ಹವ್ಯಾಸಗಳತ್ತ ಹಂಬಲಿಸಿದೆ ಮನ !
Team Udayavani, Jan 18, 2019, 12:30 AM IST
ಹವ್ಯಾಸಗಳನ್ನು ದೇವರು ಕೊಟ್ಟ ವರವೆಂದರೆ ತಪ್ಪಿಲ್ಲ. ಇವುಗಳಿಂದಲೇ ಎಲ್ಲರೂ ಸ್ವತಂತ್ರವಾಗಿ ಚಟುವಟಿಕೆಯಲ್ಲಿ ತೊಡಗಿ, ತೃಪ್ತಿಪಡುವುದನ್ನು ಕಾಣುತ್ತೇವೆ. ಹವ್ಯಾಸಗಳಿಂದ ಸಮಯವು ಯೋಗ್ಯವಾಗಿ ಸದ್ವಿನಿಯೋಗವಾಗುತ್ತದೆ ಎಂಬ ಖುಷಿಯೂ ಸಿಗುತ್ತದೆ.
ನಮ್ಮ ಬಾಲ್ಯದೆಡೆಗೆ ಮನಸ್ಸನ್ನು ಕೊಂಡೊಯ್ದಾಗ ಹವ್ಯಾಸಗಳ ಸರಮಾಲೆಯೇ ಕಣ್ಣಂಚಿಗೆ ಬರುತ್ತದೆ. ಆ ಕಾಲದಲ್ಲಿ- ಓದುವುದು, ಬರೆಯುವುದು, ಹಾಡುವುದು, ರೇಡಿಯೋ ಕೇಳುವುದು, ನಾಟಕ-ಯಕ್ಷಗಾನ, ಈಜುವುದು, ಸೈಕಲ್ ಸವಾರಿ, ಮರಹತ್ತುವುದು, ಬೆಟ್ಟ ಹತ್ತುವುದು, ಚಿತ್ರ ಮಾಡುವುದು, ಓಟ, ಮೀನು ಹಿಡಿಯುವುದು, ಕಾಗದದ ಡಿಸೈನ್‌ಗಳು, ಸಂಗೀತ ಉಪಕರಣಗಳ ಅಭ್ಯಾಸ… ಅಬ್ಬಬ್ಟಾ ! ಮುಗಿಯದಷ್ಟಿವೆ. ಆದರೆ, ಈಗ ಮೊಬೈಲ್, ಟೀವಿ, ಲ್ಯಾಪ್‌ಟಾಪ್‌ಗ್ಳಿಂದಾಗಿ ಹವ್ಯಾಸಗಳೆಲ್ಲ ನೆನಪಿನಂಚಿಗೆ ಜಾರುತ್ತಿದೆ. ಪ್ರತಿಯೊಂದು ಹವ್ಯಾಸದಲ್ಲೂ ಒಂದು ಚತುರತೆ ಎನ್ನುವುದಿದೆ. ಉದಾಹರಣೆಗೆ- ಚೆಸ್‌ಆಡುವವರಿಗೆ ತಾಳ್ಮೆ ಹಾಗೂ ಮನಸ್ಸನ್ನು ಗೆಲುವಿನೆಡೆಗೆ ಕೊಂಡೊಯ್ಯುವ ಚಾತುರ್ಯ ಸಿಗುತ್ತದೆ. ಇಂಥ ಹತ್ತು ಹಲವು ದೃಷ್ಟಾಂತಗಳಿವೆ. ಹಿರಿಯರು ಚಿಕ್ಕಮಕ್ಕಳಿಗೆ ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳಲು ಪ್ರೋತ್ಸಾಹಿಸುವುದು ಸಸಿಗೆ ಹಾಕುವ ನೀರು, ಗೊಬ್ಬರಗಳಂತೆಯೆ. ಒಳ್ಳೆಯ ಫಲ ಕೊಡುತ್ತವೆ.
ನಾವು ಎಷ್ಟೋ ಸಲ ಒಳ್ಳೆಯ ಸಂದರ್ಭ ಬರಲಿ ಎಂದು ಹವ್ಯಾಸವನ್ನು ತಿರಸ್ಕರಿಸಿ ಸಮಯ ಹಾಳು ಮಾಡಿದ್ದೇವೆ. ಆದರೆ, ಕಳೆದು ಹೋದ ಸಮಯ ಮತ್ತ ಬಾರದು. ನಾವೆಲ್ಲ ಸಮಯದ ಅಭಾವವೆಂಬ ನೆಪದಿಂದ ಹವ್ಯಾಸಗಳನ್ನೇ ಮರೆತಿದ್ದೇವೆ. ಒಳ್ಳೆಯ ಹವ್ಯಾಸವು ನೆಮ್ಮದಿ, ಸಂತಸ, ಮನಶ್ಯಾಂತಿ ನೀಡುತ್ತದೆ. ಅದಕ್ಕೆ ನಿರಂತರತೆ ಬೇಕು ಅಷ್ಟೆ. ಹಳೆಯ ನೆನಪಿನೊಂದಿಗೆ ಈಗ ಸಿಗುವ ಬಿಡುನ ಸಮಯದಲ್ಲಿ ಮೊಬೈಲ್ ಬದಿಗಿಟ್ಟು ಹವ್ಯಾಸಗಳನ್ನು ಮರೆಯಾಗದಂತೆ ಅನುಭಸೋಣ, ಏನಂತೀರ?
ಮುಕೇಶ್ ನೆಕ್ಕರಡ್ಕ
ಪ್ರಥಮ ಸ್ನಾತಕೋತ್ತರ ಪತ್ರಿಕೋದ್ಯಮ ಭಾಗ
ಮಂಗಳೂರು ಶ್ವದ್ಯಾನಿಲಯ, ಕೋಣಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.