್ಟೆಯ ಪರಮಾವಧಿಯಾಗಿದ್ದರೂ ಕೂಡ, ನಮ್ಮ ಟೀಚರ್ ಮಕ್ಕಳಿಗೆ ಬೇಸರವಾಗಬಾರದೆನ್ನುವ ಉದ್ದೇಶ ದಿಂದ ತಮ್ಮಲ್ಲಿ ಉಳಿದಿದ್ದ ಬಹುಮಾನವನ್ನು ನನಗೆ ಕೊಟ್ಟರು. ಇದನ್ನು ಈಗ ನೆನಪಿಸಿಕೊಂಡರೆ ನಗು ಬರುತ್ತದೆ. ಆದರೆ, ನಮ್ಮ ಟೀಚರ್‌ನ ಪ್ರೀತಿಯನ್ನು ಕಂಡು ನನ್ನ ಮನ ಕರಗುತ್ತದೆ.
ಮಕ್ಕಳ ಮನಸ್ಸನ್ನು ಅರಿಯುವ ಗುರುಗಳಿಗೆ ನನ್ನ ಕಡೆಯಿಂದ ಹ್ಯಾಟ್ಸಾಪ್.
ವಾಣಿ
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.