ಹೋಂವರ್ಕ್ ವಿಷಯ
Team Udayavani, Jan 5, 2018, 12:06 PM IST
ಆಗಿನ್ನು ಬಿ.ಕಾಂ.ನ ಎರಡನೇ ಸೆಮಿಸ್ಟರ್ ಪ್ರಾರಂಭವಾಗಿ ಒಂದು ವಾರ ಆಗಿತ್ತಷ್ಟೆ. ಒಂದು ದಿನ ಕನ್ನಡ ಮೇಡಂ ಕನ್ನಡ ಅಸೈನ್‌ಮೆಂಟ್‌ಗೆ ವಿಷಯ ಕೊಟ್ಟು “ನಿಮಗೆ ಈ ಅಸೈನ್‌ಮೆಂಟ್ ಮುಗಿಸೋಕೆ ಇಪ್ಪತ್ತು ದಿನ ಕಾಲಾವಕಾಶ ಇದೆ. ಅವಸರ ಮಾಡಿಕೊಳ್ಳುವುದು ಬೇಡ’. ಬೇರೆ ಸಬ್ಜೆಕ್ಟ್‌ನ ಅಸೈನ್‌ಮೆಂಟ್ ಕೊಟ್ಟಾಗ, “ಒಂದೇ ಸಲ ನಿಮಗೆ ಕಷ್ಟ ಆಗಬಾರದು ಅಂತ ಈಗಲೇ ಹೇಳುತ್ತಿರೋದು’ ಎಂದು ಹೇಳಿದ್ರು. ಅವರು ಕೊಟ್ಟ ಅಸೈನ್ಮೆಂಟ್ ವಿಷಯ ಕನ್ನಡ ಚಲನಚಿತ್ರ ಕ್ಷೇತ್ರದ ಐದು ಹಳೆಯ ಕಾಲದ ಸಿನೆಮಾ ಸಾಹಿತಿಗಳು ಮತ್ತು ಐದು ಈಗಿನ ಕಾಲದ ಸಿನೆಮಾ ಸಾಹಿತಿಗಳ ಪರಿಚಯ ಮತ್ತು ಅವರ ಎರಡೆರಡು ಅತ್ಯುತ್ತಮ ಹಾಡುಗಳು ಮತ್ತು ಅವುಗಳ ಅರ್ಥ ಬರೆಯುವುದು. ಆ ದಿನ ಮನೆಗೆ ಬಂದವಳೇ ಅಪ್ಪ ಕೊಡಿಸಿದ ಹೊಸ ಮೊಬೈಲ್‌ನಲ್ಲಿ ನೆಟ್ ರೀಚಾರ್ಜ್ ಮಾಡಿಸಿ ಸಾಹಿತಿಗಳ ವಿವರ ಹುಡುಕೋಕೆ ಶುರುಹಚ್ಚಿಕೊಂಡೆ. ಹೀಗೆ ಎಲ್ಲಾ ವಿವರಗಳನ್ನು ಕಲೆಕ್ಟ್ ಮಾಡಿ ಒಂದು ವಾರ ಆಗೋವಷ್ಟರಲ್ಲಿ ಅಸೈನ್‌ಮೆಂಟ್ ಬರೆದು ಮುಗಿಸಿಬಿಟ್ಟೆ.
ನಾನು ಅಸೈನ್ಮೆಂಟ್ ಕಂಪ್ಲೀಟ್ ಮಾಡಿರೋದನ್ನ ನನ್ನ ಫ್ರೆಂಡ್ಸ್ ಗೆ ಹೇಳಿದಾಗ ನನ್ನ ಒಬ್ಬಳು ಫ್ರೆಂಡ್ “”ಭಯಂಕರ ಮಾರಾಯ್ತಿ. ನಾನ್ ಇನ್ನು ಶುರುವೇ ಮಾಡ್ಲಿಲ್ಲ. ಅಷ್ಟರಲ್ ನೀನ್ ಮುಗ್ಸಿ ಬಿಟ್ಟಿದೆ. ನಾನ್ ಇನ್ನು ಟೈಮ್ ಇತ್ತಲಾ ಇಷ್ಟ್ ಬೇಗ್ ಎಂತಕ್ ಅಂತೆಳಿ ಸುಮ್ನಾದೆ” ಅಂತ ಹೇಳಿ ಸುಮ್ಮನಾದ್ಲು. ನಾನು ಕೇಳಿ ಸುಮ್ಮನಾದೆ. ಆದ್ರೆ ನನ್ನ ಮನಸ್ಸು ಮತ್ತು ಬುದ್ಧಿ ಸುಮ್ಮನಾಗಲಿಲ್ಲ. ನನ್ನ ಪ್ರೈಮರಿಯ ನೆನಪುಗಳ ಕಡೆ ಪ್ರಯಾಣ ಬೆಳೆಸಿದುÌ. ಆಗಷ್ಟೇ ನಾನು ನನ್ನ ಮೂರನೆಯ ಮಹಾಯುದ್ಧವನ್ನು ಮುಗಿಸಿ¨ªೆ. ಅಂದ್ರೆ ಮೂರನೆಯ ಕ್ಲಾಸ್ ವಾರ್ಷಿಕ ಪರೀಕ್ಷೆ ಮುಗಿಸಿ¨ªೆ. ರಿಸಲ್ಟ… ದಿನ ರಿಸಲ್ಟ… ಜೊತೆಗೆ ನಾಲ್ಕನೇ ಕ್ಲಾಸ್‌ಗೆ ಬರಬೇಕಾದರೆ ಮಾಡಿಕೊಂಡು ಬರಬೇಕಾಗಿದ್ದ ಹೋಂವರ್ಕ್ ಅನ್ನು ತಿಳಿಸಿದ್ರು. ಮನೆಗೆ ಬಂದು ಅಮ್ಮನಿಗೆ ಹೋಂವರ್ಕ್ ಕೊಟ್ಟಿರೋದರ ಬಗ್ಗೆ ಹೇಳಿದೆ. ಅಮ್ಮ “”ದಿನಾ ಎರಡೆರಡು ಪುಟ ಬರೆದ್ರಾಯ್ತು ಬಿಡು” ಅಂತಂದ್ರು. ಮರುದಿನ ಬೆಳಿಗ್ಗೆ ಹೋಂ ವರ್ಕ್ ಮಾಡೋಕೆ ಕುಳಿತವಳು, “”ಅಯ್ಯೋ ಇನ್ನು ತುಂಬಾ ದಿನ ರಜೆಯಿದೆ. ಯಾಕೆ ಇಷ್ಟೊಂದು ಅರ್ಜೆಂಟು ನಾಳೆ ಬರೆದ್ರಾಯ್ತು” ಅಂತ ಸುಮ್ಮನಾದೆ. ಮರುದಿನ ಬೆಳಿಗ್ಗೆ ಪುನಃ ನಾಳೆ ಬರೆದ್ರಾಯ್ತು ಅನಿಸಿತು. ಹೀಗೆ ದಿನಾ ನಾಳೆ ಮಾಡಿದ್ರಾಯ್ತು, ನಾಳೆ ಮಾಡಿದ್ರಾಯ್ತು ಅಂತ ಹೋಂವರ್ಕ್ ಮಾಡೋದನ್ನು ಮುಂದೆ ಮುಂದೆ ಹಾಕ್ತ ಹೋದೆ. ಕೊನೆಗೂ ಹೋಂವರ್ಕ್ ಮಾಡೋ ನಾಳೆ ಬಂದೇ ಬಿಡು¤. ಅದು ಯಾವಾಗ ಅಂದ್ರೆ ಶಾಲೆ ಪುನಾರಂಭ ಆಗೋ ಎರಡು ದಿನಕ್ಕೆ ಮುಂಚೆ.
ಎರಡು ತಿಂಗಳಿನ ಹೋಂವರ್ಕ್ ಅನ್ನು ಎರಡೇ ದಿನಕ್ಕೆ ಮುಗಿಸಲು ಸಾಧ್ಯವಾಗದೆ ಅಸಹಾಯಕಳಾಗಿ ಅಳ್ಳೋಕೆ ಶುರು ಮಾಡಿದೆ. ಆಗ ನನ್ನ ಅಳು ನೋಡೋಕಾಗದೆ ಮನೆಯವರೆಲ್ಲ ಸ್ವಲ್ಪ ಸ್ವಲ್ಪ ಅಂತ ಪೂರ್ತಿ ಹೋಂವರ್ಕ್ ಮಾಡಿಕೊಟುó. ಮುಂದಿನ ರಜೆಯಲ್ಲಿ ಇದು ಮುಂದುವರಿದಾಗಲೂ ಮನೆಯವರು ಹೋಂವರ್ಕ್ ಮಾಡಿ ಕೊಟ್ಟಿದ್ರು. ಆದ್ರೆ ಅದರ ಜೊತೆ ಬೈಗುಳ ಹಾಗೂ ಒಂದೆರಡು ಏಟನ್ನು ಗಿಫ್ಟ್ ಆಗಿ ಕೊಟ್ಟಿದ್ರು. ಇಷ್ಟೆಲ್ಲಾ ಆದ್ಮೇಲೆ ನನಗೆ ಜ್ಞಾನೋದಯ ಆಯ್ತು. ರಜೆಗೆ ಕೊಡೋ ಹೋಂವರ್ಕ್‌ನ ರಜೆ ಪ್ರಾರಂಭವಾದ ತಕ್ಷಣ ಬರೆಯೋಕೆ ಶುರುಮಾಡಿ ಒಂದು ವಾರದಲ್ಲೇ ಪೂರ್ತಿ ಮುಗಿಸ್ತಿದ್ದೆ. ಅದು ಇವತ್ತಿನವರೆಗೂ ಮುಂದುವರೆದುಕೊಂಡು ಬಂದಿರೋದ್ರಿಂದ ಅಸೈನ್‌ಮೆಂಟ್ ಕೊಟ್ಟ ಒಂದು ವಾರಕ್ಕೆ ನಾನು ಅದನ್ನು ಮುಗಿಸಿದೆ.
ಆವತ್ತು ಕನ್ನಡ ಮೇಡಂ ಕ್ಲಾಸಿಗೆ ಬಂದೋರು, “ಯಾರಾದ್ರು ಅಸೈನ್‌ಮೆಂಟ್ ಮಾಡೋದಕ್ಕೆ ಶುರು ಮಾಡಿದ್ರ?’ ಅಂತ ಕೇಳಿದ್ರು “ಹೌದು’ ಅಂದ ನನ್ನೊಬ್ಬಳ ಧ್ವನಿ ಮೇಡಂಗೆ ಕೇಳಿಸ್ಲಿಲ್ಲ ಅನ್ಸುತ್ತೆ. ಮುಂದುವರೆದ ಅವರು, “ನನಗೆ ಗೊತ್ತು, ನೀವ್ಯಾರು ಮಾಡಿರಲ್ಲ ಅಂತ. ಯಾರು ಮಾಡೋಕೆ ಹೋಗ್ಬೇಡಿ. ಈ ಸಲ ಅಸೈನ್‌ಮೆಂಟ್ ಕೊಡೋ ರೂಲ್ಸ…ನಲ್ಲಿ ಬದಲಾವಣೆ ಆಗಿದೆ. ನಾವೆಷ್ಟೇ ಅವಧಿ ಕೊಟ್ಟರೂ ಅಸೈನ್‌ಮೆಂಟ್ ಬರೆಯೋದು ಕೊನೆ ಎರಡು ದಿನಾನೇ. ಹಾಗಾಗಿ, ಈ ಸಲ ನಿಮಗೆ ಅಸೈನ್‌ಮೆಂಟ್ ಮಾಡೋಕೆ ಕೊಡೋದು ಎರಡೇ ದಿನ. ಆ ಎರಡು ದಿನದಲ್ಲೇ ನೀವು ಅಸೈನ್‌ಮೆಂಟ್ ಮುಗಿಸಿ ತಂದು ಒಪ್ಪಿಸಬೇಕು. ಅದಕ್ಕೆ ನಾನು ನಿಮಗೆ ಬೇರೆ ಅಸೈನ್‌ಮೆಂಟ್ ಕೊಡ್ತಿದ್ದೀನಿ. ವಿಷಯ ಬರೆದುಕೊಳ್ಳಿ’ ಅಂತ ಹೇಳಿದ್ರು.
ನನ್ನ ಫ್ರೆಂಡ್ಸ್ ಎಲ್ಲಾ ನನ್ನ ಮುಖ ನೋಡಿದ್ರು. ಮುಂದೆ ಏನಾಯ್ತು ಅಂತ ಹೇಳ್ಳೋ ಅಗತ್ಯ ಇಲ್ಲ ಅಂದ್ಕೊಂಡಿದೀನಿ.
ಸುಶ್ಮಿತಾ ನೇರಳಕಟ್ಟೆ
ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.