ಮೊದಲ ದಿನಗಳು 


Team Udayavani, Sep 1, 2017, 6:30 AM IST

YUVA-31.jpg

ಕಾಲೇಜು ದಿನಗಳೆಂದರೆ ನಮಗೆ ನಾವೇ ಜವಾಬ್ದಾರರು. ಕಾಲೇಜುಗಳಲ್ಲಿ ದಿನ ಪೂರ್ತಿಯಾಗಿ ನಾಲ್ಕು ಗೋಡೆಯ ಒಳಗಿನ ಕ್ಲಾಸ್‌ಗಳಲ್ಲಿ ಕುಳಿತುಕೊಳ್ಳುವ ಯೋಚನೆಯಿಲ್ಲ. ದಿನಕ್ಕೆ ಇಂತಿಷ್ಟು ಎಂಬ ಕ್ಲಾಸ್‌ಗಳು ಇರುತ್ತವೆ; ಅವುಗಳನ್ನು ಹಾಜರಿ ಮಾಡಿ ಬಿಟ್ಟರೆ ಸಾಕು. ಮತ್ತೆ ಬಂಕ್‌ ಹಾಕಿ ಹೋಗಬಹುದು! ಶಾಲಾ ದಿನಗಳಲ್ಲಿ ಇರುವಂತೆ ಮಾಸ್ಟರ್‌ಗಳ ಕಣ್ಣುಗಳು ನಮ್ಮನ್ನು ನೋಡುವುದಿಲ್ಲ, ಕಾಯುವುದಿಲ್ಲ. ಅಲ್ಲಿರುವವರೆಲ್ಲ ಲೆಕ್ಚರರ್‌ಗಳು ಅವರುಗಳು ಶಾಲೆಯ ಮಾಸ್ಟರ್‌ಗಳ ರೀತಿಯಲ್ಲಿ ಗದರಿಸುವುದಿಲ್ಲ, ಹೊಡೆಯುವುದಿಲ್ಲ. ನಮಗೆ ನಾವೇ ಯಜಮಾನರು ಎಂಬ ಕನಸನ್ನು ಬೇಸಿಗೆಯ ರಜೆಯ ದಿನಗಳಲ್ಲಿ ನಿತ್ಯ ಕಾಣುತ್ತಿ¨ªೆವು.

ಕಾಲೇಜು ಅಂಗಳಕ್ಕೆ ಹೆಜ್ಜೆ ಇಡಲು ಏನೋ ಸಂತೋಷ ಮತ್ತು ಸಡಗರ ! ಒಂದೇ ಶಾಲೆಯಲ್ಲಿ ಒಂದನೇ ಕ್ಲಾಸ್‌ನಿಂದ ಹತ್ತನೇ ತರಗತಿಯವರಿಗೆ ಓದಿದ್ದೂ ಇದೆ. ನಾವೆಲ್ಲರೂ ಚಡ್ಡಿ ದೋಸ್ತ್ಗಳು ಎಂದು ಹೇಳುವ ಮಟ್ಟಿಗೆ ನಮ್ಮ ಸ್ನೇಹ ಸಂಬಂಧವಿತ್ತು. ಶಾಲೆಯ ಪ್ರತಿಯೊಬ್ಬನೂ ಪ್ರತಿಯೊಬ್ಬಳೂ ಗೊತ್ತು. ಇಲ್ಲಿ ಎಲ್ಲರೂ ಆತ್ಮಿಯರೇ. ಹಾಗೆಯೇ ಶಾಲೆಯ ಶಿಕ್ಷಕ ವೃಂದವೂ ನಮ್ಮ ಕುಟುಂಬದವರಂತೆ. ಸುಮಾರು ಹತ್ತು ವರುಷ ಒಂದೇ ಶಾಲೆಯಲ್ಲಿ ಓದುವ ಒಂದು ಲಾಭ ಎಂದರೆ ಇದೇ. ಪ್ರತಿಯೊಬ್ಬರೂ ತುಂಬ ವಿಶ್ವಾಸದಿಂದ ತಮ್ಮ ತಮ್ಮ ಮನೆಯ ಮಕ್ಕಳು ಎಂಬ ರೀತಿಯಲ್ಲಿ ನೋಡಿಕೊಳ್ಳುತ್ತಾರೆ ಮತ್ತು ನಮ್ಮೆಲ್ಲರ ಏಳಿಗೆಯನ್ನು ನಿರೀಕ್ಷಿಸುತ್ತಾರೆ.

ಪ್ರಾಥಮಿಕ, ಪ್ರೌಢ ಶಿಕ್ಷಣವೆಂದರೆ ಹಾಗೆಯೇ ಪ್ರತಿಯೊಂದಕ್ಕೂ ಅಚ್ಚರಿ ಬೆರೆತ ಮನಸ್ಸುಗಳನ್ನು ಹೊಂದಿರುವವರು. ಹೊಸ ಹೊಸ ಸಾಹಸಗಳನ್ನು ಆಟಗಳನ್ನು ತುಂಬಾನೆ ಎಂಜಾಯ್‌ ಮಾಡುತ್ತ ನಮ್ಮ ನಮ್ಮ ಗುರಿಯ ಕಡೆಗೆ ಸಾಗುವ ದಿನಗಳು ಅವುಗಳು. ಈಗೆಲ್ಲಾ ಅದು ಒಂದು ಸವಿನೆನಪು ಮಾತ್ರ ಅಲ್ವಾ?

ಇಂಥ ದಿನಗಳಿಂದ ಬೇರ್ಪಟ್ಟು ಕಾಲೇಜು ಅಂಗಳಕ್ಕೆ ಬಂದ ಮೊದಲ ದಿನವೆಂದರೆ ಅಳುವೆ ಬಾಯಿಗೆ ಬಂದಂತೆ, ಎನ್ನುವ ಅನುಭವ. ಹಾಗೆಯೇ ಚಿಕ್ಕದಾಗಿ ಹಳೆಯ ದಿನಗಳು ಫ್ಲಾಶ್‌ ಬ್ಯಾಕ್‌ನಲ್ಲಿ ಹಾದು ಹೋಗಿಬಿಡುತ್ತವೆ. ಅದರೆ ಪುನಃ ಆ ದಿನಗಳಿಗೆ ಮರಳಲಾರದಂತಹ ಕಟು ಸತ್ಯ ನಮ್ಮ ಮುಂದೆ ಇರುತ್ತದೆ. ಮುಖದ ಮೇಲೆ ಚಿಗುರು ಮೀಸೆ! ಏನೋ ಒಂದು ಹೊಸತನದ ಕುರುಹು ಎಂಬಂತೆ ನಮ್ಮಲ್ಲಿ ಹೊಸ ಹೊಸ ಬದಲಾವಣೆ.

ಶಾಲಾ ದಿನಗಳಲ್ಲಿರುವಂತೆ ನಿತ್ಯ ಯೂನಿಫಾರ್ಮ್ಗಳ ಜಂಜಾಟವಿಲ್ಲ. ನಮಗೆ ತಿಳಿದ ಬಣ್ಣ ಬಣ್ಣದ ಅಂಗಿ ಪ್ಯಾಂಟ್‌ ಗಳನ್ನು ತೂರಿಕೊಂಡು ಹೋಗಬಹುದು. ಅದು ನಿತ್ಯ ಹೊಸ ಹೊಸ ಅವತಾರದಲ್ಲಿ. 

ಹಾಗೆಯೇ ಒಂದು ಸುತ್ತು ಕಣ್ಣು ಹಾಯಿಸಿದಾಗ ಬಗೆ ಬಗೆಯ ಉಡುಪಿನಲ್ಲಿ ಹೊಸ ಹೊಸ ಮುಖಗಳು. ಯಾರು ಪರಿಚಯವಿಲ್ಲ ಎಲ್ಲರು ಹೊಸಬರೇ ಆದರೆ, ನಮ್ಮ ನಮ್ಮ ಶಾಲೆಗಳಿಂದ ಒಬ್ಬರೋ ಇಬ್ಬರೋ ಮಾತ್ರ ಈ ಕಾಲೇಜಿಗೆ ಬಂದಿರುತ್ತಾರೆ ಅದರಲ್ಲೂ ಆ ಇಬ್ಬರೂ, ಒಬ್ಬರೂ ಬೇರೆ ವಿಭಾಗದಲ್ಲಿ ಸೇರಿಕೊಂಡಿರುತ್ತಾರೆ ನಾನು ಒಬ್ಬಂಟಿ ಎಂಬ ಗೋಳು. ನನ್ನ ಸ್ನೇಹಿತ/ತೆ ಅನ್ನುವವರೇ ಇಲ್ಲಾ. ಹೊಸಬರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳಲೇ ಬೇಕಾದ ಅನಿವಾರ್ಯತೆ. ಇದರ ನಡುವೆ ಸಂಕೋಚ. ಇದು ಹುಡುಗ ಹುಡುಗಿ ಇಬ್ಬರಿಗೂ ಆಗುವ ಕಾಲೇಜಿನ ಮೊದಲ ದಿನದ ಅನುಭವ.

ಲೆಕ್ಚರರ್‌ಗಳು ಹೇಗೆ ಇರುತ್ತಾರೋ, ಅವರ ನಡೆನುಡಿ ಹೇಗೋ? ಇತ್ಯಾದಿ ಯೋಚನೆಗಳು. ಏಕೆಂದರೆ, ನಮ್ಮ ನಮ್ಮ ಹಳೆಯ ಶಾಲೆಗಳಲ್ಲಿ ನಾವು ಕಂಡಿರುವಂತೆ ಒಂದಷ್ಟು ಶಿಕ್ಷಕ ಶಿಕ್ಷಕಿಯರು ಇಲ್ಲಿಯೂ ನಮಗೆ ಸಿಗಬಹುದೆ ಎಂದು ಯೋಚನೆ. ಆದರೆ, ನಮಗೆ  ಏನೂ ಮಾಡುವುದಕ್ಕೂ ಬರುವುದಿಲ್ಲ. ಒಂದೆರಡು ದಿನ ಸಾಗಲೇಬೇಕು. ಹೊಸ ಸ್ನೇಹಿತರ ಬಳಗ ಕಟ್ಟಬೇಕು. ಬಿಗು ವಾತಾವರಣವನ್ನು ತಿಳಿ ಮಾಡಬೇಕು. ಆಗ ಮಾತ್ರ ಕಾಲೇಜು ಲೈಫ್ ಎಂಜಾಯ್‌ ಮಾಡಲು ಸಾಧ್ಯ- ಎಂದುಕೊಂಡು ಮನಸ್ಸಿನಲ್ಲಿ ಚಿಕ್ಕ ಭರವಸೆಯನ್ನು ಕೊಂಡುಕೊಳ್ಳಬೇಕು. 

“ನನ್ನ ಚಡ್ಡಿ ದೋಸ್ತ್¤ಗಳೆಲ್ಲ ಬೇರೆ ಬೇರೆ ಕಾಲೇಜುಗಳಿಗೆ ಸೇರಿ¨ªಾರೆ. ನಾನು ಮಾತ್ರ ಈ ಕಾಲೇಜು ನನಗೆ ಯಾರು ಸ್ನೇಹಿತರೇ ಇಲ್ಲ’ ಎಂದು ಈ ಹುಡುಗ ಹುಡುಗಿಯರ ವ್ಯರ್ಥ ಆಲಾಪ! ದೊಡ್ಡ ಕಾಲೇಜು! ಎಷ್ಟೊಂದು ಅಂತಸ್ತುಗಳ ಕಟ್ಟಡ. ಇದೆ ಮೊದಲು ನೋಡಿದ ಅನುಭವ! ಇನ್ನೂ ಎರಡು ವರುಷ ಅದು ಹೇಗೆ ನನ್ನ ಜೀವ ಇಲ್ಲಿ ಬೇಯುವುದೋ!  ಏನೋ ಎಂಬ ದುಃಖ!

ಅಂತೂ ಮೊದಲನೆಯ ತರಗತಿ ಎಂದುಕೊಂಡು ನನ್ನ ತರಗತಿಯನ್ನು ಯಾವ ಕೊಠಡಿಯಲ್ಲಿ ಎಂದು ಹುಡುಕಿಕೊಂಡು ಎರಡು ಮೂರು ಬೆಂಚನ್ನು ಬಿಟ್ಟು ನಾಲ್ಕರಲ್ಲಿ ಮೂಲೆಯಲ್ಲಿ ಕುಳಿತೆ. “ಅಬ್ಟಾ ಏನು ಹುಡುಗರು ಹುಡುಗಿಯರುಗಳು. ಸಖತ್‌ ಫಾಸ್ಟ್‌ ಇದ್ದಾರೆ?’ ಅನಿಸಿತು. ಅವರ ಉಡುಪು ಮತ್ತು ನಡವಳಿಕೆಯನ್ನು ಕಂಡು ನಾನು ಅವರ ಹಾಗೆ ಫ್ಯಾಷನ್‌ ಇದ್ದೇನಾ ಎಂದು ಮನಸ್ಸಿನ ಒಂದು ಮೂಲೆಯಲ್ಲಿ ಆಲೋಚನೆ. ಪಕ್ಕದಲ್ಲಿ ಕುಳಿತುಕೊಂಡವಳು/ನು ಸುಮ್ಮನೇ ನೋಡಿ ನಕ್ಕನು/ಳು ಏನು ಮಾತಾಡಬೇಕೆಂಬುದು ತಿಳಿಯದೆ, “ನೀನು ಯಾವ ಸ್ಕೂಲ್‌ನಿಂದ ಬಂದಿದ್ದೀಯಾ?’ ಎಂದು ಕೇಳ್ಳೋದು, ಸ್ವಲ್ಪ ಹೊತ್ತು ಬಿಟ್ಟು, “ನಿನಗೆ ಎಷ್ಟು ಪರ್ಸೆಂಟ್‌ ಮಾರ್ಕ್ಸ್?’ ಎಂದು ಕೇಳ್ಳೋದು. ಎಲ್ಲಿಯಾದರೂ ಅವರಿಂದ ಸ್ವಲ್ಪ ಜಾಸ್ತಿ ಮಾರ್ಕ್ಸ್ ತೆಗೊಂಡಿದ್ದರೆ ಸ್ವಲ್ಪ ಜಂಭ ಕೊಚ್ಚಿಕೊಳ್ಳೋದು. ಇಷ್ಟು ಕೇಳಲು ಸ್ವಲ್ಪ ಭಯ ಬೇರೆ ಆದರೂ ಅಹಂ ಎನ್ನುವುದು ಬಿಡುತ್ತಿರಲಿಲ್ಲ.

– ಸೌಮಿನಿ ಹನುಮಜೆ
ಮೊದಲ ಬಿಸಿಎ, ಕಾಲೇಜು, ಪುತ್ತೂರು

ಟಾಪ್ ನ್ಯೂಸ್

CTR-Wife-pallavi

ಸುಮ್ನೆ ಬ್ಯಾಂಡೇಜ್‌ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

CTR-Wife-pallavi

ಸುಮ್ನೆ ಬ್ಯಾಂಡೇಜ್‌ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.