ದ್ವೀಪ ಯಾತ್ರೆ
Team Udayavani, Jun 29, 2018, 6:00 AM IST
ಸುತ್ತೆಲ್ಲ ನೋಡಿದ್ರೆ ಜಲರಾಶಿ. ನಡುವೆ ಒಂದು ಅದ್ಭುತವಾದ ಪುಟ್ಟ ದ್ವೀಪ. ನೋಡುತ್ತ ನಿಂತರೆ ಅಲ್ಲೇ ಕಳೆದು ಹೋಗುವುದಂತೂ ಖಂಡಿತ. ಅಲ್ಲಿಯ ತನಕ ಕೇವಲ ಹೆಸರಿನ ರೂಪದಲ್ಲಿ ಕಿವಿಗೆ ಬಿದ್ದಿದ್ದ ಆ ಪ್ರದೇಶ ಈಗ ಕಣ್ಮುಂದೆ ತೆರೆದುಕೊಳ್ಳುವ ಸಮಯ ಬಂದಿತ್ತು. ಅದೆಷ್ಟೋ ಅದ್ಭುತವಾದ ಸ್ಥಳಗಳು ನಮ್ಮ ಸುತ್ತಮುತ್ತ ಇದ್ದರೂ ಕೂಡ ನಾವು ಆ ಸ್ಥಳಗಳಿಗೆ ಭೇಟಿ ನೀಡಿರುವುದಿಲ್ಲ. ಅಂತಹ ಸ್ಥಳಗಳು ಅದೆಷ್ಟೋ ಇವೆ. ಅವುಗಳಲ್ಲಿ ಸೈಂಟ್‌ಮೇರಿಸ್ ಕೂಡ ಒಂದು.
ಸುಮಾರು ನಾಲ್ಕೈದು ವರ್ಷಗಳೇ ಕಳೆದಿತ್ತು ನಾನು ಸಮುದ್ರದ ಕಡೆ ಭೇಟಿ ನೀಡದೆ. ಸ್ವಲ್ಪ ಸಮಯ ಅಲ್ಲೇ ಕಳೆದು ನಂತರ ಮಲ್ಪೆಯಲ್ಲಿ ಬೋಟ್ ಹತ್ತಿ ನಮ್ಮ ಪ್ರಯಾಣವನ್ನು ಮುಂದುವರಿಸಿದೆವು. ಬೋಟ್‌ನಲ್ಲಿ ಅನೇಕ ಜನರು ನಮ್ಮಂತೆ ಸೈಂಟ್‌ಮೇರೀಸ್ ದ್ವೀಪವನ್ನು ನೋಡಲು ಕಾತರದಿಂದ ಕಾಯುತ್ತಿದ್ದರು. ಅಂತೂ-ಇಂತೂ ಬೋಟ್ ಸಮುದ್ರ ಮಾರ್ಗದಲ್ಲಿ ಚಲಿಸಿ ಸೈಂಟ್‌ಮೇರಿಸ್ ದ್ವೀಪದ ದಡದಲ್ಲಿ ಬಂದು ನಿಂತಿತು. ಆ ದ್ವೀಪದ ತುಂಬೆಲ್ಲ ತೆಂಗಿನ ಮರಗಳು ಇರುವುದರಿಂದ ಅದನ್ನು ಕೊಕೊನೆಟ್ ಐಲ್ಯಾಂಡ್ ಅಂತಲೂ ಕರೆಯುತ್ತಾರಂತೆ. ದ್ವೀಪವನ್ನು ಪ್ರವೇಶಿಸಿದೊಡನೆ ಕಾಣಸಿಗುವ ತೆಂಗಿನ ಮರದಿಂದ ನಿರ್ಮಿತವಾದ ಪ್ರವೇಶದ್ವಾರ ಜನರನ್ನು ಆಕರ್ಷಿಸುತ್ತದೆ. ಆ ಸಮುದ್ರದ ದಡದಲ್ಲಿ ಅದೆಷ್ಟೋ ವಿಭಿನ್ನವಾದ, ವಿವಿಧ ಆಕೃತಿಯ ಕಪ್ಪೆಚಿಪ್ಪುಗಳು, ಬಂಡೆಗಳಲ್ಲಿನ ಆಕೃತಿಗಳು ಹಾಗೂ ಅಲ್ಲಿ ಕಛಿಚcಛಿ ಎಂದು ಬರೆದಿರುವ ಫಲಕ ಜನರನ್ನು ತನ್ನತ್ತ ಸೆಳೆಯುತ್ತದೆ. ನಾವೂ ಅದರತ್ತ ಹೋಗಿ ಒಂದೆರಡು ಫೊಟೋ ಕ್ಲಿಕ್ಕಿಸಿಕೊಂಡಿದ್ದೆವು. ಸಾಗರವು ಪ್ರಶಾಂತವಾಗಿರುವುದರಿಂದ ಹೆಚ್ಚಿನ ಜನ ಇಲ್ಲಿಗೆ ನೆಮ್ಮದಿಯಿಂದ ಕಾಲ ಕಳೆಯಲು ಬಂದು ಹೋಗುತ್ತಾರೆ.
ಭಾವನಾ ಜೈನ್, ಆಳ್ವಾಸ್ ಕಾಲೇಜು, ಮೂಡಬಿದ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.