ನಮ್ಮ ಅಭಿಮಾನದ ಮೇಡಂ ಕುಸುಮಾ ಕಾಮತ್‌


Team Udayavani, Oct 20, 2017, 4:32 PM IST

Kusuma.jpg

ಆವತ್ತು ಆಡ್ಮಿಷನ್‌ ದಿನ. ಎಲ್ಲರಿಗೂ ನಾವು ಡಿಗ್ರಿಗೆ ಸೇರುತ್ತಿದ್ದೇವೆ ಅನ್ನೋ ಖುಷಿ. ಕೆಲವರಿಗೆ ತಾವು ಇಷ್ಟಪಟ್ಟ ಸೀಟ್‌ ಬೇಕು. ಅದಕ್ಕಾಗಿ ಆಫೀಸ್‌ ಆವರಣದಲ್ಲಿ ಗೊಂದಲ-ತರಾತುರಿ. ಕೆಲವರ ತಕರಾರು. ಆದ್ರೆ ಎಲ್ಲದಕ್ಕೂ ಸೈ ಎನ್ನುವವರು ಒಬ್ಬರು ಅಧಿಕಾರದ ಕುರ್ಚಿಯಲ್ಲಿ ಧೈರ್ಯವಾಗಿ ಕೂತಿದ್ದರು. ಅವರೇ ನಮ್ಮ ಪ್ರಿನ್ಸಿಪಾಲ್‌ ಮೇಡಮ್‌ ಪ್ರೊ. ಕುಸುಮಾ ಕಾಮತ್‌.

ಕೆಲವರಿಗೆ ತಮ್ಮ ಮಾರ್ಕ್ಸ್ ಬಗ್ಗೆ ಅಸಮಾಧಾನ. ಇನ್ನೂ ಕೆಲವರಿಗೆ ಕಡಿಮೆ ಮಾರ್ಕ್ಸ್ನಲ್ಲೂ ಸೈನ್ಸ್‌ ಬೇಕು ಅನ್ನೋ ಹಠ. ಈ ಸಮಯದಲ್ಲಿ ಆಗಷ್ಟೇ ನಾನು ಮತ್ತು ನನ್ನ ಸ್ನೇಹಿತ ಅಪ್ಲಿಕೇಶನ್‌ ಹಿಡಿದುಕೊಂಡು ಅತ್ತಿತ್ತ ಓಡಿ ಕೊನೆಗೆ ಆಡ್ಮಿಷನ್‌ಗಾಗಿ “ನಾಳೆ ಬರುತ್ತೇವೆ’ ಹೇಳಿ ಆ ಜನಜಂಗುಳಿಯಿಂದ ತಪ್ಪಿಸಿಕೊಂಡು ಬಂದಿದ್ದೆವು. ನನ್ನ ಸ್ನೇಹಿತ ಬೇರೆ ಕಾಲೇಜಿಗೆ ಜಮೆಯಾದ. ಆದ್ರೆ ನಾನು ಮಾತ್ರ ಎಂಜಿಎಂ ಕಾಲೇಜಿಗೆ ಸೇರುವ ಉಮೇದು ಮಾಡಿದೆ. ಅದಕ್ಕೆ ಒಂದು ಕಾರಣ, ನನ್ನ ಮೆಚ್ಚಿನ ಪತ್ರಿಕೋದ್ಯಮ ವಿಷಯ ಅಲ್ಲಿ ಇದ್ದ‌ದ್ದು. ಇನ್ನೊಂದು ಕಾರಣ ಅದು ನಮ್ಮ ಮನೆಯ ಪಕ್ಕದಲ್ಲಿ ಇದ್ದದ್ದು.

ಸರಿ, ಅಂತ‌ ತಂದ ಆಪ್ಲೀಕೇಶನ್‌ಗೆ ಅಕ್ಷರಗಳನ್ನು ಭರ್ತಿ ಮಾಡಿ ನಿಯಮಗಳನ್ನು ಓದಿ ಅಂತೂ ಆಡ್ಮಿಷನ್‌ ಆಗುವ ದಿನ ಬಂದೇ ಬಿಡು¤.ಅಪ್ಪನೊಟ್ಟಿಗೆ ಸ್ವಲ್ಪ ಮಂಕಾಗಿ ಇನ್ನೂ ಸ್ವಲ್ಪ ಹೆದರಿಕೆಯನ್ನು ಎದೆಯಲ್ಲಿ ಬಚ್ಚಿಟ್ಟು ಕಾಲೇಜಿನ ಆವರಣಕ್ಕೆ ಕಾಲಿಟ್ಟೆ. ಮಾರ್ಕ್ಸ್ ಕಾರ್ಡ್‌ ಅದು ಇದು ಅಂತ ತಂದ ಎಲ್ಲ ದಾಖಲೆಗಳನ್ನು ಮತ್ತೆ ನೋಡಿ ಅಪ್ಲಿಕೇಶನ್‌ ತಕ್ಕೊಂಡು ಪ್ರಿನ್ಸಿಪಾಲ್‌ ಕೊಠಡಿ ಒಳಗೆ ಹೋದೆ. ಅಲ್ಲಿ ಕನ್ನಡಕ ಹಾಕಿಕೊಂಡು ಸ್ವಲ್ಪ ಗಂಭೀರವಾಗಿ ಕೂತಿದ್ದ ಪ್ರಿನ್ಸಿಪಾಲ್‌ ಅನ್ನು ನೋಡಿ ಮನಸೊಳಗೆ ಭಯಭೀತನಾಗಿ ಹೋದೆ.

ನನ್ನನ್ನು ನೋಡಿದ ಕೂಡಲೇ ಕೆಲವೊಂದು ಪ್ರಶ್ನೆಗಳನ್ನು ಕೇಳಿ ಬಿಟ್ಟರು. ಎಲ್ಲದಕ್ಕೂ “ಸರಿ’ ಎನ್ನುತ್ತ ಸುಮ್ಮನೆ ನಿಂತು ಬಿಟ್ಟಿದ್ದೆ. ಆವಾಗ ನನ್ನ ಹೇರ್‌ಸ್ಟೈಲ್‌ನ್ನು ನೋಡಿ, “”ಇದೆಲ್ಲ ನಮ್ಮ ಕಾಲೇಜಲ್ಲಿ ನಡಿಯಲ್ಲ, ಶಿಸ್ತು ಇರಬೇಕು ಗೊತ್ತು ಆಯಿತಾ? ನಾಳೆ ಕಟ್ಟಿಂಗ್‌ ಮಾಡಿÕಕೊಂಡು ಬರಬೇಕು” ಅಂದ್ರು. ಮೊದಲ ದಿನದಲೇ ನಮ್ಮ ಪ್ರಿನ್ಸಿಪಾಲ್‌ ಹೇಗೆ ಅಂಥ ನನಗೆ  ತಿಳಿಯಿತು.

ಕಾಲೇಜು ಪ್ರಾರಂಭವಾಯಿತು. ಪ್ರಿನ್ಸಿಪಾಲ್‌ ಎದುರಿಗೆ ಸಿಕ್ಕಾಗ ನಮಸ್ತೆ ಮಾಡಿ ಹೆದರಿ ಮುಂದೆ ಸಾಗುತ್ತಿದ್ದೆೆ. ಏಕೆಂದರೆ, ನಾನು ಮತ್ತೆ ಅಂಥಾದ್ದೇ ಹೇರ್‌ ಕಟ್ಟಿಂಗ್‌ ಮಾಡಿಕೊಂಡು ಬಂದಿದ್ದೆ. ಆದ್ರೆ ಒಂದು ದಿನ ನೋಟಿಸ್‌ ಬೋರ್ಡ್‌ ನೋಡುತ್ತಿದ್ದಾಗ ನನ್ನನ್ನು ಪ್ರಿನ್ಸಿಪಾಲ್‌ ಹಿಡಿದೇ ಬಿಟ್ರಾ. ಸೀದಾ ಎಲ್ಲರ ಎದುರು, “”ಇದು ಏನು ನಿನ್ನ ಕಟ್ಟಿಂಗ್‌, ನಿನೆY ಮೊನ್ನೆ ಹೇಳಿದ್ದು ಅಲ್ವಾ? ಕೋಲಾ ಕಟ್ಟಿಂಗ್‌ ಎಲ್ಲಾ ಮಾಡಿಕೊಂಡು ಕಾಲೇಜು ಬರಲ್ಲಿಕ್ಕೆ ಇಲ್ಲ. ಗೊತ್ತಾಯಿತಾ? ನಿನ್ನ ಹೆಸರು ರೋಲ್‌ ನಂಬರ್‌ ಹೇಳು. ನಾಳೆ ಕಟ್ಟಿಂಗ್‌ ಮಾಡಿಸಿಕೊಂಡು ಬರಲಿಲ್ಲ ಅಂದ್ರೆ…” ಅಂದ್ರು. ಮರುದಿನ ತಕ್ಷಣ ಕಟ್ಟಿಂಗ್‌ ಮಾಡಿ ಕಾಲೇಜಿಗೆ ಹೋಗಿದ್ದೆ.ಸೆಕೆಂಡ್‌ ಇಯರ್‌ ಅಡ್ಮಿಷನ್‌. 

ಈ ಸಲವೋ ನನ್ನ ದುರದೃಷ್ಟಕ್ಕೆ ನಾನೇ ಸಿಕ್ಕಿ ಬಿದ್ದಿದ್ದೆ. ಕೂದಲು ಸ್ವಲ್ಪ ಜಾಸ್ತಿ ಬಿಟ್ಟು ನೇರವಾಗಿ ಬಾಚಿದ್ದರಿಂದ ಪ್ರಿನ್ಸಿಪಾಲ್‌ ಮೇಡಮ್‌, “”ನಿನೆ ಅಡ್ಮಿಷನ್‌ ಕೊಡಲ್ಲ. ಟಿ.ಸಿ ತಕ್ಕೊಂಡು ಹೋಗು” ಅಂದ್ರು. ನಾನು ಎಷ್ಟೇ ರಿಕ್ವೆಮಾಡಿದ್ರೂ ಅದಕ್ಕೆ ಉತ್ತರಿಸಲೇ ಇಲ್ಲ. ಅಮ್ಮ ನನ್ನನ್ನೇ ನೋಡುತ್ತ ಇದ್ರು. ಕೊನೆಗೆ ನಾಳೆ ಪೂರ್ತಿ ಕಟ್ಟಿಂಗ್‌ ಮಾಡಿಕೊಂಡು ಬಾ. ಆಗ ಮಾತ್ರ ನಿನೆY ಅಡ್ಮಿಷನ್‌ ಕೊಡುತ್ತೇನೆ ಅನ್ನೋ ನಿರ್ಧಾರ ಮಾಡಿ ಬಿಟ್ರಾ. ನಾನು ಅದೇ ದಿನ ಮಧ್ಯಾಹ್ನ ಫ‌ುಲ್‌ ಬೋಳು ಮಾಡಿ ಬಂದೆ. ಈ ಕಟ್ಟಿಂಗ್‌ಗೆ ಪ್ರಿನ್ಸಿಪಾಲ್‌ರಿಂದ ಶ್ಲಾಘನೆ ಬಂತು.

ಪ್ರತಿಸಲವೂ ನಾನೇ ಸಿಕ್ಕಿ ಬೀಳ್ಳೋದು ಅಂತ‌ ಅಂದುಕೊಳ್ಳುತ್ತ ಇದ್ದ ನಾನು, ಆ ದಿನ ನನ್ನ ಸ್ನೇಹಿತ ಸಿಕ್ಕಿಬಿದ್ದಾಗ ಅವನೊಡನೆ ಅವನ ಸಹಾಯಕ್ಕೆ ಅವನಿಗೆ ಧೈರ್ಯ ತುಂಬಲು ಅವನೊಂದಿಗೆ ಇದ್ದೆ. ಈ ಬಾರಿ ನಾನು ಸಿಕ್ಕಿ ಬೀಳಲ್ಲ. ಏಕೆಂದರೆ, ಕಟ್ಟಿಂಗ್‌ ಸರಿ ಮಾಡಿದ್ದೇನೆ ಅಂತ ಭಾವಿಸಿದ್ದೆ. ಆದ್ರೆ ಮೆಡಮ್‌ ಮಾತ್ರ ಸೀದಾ ಬಂದು, “”ಸಿಟ್ಟಲ್ಲಿ ನೀನು ಯಾಕೆ ಇಲ್ಲಿ ಬಂದದ್ದು. ನಿನೆYàನು ಕೆಲ್ಸ ಇಲ್ಲಿ” ಅಂತ ನನೆY ಬೈದ್ರು. ಸ್ವಲ್ಪ ನಿರಾಶೆಯಾಯಿತು. ಪರವಾಗಿಲ್ಲ , ಇದು ಕಾಲೇಜಿನಲ್ಲಿ ಕಾಮನ್‌ ಅಂತ ಮರುದಿನದಿಂದ ಅದನ್ನು ಮರೆತುಬಿಟ್ಟೆ. ಮುಂದೆ ಸಹ ಸಿಕ್ಕಿ ಬೀಳುತ್ತ ಇದ್ದೆ. ಒಂದು ಸಲ ಉದ್ದ ತೋಳಿನ ಯೂನಿಫಾರಂ ಹಾಕಿಕೊಂಡು ಬಂದಾಗ, ಇನ್ನೊಂದು ಸಲ ಐಡಿ ಹಾಕದೆ ಇದ್ದಾಗ, ಮತ್ತೆ ಪುನಃ ಕಟ್ಟಿಂಗ್‌ನ ವಿಷಯದಲ್ಲಿ , ಎಷ್ಟೋ ಸಲ ಅನ್ನಿಸಿದೆ, ಅವರ  ಕಣ್ಣಿಗೆ ನಾನೇ ಕಾಣೋದು ಅಂತ !

ಕಾಲೇಜಿನಲ್ಲಿ ನಡೆಯುವ ಪ್ರತಿ ಕಾರ್ಯಕ್ರಮದಲ್ಲಿ ಕೇಂದ್ರ ಬಿಂದುವಾಗಿ ಅಧ್ಯಕ್ಷೀಯತೆಯನ್ನು ವಹಿಸಿಕೊಂಡು ಆ ಕಾರ್ಯಕ್ರಮದ ಯಶಸ್ಸಿಗೆ ಪಾತ್ರರಾಗುತ್ತಾರೆ. ಅಲ್ಲದೆ ಕಾಲೇಜಿನ ಪ್ರತಿ ಆಗು-ಹೋಗುಗಳ ಬಗ್ಗೆ ಗಮನಹರಿಸುತ್ತಾರೆ. ಸದಾ ಬ್ಯುಸಿ ಇದ್ದರೂ ಕೂಡ ವಿದ್ಯಾರ್ಥಿಗಳಿಗೆ ಪಾಠ ಹೇಳಲು ಎಂದೂ ನಿರಾಕರಿಸಲಿಲ್ಲ. ವಿದ್ಯಾರ್ಥಿಗಳು ಯಾವುದನ್ನು ಮಾಡ್ಬೇಕು, ಕಾಲೇಜಿನಲ್ಲಿ ಹೇಗೆ ಇರಬೇಕು, ಶಿಸ್ತು- ಸ್ವತ್ಛತೆ ಎಲ್ಲಕ್ಕೂ ಮಹತ್ವ ಕೂಡುತ್ತ ಇದ್ದರು. ಕಾಲೇಜಿನ ನೀತಿನಿಯಮಗಳನ್ನು ಉಲ್ಲಂಘನೆ ಮಾಡಿದವರಿಗೆ ಶಿಕ್ಷೆಯನ್ನು ಕೂಡುವಾಗಲೂ ಸದಾ ಧೈರ್ಯವಂತೆ. ಒಂದು ದಿನ ಹೀಗೆ ಕಾರ್ಯಕ್ರಮ ಒಂದರಲ್ಲಿ ಸೆಮಿನಾರ್‌ ಆಗುವ ವೇಳೆಯಲ್ಲಿ ಅದರಲ್ಲಿ ನಾನು ಮಾತಾಡಿ¨ªೆ. ನನ್ನ ಮಾತುಗಳನ್ನು ಕೇಳಿ ಪ್ರಿನ್ಸಿಪಾಲ್‌ ಮೇಡಮ್‌, “”ಒಳ್ಳೆ ಮಾತಾಡ್ತೀಯ, ವಿದ್ಯಾರ್ಥಿಗಳು ಹೀಗೆ ಇರಬೇಕು” ಅಂತ ಹೇಳಿದಾಗ ನಿಜಕ್ಕೂ ತುಂಬಾ ಖುಷಿಯಾಯಿತು. ಆವತ್ತಿನಿಂದ ಅವರು ಯಾವಾಗಲೂ ಸಿಟ್ಟಲ್ಲಿ ಇರುವವರು ಅಲ್ಲ, ನಾವು ತಪ್ಪು ಮಾಡಿದ್ರೆ ಅವರು ಸಹ ಬುದ್ಧಿವಾದ ಹೇಳುತ್ತಾರೆ ಅನ್ನೋದು ತಿಳಿಯಿತು.

ಇತ್ತೀಚೆಗೆ ನಮ್ಮ ಪ್ರಿನ್ಸಿಪಾಲ್‌ ಮೇಡಮ್‌ರವರ ನಿವೃತ್ತಿ ಕಾರ್ಯಕ್ರಮ ನಡೆಯಿತು. ಮೂರು ವರ್ಷ ಅವರ ಶಿಸ್ತಿನ ಪಾಳೆಯದಲ್ಲಿ ಬೆಳೆದ ನಮ್ಮಂಥ ವಿದ್ಯಾರ್ಥಿಗಳು ನಿಜಕ್ಕೂ ಅದೃಷ್ಟ ವಂತರು. ಮೇಡಮ್‌, ನೀವು ಹೇಳಿಕೊಟ್ಟ ಶಿಸ್ತು ನಮ್ಮ ಜೀವನದಲ್ಲಿ ಸದಾ ಇರುತ್ತದೆ. ನಿಮ್ಮ ಮುಂದಿನ ಜೀವನ ಆನಂದಮಯ ಆಗಿರಲಿ, ಮಿಸ್‌ ಯೂ ಮ್ಯಾಮ….

– ಸುಹಾನ್‌ 
ಪತ್ರಿಕೋದ್ಯಮ ವಿಭಾಗ
ಎಂ.ಜಿ.ಎಂ.ಕಾಲೇಜು, ಉಡುಪಿ

ಟಾಪ್ ನ್ಯೂಸ್

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Brahmavar

Siddapura: ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.