ಗಣಿತ ಹೇಳಿಕೊಟ್ಟ ಟೀಚರ್‌


Team Udayavani, May 26, 2017, 3:45 AM IST

1.jpg

ಪ್ರತಿಯೊಬ್ಬರ ಜೀವನ ಒಂದು ಸುದೀರ್ಘ‌ “ಅಧ್ಯಯನ’. ಈ ಅಧ್ಯಯನದ ಎಷ್ಟೋ ಪುಟಗಳಲ್ಲಿ ಅಚ್ಚಳಿಯದ ನೆನಪುಗಳು ಇಂದಿಗೂ ಮಾಸದೆ ಹಸಿರಾಗಿಯೇ ಉಳಿದಿದೆ.

ಪುರಾಣಗಳಲ್ಲಿರುವ ಒಂದು ಮಾತು ಇಂದಿಗೂ ಅಸ್ತಿತ್ವಕ್ಕೆ ಬರವಂಥದು. ನಮ್ಮ ಕಷ್ಟದ ಸಮಯದಲ್ಲಿ ನಮಗೆ ಯಾರು ಸಹಾಯ ಮಾಡುತ್ತಾರೋ ಅಂಥವರನ್ನು ನಾವು ಜೀವನಪೂರ್ತಿ ನೆನಪಿಟ್ಟುಕೊಳ್ಳಬೇಕೆಂಬುದು. ಎಲ್ಲರ ಲೈಫ್ನಲ್ಲಿ ಒಂದು ಆಶಾಭಾವನೆಯ ಬೆಳಕನ್ನು ಮೂಡಿಸಿದಂಥ ವ್ಯಕ್ತಿ ಬಂದೇ ಬರುತ್ತಾರೆ ಅಂತೆ. ಅದು ಯಾವ ರೀತಿಯಲ್ಲಿ ಬೇಕಾದ್ರೂ ಬರಬಹುದು. ಒಬ್ಬ ವ್ಯಕ್ತಿ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳಲು ಹೊರಡುವಾಗಲೂ ಅವನ ಮನಸ್ಸಿನಲ್ಲಿ ಮತ್ತೆ ಮತ್ತೆ ಬೇಕು-ಬೇಡಗಳ ದುಡುಕು ನಿರ್ಧಾರದ ಪ್ರಶ್ನೆಗಳು ಮೂಡುತ್ತಲೇ ಇರುತ್ತವೆ. ನನ್ನ ಜೀವನದಲ್ಲಿ ಇಂಥ ಮಹಾನ್‌ ವ್ಯಕ್ತಿಗಳು ಬರುತ್ತಾರೆ ಅಂಥ ಅಂದುಕೊಳ್ಳಲೇ ಇಲ್ಲ. ಅಂತೂ ಅದನ್ನು ನಾನು ಕಂಡುಕೊಂಡದ್ದು ನನ್ನ ಹೈಸ್ಕೂಲಿನಲ್ಲಿ.

ನಾನು ಹಿಂದಿನಿಂದಲೂ ಕಲಿಯುವುದರಲ್ಲಿ ಹಿಂದೆ ಅಂಥ ಬೇರೆ ಯಾರೂ ಹೇಳಿ ಮನಸ್ಸಿಗೆ ನೋವು ಮಾಡುವ ಮೊದಲು ನನ್ನಲ್ಲೇ ನಾನು ದಡ್ಡ ಅನ್ನುವ ಹಣೆಪಟ್ಟಿಯನ್ನು ಅಂಟಿಸಿ ಬಿಟ್ಟಿದೆ. ಅದರಂತೆ ನಾನು ಪ್ರೈಮರಿಯಲ್ಲಿ ಬರೀ ಬೆಂಚು ಬಿಸಿಮಾಡಿ ಸಂಜೆಯಾಗುತ್ತಲೇ ಆಕಾಶದ ಕಡೆ ಮುಖ ಮಾಡಿ ಮನೆಯತ್ತ ಸಾಗುತ್ತಿ¨ªೆ. ಅಂತೂ ಒಂದು ಕ್ಲಾಸ್‌ನಿಂದ ಇನ್ನೊಂದು ಕ್ಲಾಸಿಗೆ ದೂಡಿ ಏಳನೇ ಕ್ಲಾಸಿನ ಹೊಸ್ತಿಲು ದಾಟಿದೆ.

ಹೈಸ್ಕೂಲ್‌ ನಾನು ಅಂದುಕೊಂಡಂತೆ ಇರಲಿಲ್ಲ. ಒಂದು ದಿನ ಹೋಮ್‌ವರ್ಕ್‌ ತಪ್ಪಿದ್ರೆ ಅದೇ ದಿನ ಇಂಗ್ಲೀಷ್‌ ಟೀಚರ್‌ನ ನಾಗರ ಬೆತ್ತದ ರುಚಿ ಸಿಗೋದು ಮಾತ್ರ ತಪ್ಪುತ್ತಿರಲಿಲ್ಲ. ದಿನ ಬೆಳಗಿನ ಫ‌ರ್ಸ್ಡ್ ಪೀರಿಯೆಡ್‌ ಕ್ಲಾಸಿನ ಹೊರಗೆ ನನ್ನ ಜಾಗ ಖಾಯಂ ಆಗಿ ಇರುತ್ತಿತ್ತು. ಅದಕ್ಕೆ ಕಾರಣ ಹೋಮ್‌ವರ್ಕ್‌ ಮಾಡದೇ ಇರೋದು. ಅಂತೂ ನನಗೂ ಕೂಡ ದಿನ ಕಳೆದಂತೆ ವಿಪರೀತ ರಜೆ ಹಾಕುವ ಖಯಾಲಿ ಕ್ರಮೇಣ ಅಭ್ಯಾಸ ಪಥದಂತೆ ಸಾಗಿತ್ತು.

ಅದೇನೋ ಹೇಳುತ್ತಾರೆ ಅಲ್ವಾ , ದೇವರು ಎಲ್ಲರಿಗೂ ಒಂದು ಪಾಠ ಕಲಿಸುತ್ತಾನೆ  ಅಂಥ. ಅದೇ ಪಾಠ ಬಹುಶಃ ನಾನು ಕಲಿತದ್ದು ನನ್ನ ಒಂಬತ್ತನೇ ಕ್ಲಾಸ್‌ನಲ್ಲಿ. ನಾನು ಕಲಿಯುವುದರಲ್ಲಿ ಹಿಂದೆ ಎನ್ನುವುದನ್ನು ನನ್ನ ಸ್ನೇಹಿತರು ಕೂಡ ಸಾರಿ ಹೇಳಿದ್ರು. ನಾನು ಒಂಬತ್ತನೇ ಕ್ಲಾಸಿನಲ್ಲಿ ಫೇಲಾದೆ. ಮನೆಯಲ್ಲಿ ಎಲ್ಲರಿಗೂ ಗೊತಿತ್ತು ಅದು ನಿರೀಕ್ಷಿತ ಫ‌ಲಿತಾಂಶ ಅಂಥ. ಇಂಥ ಸಂದರ್ಭದಲ್ಲಿ ನನ್ನ ಬೆನ್ನುಲುಬಾಗಿ ನಿಂತ‌ದ್ದು ನಮ್ಮ ಗಣಿತ ಟೀಚರ್‌ ವಿಜಯಲಕ್ಷ್ಮಿ .

ಎಲ್ಲರಂತೆ ನನ್ನ ತಲೆಗೆ ಕೂಡ ಗಣಿತ ಕಬ್ಬಿಣದ ಕಡಲೆಯಂತೆ. ಪ್ರತಿಸಲ ನಾನು ಗಣಿತದಲ್ಲೇ ಫೇಲಾಗುತ್ತಿದ್ದೆ. ಆದ್ರೂ ವಿಜಯಲಕ್ಷ್ಮಿ ಟೀಚರ್‌ ನನ್ನನ್ನು ಒಂದು ಸಲವೂ ಬೈಯದೇ ನನ್ನ ತಪ್ಪುಗಳನ್ನು ಸರಿ ಮಾಡಿ ಅವರ ಕರ್ತವ್ಯವನ್ನು ಸಂಪೂರ್ಣವಾಗಿ ನಿಭಾಯಿಸಿದರು. ಅವರು ಗಣಿತದ ಕುರಿತಾಗಿ ಹೇಳುತ್ತ ಇದ್ದಾಗ ನಾನು ಪಾಠ ಕೇಳದೇ ರಫ್ ಬುಕ್‌ನಲ್ಲಿ ಅದೇನೋ ಗೀಚುತ್ತ ಕಾಲಹರಣ ಮಾಡುತ್ತ ಇರುತ್ತಿದ್ದೆ. ಸದಾ ಮುಗುಳುನಗುವಿನಿಂದ ಎಲ್ಲರ ಅಚ್ಚುಮೆಚ್ಚಿನ ಶಿಕ್ಷಕಿಯಾಗಿದ್ದರು. ಅವರ ಪೀರಿಯೆಡ್‌ನ‌ಲ್ಲಿ ಪಾಠದ ಜೊತೆಗೆ ಜೀವನದ ಮೌಲ್ಯಕ್ಕೂ ಹೆಚ್ಚು ಒತ್ತು ನೀಡುತ್ತ ಇದ್ದರು.
ಒಂದು ದಿನ ಗಣಿತ ಕ್ಲಾಸ್‌ನಲ್ಲಿ ಇರುತ್ತಿದ್ದ ಸೂತ್ರಗಳು ಇರಲಿಲ್ಲ. ವಿಜಯಲಕ್ಷ್ಮಿ ಟೀಚರ್‌ ಕ್ಲಾಸಿಗೆ ಬಂದು ನನ್ನನ್ನು ಕರೆದ್ರು. ನಾನು ಸ್ವಲ್ಪ ಹೆದರಿಕೆಯಿಂದಲೇ ಹೋದೆ. ಆವತ್ತು ಅವರು ಹೇಳಿದ ಮಾತು ನನ್ನ ಜೀವನದ ಉತ್ಸಾಹಕ್ಕೆ ನಾಂದಿ ಹಾಡಿತು. “ನೀನು ಒಳ್ಳೆ ಮಾಡಿ ಕಲಿಯಬೇಕು. ಕಲಿತು ನಿನ್ನ ಅಪ್ಪ ಅಮ್ಮನನ್ನು ಚೆನ್ನಾಗಿ ನೋಡ್ಕೊàಬೇಕು, ಉದಾಸೀನ ಮಾಡಬಾರದು’ – ಹೀಗೆ ಹೇಳುತ್ತ ಅವರು ಒಂದು ಪೀರಿಯೆಡ್‌ ವೇ… ಮಾಡಿದ್ರು ಅಂದೊRಂಡಿ¨ªೆ. ಆದ್ರೆ ಇದೇ ಸ್ಫೂರ್ತಿದಾಯಕ ಮಾತುಗಳು ನನ್ನ ಮುಂದಿನ ಕಲಿಕೆಗೆ ಮಾರ್ಗವಾಗಿ ಬಿಟ್ಟಿತು. ಬದಲಾವಣೆ ತನ್ನಿಂದ ತಾನಾಗಿಯೇ ಆಗಿತ್ತು. ಗಣಿತ ಹಾಗೂ ವಿಜ್ಞಾನ ಎರಡು ವಿಷಯದಲ್ಲಿ ಪಾಠ ಮಾಡುತ್ತಿದ್ದ ಅವರು, ಆ ವರ್ಷ ವಿಜ್ಞಾನ ದಿನಾಚರಣೆಯ ಪ್ರಯುಕ್ತ ಆಯೋಜನೆ ಮಾಡಿದ್ದ ಕಾರ್ಯಕ್ರಮಕ್ಕೆ ಪ್ರತಿಭಾವಂತ ವಿದ್ಯಾರ್ಥಿಗಳ ಭಂಡಾರದಲ್ಲಿ ನನ್ನನ್ನು ಕೂಡ ಸೆಲೆಕr… ಮಾಡಿದರು.

ಅಂದು ವಿಜಯಲಕ್ಷ್ಮಿ ಟೀಚರ್‌ ಹೇಳಿದ ಮಾತು ಇವತ್ತಿಗೂ ನೆನಪಲ್ಲಿ ಇದ್ದು, ಮುಂದೆಯೂ ನೆನಪಲ್ಲಿ ಉಳಿಯುವ ಹಾಗೆ ಮಾಡಿದೆ. ಅವರು ಹೇಳಿದ ಬುದ್ಧಿಮಾತುಗಳಿಂದ ಕಲ್ಲಾಗಿದ್ದ ನನ್ನ ವಿದ್ಯಾರ್ಥಿ ಜೀವನವನ್ನು ಮೂರ್ತಿಯಾಗಿಸಿ ಉತ್ಸಾಹದ ಹೊರೆಯನ್ನು ಕುತೂಹಲದ ಕಣ್ಣುನೋಟವನ್ನು  ನನ್ನಲ್ಲಿ  ಪ್ರೇರೇಪಿಸಿದ್ದಾರೆ. ಅವರು ಕಲಿಸಿದ ಜೀವನ ಪಾಠಕ್ಕೆ ನಾನು ಸದಾ  ತಲೆಬಾಗುತ್ತೇನೆ.
ಥ್ಯಾಂಕ್ಯೂ… ವಿಜಯಲಕ್ಷ್ಮಿ ಟೀಚರ್‌.

ಸುಹಾನ್‌
ಪತ್ರಿಕೋದ್ಯಮ ವಿಭಾಗ, ಎಂಜಿಎಂ ಕಾಲೇಜು , ಉಡುಪಿ

ಟಾಪ್ ನ್ಯೂಸ್

6-uv-fusion

Opportunities: ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಚತುರತೆ

Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ

Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ

7-gundlupete

Gundlupete:ಮರಿಯಾನೆ ಬೇಟೆಗೆ ಹೊಂಚುಹಾಕುತ್ತಿದ್ದ ಹುಲಿ ಮೇಲೆ ತಾಯಿಯಾನೆ ದಾಳಿ:ವಿಡಿಯೋ ವೈರಲ್

Pakistan: ಪಾಕ್‌ ಸೇನೆ ಮತ್ತು ಇಮ್ರಾನ್‌ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್‌ ಐ

Pakistan: ಪಾಕ್‌ ಸೇನೆ ಮತ್ತು ಇಮ್ರಾನ್‌ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್‌ ಐ

IPL 2025: Here’s what all ten teams look like after the mega auction

IPL 2025: ಮೆಗಾ ಹರಾಜಿನ ಬಳಿಕ ಎಲ್ಲಾ ಹತ್ತು ತಂಡಗಳು ಹೀಗಿವೆ ನೋಡಿ

Cabinet approves PAN 2.0: What is PAN 2.0? What are its features?

PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್‌ 2.0? ಇದರ ವೈಶಿಷ್ಟ್ಯವೇನು?

Bangladesh:ಬಂಧನಕ್ಕೊಳಗಾದ ಇಸ್ಕಾನ್‌ ನ ಕೃಷ್ಣದಾಸ್‌ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್

Bangla:ಬಂಧನಕ್ಕೊಳಗಾದ ಇಸ್ಕಾನ್‌ ನ ಕೃಷ್ಣದಾಸ್‌ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

6-uv-fusion

Opportunities: ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಚತುರತೆ

Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ

Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ

7-gundlupete

Gundlupete:ಮರಿಯಾನೆ ಬೇಟೆಗೆ ಹೊಂಚುಹಾಕುತ್ತಿದ್ದ ಹುಲಿ ಮೇಲೆ ತಾಯಿಯಾನೆ ದಾಳಿ:ವಿಡಿಯೋ ವೈರಲ್

Pakistan: ಪಾಕ್‌ ಸೇನೆ ಮತ್ತು ಇಮ್ರಾನ್‌ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್‌ ಐ

Pakistan: ಪಾಕ್‌ ಸೇನೆ ಮತ್ತು ಇಮ್ರಾನ್‌ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್‌ ಐ

IPL 2025: Here’s what all ten teams look like after the mega auction

IPL 2025: ಮೆಗಾ ಹರಾಜಿನ ಬಳಿಕ ಎಲ್ಲಾ ಹತ್ತು ತಂಡಗಳು ಹೀಗಿವೆ ನೋಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.