ಮೊಬೈಲ್ ಮತ್ತು ಅನುಮಾನಗಳು
Team Udayavani, Oct 4, 2019, 5:27 AM IST
ಯಾರ ಬಳಿಯಲ್ಲಿ ನೋಡಿದರೂ ಮೊಬೈಲ್. ಮೊಬೈಲ್ ಇಲ್ಲದ ವ್ಯಕ್ತಿಯನ್ನು ಇಂದು ಹುಡುಕಲು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ನಾವಿಂದು ತಲುಪಿದ್ದೇವೆ. ಒಂದು ಕ್ಷಣ ಮೊಬೈಲ್ ನಮ್ಮ ಬಳಿ ಇಲ್ಲವೆಂದರೆ ಆಕಾಶವೇ ತಲೆಕೆಳಗಾಗಿ ನಮ್ಮ ತಲೆ ಮೇಲೆ ಬಿತ್ತೋ ಎಂಬಂತೆ ನಮ್ಮ ವರ್ತನೆಗಳು ಬದಲಾಗುತ್ತಿವೆ. ಮೊಬೈಲ್‌ನ್ನು ನಾವು ಬಿಟ್ಟರೂ, ನಮ್ಮನ್ನು ಮೊಬೈಲ್ ಬಿಡುವುದಿಲ್ಲ ಎಂಬ ಮಾತು ಇಂದು ಸತ್ಯವಾಗತೊಡಗಿದೆ.
ಇತ್ತೀಚೆಗಷ್ಟೆ ನಮ್ಮ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಯ ಆಂತರಿಕ ಪರೀಕ್ಷೆಗಳು ಮುಗಿದವು. ಪರೀಕ್ಷೆ ಮುಗಿದ ಖುಷಿ ನನಗೆ ಎಷ್ಟಿತ್ತೆಂದರೆ ಗೂಡಿನಿಂದ ಪಕ್ಷಿಯೊಂದು ತಪ್ಪಿಸಿಕೊಂಡು ಸ್ವತಂತ್ರವಾಗಿ ಹಾರಲು ತವಕಿಸಿದಂತಾಗಿತ್ತು. ಪರೀಕ್ಷೆ ಮುಗಿದ ದಿನ ಶನಿವಾರ. ಮರುದಿನ ಭಾನುವಾರ ನಾನು ಮಾಡಬೇಕಾದ ಕೆಲಸದ ಬಗ್ಗೆ ಯೋಚನೆ ಮಾಡುತ್ತಿರುವಾಗಲೇ ನನ್ನ ಕಣ್ಣುಗಳ ದೃಷ್ಟಿ ಮತ್ತು ನನ್ನ ಮನಸ್ಸೆಲ್ಲ ನನ್ನ ಮೊಬೈಲ್ ಕಡೆಗೆ ಸೆಳೆಯಲಾರಂಭಿಸಿತು. “ಆಯ್ತು, ಸರಿ’ ಎಂದು ನನ್ನ ಬ್ಯಾಗಿಗೆ ಕೈ ಹಾಕಿದಾಗ ನನ್ನ ಮೊಬೈಲ್ ಬ್ಯಾಗಿನಲ್ಲಿ ಇರಲಿಲ್ಲ. ಮತ್ತಷ್ಟು ತಡಬಡಾಯಿಸಿ ನನ್ನ ಬ್ಯಾಗ್‌ನಲ್ಲಿ ಮೊಬೈಲನ್ನು ಹುಡುಕಿದೆ. ಸಿಗಲಿಲ್ಲ.
ನನ್ನ ತಲೆಯಲ್ಲಿ ಅನುಮಾನ ಮೂಡಲಾರಂಭಿ ಸಿತು. ಒಂದನೆಯದಾಗಿ ನನ್ನ ಮೊಬೈಲ್ ಕಳೆದುಹೋಗಿರಬಹುದೆಂಬ ಶಂಕೆ. ಎರಡನೆಯದಾಗಿ ನಾನು ಉಳಿದುಕೊಂಡಿದ್ದ ಹಾಸಿಗೆಯಲ್ಲಿಯೇ ಮೊಬೈಲ್ ಬಿಟ್ಟುಬಂದಿರಬಹುದೆಂಬ ಸಂದೇಹ. ಯಾರಾದಾರೂ ತೆಗೆದಿರಬಹುದೆಂಬ ಗುಮಾನಿ. ಅನುಮಾನಗಳನ್ನು ತಲೆಯಲ್ಲಿ ಹೊತ್ತು ಕೊಂಡು ಅಂತೂ ನನ್ನ ಮನೆಗೆ ತಲುಪಿದೆ. ಮನೆಗೆ ತಲುಪಿದಾಗಲೂ ನನಗೆ ನನ್ನ ಮೊಬೈಲ್‌ನ ಬಗ್ಗೆಯೇ ಯೋಚನೆ. ಮನೆಯ ಗೋಡೆಯ ಮೇಲೆ, ನಾನು ಬರೆಯಲು ಉಪಯೋಗಿಸುತ್ತಿದ್ದ ಟೇಬಲ್ ಮೇಲೆ ನನ್ನ ಮೊಬೈಲ್ ಇರುವಂತೆ ನನ್ನ ಕಣ್ಣುಗಳಿಗೆ ಭಾಸವಾಗುತ್ತಿತ್ತು. ಈ ಗೊಂದಲ, ಬ್ರಾಂತಿಗಳ ನಡುವೆ ಈ ಮೊದಲೇ ನಾನು ಆಲೋಚಿಸಿದ್ದ ಭಾನುವಾರದ ಕೆಲಸವನ್ನು ಮತ್ತೂಂದು ಭಾನುವಾರಕ್ಕೆ ಮುಂದೂಡುವ ಅನಿವಾರ್ಯತೆ ಎದುರಾಯಿತು.
ಹೀಗೆ ನನ್ನ ಕೆಲಸಗಳೆಲ್ಲವೂ ತಲೆಕೆಳಗಾದವು. ಈ ಪರಿಸ್ಥಿಗೆ ಕಾರಣ ಮೊಬೈಲ್ ಎಂಬ ಮಾಯೆ ಎಂಬುದನ್ನು ಪ್ರತ್ಯೇಕವಾಗಿ ವಿವರಿಸುವ ಅಗತ್ಯವಿಲ್ಲ.
ಅಂತೂ ಸೋಮವಾರ ಬಂದೇ ಬಿಟ್ಟಿತು. ಈಗ ನನ್ನ ಅನುಮಾನವನ್ನು ಖಚಿತಪಡಿಸಿಕೊಳ್ಳಲು ಹಾಸ್ಟೆಲ್‌ಗೆ ತೆರಳಿದಾಗ ಅಲ್ಲಿ ನನ್ನ ಮೊಬೈಲ್ ಚಾರ್ಜ್ ಇಲ್ಲದೆ ಅನಾಥವಾಗಿ ಬಿದ್ದಿರುವುದನ್ನು ಕಂಡೆ. ನನಗೊಮ್ಮೆ ಹೋದ ಜೀವ ವಾಪಸು ಬಂದಷ್ಟು ಖುಷಿಯಾಯಿತು.
ಮಂಜುನಾಥ ಬಿ. ವಿ.
ಪ್ರಥಮ ಎಂ.ಎ ಸರ್ಕಾರಿ ಪ್ರಥಮ ದರ್ಜೆ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ , ತೆಂಕನಿಡಿಯೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.