ಕಾಲೇಜಿನಲ್ಲಿ ಕ್ಷೇತ್ರಕಾರ್ಯ


Team Udayavani, Aug 17, 2018, 6:00 AM IST

c-19.jpg

ಮನಃಶಾಸ್ತ್ರ ನನ್ನ ಇಷ್ಟದ ವಿಷಯ, ಸಮಾಜ ಸೇವೆ ಕನಸಿನ ವೃತ್ತಿ. ಕೇವಲ ತರಗತಿಯಲ್ಲಿ ಕುಳಿತು ಪಾಠವನ್ನು ಕೇಳಲಿಚ್ಛಿಸದ ನನಗೆ ಎಮ್ಎಸ್‌ಡಬ್ಲ್ಯೂನಲ್ಲಿ ಮೂರು ದಿನ ಮಾತ್ರ ಕ್ಲಾಸ್‌, ಎರಡು ದಿನ ಫೀಲ್ಡ್ ವರ್ಕ್‌ ಅಂತ ಗೊತ್ತಾದಾಗ ಖುಷಿಯಾಗಿದ್ದಂತೂ ಸತ್ಯ. ಅದರೊಂದಿಗೆ ಈ ಫೀಲ್ಡ್ ವರ್ಕ್‌ ಹೇಗಿರಬಹುದು? ಎಲ್ಲಿಗೆ ಕಳುಹಿಸುತ್ತಾರೆ? ಏನು ಮಾಡಬೇಕಾಗುತ್ತದೆ? ಎಂಬ ಪ್ರಶ್ನೆಗಳ ಸರಮಾಲೆಯೇ ತಲೆಯೊಳಗೆ ಸುತ್ತತೊಡಗಿತು. ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಕುತೂಹಲ ಒಂದೆಡೆ. 

ಮೆಡಿಕಲ್‌ ಸೈಕಿಯಾಟ್ರಿ ನನ್ನ ವಿಭಾಗ ವಾಗಿದ್ದರೂ ಪ್ರಥಮ ವರ್ಷದಲ್ಲಿ ಎಲ್ಲರೂ ಸಮುದಾಯ ಅಥವಾ ಸ್ವಯಂ ಸೇವಾ ಸಂಸ್ಥೆಗಳಿಗೆ ಹೋಗಿ ಅನುಭವ ಹೊಂದಬೇಕೆಂಬ ನಿಯಮದ ಸಲುವಾಗಿ, ಕಡಲ ತೀರದ ಕುದ್ರೋಳ್ಳಿ ಬೆಂಗ್ರೆಯಲ್ಲಿ ಎರಡು ದಿನ ಬಿಸಿಲಿನ ಬೇಗೆಯನ್ನು ಅನುಭವಿಸುತ್ತ ಸ್ಥಳ ಪರಿಚಯ ಮಾಡಿಕೊಳ್ಳಲು ತಿರುಗಿದೆವು. ಅಲ್ಲಿ ಸಿಕ್ಕಿದ ಶಾಲೆ, ಅಂಗನವಾಡಿ, ಸರ್ಕಾರಿ ಸಂಸ್ಥೆಗಳನ್ನು ಸಂದರ್ಶಿಸಿ ನಮ್ಮ ಪರಿಚಯ ಮಾಡಿಕೊಳ್ಳುತ್ತಾ, ವಿವರ ಸಂಗ್ರಹಿಸಿದೆವು. 

ನಂತರದ ವಾರಗಳಲ್ಲಿ ಮಂಗಳೂರು ಹೊರವಲಯದ ಕೋಟಿಮುರ ಎಂಬ ಪ್ರದೇಶದಲ್ಲಿ ಸುಂದರ ಹಸಿರು ಪರಿಸರದಲ್ಲಿ ನಿರ್ಮಿಸಲಾಗಿರುವ ಸ್ವಯಂಸೇವಾ ಸಂಸ್ಥೆ ರಿಯಾ ಫೌಂಡೇಷನ್‌ಗೆ ಇನ್ನಿಬ್ಬರು ಸಹವರ್ತಿಗಳೊಂದಿಗೆ ಪಯಣ ಬೆಳೆಸಿದೆವು. ಪ್ರಥಮ ವರ್ಷದ ಸಂಪೂರ್ಣ ಪ್ರಾಯೋಗಿಕ ಪಾಠ ದೊರೆತದ್ದು ಇಲ್ಲಿ. ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು, ನೋವು-ನಲಿವುಗಳಲ್ಲಿ ನಮ್ಮನ್ನು ನಾವು ಮರೆತು ತೊಡಗಿಸಿಕೊಂಡಿದ್ದು ಮರೆಯಲಾರದ ಅನುಭವ. 

ಎಂಟು ವರ್ಷಗಳನ್ನು ಯಸ್ವಿಯಾಗಿ ಪೂರೈಸಿರುವ ರಿಯಾ ಫೌಂಡೇಷನ್‌ ಒಂದು ನೋಂದಾಯಿತ ಸ್ವಯಂಸೇವಾ ಸಂಸ್ಥೆಯಾಗಿದ್ದು, ವಿಶೇಷ ಚೇತನರು ಹಾಗೂ ದಿವ್ಯಾಂಗರ ಪುನರ್ವಸತಿ ಕೇಂದ್ರವಾಗಿದೆ. ಮನೆಗಳಲ್ಲಿ ಪೋಷಕರು ದುಡಿಯುವವರಾಗಿದ್ದಲ್ಲಿ ಇಂತಹವರ ಆರೈಕೆಯ ಕಡೆಗೆ ನಿಗಾ ವಹಿಸುವುದು  ಕಷ್ಟ ಎಂಬಂತಹವರಿಗೆ ಇಲ್ಲಿಗೆ ಸೇರಿಸುವ ಅವಕಾಶವಿದೆ. ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿರುವ ಈ ಕೇಂದ್ರದಲ್ಲಿ ವಯಸ್ಕರೂ ಇ¨ªಾರೆ. ಸಂಸ್ಥೆಯ ಮುಖ್ಯಸ್ಥರು ಹಾಗೂ ಸಿಬ್ಬಂದಿ ವರ್ಗದವರು ಇಂತಹ ಮಕ್ಕಳ ಏಳಿಗೆ ಹಾಗೂ ಸ್ವತಂತ್ರ ಜೀವನವನ್ನೇ ಗುರಿಯಾಗಿಟ್ಟುಕೊಂಡು ಅದಕ್ಕಾಗೇ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಶ್ರಮಿಸುತ್ತಿದ್ದಾರೆ. ಮನೆಯ ವಾತಾವರಣದಲ್ಲೇ ವಸತಿ ವ್ಯವಸ್ಥೆ, ಪೌಷ್ಠಿಕಾಂಶಯುಕ್ತ ಆಹಾರ, ಜೀವನ ಮೌಲ್ಯ ತರಬೇತಿ, ವೃತ್ತಿ ಆಧಾರಿತ ಕಲಿಕೆ, ಮನೋರಂಜನಾ ಚಟುವಟಿಕೆಗಳು, ಆರೋಗ್ಯಕ್ಕಾಗಿ ಕ್ರೀಡೆ, ಮಾನಸಿಕ ಮತ್ತು ಸಾಮಾಜಿಕ ಬೆಳವಣಿಗೆಗಾಗಿ ತರಗತಿಗಳನ್ನು ದಿನನಿತ್ಯ ಇಲ್ಲಿ ನಡೆಸಲಾಗುತ್ತದೆ. 

ಇಲ್ಲಿ ಕಳೆದ ಒಂದೊಂದು ಕ್ಷಣವೂ ವಿಭಿನ್ನ ಕಲಿಕೆಯೇ. ಪ್ರತೀ ದಿನವೂ ಹೊಸದಿನ, ಹೊಸತನ. ಪ್ರತೀ ಮಗುವೂ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ತಾಳ್ಮೆ ಇಲ್ಲಿ ಇರಲೇಬೇಕಾದ ಬಹುಮುಖ್ಯ ಅಂಶ. ಮಕ್ಕಳ ಮನಸ್ಸನ್ನು, ಅವರ ಸಮಸ್ಯೆಯನ್ನು ಅರಿಯುವುದರ ಮೂಲಕ ಯಾವ ತಂತ್ರಗಳನ್ನು ಬಳಸಿ ಹೇಳಿಕೊಟ್ಟರೆ ಕಲಿಕೆ ಸುಗಮವಾಗಬಹುದು ಎಂಬುದನ್ನೂ ಕಲಿಯಲು ಇಲ್ಲಿ ಸಾಧ್ಯ. ಪ್ರತಿಯೊಬ್ಬರಿಗೂ ವೈಯಕ್ತಿಕ ಗಮನ ಕೊಡುವುದು ಇಲ್ಲಿನ ಅಗತ್ಯ. ಅವರಲ್ಲಿರುವ ಪ್ರತಿಭೆ, ಆಸಕ್ತಿಯನ್ನು ಗುರುತಿಸಿ ಹೊರತೆಗೆದು ಸೂಕ್ತ ಮಾರ್ಗದರ್ಶನ ಮಾಡುವುದರ ಮೂಲಕ ಅಭಿವೃದ್ಧಿಯನ್ನು ಕಾಣಬಹುದಾಗಿದೆ. ಈ ರೀತಿಯ ಅನೇಕ ತಂತ್ರಗಳನ್ನು ಕಲಿಯಲು ಫೀಲ್ಡ… ವರ್ಕ್‌ ವೇದಿ ಕೆ ಕಲ್ಪಿಸಿತು. ಸಂಘಟನೆ, ಕಾರ್ಯಕ್ರಮಗಳ ನಿರ್ವಹಣೆ, ಬೀದಿ ನಾಟಕಗಳು, ಜಾಗೃತಿ ಜಾಥಾ, ಆರೋಗ್ಯ ಶಿಬಿರಗಳು, ಮನೆ ಹಾಗೂ ಸಮುದಾಯ ಸಂಪರ್ಕ, ಜನಸಂಪರ್ಕ ಮುಂತಾದ ಅನೇಕ ಅವಕಾಶಗಳೂ ದೊರೆತವು ಅಲ್ಲದೇ, ಕೌಶಲ್ಯಾಭಿವೃದ್ಧಿ, ವ್ಯಕ್ತಿತ್ವ ಬೆಳವಣಿಗೆಗೆ ಇದು ಸಹಾಯಕವಾಯಿತು.  ಮುಂದೆ ಬರಲು, ಮಾತನಾಡಲು ಹಿಂಜರಿಯುತ್ತಿದ್ದ ನನಗೆ ಸಮಾಜಕಾರ್ಯ ಪದವಿ ಅಥವಾ ಫೀಲ್ಡ… ವರ್ಕ್‌ ಒಂದು ಉತ್ತಮ ವೇದಿಕೆ ಕಲ್ಪಿಸಿತು. ನನ್ನ ಸಾಮರ್ಥ್ಯವನ್ನು ಅರ್ಥಮಾಡಿಕೊಂಡು ಆಸಕ್ತಿಯ ಕ್ಷೇತ್ರವನ್ನು ಗುರುತಿಸಿ ಸಾಧನೆಯ ಹಾದಿಯಲ್ಲಿ ಸಾಗಲು ಸಾಧ್ಯವಾಯಿತು. ಅನೇಕ ಶಾಲೆ, ಕಾಲೇಜು, ಸ್ವಸಹಾಯ ಸಂಘಗಳಿಗೆ ತರಬೇತಿ ನೀಡಿದ ಅನುಭವವಿದೆ ಎಂದು ಅಭಿಪ್ರಾಯಪಡುತ್ತಾರೆ ಮಂಗಳೂರು, ರೋಶನಿ ನಿಲಯದ ದ್ವಿತೀಯ ಎಂಎಸ್‌ಡಬ್ಲೂ ವಿದ್ಯಾರ್ಥಿನಿ ಕೃಪಾ ಕೈಲಾರ್‌.

ಮನುಷ್ಯರಲ್ಲಿ ಮಾನವೀಯತೆ, ಸಹಾಯ ಮನೋಭಾವನೆ, ಪ್ರೀತಿ, ಕರುಣೆ ನಶಿಸುತ್ತಿರುವ ಇಂದಿನ ದಿನಮಾನದಲ್ಲಿ, ಕೆಲಸದ ಒತ್ತಡ, ಮಾನಸಿಕ ಹಿಂಸೆಯಿಂದ ಬಳಲುತ್ತಿರುವ ನಮ್ಮ ಸಮಾಜದಲ್ಲಿ ಸಮಾಜಕಾರ್ಯದ ಅನಿವಾರ್ಯತೆ ಸರಕಾರಿ ಯೋಜನೆಗಳಿಂದ ಹಿಡಿದು, ಎಲ್ಲಾ ಕ್ಷೇತ್ರಗಳಲ್ಲೂ ಇದ್ದೇ ಇದೆ. ಫೀಲ್ಡ್ ವರ್ಕ್‌ ಅನ್ನು ಸದುಪಯೋಗಪಡಿಸಿಕೊಂಡು ಸಿಕ್ಕಿದ ಅವಕಾಶಗಳನ್ನು ಬಿಡದೇ ಬಳಸಿಕೊಂಡಲ್ಲಿ ನಮ್ಮ ಏಳಿಗೆ ಖಂಡಿತ ಸಾಧ್ಯವಿದೆ. ಹಾಗಾಗಿಯೇ ಸಮಾಜಕಾರ್ಯವನ್ನು ಆರಿಸಿಕೊಂಡ ವಿದ್ಯಾರ್ಥಿಯ ಮನೋಬಲ ವೃದ್ಧಿಗೊಳ್ಳುವುದಲ್ಲದೆ, ಧೈರ್ಯ, ಸಾಹಸ ಮನೋಭಾವ ಬೆಳೆಯುತ್ತದೆ. ಜೀವನದ ಯಾವುದೇ ಕಷ್ಟದ ಸಂದರ್ಭಗಳನ್ನು ಸೂಕ್ತವಾಗಿ ನಿಭಾಯಿಸಲು ಆತ ಶಕ್ತನಾಗುತ್ತಾನೆ.

ಸುವರ್ಚಲಾ ಅಂಬೇಕರ್‌ ಬಿ. ಎಸ್‌.
ದ್ವಿತೀಯ ಎಂಎಸ್‌ಡಬ್ಲ್ಯೂ, ರೋಶನಿ ನಿಲಯ, ಮಂಗಳೂರು

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Foot ball

ಬೆಂಗಳೂರಿನಲ್ಲಿ ಭಾರತ- ಮಾಲ್ಡೀವ್ಸ್‌   ವನಿತಾ ಫುಟ್‌ಬಾಲ್‌

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-jyo

Asian Weightlifting: ಜೋಶ್ನಾ ನೂತನ ದಾಖಲೆ

1-bcc

U-19 ವನಿತಾ ಏಷ್ಯಾ ಕಪ್‌: ಫೈನಲ್‌ಗೆ ಭಾರತ

1-J-PP

Pro Kabaddi: ಜೈಪುರ್‌ 12ನೇ ವಿಜಯ

1-bangla

T20;ಮೂರೂ ಪಂದ್ಯ ಗೆದ್ದ ಬಾಂಗ್ಲಾ: ವಿಂಡೀಸಿಗೆ ವೈಟ್‌ವಾಶ್‌

1-pak

ODI; ತವರಲ್ಲೇ ಎಡವಿದ ದಕ್ಷಿಣ ಆಫ್ರಿಕಾ: ಸರಣಿ ಗೆದ್ದ ಪಾಕಿಸ್ಥಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.