ಜಸ್ಟ್ ಫ್ರೆಂಡ್ಸ್ ಮತ್ತು ಬೆಸ್ಟ್ ಫ್ರೆಂಡ್ಸ್
Team Udayavani, Nov 10, 2017, 6:30 AM IST
ಸ್ನೇಹ ಎಂಬ ಪದ ಕೇಳಲು ಎಷ್ಟು ಸುಂದರ. ಹಾಗೆಯೇ ಅದನ್ನು ವರ್ಣಿಸಲೂ ಅಷ್ಟೇ ಸುಂದರ. ಸ್ನೇಹವೆಂಬುದು ಒಂದು ಪವಿತ್ರವಾದ ಬಂಧ.
ನಮ್ಮ ಜೀವನದಲ್ಲಿ ಹಲವಾರು ಸ್ನೇಹಿತರು ಬಂದುಹೋಗಿರುತ್ತಾರೆ. ಆದರೆ ಅವರ ನೆನಪುಗಳು ಸದಾ ನಮ್ಮ ಮನದಲ್ಲಿ ಹಾಗೆಯೇ ಉಳಿದಿರುತ್ತದೆ. ಬಾಲ್ಯದಲ್ಲಿರುವಾಗ ನಮ್ಮ ಜೊತೆ ಯಾರು ಒಳ್ಳೆಯ ರೀತಿಯಿಂದ ಮಾತನಾಡುತ್ತಾರೋ ಅವರನ್ನೆಲ್ಲಾ ಸ್ನೇಹಿತರು ಅಂತ ಹೇಳೆ¤àವೆ. ಆದರೆ ಈಗ ಯಾಕೆ ಹಾಗಿಲ್ಲ? ಎನ್ನುವ ಪ್ರಶ್ನೆ ನನ್ನನ್ನು ಸದಾ ಕಾಡುತ್ತಿರುತ್ತದೆ. ಈಗ ಸ್ನೇಹಿತರಲ್ಲೂ ವಿಂಗಡನೆ ಮಾಡುತ್ತೇವೆ. ಜಸ್ಟ್ ಫ್ರೆಂಡ್ಸ್, ಬೆಸ್ಟ್ ಫ್ರೆಂಡ್ಸ್ ಅಂತ. ಇವೆರಡು ಪದಗಳಲ್ಲೂ ವ್ಯತ್ಯಾಸ ಖಂಡಿತ ಇದೆ.
ನಮ್ಮ ಜೊತೆ ಎಲ್ಲಾ ಭಾವನೆ, ನೋವು, ಸಂತೋಷಗಳನ್ನು ಹಂಚಿಕೊಂಡು ತಮ್ಮ ನೋವನ್ನು ಅವರ ನೋವೆಂದು ಭಾವಿಸಿ ಕಷ್ಟಕಾಲದಲ್ಲಿ ಸಹಾಯ ಮಾಡಿಕೊಂಡು, ಒಬ್ಬರಿಗೊಬ್ಬರು ಹಂಗಿಸಿಕೊಂಡು, ಜಗಳ ಮಾಡಿಕೊಂಡು ಸ್ಸಾರಿ ಕೇಳಿ ಪುನಃ ಫ್ರೆಂಡ್ಸ್ ಆಗೋದನ್ನ ಬೆಸ್ಟ್ ಫ್ರೆಂಡ್ಸ್ ಅಂತ ಕರೀತೇವೆ.ಆದರೆ ಜಸ್ಟ್ ಫ್ರೆಂಡ್ಸ್ ಅಂದ್ರೆ ಉಪಯೋಗವಿದ್ದಾಗ ಮಾತ್ರ ಬಂದು ಮಾತಾಡಿ, ಅವರ ಕೆಲಸ ಆಗುವ ತನಕ ನಮ್ಮ ಜೊತೆಗಿದ್ದು ನಂತರ ಅವರ ದಾರಿ ಅವರಿಗೆಂದು ಹೋಗುವವರನ್ನು ಜಸ್ಟ್ ಫ್ರೆಂಡ್ಸ್ ಎನ್ನುತ್ತೇವೆ.
ಬಾಲ್ಯದಲ್ಲಿರುವ ಈ ಭಾಗ ಈಗ ಯಾಕೆ ಎಂಬ ಪ್ರಶ್ನೆ ಹಲವರಲ್ಲಿ ಮೂಡಿರಬಹುದು. ಇದಕ್ಕೆ ಪರಿಹಾರವೂ ನಮ್ಮಲ್ಲಿಯೇ ಇದೆ. ಒಂದು ಒಳ್ಳೆ ಫ್ರೆಂಡ್ ಆಗಲು ನಾವು ನಮ್ಮಲ್ಲಿರುವ ಅಹಂಕಾರ, ಕೋಪ, ಅಸೂಯೆ, ಸ್ವಾರ್ಥಗಳನ್ನು ಹಿಡಿತದಲ್ಲಿಟ್ಟುಕೊಂಡು ಅವರ ಕಷ್ಟಗಳನ್ನು ನಮ್ಮ ಕಷ್ಟವೆಂದು ತಿಳಿದು ನಮಗಾದಷ್ಟು ಸಹಾಯ ಮಾಡಿದರೆ ಎಲ್ಲರಿಗೂ ನೀವು ಒಬ್ಬ ಒಳ್ಳೆಯ ಸ್ನೇಹಿತರಾಗಿರುತ್ತೀರಿ. ಚಿಕ್ಕ ತಪ್ಪು ಮಾಡಿದಾಗ ಕ್ಷಮೆ ಕೇಳ್ಳೋದು ಸಹಜ. ಅದೂ ಒಂದೇ ಒಂದು ಪದ, ಸ್ಸಾರಿ ಕೇಳಿದ್ರೆ ಸರಿ ಹೋಗುತ್ತೆ. ಆದರೆ ಫ್ರೆಂಡ್‌ಶಿಪ್ ಅಲ್ಲಿ ಸ್ಸಾರಿ, ಥ್ಯಾಂಕ್ಸ್ ಇರಬಾರದು ಎಂಬ ಹೇಳಿಕೆಯೂ ಇದೆ. ಸ್ಸಾರಿ ಎಂಬುದು ಒಂದು ಅತ್ಯಮೂಲ್ಯವಾದ ಶಬ್ದ. ಇದರಿಂದ ಅನೇಕ ಚಿಕ್ಕ ಚಿಕ್ಕ ಮನಸ್ತಾಪಗಳು ಪರಿಹಾರವಾಗಿವೆ. ಸ್ಸಾರಿ ಕೇಳ್ಳೋದ್ರಿಂದ ನಾವು ನಮ್ಮ ಸ್ನೇಹಿತರ ಮುಂದೆ ಚಿಕ್ಕವರಾಗುತ್ತೇವೆ ಎಂದು ಆ ಪದ ಕೇಳದೇ ಅನೇಕರು ತಮ್ಮ ಸ್ನೇಹವನ್ನೇ ಕಳೆದುಕೊಂಡಿದ್ದಾರೆ. ನಾವು ನಮ್ಮ ಫೀಲಿಂಗ್ಸ್ ಅನ್ನು ಶೇರ್ ಮಾಡ್ಕೊಳ್ಳೋದು ಫ್ರೆಂಡ್ಸ್ ಜೊತೆ.
ತಂದೆತಾಯಿಯರಿಗೆ ಗೊತ್ತಿಲ್ಲದ ನಮ್ಮ ಅನೇಕ ವಿಷಯಗಳು ತಿಳಿದಿರುವುದು ಫ್ರೆಂಡ್ಸ್‌ಗಳಿಗೆ, ಕಷ್ಟದಲ್ಲಿರುವಾಗ ಸಹಾಯ ಮಾಡೋದು ಫ್ರೆಂಡ್ಸ್. ಹೀಗಿರುವಾಗ ನಮ್ಮ ತಪ್ಪೆಂದು ತಿಳಿದರೂ ಅವರಿಗೆ ಸ್ಸಾರಿ ಕೇಳದೇ ಅವರಿಂದ ದೂರವಾಗೋ ಬದಲು ಈ ಪದವನ್ನು ಕೇಳಿದರೆ ಖಂಡಿತ ಪುನಃ ಒಳ್ಳೆ ಸ್ನೇಹಿತರಾಗಿರಲು ಸಾಧ್ಯ. ತಾಯಿಯಾದವಳು ಮಕ್ಕಳು ಏನೇ ತಪ್ಪು ಮಾಡಿದರೂ ಕ್ಷಮಿಸ್ತಾಳಲ್ವ, ಹಾಗೆಯೇ ಫ್ರೆಂಡ್‌ಶಿಪ್ ಕೂಡ.
ಸ್ನೇಹಿತರಿಗೆಂದು ಒಂದು ವಿಶೇಷವಾದ ದಿನ “ಫ್ರೆಂಡ್‌ಶಿಪ್ ಡೇ’ ಎಂದು ಆಚರಿಸುತ್ತೇವೆ. ಆ ದಿನಎಲ್ಲರೂ ತಮ್ಮ ತಮ್ಮ ಸ್ನೇಹಿತರಿಗೆ ಫ್ರೆಂಡ್‌ಶಿಪ್ ಬ್ಯಾಂಡ್ ಕಟ್ಟುತ್ತೇವೆ. ಇದರ ಉದ್ದೇಶ ನಮ್ಮ ಗೆಳೆತನ ಸದಾಕಾಲ ಗಟ್ಟಿಯಾಗಿರಲಿ ಎಂದರ್ಥ. ಆ ದಿನದಂದು ನಾವು ನಮ್ಮ ಫ್ರೆಂಡ್ಸ್‌ಗಳನ್ನು ಖುಷಿಯಲ್ಲಿರಿಸಿದರೆ ಸಾಕು. ಮತ್ತೆ ಯಾವತ್ತಿಗೂ ಅವರಿಗೆ ನೋವಾಗದಂತೆ ನೋಡಿಕೊಳ್ಳಬೇಕು. ಅಬ್ದುಲ್ ಕಲಾಂ ಅವರು ಹೇಳಿದ ಮಾತು ನೂರಕ್ಕೆ ನೂರು ಸತ್ಯ.
ಏನೆಂದರೆ, “ಒಂದು ಬೆಸ್ಟ್ ಪುಸ್ತಕ ನೂರು ಒಳ್ಳೆ ಸ್ನೇಹಿತರಿಗೆ ಸಮ. ಆದರೆ ಒಂದು ಒಳ್ಳೆ ಸ್ನೇಹಿತ ಗ್ರಂಥಾಲಯಕ್ಕೆ ಸಮ’.ಪ್ರತಿಯೊಬ್ಬರಿಗೂ ಸ್ನೇಹಿತರಿರುತ್ತಾರೆ. ನಮ್ಮ ಸ್ನೇಹಿತರಲ್ಲಿ ಕೆಲವರು ಒಳ್ಳೆ ಸ್ನೇಹಿತರೂ ಇರುತ್ತಾರೆ. ಕೆಲವರು ಕೆಟ್ಟವರೂ ಇರುತ್ತಾರೆ. ಕೆಟ್ಟವರನ್ನು ಒಳ್ಳೆಯವರನ್ನಾಗಿ ಮಾಡುವ ಸಾಮರ್ಥ್ಯ ಹಾಗೂ ಒಳ್ಳೆಯವರನ್ನು ಕೆಟ್ಟವರನ್ನಾಗಿ ಮಾಡುವ ಸಾಮರ್ಥ್ಯವಿರುವುದು ಫ್ರೆಂಡ್ಸ್‌ಗಳಿಗೆ.
ತಂದೆ- ತಾಯಿಯರಿಂದ ಆಗದ ಕೆಲಸ ಫ್ರೆಂಡ್ಸ್‌ಗಳಿಂದ ಮಾಡಲು ಸಾಧ್ಯ. ನಿಮ್ಮ ಸ್ನೇಹಿತರ ಗುಂಪುಗಳಲ್ಲಿ ಯಾರಾದರೂ ಕೆಟ್ಟವರಿದ್ದರೆ ಅವರನ್ನು ಸರಿಪಡಿಸಿ ಒಳ್ಳೆಯವರನ್ನಾಗಿ ಮಾಡಿ. ಯಾಕೆಂದರೆ, ಒಬ್ಬ ಮನುಷ್ಯ ಯಾರನ್ನೂ ನಂಬದಿದ್ದರೂ ತನ್ನ ಸ್ನೇಹಿತರನ್ನು ನಂಬುತ್ತಾನೆ. ಆದ್ದರಿಂದ ಅವರಿಗೆ ಒಳ್ಳೆಯದನ್ನು ಬಯಸಿ ಯಾವತ್ತಿಗೂ ಕೆಟ್ಟದ್ದನ್ನು ಬಯಸಬೇಡಿ. ಸ್ನೇಹಿತರು ನಮ್ಮೊಂದಿಗೆ ಎಲ್ಲಾ ಸುಖ, ದುಃಖಗಳನ್ನು ಹಂಚಿಕೊಳ್ಳುತ್ತಾರೆ. ಅದನ್ನೇ ಇಟ್ಟು ಅವರನ್ನು ಹಂಗಿಸಿ ನೋವು ಕೊಡಬೇಡಿ. ನಿಮಗೆ ಆದಷ್ಟು ಸಹಾಯ ಮಾಡಿ.
– ನಿಶಾ
ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ,
ಮೂಡಬಿದ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.