ಲಾಸ್ಟ್‌ ಬೆಂಚ್‌ ಕಿರಿಕ್‌ ಪಾರ್ಟಿ


Team Udayavani, Jan 6, 2017, 3:45 AM IST

Makkalu-00.jpg

ಫಸ್ಟ್ ಬೆಂಚ್‌ ವಿದ್ಯಾರ್ಥಿಗಳು  ಸಮಸ್ಯೆಗಳನ್ನು ಪರಿಹರಿಸುತ್ತಾರೆ, ಲಾಸ್ಟ್‌ ಬೆಂಚಿನವರು ಸಮಸ್ಯೆಗಳನ್ನು ಸೃಷ್ಟಿಸುತ್ತಾರೆ. ಇದು ಇತ್ತೀಚಿಗೆ ಬಂದ ಕನ್ನಡ ಸಿನೆಮಾದ ಹಾಡೊಂದರ ಧ್ಯೇಯ ವಾಕ್ಯ. ಲಾಸ್ಟ್‌ ಬೆಂಚು ಮತ್ತೆ ಕಿರಿಕ್‌ ಪಾರ್ಟಿಗೆ ಅದೇನೋ ಒಂದು ಅವಿನಾಭಾವ ಸಂಬಂಧ- ದುಂಬಿ ಹಾಗೂ ಹೂವಿನಂತೆ. 

ಲಾಸ್ಟ್‌ ಬೆಂಚಲ್ಲಿರುವವರೆಲ್ಲ ಕಿರಿಕ್‌ ಪಾರ್ಟಿಗಳೆಂದು ನಾನು ಹೇಳ್ತಾ ಇಲ್ಲ , ಕಿರಿಕ್‌ ಮಾಡೋರಿಗೆ ಫ‌ರ್ಸ್ಡ್ ಬೆಂಚು, ಲಾಸ್ಟ್‌ ಬೆಂಚು ಎಲ್ಲಾ ಒಂದೇ. ಆದರೆ ಲಾಸ್ಟ್‌  ಬೆಂಚಲ್ಲಿ ಕೂತವರು ಮುಗ್ಧರಾಗಿದ್ದರೂ ಅವರಿಗೆ ಒಮ್ಮೆಲೇ ಕಿರಿಕತ್ವ ಪ್ರಾಪ್ತಿಯಾಗುತ್ತೆ. ತರ್ಲೆ ಅನ್ನೋ ಪದಕ್ಕೆ ಸಮಾನಾರ್ಥಕ ಪದವಾಗಿರೋ ಎಷ್ಟೋ ಜನರು ಕಾಲೇಜಿನಲ್ಲಿ ಕಾಣಸಿಗುತ್ತಾರೆ. 

ಪ್ರೈಮರಿಯಲ್ಲಿ ಎರಡನೆಯ ಅಥವಾ ಮೂರನೆಯ ಬೆಂಚಲ್ಲಿ ಕೂರುತ್ತಿದ್ದ ನಾನು ಹೈಸ್ಕೂಲಿನಲ್ಲಿ ಲಾಸ್ಟ್‌ ಬೆಂಚಿಗೆ ಪ್ರಮೋಟ್‌ ಆದೆ. ನನ್ನೊಂದಿಗೆ ಇನ್ನೂ ಇಬ್ಬರು ಸೇರಿಕೊಂಡರು. ನಾವು ಮೂವರಲ್ಲಿ ಮಧ್ಯದಲ್ಲಿ ಕೂರುತ್ತಿದ್ದವಳಿಗೆ ಸ್ವಲ್ಪವೇ ಸ್ವಲ್ಪ ಸೀರಿಯಸ್‌ನೆಸ್‌ ಇತ್ತು. ನಾವು ಒಳ್ಳೆಯವರಾಗಲು ಎಷ್ಟೇ ಪ್ರಯತ್ನಿಸಿದರೂ, ಹಿಸ್ಟರಿ ಕ್ಲಾಸ್‌ನಲ್ಲಿ ನಾವು ಏನಾದರೂ ಕಿರಿಕ್‌ ಮಾಡಲು ಶುರುಹಚ್ಚುತ್ತೇವೆ, ಹಾಗಂತ ನಾವು ಬೇರೆ ಯಾರಿಗೂ ತೊಂದರೆ ಕೊಡುತ್ತಿರಲಿಲ್ಲ- ನಮ್ಮ ಇಬ್ಬರ ಮಧ್ಯದಲ್ಲಿ ಕೂರುತ್ತಿದ್ದವಳನ್ನು ಹೊರತು ಪಡಿಸಿ. ನನ್ನ ಅತೀವ ಮಾತುಗಾರಿಕೆಯಿಂದಾಗಿ ಇನ್ನೊಬ್ಬಳಿಗೆ ಪೆಟ್ಟು ಸಿಕ್ಕಿದ್ದೂ ಇದೆ, ಆ ಸುಂದರ ಕ್ಷಣದ ನೆನಪಿಗೋಸ್ಕರ ಅವಳು ಇದ್ದ ಹಾಡನ್ನು ಪುನಃ ರಚಿಸಿದ್ದಾಳೆ, ಅದು ಬೇರೆ ವಿಷಯ, ಈಗ ಬೇಡ ಬಿಡಿ. ನಮ್ಮ ಹಲವು ಪ್ರಶಂಸನೀಯ ಕಾರ್ಯಗಳನ್ನು ಅರಿತು ನಮ್ಮ ಸಮಾಜ ಟೀಚರ್‌ ನಮ್ಮನ್ನು ಅತ್ಯಂತ ಪ್ರೀತಿಯಿಂದ “ಎಲ್‌ಎಲ್‌ಬಿ’ ಎಂದು ಕರೆಯುತ್ತಿದ್ದರು. ಎಲ್‌ಎಲ್‌ಬಿ ಎಂದರೆ ಲೇಡಿ ಲಾಸ್ಟ್‌ ಬೆಂಚರ್ಸ್‌. 
ನಾವೇ ಹೀಗಾದರೆ ಹುಟ್ಟಾ ತರ್ಲೆಗಳು ಹುಡುಗರು, ನಮಗಿಂತ ಒಂದು ಕೈ ಮೇಲೆ. ಒಂದು ದಿನ ಬ್ರೇಕ್‌ ಟೈಮಲ್ಲಿ  ಲಾಸ್ಟ್‌ ಬೆಂಚು, ಅದರ ಮುಂದಿನ ಬೆಂಚ್‌ನಲ್ಲಿ ತಲಾ ಇಬ್ಬರು ಹುಡುಗರು  ಕೂತರು, ಮುಂದೆ ಕೂತವರು ಎರಡು ಬೇರೆ ಬೇರೆ ಬೈಕು ಚಲಾಯಿಸುವಂತೆ ನಟಿಸುತ್ತಿದ್ದರು. ಹಿಂದಿನವರು ಹಾಗೆ ಸುಮ್ಮನೆ ಬೈಕ್‌ ಹಿಂದೆ ಕೂತಂತೆ ನಟಿಸುತ್ತಿದ್ದರು. ಅವರನ್ನು ನೋಡಿದಾಗ ನನಗವರ ಕಾನ್ಸೆಪ್ಟ್ ಅರ್ಥ ಆಯಿತು. ಆದರೆ ಮುಂದೆ ಕೂತವರು ಒಂದು ಕೈಯ್ಯಲ್ಲಿ ಬೈಕ್‌ ಚಲಾಯಿಸಿ ಇನ್ನೊಂದು ಕೈಯ್ಯಲ್ಲಿ ಟೈ ಎತ್ತಿ ಅದನ್ನು ಗಾಳಿಯಲ್ಲಿ ತೇಲುತ್ತಿರುವಂತೆ ಮಾಡುತ್ತಿದ್ದರು. ಕುತೂಹಲದಿಂದ ಅದೇನೆಂದು ಕೇಳಿದೆ ಅದಕೊಬ್ಬ , “ನಾವು ಭಯಂಕರ ಸ್ಪೀಡಲ್ಲಿ ಗಾಡಿ ಓಡಿಸುತ್ತಿದ್ದೇವೆ. ಹಾಗಾಗಿ ಗಾಳಿಯ ರಭಸಕ್ಕೆ ಟೈ ತೇಲಾಡುತ್ತಿದೆ’ ಎಂದ. ಇನ್ನೊಬ್ಬ “ಸೈಡಿಗೆ ಹೋಗು, ಟಯರ್‌ ಕೆಳಗೆ ಸಿಲುಕಿ ಸಾಯಬೇಡ’ ಎಂದ. ನನಗಾಗ “ಹೀಗೂ ಉಂಟೆ’ ಎಂದೆನಿಸಿತು. 

ನಾನು ಸೇರಿದ ಕಾಲೇಜಿಗೆನೇ ಒಬ್ಬ ಹಳೆಯ ತರ್ಲೆ ಕ್ಲಾಸ್‌ಮೇಟ್‌ ಸೇರಿಕೊಂಡ. ಅವನಿಗೆ ದೊಡ್ಡ ಕಿರಿಕ್‌ ಗ್ಯಾಂಗ್‌ ಸಿಕು¤. ಕೆಲವರಂತೂ ಕಿರಿಕ್‌ ಹಾಗೂ ಇನ್ನಿತರ ತರ್ಲೆ ತಮಾಷೆಗಳು ಎಂಬ ಕೋರ್ಸಿನಲ್ಲಿ ಪಿಎಚ್‌. ಡಿ ಮಾಡಿದ್ದರು. ನಾವು ಪ್ರಥಮ ಪಿಯುಸಿಯಲ್ಲಿದ್ದಾಗ ಕ್ರಿಕೆಟ್‌ ಜ್ವರ ಇಳಿದು ಪಿಕೆಎಲ್‌ ಜ್ವರ ವ್ಯಾಪಕವಾಗಿ ಹರಡಿತ್ತು. ಅದರಲ್ಲಿ  ನಮ್ಮ ಕ್ಲಾಸಿನ  ತರ್ಲೆ ಗ್ಯಾಂಗಿನ ಗಮನ ಸೆಳೆದದ್ದು “ಯಾದವ್‌ ಜಿ’ ಎಂಬ ಟಿ.ವಿ. ಪರದೆ  ಮೇಲೆ ಕಾಣಿಸದ ಥರ್ಡ್‌ ಅಂಪೈರ್‌. ಆವಾಗಿನಿಂದ ಶುರು ಕ್ಲಾಸ್‌ರೂಮಿನ ಬಾಗಿಲು ಗಾಳಿಯಿಂದಾಗಿ ಸ್ವಲ್ಪ ಸರಿದರೆ ಸಾಕು, “ಯಾದವ್‌ ಜಿ’ ಎನ್ನುತ್ತಿದ್ದರು, ಮಾತ್ರವಲ್ಲ ಇನ್ನಾ$Âವುದೇ ಅಗೋಚರ (ನಿಷ್ಪ್ರಯೋಜಕ) ವಿಷಯ ಸಂಭವಿಸಿದರೆ ಅದು “ಯಾದವ್‌ ಜಿ’ ಮಾಡಿದ್ದು ಎನ್ನುತ್ತಿದ್ದರು. ಒಂದೊಮ್ಮೆ ನನ್ನನ್ನು ಕರೆದು “ಅಗೋ ಅಲ್ಲಿ ಯಾದವ್‌ ಜಿ’ ಎಂದಾಗ ನಾನೂ ಸುಮ್ಮನೆ “ಹಾಂ , ಹೇಗಿದ್ದೀರಾ?’ ಎಂದು ಕೇಳಿದ್ದೆ.

ಫ‌ರ್ಸ್ಡ್ ಪಿಯುಸಿಯಲ್ಲಿನ ಇವರ ಕಿರಿಕ್‌ಗಳನ್ನು ತಾಳಲಾರದೆ, ನಮ್ಮ ಕಾಲೇಜಿನಲ್ಲಿದ್ದ ಮೂರು ಬ್ಯಾಚ್‌ಗಳನ್ನೂ “ರಿಶಫ‌ಲ್‌’ ಮಾಡಿದ್ದರು. ಇದೇ  ಕಾರಣದಿಂದಾಗಿ ಇದ್ದಬದ್ದ ಅತಿ ಹೆಚ್ಚು ತರ್ಲೆಗಳು ನಮ್ಮ ಕ್ಲಾಸಿಗೆ ಲಗ್ಗೆ ಇಟ್ಟರು. ಅವರಿಂದಾಗಿ ನಮ್ಮ ಕ್ಲಾಸಲ್ಲಿದ್ದ  “ಸ್ವಲ್ಪ ಪಾಪ’ ಎಂದು ಗುರುತಿಸಿಕೊಂಡಿದ್ದವರು ಕೂಡ “ಮೋಕ್ಷ’ ಸಿಕ್ಕವರಂತೆ ತಮ್ಮ ಕಿರಿಕ್‌ ಪರಾಕ್ರಮವನ್ನು ಶುರುವಿಟ್ಟರು. 

ಲೆಕ್ಚರರ್‌ ಯಾರನ್ನಾದರೂ ಪ್ರಶ್ನಿಸಿದಾಗ, ಯಾರಾದರೂ ಏನಾದರೂ ಹೇಳಿದರೆ ಅಥವಾ ಏನೂ ಹೇಳದೆ ತಮ್ಮಷ್ಟಕೆ ಕೂತರೆ, ಎÇÉಾ ಹುಡುಗರು ಒಬ್ಬನ ಹೆಸರು ಹೇಳುತ್ತಿದ್ದರು, ಮೊದಮೊದಲು ಅವನು ಪಾಪ ಎಂದುಕೊಳ್ಳುತ್ತಿದ್ದೆವು, ಆಮೇಲೆ ಗೊತ್ತಾಯಿತು ಆ ಕಿರಿಕ್‌ ಪಾರ್ಟಿಗಳಿಗೆ ಆತನೇ “ಬಾಸ್‌’ ಎಂದು. ದ್ವಿತೀಯ ವರ್ಷದ ಶುರುವಿಗೆ ನಾನು ಲಾಸ್ಟ್‌ ಬೆಂಚಲ್ಲಿ ಕೂತಿದ್ದೆ, ಆದರೆ ನಮ್ಮ ಕ್ಲಾಸ್‌ ಲೆಕ್ಚರರ್‌ ರೊಟೇಷನ್‌ ಮಾಡಿ ಎಂದಿದ್ದರು. ಇದಕ್ಕೆ ಕಾರಣ ನಾವಲ್ಲ, ನಮಗಿಂತಲೂ ಹತ್ತು ಪಟ್ಟು ಜಾಸ್ತಿ ತರೆಲಗಳೆಂದು ಖ್ಯಾತರಾಗಿದ್ದ ಹುಡುಗರು. 

ಮೊನ್ನೆ ನಮ್ಮ ಕೆಮಿಸ್ಟ್ರಿ ಲೆಕ್ಚರರ್‌ ಬಲಕೈ ನೋವೆಂದು ಎಡಕೈಯಲ್ಲಿ ಬರೆಯಲು ಪ್ರಯತ್ನಿಸುತ್ತಿದ್ದರು, ಇದನ್ನು ಮನಗೊಂಡ ಲಾಸ್ಟ್‌ ಬೆಂಚಿನ “ಕಿರಿಕ್‌ ಪಾರ್ಟಿ’ಗಳು ಚಪ್ಪಾಳೆ ತಟ್ಟಿದರು, ಲೆಕ್ಚರರ್‌ ಹಿಂದೆ ತಿರುಗಿದಾಗ ನಾವೆಲ್ಲ ಲಾಸ್ಟ್‌ ಬೆಂಚಿನತ್ತ ಕಣ್ಣು ಹಾಯಿಸಿದೆವು. ಆಗ ಅವರು ಹಿಂದೆ ಯಾರಿಲ್ಲ ಎಂದು ತಿಳಿದೂ ಕೂಡ “ಯಾರು ಮಾರ್ರೆà ಕ್ಲಾಪ್ಸ್‌ ಹೊಡಿªದ್ದು ‘ಎಂದು ಕೇಳುತ್ತಿದ್ದರು. ಅದ್ಯಾರ ಆತ್ಮದ ಜೊತೆ ಮಾತಾಡುತ್ತಿದ್ದರೋ ಏನೋ, ನನಗಣಿಸುವ ಪ್ರಕಾರ, “ಯಾದವ್‌ ಜಿ’ ಇದ್ದಿರಬೇಕು. 

ಫ್ರೀ ಟೈಮಲ್ಲಿ ನಮ್ಮ ಕ್ಲಾಸಿಗೆ ಅತಿಥಿಗಳು ಬರುತ್ತಿದ್ದರು. ಅತಿಥಿಗಳೆಂದರೆ ಬೇರೆ ಕ್ಲಾಸಿನವರು. ಅವರು ಬರುವುದು ಹಿಂದಿನ ಬೆಂಚುಗಳ ಹಿಂದೆ ಇರುವ ಸ್ಥಳದಲ್ಲಿ ಕಬಡ್ಡಿ ಆಡಲು.ಅವರಾಟಕ್ಕೆ ನಾವೇ ವೀಕ್ಷಕರು. ಹೀಗೆ ಆಡುತ್ತಿದ್ದಾಗ ಅಚಾನಕ್ಕಾಗಿ ಹಿಂದಿ ಲೆಕ್ಚರರ್‌ ಎಂಟ್ರಿ ಕೊಟ್ಟರು. ಅವರನ್ನು ಗಮನಿಸಿದವರು ಹೊರನಡೆದರು, ಆದರೆ ಪಾಪ ರೈಡ್‌ ಮಾಡಲು ಹೋದವನಿಗೆ ಅದರ ಪರಿವೇ ಇಲ್ಲ. ಉಳಿದವರು ಹೊರ ನಡೆದಾಗ ಆತ ಅವರೆಲ್ಲ ತನಗೆ ಹೆದರಿದ್ದಾರೆ ಎಂದುಕೊಂಡಿರಬಹುದು. ಆಮೇಲೆ ಲೆಕ್ಚರರನ್ನು ಕಂಡಾಗ ಅಲ್ಲೇ ಇದ್ದ ಬೆಂಚಿನ ಮೇಲೆ ಕುಳಿತು ಅಳಬೇಕೋ, ನಗಬೇಕೋ, ಎಂಬಂತೆ ನೋಡಿದಾಗ ಆತನ ಸ್ಥಿತಿ ಕಂಡು ಉಪನ್ಯಾಸಕರು ಕೂಡ ನಕ್ಕು ಹೊರಟು ಹೋದರು. 

ಇನ್ನು ಈಗೀಗ ಒಂದು ಹೊಸ ಗೇಮ್‌ ಶುರುವಿಟ್ಟಿದ್ದಾರೆ ನಮ್ಮ ಕ್ಲಾಸ್‌ ಕಿರಿಕ್‌ ಪಾರ್ಟಿಗಳು, ಯಾವ ಹೆಸರು ಹೇಳಬೇಕಿದ್ದರೂ ಆ ಹೆಸರ ಮುಂದೆ ಒನ್‌ ಎಂದು ಸೇರಿಸಿ ಹೇಳಬೇಕು, ಇಲ್ಲದಿದ್ದರೆ  ಒದೆ ಗ್ಯಾರೆಂಟಿ. ಅವರ ಪ್ಲಾನ್‌ ತುಂಬಾನೇ ಸಿಂಪಲ…- ಹೇಗಾದ್ರು , ಯಾರಿಗಾದ್ರೂ ಸುಮ್ಮನೆ ಹೊಡೀಬೇಕು ಅಷ್ಟೇ. ಫ್ರೀ ಇದ್ದಾಗ ಅವರೆಲ್ಲ ಹಳೆ ಸಿನಿಮಾ ಹಾಡುಗಳನ್ನ , ಭಕ್ತಿಗೀತೆಗಳನ್ನ ಹಾಡುತ್ತಿರುತ್ತಾರೆ, ಡೆಸ್ಕ್ ಅವರಿಗೆ ತಬಲಾ ಇದ್ದಂತೆ. ಒಂದು ದಿನ ಒಬ್ಬ ಇನ್ನೇನು ಹಾಡಿನ ಎರಡನೇ ಸಾಲು ಹಾಡಬೇಕೆನ್ನುವಷ್ಟರಲ್ಲಿ ಲೆಕ್ಚರರ್‌ ಬಂದರು, ಪಾಪ ಆತ ಅರ್ಧಕ್ಕೇ ನಿಲ್ಲಿಸಿಬಿಟ್ಟ. 

ಅದೇನೋ ತುಂಬಾ ದಿವಸಗಳ ನಂತರ ಅವರೆಲ್ಲ ಒಂದು ಹೊಸ ಕನ್ನಡ ಸಿನೆಮಾದ ಹಾಡನ್ನು ಗುನುಗುತ್ತಿದ್ದರು, ಆ ಹಾಡು ಕಿರಿಕ್‌ ಪಾರ್ಟಿ ಸಿನಿಮಾದ “ತಿಬೋìಕಿ’ ಹಾಡು, ಆ ಹಾಡು ಎಲ್ಲಾ ಕಿರಿಕ್‌ ಪಾರ್ಟಿಗಳನ್ನ ತಲೆಯಲ್ಲಿಟ್ಟುಕೊಂಡು ಬರೆದ ಹಾಡೆಂಬುವುದರಲ್ಲಿ ಸಂಶಯವಿಲ್ಲ. 

ಅದೆಷ್ಟು “ಕಿರಿಕ್‌ ಪಾರ್ಟಿ’ಗಳು ಆ “ಕಿರಿಕ್‌ ಪಾರ್ಟಿ’ಯನ್ನು ನೋಡಲು ಕಾಯುತ್ತಿದ್ದಾರೋ  ಏನೋ. “

– ರಕ್ಷಿತ  ವರ್ಕಾಡಿ 
ಡಾ. ಎನ್‌ಯಸ್‌ಎ ಎಂ ಪದವಿಪೂರ್ವ ಕಾಲೇಜು,  ನಂತೂರು 

ಟಾಪ್ ನ್ಯೂಸ್

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

Udaipur Palace: ಉತ್ತರಾಧಿಕಾರ ವಿಚಾರದಲ್ಲಿ ಉದಯಪುರ ಅರಮನೆಯಲ್ಲಿ ಸಂಘರ್ಷ: ಮೂವರಿಗೆ ಗಾಯ

Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

Udaipur Palace: ಉತ್ತರಾಧಿಕಾರ ವಿಚಾರದಲ್ಲಿ ಉದಯಪುರ ಅರಮನೆಯಲ್ಲಿ ಸಂಘರ್ಷ: ಮೂವರಿಗೆ ಗಾಯ

Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.