ಅಂತಿಮ ವರ್ಷ ವಿದಾಯದ ಬೇಸರ
ಮೊದಲ ವರ್ಷ ಬೆರಗು, ಎರಡನೇ ವರ್ಷ ಬೆಚ್ಚಗೆ...
Team Udayavani, Feb 21, 2020, 4:56 AM IST
ಲೈಟ್ ಆಗಿ ಮಳೆಗಾಲ ಶುರುವಾಗುವಾಗ ಮನಸ್ಸಲ್ಲೆಲ್ಲ ಏನೋ ಒಂಥರಾ ಖುಷಿ. ಫಸ್ಟ್ ಡೇ ಕಾಲೇಜಿಗೆ ಕಾಲು ಇಡುತ್ತೇವೆ. ಫಸ್ಟ್‌ಡೇ ತರಗತಿಗೆ ಹಾಜರಾಗುತ್ತೇವೆ. ನಮ್ಮ ಒಬ್ಬರನ್ನು ಬಿಟ್ಟು ಅಲ್ಲಿರುವ ಎಲ್ಲರೂ ಏಲಿಯನ್ಸ್ ಅಂತ ಅನಿಸುತ್ತದೆ. ಒಂದು ಅಂತೂ ಸತ್ಯ. ಫಸ್ಟ್‌ಡೇ ಕಾಲೇಜಲ್ಲಿ ಒಬ್ಬ ಬೆಸ್ಟ್ ಫ್ರೆಂಡ್, ಒಬ್ಬ ಬೆಸ್ಟ್ ಕ್ರಷ್, ಯಾವತ್ತೂ ಮರೆಯಲಾಗದಿರೊ ಬೆಸ್ಟ್ ಲೆಕ್ಚರ್ ಸಿಗುತ್ತಾರೆ. ಹಾಗೇ ಮುಂದೆ ದೊಡ್ಡ ಗ್ಯಾಂಗ್ ಕೂಡ ರಚನೆಯಾಗಿಯೇ ಆಗುತ್ತದೆ. ದಿನಗಳೇನೂ ಮುಂದೆ ಹೋಗುತ್ತ ಇರುತ್ತದೆ. ಕಣ್ಣು ಬಿಡುವಷ್ಟರಲ್ಲಿ ಫಸ್ಟ್ ಇಂಟರ್ನಲ್ ಬಂದೇ ಬಿಡುತ್ತದೆ.
ಅಬ್ಬಬ್ಟಾ ಇಂಟರ್ನಲ್ ಅಂದರೆ ಏನು ಅಂತಾನೆ ಗೊತ್ತಿರಲ್ಲ, ಅದನ್ನು ಹೇಗೋ ಕಷ್ಟಪಟ್ಟು ಪಾಸ್ ಆಗುತ್ತೀವಿ. ಫಸ್ಟ್ ಇಯರ್ ಅಲ್ಲಿ ಚೈಲ್ಡ್‌ಗಳಾಗಿ ಇರುವ ನಾವು ಎರಡನೇ ವರ್ಷಕ್ಕೆ ಕಾಲಿಡುವಾಗ ಕಾಲೇಜಿನ ಅನೇಕ ವಿಚಾರಗಳನ್ನು ತಿಳಿದಿರುತ್ತೇವೆ. ಫ್ರೆಂಡ್ಸ್ ಗೆ ನೋಟ್ಸ್ ಬರೆದುಕೊಡುವುದೇನು, ಊಟ ಮಾಡುವಾಗ “ಬಿಲ್ ನಾನೇ ಕೊಡುತ್ತೇನೆ’ ಅನ್ನುವುದೇನು. ಎರಡನೇ ವರ್ಷ ಒಂಥರಾ ಬೆಚ್ಚನೆ ವರ್ಷ. ಆದರೆ, ಕ್ಲಾಸ್ ಬಂಕ್ ಹೊಡೆಯುವಾಗ ಮಾತ್ರ ಹಿಂದೇಟು ಹಾಕುತ್ತೀವಿ.
ಎಲ್ಲ ತರಲೆ ಮಾಡಿಯಾದರೂ ಒಬ್ಬ ಹೇಳುತ್ತಾನೆ “ಲೋ… ಮಗ ಫಸ್ಟ್ ಇಯರ್ ಆಯಿತು ಕಣೋ ನಾವು ಇನ್ನೂ ಏನೂ ಕಿತಾಪತಿ ಮಾಡೇ ಇಲ್ಲ’ ಅಂತ. ಅದಕ್ಕೆ ಇನ್ನೊಬ್ಬ ಹೇಳುತ್ತಾನೆ- “ಮಗ ಇನ್ನು ಎರಡು ವರ್ಷ ಇದೆ. ಏನಾದರೂ ಮಾಡೋಣ ಸುಮ್ಮನೆ ಇರೋ’.
ತರಗತಿಯ ಫ್ರೆಂಡ್ಸ್ ಜೊತೆ ಸೇರಿ ಬೀಚ್, ಪಾರ್ಕ್, ಫಾಲ್ಸ್, ಫೋಟೋ-ಶೂಟ್ ಅನ್ನೋ ತಿರುಗಾಟದಲ್ಲೇ ಕಾಲೇಜು ರಜಾ ದಿನಗಳು ಮುಗಿದಿರುತ್ತವೆ. ಇನ್ನೂ ನಾವು ಸೆಕೆಂಡ್‌ಇಯರ್‌ಅಂತ ಬಟರ್‌ಫ್ಲೈಲ್ಸ್ ತರ ಆಕಾಶದೆತ್ತರ ಹಾರಾಡುವುದೇ ಸರಿ. ಅದರಲ್ಲೂ ಸೆಕೆಂಡ್ ಇಯರ್‌ಅಲ್ಲಿ “ಲವ್ ಗಿವ್’ ಅನ್ನೋ ಗೊಂದಲಕ್ಕೆ ಬಿದ್ದು ಓದು ಹಾಳುಮಾಡಿಕೊಳ್ಳುವುದೂ ಇದೆ.
ಪಾರ್ಕ್ ಸುತ್ತಾಡುವುದೇನು, ಕೈ ಕೈಹಿಡಿದು ಕೊಂಡು ದಾರಿಯಲ್ಲಿ ನಡೆಯುವುದೇನು. ಈ ಲವ್ ಮತ್ತು ಫ್ರೆಂಡ್‌ಶಿಪ್‌ಗ್ಳ ನಡುವೆ ಸೆಕೆಂಡ್ ಇಯರ್‌ನ ಪರೀಕ್ಷೆಗಳು ಮುಗಿದು ಹೋಗಿರುತ್ತವೆ. ದಿನಗಳು ಉರುಳಿದ ಹಾಗೇ ಫೈನಾಲ್‌ಇಯರ್ ನಮ್ಮ ಕಣ್ಣ ಮುಂದೆ ಕೂತಿರುತ್ತದೆ. ಏಕಾಗ್ರತೆಯನ್ನು ತಂದುಕೊಳ್ಳುವುದು ಹೇಗೆ ಎಂಬುದೇ ಆಗ ನಮ್ಮ ಮುಂದಿನ ಸವಾಲು.
ಫೈನಲ್ ಇಯರ್‌ನಲ್ಲಿ ಮಳೆಗಾಲನೂ ಇಲ್ಲ, ಚಳಿಗಾಲನೂ ಇಲ್ಲ ಯಾವಾಗಲೂ ಪರೀಕ್ಷೆ ಕಾಲವೆ. ಜೊತೆಗೆ ಸೀನಿಯರ್ ಎಂಬ ಹವಾ ಅಂತೂ ಬೇಜಾನ್ ಜೋರಾಗಿರುತ್ತದೆ. ಎಂಟು ಗಂಟೆ ಕ್ಲಾಸ್ ಅಂದರೆ ಆರಾಮಾಗಿ ಹತ್ತು ಗಂಟೆಗೆ ಕ್ಲಾಸ್‌ಗೆ ಬರುವುದು. ಫಸ್ಟ್‌ಇಯರ್‌ನಲ್ಲಿದ್ದ ಫ್ರೆಂಡ್ಸ್ ಗ್ಯಾಂಗ್‌ಅಬ್ಬಬ್ಟಾ ಅಂದರೆ ಮೂರು ಪ್ರತ್ಯೇಕ ಪಕ್ಷವಾಗಿರುತ್ತದೆ. ಚಿಂದಿಚಿತ್ರಾನ್ನ ಆಗಿದ್ದರೂ ವಿಶೇಷವೇನೂ ಇಲ್ಲ. ಮುನಿಸುಗಳ ನಡುವೆಯೂ ಆ ಫೆಸ್ಟ್, ಸೆಮಿನಾರ್, ಟ್ರಿಪ್, ಕ್ಯಾಂಪ್- ಅನ್ನೋ ಜಂಜಾಟದಲ್ಲಿ ಫೈನಲ್‌ಇಯರ್ ಪರೀಕ್ಷೆ ಬೇರೆ ಹತ್ತಿರ ಬಂದಿರುತ್ತದೆ. ಲವ್ ಅನ್ನೋ ಹಳ್ಳಕ್ಕೆ ಬಿದ್ದವರ ಜೀವನದಲ್ಲಿ ಎಷ್ಟೋ ಸಲ ಆ ಪುಟ್ಟ ಹೃದಯಗಳ ನಡುವೆ ಮನಸ್ತಾಪ, ಬ್ರೇಕಪ್, ಪ್ಯಾಚಾಪ್- ಇದೆಲ್ಲದರ ನಡುವೆಯೂ ಮನಸ್ಸು ಒಡೆದು ಚೂರಾಗುವುದುಂಟು.
ನಾವು ತುಂಬಾ ಇಷ್ಟಪಡುವ “ಕಾಲೇಜ್ ಡೇ’ ಬಂದಿರುತ್ತದೆ. ಫೈನಲ್ ಇಯರ್ ಕಾಲೇಜು ಡೇ ದಿನ ಮಾತ್ರ ಎಲ್ಲರೂ ತಪ್ಪದೇ ಹಾಜರ್. ಎಲ್ಲದಕ್ಕೂ “ಕೊನೆಯದಾಗಿ’ ಎಂಬ ವಿಶೇಷಣ ಬೇರೆ. ಲಾಸ್ಟ್ ಡ್ಯಾನ್ಸ್, ಡೆಡಿಕೇಶನ್ ಸಾಂಗ್, ಲಾಸ್ಟ್ ಎಂಜಾಯ್‌ಮೆಂಟ್. ಅಬ್ಟಾ… ಇದನ್ನೆಲ್ಲ ನೆನಪಿಸಿಕೊಳ್ಳಲು ಬೇಜಾರುಗುತ್ತದೆ. ಬೇಜಾರು ಮುಗಿಯುವಾಗಲೇ “ಬೀಳ್ಕೊಡುಗೆ’ಯ ದಿನವೂ ಬಂದಿರುತ್ತದೆ. ಆ ದಿನ ವಾಚ್‌ಮಾನ್‌ನಿಂದ ಹಿಡಿದು ಪ್ರಿನ್ಸಿಪಾಲ್‌ರವರೆಗೂ ಎಲ್ಲರ ಹತ್ರನೂ ಫೋಟೊ ಗಿಟ್ಟಿಸಿಕೊಳ್ಳುತ್ತೀವಿ. ಈ ಫೈನಾಲ್‌ಇಯರ್ ಮುಗಿಯುವಷ್ಟರಲ್ಲಿ ಬ್ರೇಕಪ್ ಆಗಿರುವ ಫ್ರೆಂಡ್ಸ್ ಗ್ಯಾಂಗ್, ಅಹಂ-ಜಗಳಗಳ ನಡುವೆಯೂ ಮತ್ತೆ ಒಂದಾಗುವುದುಂಟು.
ವಿದಾಯದ ದಿನ ಹಿಂದೆ ತಿರುಗಿ ನೋಡಿದ್ರೆ, “ಇಷ್ಟೆಲ್ಲ ಮಾಡಿದ್ದು ನಾವೇನಾ’ ಅನಿಸುತ್ತದೆ. ಪದವಿಯ ದಿನಗಳು ಬೇಗ ಬೇಗನೇ ಮುಗಿಯುತ್ತವೆ. ಮೊದಲ ವರ್ಷದ ಮೊದಲ ದಿನದ ಬೆಪ್ಪುತಕ್ಕಡಿಯಂತಹ ನೋಟವು, ಅಂತಿಮ ವರ್ಷಕ್ಕೆ ಬರುವಾಗ ಎಷ್ಟೊಂದು ಬದಲಾಗಿರುತ್ತದೆ. ಬದುಕೂ ಹಾಗೆಯೇ ಇರಬಹುದು.
ಸೌಮ್ಯ ಕಾರ್ಕಳ
ತೃತೀಯ ಬಿ.ಎ. ಆಳ್ವಾಸ್ ಕಾಲೇಜು ಮೂಡುಬಿದಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ
Mosque survey: ಸಂಭಲ್ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.