ಡಾಕ್ಯುಮೆಂಟರಿ


Team Udayavani, Apr 7, 2017, 3:45 AM IST

img_1943.jpg

ಕಾಲೇಜು ಲೈಫ‌ಲ್ಲಿ ಬಂಕ್‌ ಹಾಕಿ ಸಿನೆಮಾಕ್ಕೆ ಹೋಗೋದು, ಅಲ್ಲಿಗೆ ಇಲ್ಲಿಗೆ ಅಂಥ ಅಲೆಮಾರಿಯಂತೆ ಫ್ರೆಂಡ್ಸ್‌ ಒಟ್ಟಿಗೆ ತಿರುಗಾಡುವುದು ಕಾಮನ್‌ ಮ್ಯಾಟರ್‌. ಅದೇ ಕ್ರಮೇಣ ಅಭ್ಯಾಸವಾಗಿ ಬಿಟ್ಟರೆ ಸ್ಟೂಡೆಂಟ್‌ ಜೀವನ ಫ‌ಜೀತಿಯಾಗಿ ಬಿಡುವುದರಲ್ಲಿ ಎರಡು ಮಾತಿಲ್ಲ!

ಪಿಯುಸಿ ಮುಗಿದ ಮೇಲೆ ಮುಂದೆ ಏನು ಮಾಡುವುದು ಎನ್ನುವ ಯೋಚನೆಯಲ್ಲಿದ್ದಾಗ, ಮೊದಲೇ ಭವಿಷ್ಯದ ಬಗ್ಗೆ ಅರೆಬೆಂದ ನಿರ್ಧಾರವನ್ನು ಮಾಡಿಬಿಟ್ಟಿದ್ದೆ. ಅದರಂತೆ ಕೊನೆಗೂ “ಜರ್ನಲಿಸಂ’ ಸಬೆjಕ್ಟ್ ಆಯ್ಕೆ ಮಾಡಿಕೊಂಡೆ. ಆವತ್ತಿನಿಂದ ಲೈಫ್ಸ್ಟೈಲ್‌ ಸ್ವಲ್ಪ ಬದಲಾಗಿ ಬರೀ ಓದು-ಬರಹಕ್ಕೆ ಸೀಮಿತಗೊಂಡಿತ್ತು.

ಎಲ್ಲರ ಹಾಗೆ ನಾವು  ಕೂಡ ಕಾಲೇಜಿಗೆ ಬಂಕ್‌ ಹಾಕಿ ಕ್ಯಾಂಪಸ್‌ ಸುತ್ತಿ ಟೈಮ್‌ಪಾಸ್‌ ಮಾಡುತ್ತಿದ್ದೆವು. ಆದರೆ, ನಾವು ಫ್ರೀ ಪೀರಿಯೆಡ್‌ ಇದ್ದಾಗ ಕ್ಯಾಂಪಸ್‌ಗೆ ಪ್ರದಕ್ಷಿಣೆ ಹಾಕುವ ಬದಲು ಲೈಬ್ರರಿ ಕಡೆ ಮುಖ ಮಾಡಿದ್ದೇ ಜಾಸ್ತಿ.

ನಾನು ಆಗಷ್ಟೇ ಫ‌ಸ್ಟ್‌ ಇಯರ್‌ಗೆ ಸೇರಿದ್ದಷ್ಟೆ. ಫೈನಲ್‌ ಇಯರ್‌ನ ಕೆಲವು ಹುಡುಗರ ಪರಿಚಯ ನನಗಿತ್ತು. ಪ್ರತಿದಿನ ಹೋದಾಗ ಅವರೊಂದಿಗೆ ಆತ್ಮೀಯನಾಗುತ್ತ ಬಂದೆ. ಅವರಿಗೆ ಕಿರು ಚಿತ್ರಗಳನ್ನು ಮಾಡುವುದರಲ್ಲಿ ಅದೇನೋ ಆಸಕ್ತಿ. ಅವರ ಆಸಕ್ತಿಗೆ ನಾನು ಸೋತಿದ್ದೆ.

ಬೇರೆ ಕಾಲೇಜಿನಲ್ಲಿ ನಡೆದ ಸೆಮಿನಾರಿನಲ್ಲಿ ಅವರೊಂದಿಗಿನ ಒಡನಾಟ ಮತ್ತಷ್ಟು ಬೆಳೆಯ ತೊಡಗಿತ್ತು. ಮುಂದೆ ಕಾಲೇಜು ವಾರ್ಷಿಕೋತ್ಸವದ ಸಂದರ್ಭದಲ್ಲಿ ಮೊದಲ ಸಲ ನಾನು ಕ್ಯಾಮರಾ ಕಣ್ಣಿಗೆ ಕಾಣಿಸಿದ್ದೆ. ಅದು ಕೂಡ ಒಂದು ಕಿರುಚಿತ್ರದ ಮುಖ್ಯ ಪಾತ್ರದಲ್ಲಿ. ಅದೇ ಫೈನಲ್‌ ಇಯರ್‌ನ ನಾಲ್ಕು  ಸ್ನೇಹಿತರ ಟೀಮ್‌ನಲ್ಲಿ ನಾನು ಕೂಡ ಒಬ್ಬನಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿತು.

ಡಿಗ್ರಿ ಲೆವೆಲ್‌ನಲ್ಲಿ ಪ್ರತಿಭೆಯನ್ನು ಗುರುತಿಸುವ ಅದೆಷ್ಟೋ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಲು ಹಾತೊರೆಯುತ್ತಾರೆ. ಪತ್ರಿಕೋದ್ಯಮದ ವಿಚಾರದಲ್ಲಿ ಒಂದು ಹೆಜ್ಜೆ ಮುಂದೆ ತಮ್ಮ ಕ್ರಿಯೇಟಿವ್‌ ಐಡಿಯಾಸ್‌ಗೆ ಬಣ್ಣ ಬಳಿಯುವ ಸಣ್ಣಪುಟ್ಟ ಸಾಮಾಜಿಕ ಸಂದೇಶಗಳನ್ನು ರವಾನಿಸುವ ಕಿರುಚಿತ್ರಗಳು ಸಾಕ್ಷ್ಯಚಿತ್ರಗಳನ್ನು ಮಾಡುವ ಅವಕಾಶಗಳನ್ನು ವಿದ್ಯಾರ್ಥಿಗಳು ಪಡೆದುಕೊಂಡು ತಮ್ಮ ಪ್ರತಿಭೆಯನ್ನು ಹೊರಹಾಕುತ್ತಾರೆ.

ಇತ್ತೀಚೆಗೆ ಕಾಲೇಜಿನಲ್ಲಿ ಕ್ಯಾಮರಾವನ್ನು ವಿದ್ಯಾರ್ಥಿಗಳು ತಾವೇ ಬಳಸಿಕೊಂಡು ತಮಗೆ ಇಚ್ಛಿಸುವ ವಿಷಯದ ಬಗ್ಗೆ ಕಿರುಚಿತ್ರ ಮಾಡಿ ಅದರ ಎಡಿಟಿಂಗ್‌ ಹಂತವನ್ನು ತಮ್ಮಲ್ಲೇ ಒಬ್ಬ ಮಾಡಿ, ಕಾಲೇಜಿನ ಸ್ಪರ್ಧೆಯಲ್ಲಿ ಜನ ಮೆಚ್ಚುಗೆ ಗಳಿಸುವ ಕಿರುಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. ಮೊದಲ ಸಲ ನಾವೇ ಒಂದು ಹೊಸ ಪ್ರಯೋಗದ ಕಿರುಚಿತ್ರ ಮಾಡಿದಾಗ ಹಗಲು-ರಾತ್ರಿ ಎನ್ನದೆ ನಿದ್ದೆ ಬಿಟ್ಟು ಪರಿಶ್ರಮಪಟ್ಟು ಕೊನೆಗೆ ಅದನ್ನು ಯೂಟ್ಯೂಬ್‌ನಲ್ಲಿ ತೇಲಿ ಬಿಟ್ಟಾಗ ಸಿಕ್ಕ ಉತ್ತಮ ಪ್ರತಿಕ್ರಿಯೆಯ ಸಂತೋಷ ಹೇಳ ತೀರದು.

ಹೀಗೆ ಎಲ್ಲರ ಒಳಗೂ ಒಂದು ಪ್ರತಿಭೆ ಇರುತ್ತದೆ. ನಾವು ಹೊರತರಲು ಹಿಂಜರಿಯುತ್ತೇವೆ ಅಷ್ಟೇ. ನನ್ನ ಪ್ರತಿಭೆಗೆ ಜೀವ ಕೊಟ್ಟದ್ದು ಪತ್ರಿಕೋದ್ಯಮ. ಸಾಧನೆಯ ಶಿಖರವನ್ನು ಏರುವ ಕ್ರಿಯೇಟಿವ್‌ ಐಡಿಯಾಗಳಿರಬಹುದು. ಅವಕಾಶಗಳಿಗೆ ಕಾಯಬಾರದು. ನಾವೇ ಅವಕಾಶವನ್ನು ಸೃಷ್ಟಿಸಿಕೊಳ್ಳಬೇಕು.

ಸುಹಾನ್‌
ಪತ್ರಿಕೋದ್ಯಮ ವಿಭಾಗ
ಎಂ.ಜಿ.ಎಂ ಕಾಲೇಜು ಉಡುಪಿ.

ಟಾಪ್ ನ್ಯೂಸ್

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

jamia

Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ

Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ನಿಧನ

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ

IPL Auction: Mallika Sagar will conduct the entire IPL auction

IPL Auction: ಸಂಪೂರ್ಣ ಐಪಿಎಲ್‌ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

jamia

Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ

Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ನಿಧನ

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.