ಮುಗಿಲ ಮೇಲೊಂದು ಪೇಟೆಯ ಮಾಡಿ…


Team Udayavani, Nov 17, 2017, 6:19 PM IST

17-8.jpg

ಪ್ರಕೃತಿಯ ಏಕತಾನತೆಯನ್ನು ಮೈಗೆಳೆದುಕೊಳ್ಳಲು ಯಾರಿಗೆ ತಾನೇ  ಆಸೆ ಇಲ್ಲ ಹೇಳಿ? ಅದಕ್ಕಾಗಿ ಎಲ್ಲರೂ ಬೆರಳ ತುದಿಯಲ್ಲಿ ನಿಲ್ಲುವವರೇ ಹೆಚ್ಚು . ಅದರಲ್ಲಿ ನಮ್ಮ ತಂಡವೂ ಒಂದು. ಆ ಪ್ರಕಾರವಾಗಿ ಹೊಸ ಮುಖಗಳ ಉಪಸ್ಥಿತಿಯಲ್ಲಿ ಸದುದ್ದೇಶದೊಂದಿಗೆ ರಚಿತವಾದ ನಮ್ಮ ಬಳಗ ಸಂತೋಷದ ಅಲೆಯಲ್ಲಿ ತೇಲಲು, ನಾವೆಲ್ಲ ಒಂದು ಹೆಜ್ಜೆ ಮುಂದಡಿ ಇರಿಸಿದ್ದು ಕರ್ನಾಟಕದ ಕಾಶ್ಮೀರ ಎಂದೇ ಖ್ಯಾತಿ  ಪಡೆದ  ಸದಾ ಮಂಜು ಆವೃತವಾಗಿರುವ ಮಡಿಕೇರಿ ಪ್ರದೇಶದ “ಮುಗಿಲುಪೇಟೆ’ ಖ್ಯಾತಿಯ ಮಂದಲ ಪಟ್ಟಿ ಎಂಬ ಸ್ವರ್ಗ ಚಿತ್ರಣ ಬಿಂಬಿಸುವ ನಯನಮನೋಹರ ತಾಣಕ್ಕೆ. ಎರಡು ದಿನಗಳ ಕಲ್ಪನೆಯ ಆಧಾರದಲ್ಲಿ ಆರಂಭವಾದ ನಮ್ಮ ಪ್ರವಾಸ ಯಾನವು ತಲಕಾವೇರಿ, ಭಾಗಮಂಡಲ ಮೊದಲಾದ ಪ್ರವಾಸಿ ತಾಣಗಳ ಅಂದವನ್ನು ಕಣ್ತುಂಬಿಕೊಂಡು, ಉಲ್ಲಾಸದಿಂದ ಅರೆ ಮನಸ್ಸನ್ನು ಅಲ್ಲಿಗೆ ಹೊಂದಿಸಿ, ಸಂಪೂರ್ಣವಾಗಿ ಮನಸ್ಸನ್ನು ಮಂದಾಲ ಪಟ್ಟಿಗೆ ಮೀಸಲಿರಿಸಿದ್ದು ಸುಳ್ಳಲ್ಲ. ನಿರೀಕ್ಷೆಯಂತೆ ಮಾರನೆ ದಿನದ ಮುಂಜಾನೆಯ ಏಳರ ಸಮಯ. ಗಗನಕ್ಕೆ ಆವರಿಸಿರುವ ಒತ್ತೂತ್ತಾದ ಮೋಡದ ಬಲೆಗಳಲ್ಲಿ ಸಿಕ್ಕ ಸಂದಿನಿಂದ ಕಿರಣವನ್ನು ಹೊರ ಚಾಚುತ್ತ ಸೂರ್ಯ ದೇವನು ದಿನದ ಆರಂಭಕ್ಕೆ ಅಣಿಯಾಗುವದಿದ್ದರೆ ಎಲ್ಲರ ಮನಸ್ಥಿತಿ ಮಂಜಿನ ಲೋಕದಲ್ಲಿ ಮಿಂದೇಳಲು ಹಪಹಪಿಸುತಿತ್ತು.

ಜೀಪುಗಳ ಹಾವಳಿ
ಹಲವಾರು ಚಾರಣವನ್ನು ಕೈಗೊಂಡ ನನಗೆ ಇಲ್ಲಿಯೂ ಅದಕ್ಕೆ ಅವಕಾಶವಿತ್ತು. ಆದರೆ ನಮ್ಮ ತಂಡದ  ಉದ್ದೇಶ ಅದಾಗಿಲ್ಲದ ಕಾರಣ ನಾನೂ ಸುಮ್ಮನಾದೆ. ಹಾಗಾಗಿ, ಹದಿನೇಳು ಕಿಲೋಮೀಟರ್‌ ಎತ್ತರದಲ್ಲಿರುವ ಈ ಬೆಟ್ಟದ ಪ್ರದೇಶದ ಒಂದು ಹಂತದವರೆಗೆ ಸ್ವಂತ ವಾಹನವನ್ನೇ ಏರಿ ಬಂದೆವು. ಆದರೆ ಅನಂತರದಲ್ಲಿ ಆ ದಾರಿಗೆ ಸಮಾನವಾಗಿ ನಮ್ಮ ವಾಹನ ಅಸಹಾಯಕವಾಗಿದ್ದರಿಂದ ಗಾಡಿ ಬದಿಗಿರಿಸಿ ಜೀಪಿಗೆ ಏರುವ ಪ್ರಸಂಗ ಮುಂದಾಯಿತು. ಆ ದಾರಿಯೂ ಅಂಥದ್ದೇ ಕಲ್ಲು ಮಣ್ಣುಗಳ ಹೊಂಡ ಗುಂಡಿಯಲ್ಲಿ ಜೀಪಿಗೆ ಬೇರಾವ ವಾಹನಗಳು ಸ್ಪರ್ಧೆ ನೀಡುವಂತಿರಲಿಲ್ಲ. ಆದರೂ ತಾವೇನೂ ಕಮ್ಮಿ ಇಲ್ಲವೆಂಬ ತುಡಿತದೊಂದಿಗೆ, ತಾವೂ ಏರೂವುದರ ಜೊತೆಗೆ ತಮ್ಮ ಬೈಕ್‌ಗಳನ್ನೂ ಏರಿಸಿ, ಅವಕ್ಕೂ ಮಂದಾಲಪಟ್ಟಿಯ ಸೊಬಗಿನ ದರ್ಶನ ಮಾಡಿಸುವ ಸನ್ನಿವೇಶ ಎದುರಾದೀತು ಎಂಬುದೂ ಅತ್ತಿಂದಿತ್ತ  ಸುಳಿದಾಡುವ  ಪ್ರವಾಸಿಗರ ಮನದ ಪ್ರಶ್ನೆಯೂ ಹೌದು. ಆದ್ದರಿಂದ ಇಲ್ಲಿ ಜೀಪ್‌ ಗಳದ್ದೇ ದರ್ಬಾರು. ರಾಜ್ಯಕ್ಕೆ ರಾಜನೇ ಮುಖ್ಯವೆಂಬಂತೇ ಈ ಮಂದಾಲ ಪಟ್ಟಿಗೆ ಜೀಪ್‌ (ಡ್ರೈವರ್‌) ಗೆ ಪ್ರಧಾನಸ್ಥಾನ ಒದಗಿಬಂದಿದೆ.

ಹಿಮಪಾತ…
ಅಂತೂ ಜೀಪ್‌ ಏರಿ ಪ್ರವೇಶ ದ್ವಾರದ ಬಳಿ ಬಂದಿಳಿದು ಪ್ರವೇಶ ಶುಲ್ಕ ನೀಡಿ ಕನಸಿನ ಮಂದಾಲ ಪಟ್ಟಿ ಬೆಟ್ಟಕ್ಕೆ ಪ್ರಥಮ ಹೆಜ್ಜೆ ಇಟ್ಟೆವು. ಹರ್ಷೋದ್ಗಾರಗಳೊಂದಿಗೆ ತಂಡೋಪತಂಡವಾಗಿ ಹೆಜ್ಜೆಗಳನ್ನು ಇರಿಸಿದ ನಾವೆಲ್ಲರೂ ಪ್ರಧಾನ ವೇದಿಕೆಯಾದ ಬೆಟ್ಟದ ತುದಿಯ ಹಂತಕ್ಕೆ ಬರುವಷ್ಟರಲ್ಲಿ ಸನಿಹದಲ್ಲಿದ್ದವರೆಲ್ಲರೂ ಕಣ್‌ದೃಷ್ಟಿಯಿಂದ ದೂರ ಸರಿದಿರುವಂತೆ ಭಾಸವಾಗುತ್ತಿತ್ತು. ಕೇವಲ ಶ್ರವಣದ ನಾದ ಕ್ಕನುಗುಣವಾಗಿ ಕಣ್ಣಿನ ಬಲೆಗಳಲ್ಲಿ ಅವರು ಹಾಕಿದ ವಸ್ತ್ರದಿಂದ ಮಾತ್ರ ಗುರುತಿಸಲು ಇಲ್ಲಿ ಅವಕಾಶ  ಸಾಧ್ಯವಾಗಿತ್ತು. ಅಷ್ಟೊಂದು ಹಿಮವೇ ಅಲ್ಲಿ ನೆಲೆಯೂರಿತ್ತು. ಕ್ಷಣಹೊತ್ತು ನೆಲದಿಂದ ಮೇಲೆ ಜಿಗಿದೆ ಎಂದಾದರೆ ಬಾನಿನ ಮೋಡ- ಅಂತೆಯೇ ಕವಿದ ಮಂಜಿನ ಸಾಮರಸ್ಯಕ್ಕೆ  ನಾವೆಲ್ಲರೂ ಹಾರಾಡುವ ಹಕ್ಕಿಗಳಂತೆ ತೇಲಾಡುವೆವು ಎಂಬ ಭಾವನೆಗಳು ಮನದಾಳದಲ್ಲಿ ಚಿಮ್ಮುತಿತ್ತು. ನೆಲದ ಹಸಿರು ಹುಲ್ಲಿನ ಬಣ್ಣವನ್ನ ಕಡೆಗಣಿಸಿದರೆ ಇಡೀ ಲೋಕವೇ ಶಾಂತಿ ಸಂಕೇತವಾದ ಹಿಮದ ಬಿಳಿ ಬಣ್ಣಕ್ಕೆ ತಿರುಗಿ ನಿಂತಿರುವುದನ್ನು ನೋಡಲು ಕಣ್ಣಗೆ, ಹಸಿದು ಬಡಿಸಿದ ಬಾಡೂಟದಂತಿತ್ತು. ಲೋಕವೆಲ್ಲ ಹಿಮಮಯವಾದಂತೆ ಆ ಗಳಿಗೆಯಲ್ಲಿ ಕಣ್ಣೆದುರು ಸರಿದಾಡುವ ಆ ಮಂಜಿನ ನೀಳವಾದ ಅಲೆಗಳನ್ನು ತನ್ನ ಕೈಮುಷ್ಠಿಯೊಳಗೆ  ಕೂಡಿಹಾಕುವಲ್ಲಿ ಪ್ರತಿಯೋರ್ವನೂ ಹರಸಾಹಸ ಪಡುತ್ತಿದ್ದ ದೃಶ್ಯವೇ ಮನೋಹರವಾದದ್ದು. ಈ ನಯನ ರಮಣೀಯ ತುಣುಕುಗಳನ್ನು ಕ್ಯಾಮರಾದಲ್ಲಿ ಸೆರೆಹಿಡಿದು ಭವಿಷ್ಯತ್ತಿನಲ್ಲಿ ನೋಡುವ ಬಯಕೆಗೆ ಈ ಪ್ರದೇಶವು ತಣ್ಣೀರೆರಚಿತ್ತು. ತೆಗೆದ ಫೋಟೋಗಳಲ್ಲೂ ಮಂಜಿನದ್ದೇ ಕಾರುಬಾರು. ಅಷ್ಟೊಂದು ಪ್ರಭಾವ ಈ ಹಿಮದ್ದು.

ಒಂದೆಡೆ ಹತ್ತಾರು ಮೆಟ್ಟಿಲುಗಳೊಂದಿಗೆ ನಿರ್ಮಿತವಾಗಿದ್ದ ಒಂದು ದ್ವೀಪದಂತೆ ಸ್ವಲ್ಪ ಎತ್ತರದಲ್ಲಿಯೂ ಇದ್ದೂ, ಅದರ ಮೇಲೆ ತೆರಳಿ ಪ್ರಕೃತಿ ಸೌಂದರ್ಯವನ್ನ ಮನಸಾರೆ ಒಪ್ಪಿಕೊಂಡೆವು. ಇನ್ನೊಂದೆಡೆ ಅದಕ್ಕೆ ವಿರುದ್ಧ‌ªವಾಗಿ ಒಂದು ಮರವೂ ಇದ್ದೂ, ಬಂಡೆಗಾತ್ರದ ಸಮ ಪ್ರಮಾಣದ ಕಲ್ಲುಗಳು ವಿಶ್ರಾಂತಿ ತಾಣಕ್ಕೆ ಹೇಳಿಮಾಡಿಸಿದಂತಿತ್ತು. ಬೆಳಕು ಮೂಡುತ್ತಿದಂತೆ ಮಂಜು ಕರಗಿ ಮಾಯವಾಗುವಷ್ಟರಲ್ಲಿ, ರವಿರಾಯನು ಮೋಡದ ಗುಂಪನ್ನ ಚದುರಿಸಿ ದಿನದ ಮುಂದುವರಿಕೆಗೆ ಪ್ರಭುತ್ವ ಸಾಧಿಸಿದಂತಿತ್ತು. ಇನ್ನೊಂದು ಹೆಜ್ಜೆ ಮೇಲಿರಿಸಿದೆ ಎಂದಾದರೆ ಆ ಬೀರುವ ಬೆಳಕಿನ ಒಡೆಯನಾದ ಸೂರ್ಯನ ಸನಿಹ ನನಗೂ ಒಂದು ಸ್ಥಳ ನಿಶ್ಚಿತವಾಗುತ್ತಿತ್ತೋ ಏನೋ ಎಂದು ಮನದಲ್ಲಿಯೇ ಮೂಡುತ್ತಿರಲು, ಆಕಾಶ ಇನ್ನೇನೋ ಹತ್ತಿರಕ್ಕಿದೆ-ಏಣಿ ಇಡೋಣವೇ ಎಂಬುದೂ ತಂಡದ ಸದಸ್ಯನೊಬ್ಬನ ಹಾಸ್ಯ ಸಂದೇಶವಾಗಿತ್ತು. 

ಮುಗಿಲು ಪೇಟೆ
ಕಬ್ಬಿಣಕ್ಕೆ ಜಿಡ್ಡುಹಿಡಿದಂತೆ ಅಶಕ್ತತೆಯಿಂದ ಮೂಲೆಗುಂಪಾಗಿದ್ದ ಈ ಮಂದಾಲಪಟ್ಟಿ ತಾಣಕ್ಕೆ ಚಿನ್ನದಂತಹ ಸ್ಪರ್ಶವ  ನೀಡಿ ಆ ಪ್ರದೇಶದ ಹೊಳಪು, ಸೌಂದರ್ಯ, ಘನತೆಯನ್ನ ಇನ್ನಷ್ಟು ಹೆಚ್ಚಿಸಿದ ಕೀರ್ತಿ ಯೋಗರಾಜ್‌ ಭಟ್‌ ನಿರ್ದೇಶನದ ಗಾಳಿಪಟ ಎಂಬ ಕನ್ನಡ ಚಲನಚಿತ್ರಕ್ಕೆ ಸಲ್ಲುತ್ತದೆ ಎಂದರೂ ತಪ್ಪಾಗಲಾರದು. ಚಿತ್ರದ ಸನ್ನಿವೇಶದಲ್ಲಿ ಈ ಹಿಮಪಾತವಾದ  ಪ್ರದೇಶವೂ  ಇದ್ದೂ, ಗಾಳಿಪಟವೂ ಅಲ್ಲಿರುವ ಮರಕ್ಕೆ ತಗುಲಿಕ್ಕೊಳ್ಳುವ ತುಣುಕು ಚಿತ್ರದಲ್ಲಿದೆ. ಆ ಮರವೂ ಇಂದಿಗೂ ಜನಜನಿತವಾಗಿದ್ದು ಅಲ್ಲಿ ನೆರಳಲ್ಲಿ ಕೂರಲು ಸೂಕ್ತವಾದ ಸ್ಥಳ ಬೇರೊಂದಿಲ್ಲ.

ಗಣೇಶ್‌ ಕುಮಾರ್‌, ವಿಶ್ವ ವಿದ್ಯಾನಿಲಯ ಕಾಲೇಜು, ಮಂಗಳೂರು

ಟಾಪ್ ನ್ಯೂಸ್

Exam

SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ

Pratika Rawal’s brilliant batting: A good start to the series against Ireland

INDWvsIREW: ಪ್ರತಿಕಾ ರಾವಲ್‌ ಭರ್ಜರಿ ಬ್ಯಾಟಿಂಗ್‌; ಐರ್ಲೆಂಡ್‌ ವಿರುದ್ದ ಸರಣಿ ಶುಭಾರಂಭ

Mega Concert: Black ಮಾರ್ಕೆಟ್‌ ಟಿಕೆಟ್‌ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್‌ ವಜಾ

Mega Concert: Black ಮಾರ್ಕೆಟ್‌ ಟಿಕೆಟ್‌ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್‌ ವಜಾ

RSS is responsible for BJP’s victory in Maharashtra Assembly: Sharad Pawar

Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್‌ ಕಾರಣ: ಶರದ್‌ ಪವಾರ್

Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

CT Ravi attacks the state government

Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Exam

SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ

Pratika Rawal’s brilliant batting: A good start to the series against Ireland

INDWvsIREW: ಪ್ರತಿಕಾ ರಾವಲ್‌ ಭರ್ಜರಿ ಬ್ಯಾಟಿಂಗ್‌; ಐರ್ಲೆಂಡ್‌ ವಿರುದ್ದ ಸರಣಿ ಶುಭಾರಂಭ

Mega Concert: Black ಮಾರ್ಕೆಟ್‌ ಟಿಕೆಟ್‌ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್‌ ವಜಾ

Mega Concert: Black ಮಾರ್ಕೆಟ್‌ ಟಿಕೆಟ್‌ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್‌ ವಜಾ

12(1

Gudibanda: ಬಸ್‌ಗೆ ಟಿಪ್ಪರ್ ಡಿಕ್ಕಿ; ತಪ್ಪಿದ ಭಾರಿ ಅನಾಹುತ; ಇಬ್ಬರಿಗೆ ಗಾಯ

RSS is responsible for BJP’s victory in Maharashtra Assembly: Sharad Pawar

Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್‌ ಕಾರಣ: ಶರದ್‌ ಪವಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.