ಹಾಸ್ಟೆಲ್‌ ಜೀವನ


Team Udayavani, Mar 15, 2019, 12:30 AM IST

x-51.jpg

ಚಿಕ್ಕಂದಿನಿಂದಲೂ ಕೂಡು ಕುಟುಂಬದಲ್ಲಿ ಬೆಳೆದ ನನಗೆ ಹಾಸ್ಟೆಲ್‌ ಜೀವನವನ್ನು ಊಹಿಸಿಕೊಳ್ಳುವುದೂ ಅಸಾಧ್ಯವಾಗಿತ್ತು. ಆದರೂ ಒಲ್ಲದ ಮನಸ್ಸಿನಿಂದ ಮನೆಬಿಟ್ಟ ನನಗೆ ಎಡಬಿಡದೆ ಕಾಡಿದ್ದು ಅಮ್ಮನ ನೆನಪು. ಮನೆಗೆ ಕಾಲ್‌ ಮಾಡಿ ಮಾತಾಡೋಣವೆಂದರೆ ಮೊಬೈಲೂ ಇರಲಿಲ್ಲ! ಓದಿನ ಸಮಯ ಮುಗಿಯುವುದನ್ನೇ ಕಾದು ಕುಳಿತಿರುತ್ತಿದ್ದ ನಾನು ಹಾಸ್ಟೆಲ್‌ನಲ್ಲಿ ಬೆಲ್‌ ರಿಂಗಣಿಸುತ್ತಿದ್ದಂತೆ ಕಾಲ್‌ ಮಾಡಲು ಓಡುತ್ತಿದ್ದೆ. ಆದರೆ, ನನ್ನ ಕೊಠಡಿಯಿಂದ ಕಾಯಿನ್‌ ಬಾಕ್ಸ್‌ ಇರುವಲ್ಲಿ ಬರುವಷ್ಟರಲ್ಲಾಗಲೇ  ಹತ್ತು ಜನ ನಿಂತಿರುತ್ತಿದ್ದರು. ಪ್ರತಿಯೊಬ್ಬರೂ ಐದು ನಿಮಿಷ ಮಾತನಾಡಿದರೂ ಐವತ್ತು ನಿಮಿಷವಾಗುತ್ತದೆ ;ಅಷ್ಟರಲ್ಲಿ ಸ್ನಾನ ಮುಗಿಸಿ ಬರೋಣವೆಂದುಕೊಂಡರೆ ಅಲ್ಲೂ ಮಾರುದ್ದ ಲೈನ್‌ ಇರುತ್ತಿತ್ತು.

ಆರಂಭದಲ್ಲಿ ಯಾವ ರೀತಿ ಸಮಯ ನಿರ್ವಹಿಸಬೇಕೆಂಬುದೇ ತಿಳಿಯುತ್ತಿರಲಿಲ್ಲ. ಆದರೆ, ಕ್ರಮೇಣ ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡುವುದನ್ನು ರೂಢಿಸಿಕೊಂಡೆ. ಮೊದ ಮೊದಲು ಅಲರಾಂ ಆಫ್ ಮಾಡಿ ಮಲಗುತ್ತಿದ್ದ ನಾನು ನಂತರದ ದಿನಗಳಲ್ಲಿ ಅಲಾರಂ ಇಲ್ಲದೇ ಏಳುವುದನ್ನೂ ಕಲಿತಿದ್ದೆ. ನಾನು ಬೆಳಗ್ಗಿನ ಓದುವ ವೇಳೆಯಲ್ಲಿ ಓದುವುದೇ ಅಪರೂಪವಾಗಿತ್ತು, ಅಂತಹದ್ದರಲ್ಲಿಯೂ ಏನಾದರೂ ಓದೋಣವೆಂಬ ಇಚ್ಛೆಯಿಂದ ಓದಲು ಕುಳಿತರೆ ಅದೆಲ್ಲಿರುತ್ತಿದ್ದಳೊ ಆ ನಿದ್ರಾದೇವಿ! ಕಣ್ತೆರೆಯಲಾರದಷ್ಟು ನಿದ್ರೆಭರಿಸುತ್ತಿದ್ದಳು. ಅಂತೂ ಇಂತೂ ಒಂದು ವಾರ ಕಳೆದು ಭಾನುವಾರ ಬಂತೆಂದರೆ ಎಲ್ಲಿಲ್ಲದ ಸಂತೋಷವಿರುತ್ತಿತ್ತು. ಆದರೆ ಭಾನುವಾರದ ಬೆಳಗಿನ ತಿಂಡಿ ಮಸಾಲೆದೋಸೆ. ನಾವು ಎಂಟು ಗಂಟೆಯಿಂದಲೇ ಸಾಲಿನಲ್ಲಿ ನಿಂತರೆ ಒಂಬತ್ತು ಗಂಟೆಗಾದರೂ ದೋಸೆ ಸಿಗುತ್ತಿತ್ತು!

ಇದೀಗ ನಾನು ಹಾಸ್ಟೆಲ್ ಸೇರಿ ತಿಂಗಳುಗಳೇ ಕಳೆದಿದೆ. ಹಾಸ್ಟೆಲ್‌ ನನಗೆ ಸಾಕಷ್ಟು ಒಳ್ಳೆಯ ವಿಚಾರಗಳನ್ನು ಕಲಿಸಿದೆ. ಬೆಳಗ್ಗೆ ಬೇಗ ಏಳುವ ಅಭ್ಯಾಸವಾದದ್ದು , ಕಾಲ್ ಮಾಡುವುದಕ್ಕಾಗಿ, ಕೆಲವೊಮ್ಮೆ ಸ್ನಾನಕ್ಕಾಗಿ, ತಿಂಡಿಗಾಗಿ ದೇವರ ದರ್ಶನಕ್ಕೆ ನಿಂತಂತೆ ಸರತಿ ಸಾಲಿನಲ್ಲಿ ತಾಳ್ಮೆಯಿಂದ ನಿಲ್ಲುವುದೂ ಅಭ್ಯಾಸವಾಗಿದೆ !        

ಸಿಂಧೂ ಹೆಗಡೆ
ಪ್ರಥಮ ಬಿಎ ಎಸ್‌ಡಿಎಂ ಕಾಲೇಜು, ಉಜಿರೆ

ಟಾಪ್ ನ್ಯೂಸ್

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Suside-Boy

Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.