ಆಡುತಾಡುತ ಕೂಡುಕುಟುಂಬದಲ್ಲಿ !
Team Udayavani, Apr 19, 2019, 6:00 AM IST
ನನ್ನ ಜೀವನದ ಅತ್ಯಮೂಲ್ಯ ಕ್ಷಣಗಳಲ್ಲಿ ಗೆಳತಿಯ ಮನೆಯಲ್ಲಿ ಕಳೆದ ಒಂದು ದಿನದ ಮರೆಯಲಾಗದ ಅನುಭವವನ್ನು ತಂದುಕೊಟ್ಟ ಸವಿನೆನಪು ಮನದಲ್ಲಿ ಅಚ್ಚೊತ್ತಿದೆ. “ಜೇನಿನ ಗೂಡು ನಾವೆಲ್ಲ, ಬೇರೆ ಬೇರೆಯಾದರೆ ಜೇನಿಲ್ಲ ‘ ಎಂಬ ಹಾಡಿಗೆ ನಿಜವಾದ ಅರ್ಥ ಅಂದು ನನಗೆ ಅನುಭವವಾಯಿತು. ಸುಖ -ದುಃಖಗಳಿಗೆ ಜೊತೆಗೂಡಿ ನಿಲ್ಲುವ ಕುಟುಂಬ ಸದಸ್ಯರ ಒಗ್ಗಟ್ಟಿನ ಗುಂಪೇ ಅದ್ಭುತ. ಹಿಂದೊಂದು ದಿವ್ಯ ಕಾಲದಲ್ಲಿ ಮನೆ ಸುಖ, ಶಾಂತಿ, ನೆಮ್ಮದಿ, ಸಂಪತ್ತಿನ ಸೆಲೆಯಾಗಿ, ಕೂಡಿ ದುಡಿದು, ಕೂಡಿ ಬಾಳುವ ಕುಟುಂಬಗಳನ್ನೊಳಗೊಂಡ ಸಮಾಜ ವ್ಯವಸ್ಥೆ ಬಹುತೇಕವಾಗಿತ್ತಂತೆ. ಹಿರಿಯರ ಕಾಲೆಳೆಯುವ ಕಿರಿಯರು, ತಮಾಷೆ ಮಾಡುತ್ತಾ, ನಗು-ನಲಿವಿನ ಜೊತೆಗೆ ಹಾಸ್ಯ-ಆಟ-ಪಾಠಗಳೊಂದಿಗೆ ಕಾಲ ಕಳೆಯುವ ಕ್ಷಣ ನಿಜಕ್ಕೂ ಅದ್ಭುತ. ಕೂಡಿ ದುಡಿದು ಸಂಸಾರ ಸಾಗರವ ದಾಟುವ ನೌಕೆಗೆ ಮನೆಯ ಹಿರಿಯನೇ ನಾವಿಕ.
ಭಾರತದ ಸಮಾಜ ವ್ಯವಸ್ಥೆಯ ಒಂದು ವಿಶಿಷ್ಟ ಪದ್ಧತಿ ಈ ಅವಿಭಕ್ತ ಕುಟುಂಬ ಎಂಬುದು ನೆನಪಾಗುತ್ತದೆ. ಆದರೆ, ಭಾರತೀಯರೇ ಹೀಗಲ್ಲವೇ- ಕೂಡಿ ಬಾಳುವ ಸಂಸ್ಕೃತಿಯನ್ನು ಹೊಂದಿಕೊಂಡಿರುವ ಹಾಗೆ ತಮ್ಮದೇ ಆದ ಒಂದು ಭಾಷೆಯ ಮೂಲಕ ತಮ್ಮ ಭಾವನೆಯನ್ನು ವ್ಯಕ್ತಪಡಿಸುತ್ತ, ಭಾಷಾ ವೈವಿಧ್ಯದಲ್ಲೂ ಏಕತೆಯನ್ನು ಸಾರಿದ ರಾಷ್ಟ್ರ. ಆದರೆ, ಇಂದು ನಾವು ನಾಗರಿಕರಾಗುತ್ತ ಜನಸಂಖ್ಯೆ ಹೆಚ್ಚಳವಾದಂತೆ ತಮಗೆ ಒಗ್ಗುವಂತೆ ತಮ್ಮದೇ ಆದ ಹೊಸತಾದ ವ್ಯವಸ್ಥೆಯನ್ನು ರೂಪಿಸಿಕೊಂಡು, ಪರ್ಯಾಯ ವ್ಯವಸ್ಥೆಯಾಗಿ ವಿಭಕ್ತ ಕುಟುಂಬವನ್ನು ರೂಢಿಗೆ ತಂದು ಕೇವಲ ಎರಡು ತಲೆಮಾರಿನ ರಕ್ತ ಸಂಬಂಧಿಗಳಾದ ಅಪ್ಪ-ಅಮ್ಮ ಮತ್ತು ಅವರದೇ ಮಕ್ಕಳ ಪುಟ್ಟ ಸಂಸಾರ. ಇದನ್ನೇ ಪುಟ್ಟ ಪ್ರಪಂಚವಾಗಿಸಿಕೊಂಡು ನಮಗೆ ನಾವೇ ಬಂಧಿತರಾಗಿ ಬಿಡುತ್ತೇವೆ. ತಾತ-ಅಜ್ಜಿಯರ ನೀತಿಕಥೆಗಳಿಂದ ವಂಚಿತರಾಗಿ ಅತ್ತೆ, ಮಾವನ ಜೊತೆಗೆ ಕಾಲ ಕಳೆಯುವ ಮಜಾ, ಕೂಡಿ ಬದುಕು ನಡೆಸುವ ಬಾಂಧವ್ಯಗಳ ಕಲ್ಪನೆಯೂ ಮರೆಯಾಗಿ ಸಂಬಂಧಗಳ ಅಭಾವ ಉಂಟಾಗಿದೆ. ಇಲ್ಲಿ ಬೆಳೆದ ಮಕ್ಕಳಿಗೆ ಪ್ರೀತಿ, ವಿಶ್ವಾಸ, ನಂಬಿಕೆ, ವಾತ್ಸಲ್ಯಗಳ ಪರಿವೇ ಇಲ್ಲದೆ ಕಂಪ್ಯೂಟರ್, ಮೊಬೈಲ…, ಸಾಮಾಜಿಕ ಜಾಲತಾಣಗಳು ಇದರÇÉೇ ಪಂಜರದ ಪಕ್ಷಿಯಂತೆ ಬಂಧಿತರಾಗಿ ಅದನ್ನೇ ಪ್ರಪಂಚವಾಗಿಸಿಕೊಂಡು ಮನೆಯಿಂದ ಶಾಲೆಗೆ, ಅಲ್ಲಿಂದ ಮತ್ತೆ ಸಂಜೆ ಟ್ಯೂಶನ್‌ಗೆ, ರಾತ್ರಿ ಮತ್ತೆ ಮನೆಗೆ ಇಷ್ಟು ಮಾತ್ರ. ರಜೆಗಳಲ್ಲಿ ಬಿಡುವು ಮಾಡಿಕೊಂಡು ಪ್ರವಾಸ ಹೋದರೆ ಅಲ್ಲಿ ಮಾತ್ರ ಕುಟುಂಬದೊಂದಿಗೆ ಒಂದಿಷ್ಟು ಸ್ವಲ್ಪ ಕಾಲ ಕಳೆಯಬಹುದಷ್ಟೆ. ಹತ್ತಾರು ಮಂದಿ ಮನೆ ತುಂಬ ಇದ್ದು, ಕಣ್ಣು ಹಾಯಿಸಿದರೆ ಸಾಕು ಅÇÉೆಲ್ಲ ಮರಿಮಕ್ಕಳನ್ನು ಕಾಣತ್ತಿದ್ದ ಭೂತಕಾಲವನ್ನು ಈಗ ಊಹಿಸಿಕೊಳ್ಳಲೂ ಅಸಾಧ್ಯ. ಈಗ ಪರಸ್ಪರ ಪತಿ-ಪತ್ನಿಯರೇ ಹೊಂದಾಣಿಕೆಯಿಂದ ಬಾಳಲು ತಿಣುಕಾಡುತ್ತಿರುವ ಇಂದಿನ ಈ ಸಂದರ್ಭದಲ್ಲಿ ಅವರ ಮಕ್ಕಳ ಜೊತೆ ಸಮಯ ಕಳೆಯಲು ಕಷ್ಟಕರ ಅಂದರೆ ತಪ್ಪಾಗಲಾರದು. ಇದೇ ರೀತಿ ವಿಭಕ್ತ ಕುಟುಂಬದಲ್ಲಿ ಬೆಳೆದ ನನಗೆ ನನ್ನ ಗೆಳತಿಯ ಮನೆಯ ದೊಡ್ಡ ಕುಟುಂಬ ನೋಡಿ ನಿಜಕ್ಕೂ ಅಚ್ಚರಿ ಪಟ್ಟೆ. ಅಲ್ಲಿ ಸಿಕ್ಕ ಪ್ರೀತಿ, ಮಮತೆ ವಾವ್! ನಾನೇ ಸೃಷ್ಟಿಸಿದ ಅಕ್ಕ, ತಂಗಿ, ಅಣ್ಣ, ತಮ್ಮ, ಚಿಕ್ಕಿಯರ ಬಳಗದೊಡಗಿನ ಸಂಬಂಧದ ಕರೆಯುವಿಕೆಯಲ್ಲಿನ ಒಲವು ಅದ್ಭುತ ಅನುಭವ. ಆದರೆ, ಇಂದಿನ ತಲೆಮಾರಿಗೆ ಇಂತಹ ಜೀವನ ಶೈಲಿಯ ಕನಿಷ್ಠ ಕ್ರಮದ ವಿವೇಚನೆಯೂ ಇಲ್ಲ. ಇದರ ಪ್ರಜ್ಞೆಯೂ ನಮ್ಮಲಿಲ್ಲ. ಹಬ್ಬ-ಹರಿದಿನಗಳ ವಿಚಾರದ ಸಂಸ್ಕೃತಿಯ ಸಂಪ್ರದಾಯವೇ ಮರೀಚಿಕೆಯಾಗತೊಡಗಿದೆ. ಕೇವಲ ಮನೆಗೆೆಲಸ ಮಾತ್ರ ಮಾಡುವ ಮಹಿಳೆಯರು ಇಂದು ಕಾಣಸಿಗುವುದು ಬಹುತೇಕ ವಿರಳ. ಮಹಿಳೆಯರನ್ನು ಪುರುಷರಂತೆ ಸಮಾನರಾಗಿ ಈ ಪುರುಷ ಪ್ರಧಾನ ಸಮಾಜದಲ್ಲಿ ಆಕೆಗೂ ಉತ್ತಮ ಸ್ಥಾನ ಪಡೆಯುವಂತೆ ಅವಕಾಶವನ್ನು ಎಲ್ಲರಿಗೂ ಇಂದು ಕಲ್ಪಿಸುವಲ್ಲಿ ವಿಭಕ್ತ ಕುಟುಂಬದ ಪಾತ್ರ ದೊಡ್ಡದು. ಹಾಗೇ ಇಂದು ಇದು ಅನಿವಾರ್ಯ ಕೂಡ. ಆದರೆ, ಇದರ ನೇರ ಹೊಡೆತದ ಪರಿಣಾಮ “ವಸುದೈವ ಕುಟುಂಬಕಂ’ ಎಂಬ ವಿಶಾಲ ಮನೋಸ್ಥಿತಿಗೆ ಮಾರಕವಾಗಿ ಪರಿಣಮಿಸಿದೆ.
ನನಗೆ ಅನ್ನಿಸಿತು- ಅವಿಭಕ್ತ ಕುಟುಂಬದ ನಾಶ ನಮ್ಮ ಸಮಾಜಕ್ಕೆ ಭರಿಸಲಾಗದ ನಷ್ಟವಾಗಿದ್ದು, ಹಿರಿಯರ ಸಾನ್ನಿಧ್ಯವಿಲ್ಲದೆ ಯುವಜನತೆ ಇಂದು ದಾರಿ ತಪ್ಪುತ್ತಿ¨ªಾರೆ. ಒಂದು ಕುಟುಂಬದ ಜೀವನ ಮಟ್ಟ ಆ ದೇಶದ ಅಭಿವೃದ್ಧಿಯ ಮೇಲೂ ಪರಿಣಾಮ ಬೀರುತ್ತದೆ ಎಂಬುದು ನಿಜಕ್ಕೂ ವಾಸ್ತವ ಸಂಗತಿ ಅಂತನಿಸಿತು. ಗೆಳತಿಯ ತುಂಬು ಕುಟುಂಬ ನೋಡಿ ಸಾಗರದಷ್ಟು ಮಮತೆಯ ಆಳವನ್ನು ಅನುಭವಿಸಿ ಕುಟುಂಬದ ಮೌಲ್ಯವನ್ನು ತಿಳಿದೆ. ಆದರೆ, ನಾವೆಲ್ಲ ನತದೃಷ್ಟರೇ ಸರಿ ಅಲ್ಲವೇ? ನಮ್ಮ ಸುತ್ತಮುತ್ತಲಿನ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿದ್ದು , ಈ ಸಂದರ್ಭದಲ್ಲಿ ನಾವೆಲ್ಲ ಕುಟುಂಬದ ಮೌಲ್ಯವನ್ನು ಮೂಲೆ ಗುಂಪಾಗಿಸುವಲ್ಲಿ ಮುಂದಾಗುತ್ತಿದ್ದೇವೆ ಎಂಬುದು ವಿಷಾದದ ಸಂಗತಿ. ಹೆತ್ತ ತಂದೆ- ತಾಯಿಯರನ್ನೇ ವೃದ್ಧಾಶ್ರಮಗಳಿಗೆ ಸೇರಿಸುವ ಈ ಸಂದರ್ಭದಲ್ಲಿ ಇನ್ನು ತಾತ-ಅಜ್ಜಿಯರ ಕಡೆ ಕಣ್ಣಿತ್ತಿಯೂ ನೋಡಲು ಸಮಯವಿರುವುದಿಲ್ಲ. ಇಂಥ ಸಮಯದಲ್ಲಿ ಇನ್ನು ನೆರೆ-ಹೊರೆಯವರನ್ನು ನಾವೆಷ್ಟು ಗೌರವಿಸಬಲ್ಲೆವು ಎಂದು ಒಮ್ಮೆ ಯೋಚಿಸಿ ನೋಡಿ.
ಪ್ರತಿಮಾ ಭಟ್
ದ್ವಿತೀಯ ಬಿಎ
ವಿವೇಕಾನಂದ ಪದವಿ ಕಾಲೇಜು, ಪುತ್ತೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.