ಪಾಸ್‌ವರ್ಡ್‌ ಮರೆತುಹೋಗಿದೆ!


Team Udayavani, Jan 6, 2017, 3:45 AM IST

password.jpg

ಇಂದು ವಾಟ್ಸ್‌ಆಪ್‌, ಫೇಸ್‌ಬುಕ್‌, ಟ್ವೀಟರ್‌ ಅಂತ ಎಣಿಕೆ ಇಲ್ಲದ ಸಾಮಾಜಿಕ ಜಾಲತಾಣಗಳದ್ದೇ ಕಾರುಬಾರು. ಅಂಬೆಗಾಲಿನಲ್ಲಿ ನಡೆಯುವ ಮಕ್ಕಳಿಂದ ಹಿಡಿದು ಹಣ್ಣು ಹಣ್ಣು ಮುದುಕರ ಕೈಯಲ್ಲೂ ಮೊಬೈಲ್‌. ಅದರಲ್ಲಿ ಏನು ಇದೆಯೋ? ಏನು ಯೂಸ್‌ ಮಾಡ್ತಾರೋ ಗೊತ್ತಿಲ್ಲ. ಪ್ರಪಂಚ ಮುಳುಗಿ ಹೋದರೂ ಲೋಕಜ್ಞಾನ ಇಲ್ಲದಂತೆ ಅದರಲ್ಲೇಮುಳುಗಿರುತ್ತಾರೆ ನಮ್ಮ ಜನ.

ಇಷ್ಟೆಲ್ಲಾ ಹೇಳಿದವಳು ನಾನೇನು ಮೊಬೈಲ್‌, ಇಂಟರ್‌ನೆಟ್‌ ಯೂಸ್‌ ಮಾಡಿಲ್ಲ ಅಂತ ಏನಿಲ್ಲ. ಒಂದು ಹೊತ್ತು ಊಟ ಬಿಟ್ಟರೂ, ಒಂದು ಕ್ಲಾಸ್‌ ಮಿಸ್‌ ಮಾಡಿದರೂ ಕೂಡ ಮೊಬೈಲ್‌ನಲ್ಲಿ ಫ್ರೆಂಡ್ಸ್‌ ಜೊತೆ ಚಾಟ್‌ ಮಾಡದಿದ್ದರೆ ಏನೋ ಕಳೆದುಕೊಂಡೆ ಅಂತ ಅನಿಸುತ್ತದೆ. ಹೀಗೆ, ನಾನು ಎಲ್ಲರಂತೆ ತಾಣಗಳ ಅಭಿಮಾನಿ ಅಲ್ಲ , ಅಲ್ಲ ಸಾರೀ… ಸಾಮಾಜಿಕ ತಾಣಗಳ ಅಭಿಮಾನಿ. ಏನು ಅರಿವಿಲ್ಲದ ನನಗೆ ನನ್ನ ಅಣ್ಣ ಮೂರು ವರ್ಷಗಳ ಹಿಂದೆ ಫೇಸ್‌ಬುಕ್‌ ಅಕೌಂಟ್‌ ಮಾಡಿಕೊಟ್ಟಿದ್ದ. ಆದರೆ ಅದನ್ನು ಬಳಸುವುದು ಹೇಗೆ ಎಂಬುದು ಗೊತ್ತಾಗಲು ಒಂದು ವರ್ಷ ಹಿಡಿದಿತ್ತು. ಫೇಸ್‌ಬುಕ್‌ ಗೊತ್ತಾಗದಿದ್ದರೇನು ವಾಟ್ಸ್‌ಆಪ್‌ಇದೆಯಲ್ಲ ಎಂದು ಖುಷಿಯಲ್ಲಿದ್ದೆ.

ಹೀಗೆ, ಎರಡು ಆಪ್‌ಗ್ಳಿಗೆ ಅಂಟಿಕೊಂಡಿದ್ದ ನನಗೆ ಗೆಳೆಯರು ಬೇರೆ ಬೇರೆ ಆಪ್‌ಗ್ಳ ಪರಿಚಯ ಮಾಡಿದ್ದರು. ಆಸಕ್ತಿ ಇಲ್ಲದ ಕಾರಣ ಅದಕ್ಕೆ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ನಾನೆಂದೂ ಕೇಳಿರದ ಒಂದು ಆಪ್‌ನ ಚರ್ಚೆ ನಮ್ಮ ಕ್ಲಾಸ್‌ನಲ್ಲಿ ನಡೆಯಿತು. ಅದುವೇ ಇನ್ಸಾಗ್ರಾಮ್‌. ಹಾಗೆಂದರೇನು? ಅದನ್ನು ಯಾವುದಕ್ಕಾಗಿ ಉಪಯೋಗಿಸುತ್ತಾರೆ? ಎಂದು ಕೇಳಿದೆ. “ಟೆಲಿಗ್ರಾಮ್‌ ಹೋಗಿ ಇನ್ಸಾಗ್ರಾಮ್‌ ಬಂದ್ರು ನೀನು ಇನ್ನೂ ಅಪ್‌ಡೇಟ್‌ ಆಗಿಲ್ಲ’ ಎಂದು ತಮಾಷೆ ಮಾಡಿದ್ರು ಗೆಳೆಯರು. ಸ್ವಲ್ಪ ಕೋಪ, ಸ್ವಲ್ಪ ಬೇಜಾರು ಆದರೂ ಸುಮ್ಮನಿದ್ದೆ. ಮನೆಗೆ ಬಂದವಳೇ ಏನದು ಎಂದು ನೋಡಲೇಬೇಕು ಅಂತ ಕೊನೆಗೂ ಅದನ್ನು ಡೌನ್‌ಲೋಡ್‌ ಮಾಡಿದೆ.

ಒಂದು ಹಳ್ಳಿಗುಗ್ಗನ್ನು ಬೆಂಗಳೂರು ನಗರದಲ್ಲಿ ಒಯ್ದು ಬಿಟ್ಟರೆ ಯಾವ ಊರು, ಯಾವ ನಗರ, ಓಣಿ ಎಂದು ಗೊಂದಲ ಹುಟ್ಟಿಸುವಂತೆ ಇತ್ತು ಆ ಇನ್ಸಾ$rಗ್ರಾಮ್‌. ದೇವಾ ! ಏನು ಮಾಡೋದು ಎಂದು ಗೊತ್ತಾಗಲಿಲ್ಲ. ಪೊ›ಫೈಲ್‌ಗೆ ಒಂದು ಚೆಂದದ ಫೋಟೋ ಹಾಕಿದೆ ಅಷ್ಟೇ, ಮರುದಿನವೇ ಅದು ಬೇಡ ಎನಿಸಿ ಡಿಲೀಟ್‌ ಕೂಡ ಮಾಡಿದೆ. 

ನಂತರ ಆ ಇನ್ಸಾ$rಗ್ರಾಮ್‌ನ ಸುದ್ದಿಗೆ ಹೋಗಲಿಲ್ಲ. ಫೇಸ್‌ಬುಕ್‌ ಮತ್ತು ಇನ್ಸಾ$r ಎರಡು ಜೊತೆಯಲ್ಲಿರುವುದರಿಂದ ನಾನು ಫೇಸ್‌ಬುಕ್‌ ನೋಡಿದಾಗ ಅದರಲ್ಲಿ ಫೋಲೊವಿಂಗ್‌ ಎಂಬ ಸಂದೇಶ ಸಿಗುತ್ತಿತ್ತು. ನನ್ನನ್ನು ಕಾಲೇಜಿನಲ್ಲಿ ಫಾಲೋ ಮಾಡುವವರನ್ನೇ ಕೇರ್‌ ಮಾಡದ ನಾನು ಇನ್ನು ಯಾರೋ ಇನ್ಸಾ$rದಲ್ಲಿ ಫಾಲೋ ಮಾಡ್ತಾರಂತೆ. ಅವರನ್ನು ಯಾರು ಕೇರ್‌ ಮಾಡುತ್ತಾರೆ.

ಬರೋಬ್ಬರಿ ಒಂದು ವರ್ಷ ಹತ್ತಿರ ಆಯ್ತು ನಾನು ಇನ್ಸಾ$r ಅಕೌಂಟ್‌ ಮಾಡಿ.ಅದು ಒಂದು ದಿನಕ್ಕೆ ಸೀಮಿತ ಆಗಿತ್ತು. ಫೇಸ್‌ಬುಕ್‌ನಲ್ಲಿ ಇತ್ತೀಚೆಗೆ ಸುಮಾರು ಒಂದು ಸಾವಿರಕ್ಕೂ ಜಾಸ್ತಿ ಫಾಲೋವರ್ ಇದ್ದಾರೆ ಎಂಬ ನೋಟಿಫಿಕೇಶನ್‌ ಸಿಕು¤. ಅದನ್ನು ನೋಡಿ ಶಾಕ್‌ಆಯ್ತು, ಅವರು ಯಾರೆಂದು ನೋಡಬೇಕು ಅಂತ ಕುತೂಹಲನೂ ಆಯ್ತು. ಆದರೆ ಅದನ್ನು ನೋಡುವ ಮನಸ್ಸು ಆಗಲಿಲ್ಲ. ಇನ್ನೊಂದು ತಮಾಷೆ ವಿಷಯ ಅಂದರೆ ಅದರ ಪಾಸ್‌ವರ್ಡ್‌ ಕೂಡ ನೆನಪಿಲ್ಲ.  

– ಅನ್ವಯ ಎಂ.
ಪ್ರಥಮ ಎಂ.ಸಿ.ಜೆ
ಆಳ್ವಾಸ್‌ ಕಾಲೇಜು, ಮೂಡಬಿದಿರೆ.

ಟಾಪ್ ನ್ಯೂಸ್

Mudhola

Mudhola: ಸಿಲಿಂಡರ್ ಸ್ಫೋಟ: ಹೊತ್ತಿ ಉರಿದ ಮನೆ

Madikeri: ಹುಲಿ ದಾಳಿಯಲ್ಲ, ಕಾಡು ಬೆಕ್ಕಿನ ದಾಳಿ: ವ್ಯಕ್ತಿಗೆ ಗಂಭೀರ ಗಾಯ

Madikeri: ಹುಲಿ ದಾಳಿಯಲ್ಲ, ಕಾಡು ಬೆಕ್ಕಿನ ದಾಳಿ: ವ್ಯಕ್ತಿಗೆ ಗಂಭೀರ ಗಾಯ

Laxmi-Heebalakar1

ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್‌ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ

Kalaburagi-Acci

Kalaburagi: ಟಿಟಿ ಟಯರ್‌ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!

Jagadambika-Pal-(JPC)

Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

arest

Kundapura: ಅಂಬರ್‌ ಗ್ರೀಸ್‌ ಮಾರಾಟ ಪ್ರಕರಣ; ಮತ್ತೋರ್ವ ಆರೋಪಿಯ ಬಂಧನ

Mudhola

Mudhola: ಸಿಲಿಂಡರ್ ಸ್ಫೋಟ: ಹೊತ್ತಿ ಉರಿದ ಮನೆ

7

Kasaragod: ಅಂಗಡಿಗೆ ನುಗ್ಗಿದ ಕಾಡು ಹಂದಿ

5

Kadaba: ಮೇಯಲು ಬಿಟ್ಟ ದನದ ಕಾಲು ಕಡಿದ ವ್ಯಕ್ತಿ; ದೂರು

dw

Siddapura: ವಿದ್ಯುತ್‌ ಲೈನಿಗೆ ಕೊಕ್ಕೆ ತಾಗಿ ಕಾರ್ಮಿಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.