ಕಣ್ಣಿಗೆ ಕಾಣೋ ದೇವರು
Team Udayavani, Aug 4, 2017, 10:35 AM IST
ಅಬ್ಟಾ ! ಇವತ್ತಂತೂ ಭಾನುವಾರ ಬೆಳಿಗ್ಗೆ ಬೇಗ ಎದ್ದೊಡನೆ ಕಾಲೇಜಿಗೆ ಓಡಬೇಕೆಂಬ ಸಮಸ್ಯೆನೇ ಇಲ್ಲ. ಆರಾಮಾಗಿ ಮಲಗಿ ಕಣ್ಣುಬಿಟ್ಟು ನೋಡಿದಾಗ ಗಂಟೆ 8.15 ಆಗಿತ್ತು. ಹಾಸ್ಟೆಲ್‌ನಲ್ಲಿ ಇದ್ದ ಕಾರಣ ಅಮ್ಮನ ರುಚಿಯಾದ ಕೈ ಅಡುಗೆ ಸವಿಯಲು ಆಗದಿದ್ದರೂ, ಹೊಟ್ಟೆಯ ಹಸಿವನ್ನು ತಾಳಲಾರದೆ ಪೂರಿಯನ್ನು ತಿಂದು ಸುಮ್ಮನಾದೆ.
ಯಾಕೋ ನನ್ನ ಗೆಳತಿಯರಾದ ಪಲ್ಲು ಮತ್ತು ಅಮ್ಮು ನೆನಪಾದರು. ನನ್ನ ಕಾಲೇಜಿನ ಸಿಹಿನೆನಪುಗಳನ್ನು ಆ ನೆನಪುಗಳು ಅಲ್ಪಸ್ವಲ್ಪ ಹಿಂದಿರುಗಿಸಿದ್ದವು. ನಮ್ಮ ತುಂಟಾಟದ ದಿನಗಳನ್ನು , ವಾರ್ಡನ್ ಹತ್ತಿರ ಕೇಳಿದ ಬೈಗುಳಗಳು, ಕದ್ದು ತಿಂದ ತಿಂಡಿಗಳು, ಶಾಪಿಂಗ್ ಮಾಡಿದ್ದು, ಎಕ್ಸಾಮ್‌ಗೆ ರಾತ್ರಿಯೆಲ್ಲ ಓದಿದ್ದು, ಚಿಕ್ಕ ವಿಷಯಕ್ಕೆ ದೊಡ್ಡ ಜಗಳ ಮಾಡಿದ್ದು, ಬರ್ತ್‌ಡೇ ಸೆಲಬ್ರೇಟ್ ಮಾಡಿದ್ದು ಹೀಗೆ ಒಂದಾ! ಎರಡಾ! ಬರೋಬ್ಬರಿ ಎರಡು ವರ್ಷದ ಸಿಹಿ ನೆನಪುಗಳು ಅವು. ಆ ಮುದ್ದಾದ ನೆನಪುಗಳು ಸದಾ ನೆನಪಿರಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತಿರುವಾಗ ನನ್ನ ಮೊಬೈಲ್ ಒಂದೇ ಸಮನೆ ಹಾಡಲು ಶುರುವಾಯಿತು. “”ಅಯ್ಯೋ! ಇರೋ ಬಂದೇ ಅದೆಷ್ಟು ಕಿರುಚುತ್ತೀಯಾ” ಅಂಥ ಆ ಮೊಬೈಲ್‌ಗೆ ಬಯ್ಯುತ್ತ¤ ಹತ್ತಿರ ಬಂದ್ರೆ ನನಗೆ ಒಂದು ದೊಡ್ಡ ಶಾಕ್!
ಅದೇನು ಅಂದ್ರೆ ನನ್ನ ಬೆಸ್ಟ್ ಫ್ರೆಂಡ್ ಪಲ್ಲು ಕಾಲ್ ಬರುತ್ತಾ ಇತ್ತು. ಅರೆರೇ, ಈಗ ತಾನೆ ನೆನಪಿಸಿಕೊಳ್ಳುತ್ತಾ ಇದ್ದೆ. ಅಷ್ಟು ಬೇಗ ಫೋನ್ ಬಂತಲ್ಲ ಅಂಥ ಖುಷಿಗೆ ಫೋನ್ ರಿಸೀವ್ ಮಾಡೆª. “”ಹಾಯ್ ಪಲ್ಲು ಹೇಗಿದ್ಯಾ, ಮಿಸ್ ಮಾಡ್ತಿನಿ ಕಣೇ ನಿನ್ನ, ನನಗೆ ಮತ್ತೆ ಪಿಯುಗೆ ಹೋಗಿ ಮತ್ತೆ ನಾವೆಲ್ಲ ಹೇಗೆ ತರೆಲ ಮಾಡ್ತಾ ಇದ್ನೋ ಹಾಗೆ ಮಾಡಬೇಕು ಅನಿಸ್ತಾ ಇದೆ ಗೊತ್ತಾ, ಮತ್ತೆ ಇನ್ನೇನು ಸಮಾಚಾರ? ಈ ಸಲ ರಜೆಗೆ 100% ನಿಮ್ಮ ಮನೆಗೆ ಬರ್ತೀನಿ ಆಯ್ತಾ” ಅಂಥ ನಾನೊಬ್ಬಳೇ ಮಾತನಾಡುತ್ತ ಇದ್ದೆ. ಆ ಕಡೆಯಿಂದ ಯಾವ ಧ್ವನಿನೇ ಕೇಳ್ತಾ ಇಲ್ಲ. ಹಲೋ ಪಲ್ಲು ಕೇಳ್ತಾ ಇದ್ಯಾ, ಮಾತಾಡು ಪಲ್ಲು” ಅಂದೆ.
ಆ ಕಡೆಯಿಂದ ಅಳುತ್ತ¤ ಇರೋ ಶಬ್ದ ಕೇಳಿಬಂತು. ನನಗೆ ಗಾಬರಿ ಆಯ್ತು. “”ಯಾಕೋ, ಏನಾಯ್ತು ಪಲ್ಲು?” ಅಂದೆ. ಅವಳು ಇನ್ನೂ ಜೋರಾಗಿ ಅಳ್ಳೋಕೆ ಶುರು ಮಾಡಿದ್ಲು. “”ಅಯ್ಯೋ ಪಲ್ಲು ಮಂಗಳೂರಿನಲ್ಲಿ ಸಾಕಷ್ಟು ಮಳೆ ಬರ್ತಾ ಇದೆ ಮಾರಾಯ್ತಿ ನೀನೇನು ಅಳ್ಳೋದು ಬೇಡ. ಬರ್ಲಿಲ್ಲ ಅಂದ್ರೆ ಹೇಳ್ತೀನಿ ಆಗ ಅಳು” ಅಂತ ತಮಾಷೆ ಮಾಡ್ದೆ. ಅವಳು ಅಳ್ಳೋದನ್ನ ಕಂಟ್ರೋಲ್ ಮಾಡಿ ನಿಧಾನವಾಗಿ, “”ಅಪ್ಪಿ ಹೇಗಿದ್ಯಾ” ಅಂದ್ಲು. “”ನನ್ನ ಕಥೆ ಬಿಡು ಮಾರಾಯ್ತಿ ನೀನು ಹೇಳು ಏನಾಯ್ತು” ಅಂದೆ. ಅವಳು, “”ಏನೂ ಇಲ್ಲ ಸುಮ್ನೆ ಫೋನ್ ಮಾಡ್ದೆ” ಅಂದ್ಲು. “”ಲೇ ನಿನ್ನ ಬುದ್ಧಿ ನನಗೆ ಗೊತ್ತಿಲ್ವ ಸುಮ್ನೆ ಏನಾಯ್ತು ಹೇಳು” ಅಂದೆ.
“”ಅಪ್ಪ ನಿನ್ನೆ ಹೊಡುದ್ರು ಕಣೇ, ತುಟಿಲೀ ರಕ್ತ ಬರ್ತಾ ಇತ್ತು. ಇನ್ನೂ ತುಂಬಾ ನೋವು ಇದೆ” ಅಂದ್ಲು. ಅಮ್ಮನು ಈ ನಡುವೆ ಸರಿಯಾಗಿ ಮಾತಾಡಲ್ಲ, ನನ್ನ ಒಳ್ಳೆ ಶತ್ರು ಹಾಗೆ ನೋಡ್ತಾಳೆ. ನಾನು ಎಷ್ಟೇ ಪ್ರೀತಿ ಮಾಡಿದ್ರು ಅವರಿಗೆ ತಮ್ಮನ ಮೇಲೆನೆ ಪ್ರೀತಿ. ನನ್ನ ಬಗ್ಗೆ ಪ್ರೀತಿನೇ ಇಲ್ಲ. ನನಗೆ ನೋವು ಸಹಿಸೋಕೆ ಆಗ್ತಾ ಇಲ್ಲ” ಅಂದ್ಲು. “”ತಿಳಿಯದ ವಯಸ್ಸಿನಲ್ಲಿ ಮಾಡಿದ ಒಂದು ಚಿಕ್ಕ ತಪ್ಪಿಗಾಗಿ ಅಮ್ಮ ಇನ್ನೂ ನನ್ನ ಹತ್ರ ಸರಿಯಾಗಿ ಮಾತಾಡ್ತಾ ಇಲ್ಲ. ಅಪ್ಪ ಅಂತೂ ತಮ್ಮನೇ ಪ್ರಪಂಚ ಅನ್ನೋ ಥರಾ ಮಾಡ್ತಾರೆ. ನನಗೆ ಏನು ಮಾಡಬೇಕು ಅಂತಾನೇ ಗೊತ್ತಾಗ್ತಾ ಇಲ್ಲ” ಅಂತ ಹೇಳಿ ಮತ್ತೆ ಅಳ್ಳೋಕೆ ಶುರು ಮಾಡಿದ್ಲು. ಮಂಗಳೂರಿನಲ್ಲಿ ಮಳೆ ಬರ್ತಾ ಇದೆ ಅನ್ನೋದನ್ನೇ ಮರೆತು ನಾನು ಅವಳ ಜೊತೆ ಅಳ್ಳೋಕ್ಕೆ ಶುರು ಮಾಡ್ದೆ. ಹೇಗೋ ಸಮಾಧಾನ ಮಾಡ್ಕೊಂಡು “”ನೋಡು ಪಲ್ಲು ಅಪ್ಪ ಅಮ್ಮ ಬಿಟ್ರೇ ನಮ್ಮನ್ನ ಇನ್ನು ಯಾರು ಹೊಡಿಯೋಕೆ, ಬೈಯೋಕೆ ಸಾಧ್ಯ ಹೇಳು? ಏನಾಗಲ್ಲ ಎಲ್ಲ ಸರಿ ಆಗುತ್ತೆ, ಓದೋ ಕಡೆ ಗಮನ ಕೊಡು” ಅಂತ ಹೇಳಿ ಆದಷ್ಟು ಸಮಾಧಾನ ಮಾಡಿ ಫೋನ್ ಕಟ್ ಮಾಡ್ದೆ.
ಆದರೂ ಮನಸ್ಸಿನಲ್ಲಿ ಗೊಂದಲ ತುಂಬಾನೇ ಇತ್ತು. ನನ್ನ ಎಲ್ಲ ಗೊಂದಲಗಳಿಗೂ ಒಂದೇ ಮದ್ದು. ಅದು “ನನ್ನಮ್ಮ’. ತಕ್ಷಣ ಕಾಲ್ ಮಾಡ್ದೆ. ಅಮ್ಮನಿಗೆ ವಿಷಯವನ್ನೆಲ್ಲ ಹೇಳಿದೆ. ಆಗ ಅಮ್ಮ, “”ನೋಡು ಅಪ್ಪಿ, ಅಪ್ಪ-ಅಮ್ಮ ತಮ್ಮ ಜೀವನವನ್ನೇ ಪಣಕ್ಕಿಟ್ಟು ತಮ್ಮ ಆಸೆ-ಆಕಾಂಕ್ಷೆಗಳನ್ನು ಬಲಿಕೊಟ್ಟು ನಿಮ್ಮನ್ನ ಓದಿಸ್ತಾರೆ, ಕೇಳಿದ್ದೆಲ್ಲ ಕೊಡಿಸ್ತಾರೆ. ಆದರೆ ನೀವು ಅವರ ಮನಸ್ಸಿಗೆ ಮಾಸದ ಗಾಯ ಮಾಡಿದ್ರೆ ಅವರಿಗೆ ಸಹಿಸಿಕೊಳ್ಳೋಕೆ ಆಗಲ್ಲ. ಅದಕ್ಕೆ ಮಕ್ಕಳೇ ಅಪ್ಪ ಅಮ್ಮನಿಗೆ ಬೇಜಾರು ಆಗದೆ ಇರೋ ಹಾಗೆ ಇರಬೇಕು” ಅಂದ್ರು.
“”ಮಮ್ಮಿ, ಮಕ್ಕಳು ತಪ್ಪು ಮಾಡದೆ ಇನ್ಯಾರ್ ಮಾಡ್ತಾರೆ? ಅದನ್ನೆಲ್ಲ ಮನಸ್ಸಲ್ಲಿ ಇಟ್ಟುಕೊಂಡು ಅವರು ಹೀಗೆ ಮಾಡೋದು ಸರಿನಾ ಹೇಳು” ಅಂತ ಕೇಳಿದೆ. ಅದಕ್ಕೆ ಮಮ್ಮಿ- “”ಹೂ ನೀನು ಹೇಳ್ಳೋದು ಸರಿನೇ, ಮಕ್ಕಳು ದಾರಿ ತಪ್ಪದ ಹಾಗೆ ನೋಡ್ಕೊàಬೇಕಾಗಿರೋದು ತಂದೆ-ತಾಯಿ ಕರ್ತವ್ಯ. ಮಕ್ಕಳನ್ನ, ಮಕ್ಕಳ ಹಾಗೆೆ ನೋಡದೆ, ಫ್ರೆಂಡ್ಸ್ ತರಹ ಟ್ರೀಟ್ ಮಾಡಬೇಕು, ಅವರ ಹಂತಕ್ಕೆ ಇಳಿದು ಅವರ ಸಮಸ್ಯೆಗಳನ್ನ ಸರಿ ಮಾಡಬೇಕು. ಹೆಣ್ಣಾಗಲಿ, ಗಂಡಾಗಲಿ ಎಲ್ಲರೂ ಒಂದೇ ಅಂಥ ತಿಳ್ಕೊಬೇಕು. ಸಮಾನವಾಗಿ ನೋಡ್ಕೊàಬೇಕು. ಮಕ್ಕಳು ದೇವರು ಕೊಡೋ ವರ ಕಣೇ” ಅಂತ ಹೇಳಿದ್ರು.
ಯಾಕೋ ತುಂಬಾನೇ ಅಮ್ಮನ್ನ ಮೇಲೆ ಪ್ರೀತಿ ಉಕ್ಕಿ ಬಂತು. ಹಾಗೇ ಕಣ್ಣೀರೂ ಬಂತು. “”ಮಮ್ಮಿ ಯಾಕೆ ಇಷ್ಟು ಪ್ರೀತಿ ಮಾಡ್ತೀಯಾ” ಅಂತ ಕೇಳ್ದೆ.
ಹಗಲಿಡೀ ದುಡಿದು, ಕೇಳಿದ್ದೆಲ್ಲ ಕೊಡಿಸಿ, ಚೂರು ಕಷ್ಟವನ್ನು ನಮ್ಮಲ್ಲಿ ಹೇಳಿಕೊಳ್ಳದ ಅಪ್ಪ , ತನ್ನ ಜೀವನವೇ ನನ್ನ ಮಗಳು ಅಂತ ಹೇಳಿ, ತನ್ನ ಖುಷಿಯನ್ನೇ ತ್ಯಾಗ ಮಾಡಿ ಮಕ್ಕಳ ಸುಖ-ಸಂತೋಷ ಬಯಸೋ ತಾಯಿ ಕಣ್ಣಿಗೆ ಕಾಣಿಸೋ ದೇವರು. “ಅಪ್ಪ ಅಮ್ಮ ಲವ್ ಯು ಆಲ್‌ವೇಸ್…’ ಅಂತ ಹೇಳಿ ಭಾರವಾದ ಹೃದಯದಿಂದ ಫೋನ್ ಇಟ್ಟೆ.
ಅರ್ಪಿತಾ ಕೆ.ಪಿ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.