ಅಪ್ಪ ಎಂಬ ಎವರ್‌ಗ್ರೀನ್ ಹೀರೋ !
Team Udayavani, Dec 6, 2019, 5:00 AM IST
ನಾನು ನೋಡಿದ ಮೊದಲ ವೀರ ಅಂತಾರಲ್ಲ, ಹಾಗೆಯೇ ನನ್ನ ಜೀವನದಲ್ಲಿ ನಾನು ಕಂಡ ಮೊದಲನೆಯ ಧೀರ ನನ್ನ ಅಪ್ಪ. ಎಲ್ಲರ ಜೀವನದಲ್ಲಿ ಒಬ್ಬೊಬ್ಬರು ಆದರ್ಶ ವ್ಯಕ್ತಿಗಳಿರುತ್ತಾರೆ. ಆದರೆ, ನನ್ನ ಜೀವನದ ಆದರ್ಶ ವ್ಯಕ್ತಿ ಎಂದರೆ ನನ್ನಪ್ಪ.
ಜೊತೆಯಾಗಿ ಬದುಕುವ ಎಲ್ಲರೂ ನಮ್ಮ ಲೈಫ್ ಪಾರ್ಟ್‌ನರ್‌ಗಳೇ. ಯಾರಿಗಾದರೂ ಲೈಫ್ ಪಾರ್ಟ್‌ನರ್ ಎಂಬ ಬಿರುದು ಕೊಡುವ ಬದಲು, ನಮಗೆ ವಿದ್ಯೆಬುದ್ಧಿ ಇಲ್ಲದ ಸಮಯದಲ್ಲಿ ನಮ್ಮನ್ನು ಎಲ್ಲ ರೀತಿಯಲ್ಲೂ ಸಾಕಿಸಲಹಿ, ತಿದ್ದಿ-ತೀಡಿ, ಸರಿ-ತಪ್ಪುಗಳನ್ನು ನಮಗೆ ಮನವರಿಕೆ ಮಾಡಿ ಯಾವ ರೀತಿ ಬದುಕನ್ನು ಸಾಗಿಸಬೇಕೆಂದು ನಮಗೆ ತಿಳಿಸಿಕೊಡುವ ಅಪ್ಪನೇ ನಮ್ಮ ನಿಜವಾದ ಲೈಪ್ ಪಾರ್ಟನರ್. ಎಲ್ಲ ಅಪ್ಪಂದಿರೂ ಕೂಡ ತಮ್ಮ ಸಂತೋಷ-ಸುಖಗಳನ್ನು ತ್ಯಜಿಸಿ ತಮ್ಮ ಮಕ್ಕಳಿಗೆ ನೀಡುತ್ತಾರೆ. ಆದರೆ, ಅದನ್ನು ಅರ್ಥಮಾಡಿಕೊಳ್ಳುವಷ್ಟು ತಾಳ್ಮೆ ನಮಗೆ ಇರುವುದಿಲ್ಲ.
ತನಗೆ ಉಟ್ಟುಕೊಳ್ಳಲು ಬಟ್ಟೆ ಇಲ್ಲದಿದ್ದರೂ ತನ್ನ ಮಗ-ಮಗಳಿಗೆ ಆ ಕೊರತೆ ಇರಬಾರದು ಎಂದು ಒಳ್ಳೊಳ್ಳೆಯ ಬಟ್ಟೆ ತಂದುಕೊಡುತ್ತಾರೆ. ಆದರೆ, ನಮಗೆ ಎಷ್ಟೇ ಸೌಕರ್ಯಗಳು ಇದ್ದರೂ ನಾವು ಹೇಳುವುದು ನನಗೆ ಅಪ್ಪ ಏನೂ ತಂದುಕೊಡುವುದಿಲ್ಲ ಎಂದು. ಆದರೆ, ಅಪ್ಪ ಮಾತ್ರ ಎಲ್ಲರಲ್ಲಿಯೂ ನನ್ನ ಮಗಳು ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾಳೆ ಎಂದು ಹೇಳುತ್ತಾರೆ. ಇದು ನನಗೂ ನನ್ನಪ್ಪನಿಗೂ ಇರುವ ವ್ಯತ್ಯಾಸ. ಅಪ್ಪ ಎಂಬ ಎರಡು ಅಕ್ಷರದ ಮೇಲೆ ಎರಡು ಕೋಟಿ ಜವಾಬ್ದಾರಿಯಿದೆ. ಮಗಳಾಗಲಿ-ಮಗನಾಗಲಿ ಅವರನ್ನು ಬೆಳೆಸುವ ಹಾದಿಯಲ್ಲಿ ಅಪ್ಪನು ತನಗೆ ಎಷ್ಟೇ ಕಷ್ಟವಾದರೂ ಮಕ್ಕಳಿಗೆ ಸರಿದಾರಿ ತೋರಿಸುವ ಗುರುವಿನ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತಾನೆ.
ನನ್ನ ಲೈಫ್ನಲ್ಲಿ ನನ್ನ ಅಪ್ಪ ನಾನು ತಪ್ಪು ಮಾಡಿದಾಗ ತಪ್ಪು ಮಗಳೇ, ಸರಿ ಮಾಡಿದಾಗ ಸರಿ ಮಗಳೇ ಎಂದು ಹೇಳುತ್ತಾ ನನ್ನನ್ನು ಬೆಳೆಸಿದ್ದಾರೆ. ನನ್ನ ಸಂತೋಷದಲ್ಲಿ ಅವರು ಕೂಡ ಸಂತೋಷವನ್ನು ಕಾಣುತ್ತಾರೆ. ನನ್ನ ಕನಸನ್ನೇ ಅವರ ಕನಸನ್ನಾಗಿಸಿದ್ದಾರೆ. ಇಂತಹ ಒಳ್ಳೆಯ ಲೈಫ್ ಪಾರ್ಟ್ ನರ್‌ನ್ನು ನಾನು ಪಡೆದದ್ದು ನನ್ನ ಯಾವ ಜನ್ಮದ ಫಲವೊ?
ಸುಶ್ಮಿತಾ ಶೆಟ್ಟಿ
ಪ್ರಥಮ ಬಿ.ಕಾಂ. ಶ್ರೀರಾಮ ಪ್ರಥಮ ದರ್ಜೆ ಕಾಲೇಜು, ಕಲ್ಲಡ್ಕ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.