ಶೈಕ್ಷಣಿಕ ಲೋಕದ ಶಿಲಾಶಾಸನಗಳು
Team Udayavani, Jul 26, 2019, 5:38 AM IST
ಪ್ರೇಮ ನಿವೇದನೆಗಾಗಿ ನಾ ಕಾಯುತಿರುವೆ’, “ಓ ಮನಸೇ’, “ರಾಜಾಹುಲಿ’, “ಐ ಲವ್ ಯೂ’, “ಶ್ವೇತಾ ಗೀತಾ ನೀತಾ’, “ಮನಸೇ ಮನಸೇ ಥ್ಯಾಂಕ್ಯು ನನಗೂ ಮನಸಾಗಿದೆ’, “ಯಾರೆ ನೀ ದೇವತೆಯಾ’, “ನಾನೂ ಈಗ ಪ್ರೀತಿಯಲ್ಲಿ ತೇಲಬೇಕು-ನನಗೂ ಒಬ್ಬ ಗೆಳೆಯ ಬೇಕು’ಅಬ್ಬಬ್ಟಾ ! ಏನಪ್ಪಾ ಈ ಹುಡುಗಿ ಸಿನಿಮಾ ಗೀತೆ, ಹೆಸರುಗಳನ್ನು ಹೇಳುತ್ತಿದ್ದಾಳಲ್ಲಾ ಅಂತ ಯೋಚನೆ ಬರಬಹುದು. ಖಂಡಿತವಾಗಿಯೂ ನಾನು ಇಲ್ಲಿ ಯಾವುದೇ ಸಿನಿಮಾಗಳ ಹೆಸರುಗಳಾಗಲಿ ಅಥವಾ ಇವುಗಳ ಪಟ್ಟಿ ಮಾಡಲು ಆಗಲು ಹೊರಟಿಲ್ಲ. ಇವೆಲ್ಲಾನಾ ಕಂಡಂತೆ ಕಾಲೇಜು ಡೆಸ್ಕ್ ಗಳ ಮೇಲೆ ಅಚ್ಚೊತ್ತಾಗಿರುವ ಶಿಲಾಶಾಸನಗಳು.
ಹೌದು, ಒಂದೊಮ್ಮೆ ಕಾಲೇಜಿನ ತರಗತಿ ಕೋಣೆಯೊಳಗೆ ಪ್ರವೇಶಿಸಿ ಅಲ್ಲಿರುವ ಬೆಂಚು-ಡೆಸ್ಕಾಗಳನ್ನು ಸರ್ವೆ ಮಾಡಿದರೆ ಸಾಮಾನ್ಯವಾಗಿ ಸಾವಿರಕ್ಕೂ ಹೆಚ್ಚು ಮೌನಭಾವನೆಗಳಿಗೆ ಈ ಮೂಲಕ ಬರವಣಿಗೆ ರೂಪವನ್ನು ವಿದ್ಯಾರ್ಥಿಗಳು ನೀಡಿರುತ್ತಾರೆ. ವಿದ್ಯಾರ್ಥಿಗಳು ತಮ್ಮೆಲ್ಲಾ ತುಮುಲಗಳನ್ನು ಅಕ್ಷರ ರೂಪದಲ್ಲಿ ಡೆಸ್ಕ್ಗಳ ಮೇಲೆ ಭಟ್ಟಿ ಇಳಿಸಿರುತ್ತಾರೆ. ಯಾವ ಡೆಸ್ಕ್ ಮೇಲೆ ಕಣ್ಣಾಡಿಸಿದರೂ ಇಂತಹ ಪದಮಾಲೆಗಳೇ ಕಾಣಸಿಗುತ್ತವೆ. ಕೆಲ ಬರಹಗಳನ್ನು ಓದುವಾಗಲಂತೂ ಮಂದಹಾಸ ಬೀರಿಸುವುದು ಸಹಜ.
ಇಂದಿನ ದಿನಗಳಿಗೆ ಹೋಲಿಸಿದರೆ ಹಿಂದೆ ಕಾಲೇಜು ಡೆಸ್ಕ್ ಗಳು ಸಂಪೂರ್ಣ ಬರಹಾಲಂಕೃತವಾಗಿದ್ದವು. ವಿದ್ಯಾರ್ಥಿಗಳು ತಮ್ಮ ಮನಸ್ಸಿನಲ್ಲಿ ಮೊದಲ ಪ್ರೀತಿ ಮೊಳಕೆಯೊಡೆದಾಗ, ತಮಗೇನಾದರೂ ಬೇಸರವಾದರೆ, ತರಗತಿಯೊಳಗೆ ಅಧ್ಯಾಪಕರ ಪಾಠ ಬೋರ್ ಎನಿಸಿದರೆ ಮನಸ್ಸಲ್ಲಿ ಗುಣುಗುಡುವ ಸಾಲುಗಳನ್ನು ಯಥಾವತ್ತಾಗಿ ತಮ್ಮ ಕೈಲಿರೋ ಪೆನ್ನು-ಪೆನ್ಸಿಲ್‌ನಿಂದ ಡೆಸ್ಕ್ ಮೇಲೆ ನಮೂದಿಸತೊಡಗುತ್ತಾರೆ.
ನಿದ್ರಾದೇವಿ ಆಗಮಿಸುವ ವೇಳೆಗೆ ಅಧ್ಯಾಪಕರ ಬೈಗುಳದಿಂದ ತಪ್ಪಿಸಿಕೊಳ್ಳಲು ವಿದ್ಯಾರ್ಥಿಗಳು ಮಾಡುವ ಸಾಹಸಗಳಲ್ಲಿ ಇದೂ ಒಂದು. ವಿದ್ಯಾರ್ಥಿಗಳ ಈ ಕಾಯಕ ಡೆಸ್ಕ್ ಅಂದವನ್ನು ಹೆಚ್ಚಿಸುತ್ತದೆಯೋ ಇಲ್ಲವೋ ಗೊತ್ತಿಲ್ಲ, ಆದರೆ, ನೀಲಾಂಬಿಕೆ ಮಾತ್ರ ನಳನಳಿಸುತ್ತಿರುತ್ತಾಳೆ.
ಕ್ಲಾಸ್ ಬೋರಾಗುವುದು, ಹೊಸ ಸಿನಿಮಾ ರಿಲೀಸ್ ಆದಾಗ, ಪ್ರೀತಿ ಕೋರಿಕೆ ಮಾಡಬೇಕೆಂದೆನಿಸಿದಾಗಲೆಲ್ಲ ಕೈ ನಿಂತಲ್ಲಿ ನಿಲ್ಲಲು ಕೇಳುವುದೇ ಇಲ್ಲ. ಕೈಯಲ್ಲಿ ಹೇಗೋ ಲೇಖನಿ ಇರುತ್ತದೆ. ಅದನ್ನು ಪುಸ್ತಕಕ್ಕಿಂತ ಹೆಚ್ಚು ಡೆಸ್ಕ್ ಮೇಲೆ ಪ್ರಯೋಗಿಸಿದರೇನೆ ಚಿಂತನೆಗೆ ರೂಪ ದೊರೆಯುತ್ತದೆ -ಎಂಬುದು ಹಲವು ವಿದ್ಯಾರ್ಥಿಗಳ ಮಾತು.
ವಿದ್ಯಾರ್ಥಿಗಳು ಇದರಿಂದ ಆನಂದಿಸಬಹುದು. ಆದರೂ ಕೂಡ ಡೆಸ್ಕ್ ಎನ್ನುವಂಥದ್ದು ಕೇವಲ ಒಬ್ಬರ ಆಸ್ತಿಯಲ್ಲ. ವಿದ್ಯಾರ್ಥಿಗಳಿಗೆ ಓದಲು-ಬರೆಯಲು ಸಹಾಯಕವಾಗುವ ಕಾರಣಕ್ಕಾಗಿ ಪ್ರತಿಯೊಂದು ಶಾಲಾ-ಕಾಲೇಜುಗಳಲ್ಲೂ ಈ ವ್ಯವಸ್ಥೆ ಮಾಡಲಾಗಿದೆ. ಇವುಗಳ ತಯಾರಿಕೆಯ ಹಿಂದೆಯೂ ಹಲವಾರು ಕೈಗಳ ಅವಿರತ ಶ್ರಮವಿರುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಸದುದ್ದೇಶದಿಂದ ಬಳಕೆಗೆ ಬಂದಿರುವ ಈ ವ್ಯವಸ್ಥೆಯನ್ನು ಅನಗತ್ಯ ಕೆಲಸಕ್ಕೆ ಬಳಸಿಕೊಳ್ಳುವುದು ಸರಿಯೆ?
ಹಿಂದೆ ನಾನು ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ನೆಲದಲ್ಲೇ ಕುಳಿತು ಪಾಠ ಕೇಳಬೇಕಿತ್ತು.ಡೆಸ್ಕ್ ಗಳೇ ಇರಲಿಲ್ಲ. ಏನಾದರೂ ಬರೆಯಬೇಕು ಎನಿಸಿದರೆ ನಮ್ಮ ಬಳಿ ಇದ್ದ ಪುಸ್ತಕದ ಮೇಲೆಯೇ ನಮ್ಮ ಸಾಹಸ ಪ್ರದರ್ಶನವಾಗುತ್ತಿತ್ತು. ಆದರೆ, ಈಗ ಅಂತಹ ಪರಿಸ್ಥಿತಿ ಇಲ್ಲ. ಡೆಸ್ಕ್ ಸೌಲಭ್ಯ ಇದೆ. ವಿಪರ್ಯಾಸವೆಂದರೆ, ಇದು ಸದ್ಭಳಕೆ ಆಗುತ್ತಿರುವ ಪ್ರಮಾಣದಲ್ಲಿ ಏರುಪೇರು ಉಂಟಾಗಿದೆ. ಪುಟ್ಟಮಕ್ಕಳು ಕೂಡ ಪುಸ್ತಕದ ಮೇಲೆ ಬರೆಯುವ ಬದಲು ಡೆಸ್ಕ್ ಗಳ ಮೇಲೆಯೇ ಬರೆಯುವ ರೂಢಿಯನ್ನು ಮಾಡಿಕೊಂಡಿದ್ದಾರೆ. ಕಾಲೇಜು ವಿದ್ಯಾರ್ಥಿಗಳಂತೂ ಇದೇ ಅಭ್ಯಾಸವನ್ನು ಪಾಲಿಸುವಂತಿದೆ.
ಡೆಸ್ಕ್ ನಮ್ಮ ಶೈಕ್ಷಣಿಕ ಜಗತ್ತಿನ ಒಂದು ಭಾಗ. ಇದು ನಮ್ಮ ಕಲಿಕೆಯ ವೇಳೆ ಒಂದು ಮಹತ್ತರ ಪಾತ್ರವನ್ನು ನಿಭಾಯಿಸುತ್ತದೆ ಎನ್ನುವ ವಿಚಾರದಲ್ಲಿ ಸಂಶಯವಿಲ್ಲ. ಆದರೂ ಹರೆಯದ ವಿದ್ಯಾರ್ಥಿಗಳು ಡೆಸ್ಕ್ ನ್ನು ಆಟದ ಸಾಮಗ್ರಿಯಂತೆ ಬಳಸಿಕೊಳ್ಳುವ ಬದಲು ತಮ್ಮ ಮನದಲ್ಲಿ ಅದೇನೇ ಯೋಚನೆಗಳಿದ್ದರೂ ಕೂಡ ಪುಸ್ತಕದ ಮೇಲೆ ಗೀಚಿಬಿಟ್ಟರೆ ಅಕ್ಷರದ ಜೊತೆಗೆ ಜ್ಞಾನಮಟ್ಟ ಕೂಡ ಅಭಿವೃದ್ಧಿ ಹೊಂದುತ್ತದೆಯಲ್ಲವೇ?
ಡೆಸ್ಕ್ ಮೇಲೆ ವಿನಾ ಕಾರಣ ಏನೇನೋ ಬರೆದಿಡುವುದು, ಅದನ್ನು ಇನ್ಯಾರೋ ಓದುವುದು, ಒಬ್ಬರನ್ನು ಕಂಡು ಇನ್ನೊಬ್ಬರು ಅದೇ ಚಾಳಿಯನ್ನು ಆರಂಭಿಸಿಕೊಳ್ಳುವುದು, ಅಧ್ಯಾಪಕರು ನೋಡಿ ಬೈಯೋದು, ಯಾವುದಾದರೂ ಸ್ವತ್ಛತಾ ತಂಡ ತರಗತಿಗೆ ಪ್ರವೇಶಿಸಿ ಆ ಅಕ್ಷರಮಾಲೆಗಳ ನೋಡಿ ಛೀಮಾರಿ ಹಾಕುವುದು, ಅದನ್ನ ಅಳಿಸಲು ಒಂದಷ್ಟು ಸಮಯವನ್ನು ವ್ಯರ್ಥ ಕಳೆಯುವುದು- ಈ ಎಲ್ಲಾ ಕೆಲಸಗಳು ಮತ್ತೆ ದೊರೆಯುವುದು ನಮ್ಮಂತಹ ವಿದ್ಯಾರ್ಥಿಗಳ ಕೈಗೇ ಅಲ್ಲವೇ? ಇದರ ಬದಲು ನಮ್ಮ ಭಾವನೆಗಳ ವ್ಯಕ್ತತೆಗೆ ಅಮೂಲ್ಯವಾದ ಪುಸ್ತಕವನ್ನು ಬಳಸಿಕೊಂಡು, ಡೆಸ್ಕ್ ಗೂ ಸಮಾನ ಗೌರವವನ್ನೊದಗಿಸೋಣವಲ್ಲವೆ?
ಯೋಚನೆ-ಆಲೋಚನಾ ಲಹರಿಗೆ ತಡೆ ಬೇಡ. ಯೋಚಿಸಿದ್ದಷ್ಟು ಜ್ಞಾನ ಹೆಚ್ಚಾಗುವುದು. ನಮ್ಮ ಬರವಣಿಗೆಗೂ ತಡೆ ಬೇಡ. ಆದರೆ ಈ ಬರವಣಿಗೆ ಕಲೆ ಪುಸ್ತಕದ ಮೇಲೆಯೋ ಅಥವಾ ಪತ್ರಿಕೆಯ ಮೇಲೆಯೋ ಮೂಡಿ ಬಂದರೆ ಚೆನ್ನ.
ಪ್ರಜ್ಞಾ ಓಡಿಲಾ°ಳ
ತೃತೀಯ ಪತ್ರಿಕೋದ್ಯಮ ಬಿ. ಎ.
ಎಸ್‌ಡಿಎಂ ಕಾಲೇಜು, ಉಜಿರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.