ಬೇಸಿಗೆಯಲ್ಲಿ ಕೂದಲ ಆರೈಕೆ


Team Udayavani, Apr 5, 2019, 6:00 AM IST

d-15

ಕೂದಲ ಹೊಳಪು ಮಾಸುವುದು, ಬೆವರು, ಧೂಳು, ಬಿಸಿಲಿನ ಝಳದಿಂದ ಕೂದಲು ಉದುರುವುದು, ತುರಿಕೆ, ಹೊಟ್ಟು , ಒಣಕೂದಲು ಇತ್ಯಾದಿ ಬೇಸಿಗೆಯಲ್ಲಿ ಅಧಿಕವಾಗಿ ಕಂಡುಬರುತ್ತದೆ.

ಬೇಸಿಗೆಯಲ್ಲಿ ಕೂದಲು ಬೇಗನೆ ಶುಷ್ಕವಾಗುವುದರಿಂದ ಯಾವುದೇ ಅಧಿಕ ಹೇರ್‌ ಟ್ರೀಟ್‌ಮೆಂಟ್‌ ಅಥವಾ ರಾಸಾಯನಿಕಗಳನ್ನು ಉಪಯೋಗಿಸಿ ಕೂದಲಿನ ಸೌಂದರ್ಯ ವರ್ಧನೆ ಮಾಡುವುದು ಹಿತಕರವಲ್ಲ. ಉತ್ತಮ ಮೂಲಿಕೆಯ ಶ್ಯಾಂಪೂ, ಹೇರ್‌ ಕಂಡೀಶನರ್‌ಗಳ ಬಳಕೆ ಅವಶ್ಯ. ಈಜುಕೊಳ ಬಳಸುವವರು ಕೂದಲಿಗೆ ಶ್ಯಾಂಪೂ ಬಳಸಿ ಈಜಾಡಲು ಹೋಗಕೂಡದು. ಕೂದಲಿಗೆ ಎಣ್ಣೆ ಹಚ್ಚಿದರೆ ಹಿತಕರ. ಈಜಾಡಿದ ಬಳಿಕ ಈಥೈಲಿನ್‌ ಟೆಟ್ರಾ ಅಸಿಟಿಕ್‌ ಆಮ್ಲದ ಅಂಶವುಳ್ಳ ಶ್ಯಾಂಪೂ ಬಳಸಿದರೆ, ಈಜುಕೊಳದ ನೀರಿನಲ್ಲಿರುವ ಕ್ಲೋರಿನ್‌ನಿಂದ ಕೂದಲಿಗೆ ಉಂಟಾಗುವ ಹಾನಿ ನಿವಾರಣೆಯಾಗುವುದು.

ಬೇಸಿಗೆಯಲ್ಲಿ ಕೂದಲು ಒಣಗಿಸಲು ಡ್ರೈಯರ್‌ ಬಳಸುವುದು ಉತ್ತಮವಲ್ಲ. ಅಂತೆಯೇ ಕೂದಲಿಗೆ ಬಳಸುವ ಕಲರ್‌, ಸ್ಟ್ರೇಯ್‌ ನರ್‌ ಇತ್ಯಾದಿಗಳು ಹಿತಕರವಲ್ಲ. ಉತ್ತಮ ವಿನ್ಯಾಸದ ಹೇರ್‌ಕಟ್‌ ಅವಶ್ಯ. ಜೊತೆಗೆ ಉದ್ದ ಕೂದಲು ಉಳ್ಳವರು 4-6 ವಾರಗಳಿಗೊಮ್ಮೆ ಒಂದೂವರೆ ಇಂಚಿನಷ್ಟು ಕೂದಲ ತುದಿ ಕತ್ತರಿಸಿದರೆ ಬೇಸಿಗೆಯಲ್ಲಿ ಕೂದಲಿನ ತುದಿ ಬಿರಿಯುವುದು ಅಥವಾ ಸ್ಪ್ಲಿಟ್‌ ಎಂಡ್‌ ನಿವಾರಣೆಯಾಗುತ್ತದೆ.

ಕೂದಲಿಗೆ ವೈವಿಧ್ಯಮಯ ರಂಗು (ಕಲರ್‌)ಗಳನ್ನು ಬಳಸುವುದು ಈಗಿನ ಟ್ರೆಂಡ್‌. ಆದರೆ, ಇಂತಹ ಕೆಮಿಕಲ್‌ ಟ್ರೀಟ್‌ಮೆಂಟ್‌ನಿಂದ ಕೂದಲು ಶುಷ್ಕವಾಗುತ್ತದೆ ಹಾಗೂ ಬೇಸಿಗೆಯಲ್ಲಿ ಕಾಂತಿಯನ್ನೂ ಕಳೆದುಕೊಳ್ಳುತ್ತದೆ. ಆದ್ದರಿಂದ ಹೇರ್‌ಕಲರ್‌ ಬಳಸುವವರು ವಿಶೇಷ ಆರೈಕೆ ಮಾಡಬೇಕಾಗುತ್ತದೆ. ಉದಾಹರಣೆಗೆ ಕೂದಲಿನ ಬಣ್ಣಗಳಿಗೆ ಹೊಂದುವಂತಹ ಸೌಂದರ್ಯವರ್ಧಕಗಳನ್ನು ಬಳಸಬೇಕು.
ಕೂದಲಿಗೆ ಪ್ರಖರ ಬಿಸಿಲಿನ ಹಾನಿ ತಪ್ಪಿಸಲು ಹ್ಯಾಟ್‌, ಕ್ಯಾಪ್‌, ಸ್ಕಾಫ್ì ಇತ್ಯಾದಿ ಬಳಸಿದರೆ ಉತ್ತಮ. ಬಿಸಿಲಿನಲ್ಲಿ ಓಡಾಡುವವರು ಸನ್‌ಸ್ಕೀನ್‌ನ ಅಂಶವುಳ್ಳ ಹೇರ್‌ ಕಂಡೀಷನರ್‌ ಬಳಸಿದರೆ ಬಿಸಿಲಿನ ಝಳದಿಂದ ಕೂದಲಿಗೆ ಹನಿಯಾಗುವುದಿಲ್ಲ.

ಕೂದಲಿನ ಸೌಂದರ್ಯವರ್ಧನೆಗೆ ಬೇಸಿಗೆಯಲ್ಲಿ 3-4 ಲೀಟರ್‌ನಷ್ಟು ನೀರಿನ ಸೇವನೆ ಅವಶ್ಯ. ಅಂತೆಯೇ ತಾಜಾ ಹಣ್ಣುಗಳ ಜ್ಯೂಸ್‌ ಸೇವನೆ, ಹಣ್ಣು ತರಕಾರಿ ಸೊಪ್ಪುಗಳ ಅಧಿಕ ಸೇವನೆ ಅವಶ್ಯ.

ಕೂದಲಿಗೆ ಡೀಪ್‌ ಕಂಡೀಷನರ್‌ಗಳನ್ನು ಬಳಸುವುದು ಹಿತಕರ. ವಾರಕ್ಕೆ 1-2 ಬಾರಿ ಕೂದಲು ತೊಳೆಯಬೇಕು. ಅಧಿಕ ಕೂದಲು ತೊಳೆಯುವುದೂ ಉತ್ತಮವಲ್ಲ. “ಫಾರ್ಮಾಲ್ಡಿಹೈಡ್‌’ನ ಅಂಶವುಳ್ಳ ಕೂದಲಿನ ಉತ್ಪನ್ನಗಳ ಬಳಕೆ ಸಲ್ಲದು.

ಬೇಸಿಗೆಗಾಗಿ ಹೇರ್‌ಮಾಸ್ಕ್
ಶುಷ್ಕ ಕೂದಲಿಗೆ: 1/4 ಕಪ್‌ ಮೊಸರು, 1/4 ಕಪ್‌ ಮಯಾನ್ನೀಸ್‌, 1 ಮೊಟ್ಟೆಯ ಬಿಳಿಭಾಗ.

ವಿಧಾನ: ಎಲ್ಲವನ್ನೂ ಮಿಕ್ಸರ್‌ನಲ್ಲಿ ಚೆನ್ನಾಗಿ ತಿರುವಿ ಪೇಸ್ಟ್‌ ತಯಾರಿಸಬೇಕು. ಇದನ್ನು ಲೇಪಿಸಿ ಹೇರ್‌ಮಾಸ್ಕ್ ಮಾಡಬೇಕು. 1/2 ಗಂಟೆಯ ಬಳಿಕ ಬೆಚ್ಚಗಿನ ನೀರಿನಿಂದ ಕೂದಲು ತೊಳೆದರೆ ಕೂದಲು ಸ್ನಿಗ್ಧವಾಗಿ ಹೊಳೆಯುತ್ತದೆ.

ತೈಲಾಂಶವುಳ್ಳ ಜಿಡ್ಡಿನ ಕೂದಲಿನವರಿಗೆ: ಎಲೋವೆರಾ ತಿರುಳು 4 ಚಮಚಕ್ಕೆ 8-10 ಹನಿ ನಿಂಬೆರಸ ಬೆರೆಸಿ ಚೆನ್ನಾಗಿ ಕಲಕಬೇಕು. ಇದನ್ನು ಕೂದಲಿಗೆ ಲೇಪಿಸಿ 15 ನಿಮಿಷಗಳ ಬಳಿಕ ಕೂದಲು ತೊಳೆದರೆ ಕಾಂತಿಯುತ ರೇಶಿಮೆ ನುಣಪನ್ನು ಕೂದಲು ಪಡೆಯುತ್ತದೆ.

1/4 ಕಪ್‌ ಸ್ಟ್ರಾಬೆರಿ ಹಣ್ಣಿನ ತಿರುಳು, ಮೊಸರು 1/4 ಕಪ್‌, ಮೆಂತೆಹುಡಿ 2 ಚಮಚ ಎಲ್ಲವನ್ನೂ ಮಿಕ್ಸರ್‌ನಲ್ಲಿ ತಿರುವಿ ಪೇಸ್ಟ್‌ ತಯಾರಿಸಬೇಕು. ಕೂದಲಿಗೆ ಲೇಪಿಸಿ 20 ನಿಮಿಷಗಳ ಬಳಿಕ ಕೂದಲು ತೊಳೆದರೆ ತುರಿಕೆ, ಹೊಟ್ಟು ಉದುರುವುದು ನಿವಾರಣೆಯಾಗುತ್ತದೆ. ಸ್ಟ್ರಾಬೆರಿ ಹಣ್ಣಿನಲ್ಲಿ ಎಕ್ಸ್‌ಫೋಲಿಯೇಟಿಂಗ್‌ ಗುಣವಿದೆ ಹಾಗೂ ಅದರಲ್ಲಿರುವ ವಿವಿಧ ಆಮ್ಲಗಳು ಹಾಗೂ ವಿಟಮಿನ್‌ಗಳು ಕೂದಲಿಗೆ ಪೋಷಣೆ ನೀಡುತ್ತವೆ. ಕೂದಲು ಉದುರುವುದು ನಿವಾರಣೆಯಾಗುತ್ತದೆ.

ಬಾಳೆಹಣ್ಣು ಹಾಗೂ ಆಲಿವ್‌ ತೈಲದ ಹೇರ್‌ಮಾಸ್ಕ್ 
2 ಬಾಳೆಹಣ್ಣು ತೆಗೆದುಕೊಂಡು ಚೆನ್ನಾಗಿ ಮಸೆದು ಪೇಸ್ಟ್‌ ತಯಾರಿಸಬೇಕು. ಇದಕ್ಕೆ 10 ಚಮಚ ಆಲಿವ್‌ ತೈಲ ಬೆರೆಸಬೇಕು. ಈ ಮಿಶ್ರಣವನ್ನು ಕೂದಲಿಗೆ ಲೇಪಿಸಿ 20 ನಿಮಿಷಗಳ ಬಳಿಕ ಕೂದಲು ತೊಳೆಯಬೇಕು. ಇದು ಕೂದಲ ತುದಿ ಟಿಸಿಲೊಡೆಯುವುದು, ಕೂದಲು ಉದುರುವುದು ಇತ್ಯಾದಿಗಳನ್ನು ನಿವಾರಣೆ ಮಾಡುತ್ತದೆ. ಬೇಸಿಗೆಯ ಬಿರುಬಿಸಿಲಿನಲ್ಲಿ ಕೂದಲು ಕಳಾಹೀನವಾಗದಂತೆ ಮಾಡುತ್ತದೆ.

ಎಲೋವೆರಾ ಹಾಗೂ ಸ್ಟ್ರಾಬೆರಿ ಹಣ್ಣಿನ ಮಾಸ್ಕ್
1/4 ಕಪ್‌ ಸ್ಟ್ರಾಬೆರಿ ಹಣ್ಣಿನ ತಿರುಳಿಗೆ, 3 ಚಮಚ ಎಲೋವೆರಾ ತಿರುಳು ಬೆರೆಸಿ ಕೂದಲಿಗೆ ಲೇಪಿಸಬೇಕು. 20 ನಿಮಿಷಗಳ ಬಳಿಕ ಕೂದಲು ತೊಳೆದರೆ ಕೂದಲು ರೇಶಿಮೆಯ ನುಣುಪು ಪಡೆದುಕೊಳ್ಳುತ್ತದೆ. ಸೊಂಪಾಗಿ ಬೆಳೆಯುತ್ತದೆ.

ಡಾ. ಅನುರಾಧಾ ಕಾಮತ್‌

ಟಾಪ್ ನ್ಯೂಸ್

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.