ಮೊಬೈಲ್‌ ಫೊಟೊಗ್ರಫಿ


Team Udayavani, Jul 5, 2019, 5:00 AM IST

16

ಬಹಳ ಇತ್ತೀಚೆಗೆ ನನ್ನಲ್ಲಿ ಹವ್ಯಾಸವಾಗಿ ಬೆಳೆದು ಬರುತ್ತಿರುವ ಆಸಕ್ತಿಯ ವಿಚಾರ ನೈಸರ್ಗಿಕ ದೃಶ್ಯಗಳ ಚಿತ್ರವನ್ನು ಮೊಬೈಲ್‌ ಕೆಮರಾ ಕಣ್ಣಲ್ಲಿ ಸೆರೆಹಿಡಿದು ಆನಂದಿಸುವುದು. ಅದೇನೋ ಗೊತ್ತಿಲ್ಲ, ಮೊದಲಿನಿಂದಲೂ ಪ್ರಕೃತಿಯ ಮಡಿಲಲ್ಲಿ ಸಿಗುವ ಆನಂದ ತಾಯಿಯ ಮಡಿಲಿನಂತೆಯೇ ಭಾಸವಾಗುತ್ತದೆ. ಹಸಿರ ಸಿರಿಯಲ್ಲಿ ಸಿಗುವ ಮಜಾ ನನ್ನೊಂದಿಗೆ ನಾನೇ ಗೆಳತಿಯಾಗಿ, ಒಂಟಿಯಾದರೂ ಜಂಟಿಯಾಗುವ ಅನುಭವ ನನ್ನ ಆತ್ಮವಿಶಾÏಸದೊಡನೆ ನಾನೇ ಚರ್ಚಿಸುವ, ಹೆಜ್ಜೆ ಹಾಕುವ, ಕಾಲ ಹರಣ ಮಾಡುವ, ಕಲ್ಪನಾಲೋಕ ಸೃಷ್ಟಿಸುವ ಸುಂದರ ಸ್ವರ್ಗ.

ಮೊಬೈಲ್‌ಗ‌ಳಲ್ಲಿ ಇತರ ಜಾಲತಾಣಗಳಲ್ಲಿ ಸಿಗುವ ಉತ್ತಮ ಛಾಯಾಚಿತ್ರವನ್ನು ನೋಡುವ ಆಸಕ್ತಿ ಮೊದಲಿನಿಂದಲೂ ಇತ್ತು. ನನ್ನ ಕಾಲೇಜಿನ ಕೆಲವು ಗೆಳೆಯರಿಗೂ ಈ ಕ್ಷೇತ್ರದ ಬಗೆಗಿನ ಜ್ಞಾನ, ಆಸಕ್ತಿ ನನ್ನನ್ನು ಈ ಆಸಕ್ತಿಯೆಡೆಗೆ ಸೆಳೆದಿರಬಹುದೇನೋ ಗೊತ್ತಿಲ್ಲ. ಯಾವುದೇ ಹೊಸ ಸ್ಥಳಗಳಿಗೆ ಭೇಟಿ ನೀಡುವಾಗಲೂ ಮೊಬೈಲ್‌ ಒಂದು ಕೈಯಲ್ಲಿರುವುದು ಮಾಮೂಲಾಗಿ ಹೋಗಿದ್ದು ಇದು ನನ್ನ ನಿತ್ಯ ದಿನಚರಿಯಾಗಿ ಬಿಟ್ಟಿದೆ. ಬೇರೆ ಬೇರೆ ಸ್ಥಳಗಳಿಗೆ ಹೋದಾಗ ಆ ನೆನಪು ಅಚ್ಚಳಿಯದ ಹಾಗೆ ಉಳಿಯಲಿ ಎಂಬ ಉದ್ದೇಶದಿಂದ ಕಟ್ಟಡಗಳು, ದೇವಾಲಯಗಳ ಚಿತ್ರ ಸೆರೆಹಿಡಿಯಲು ಬಯಸುತ್ತೇನೆ. ಆದರೆ, ಪ್ರಕೃತಿಯನ್ನು ನೈಸರ್ಗಿಕವಾಗಿ, ನೈಜವಾಗಿ ಸೆರೆ ಹಿಡಿಯಲು ಬಹಳ ಆಸೆ. ಮಳೆಗಾಲದಲ್ಲಂತೂ ಈ ನೀಲ ಆಗಸ ಚಿತ್ರಿಸುವ ಬಣ್ಣ ಬಣ್ಣದ ಚಿತ್ತಾರದ ಮೋಡಗಳು, ಕ್ಷಣಕ್ಕೊಂದು ಆಕಾರವನ್ನು ಹೋಲುವುದನ್ನು ಆನಂದಿಸುತ್ತ ಫೋಟೊ ತೆಗೆಯುವುದೇ ಒಂದು ರೂಢಿಯಾಗಿ ಬಿಟ್ಟಿದೆ. ಮಳೆ ಹನಿ ತಂದು ಕೊಡುವ ಕನಸಿನ ಕಡಲಂತೂ ಇನ್ನೂ ಸೋಜಿಗ. ಹಾರಾಡುವ ರಂಗಿನ ಚಿಟ್ಟೆ, ಪಕ್ಷಿ, ಒಂಟಿಮರ, ಕಾಡು, ವಿವಿಧ ಬಗೆಯ ಹೂವುಗಳೆಲ್ಲವೂ ನನ್ನ ಮೊಬೈಲ್‌ ಕೆಮರಾಕ್ಕೆ ಇದೀಗ ಆಹಾರವಾಗಲು ಆರಂಭವಾಗಿದೆ.ಇದರಿಂದ ಅದೇನೋ ಸಮಾಧಾನ, ಸೋಜಿಗ ಉಂಟಾಗುತ್ತದೆ. “ಗ್ರಹಚಾರ ಕೆಟ್ಟರೆ ಹಗ್ಗವೂ ಹಾವಾಗಿ ಕಾಣುತ್ತದಂತೆ’ ಎನ್ನುವಂತೆ ಈ ಕ್ಷೇತ್ರದಲ್ಲಿ ಮೂಡುತ್ತಿರುವ ಆಸಕ್ತಿಯಿಂದ ಪರಿಸರದಲ್ಲಿ ಕಾಣುವಂಥ ಎಲ್ಲ ವಸ್ತುಗಳು ಕ್ಲಿಕ್ಕಿಸಲು, ಸೆರೆಹಿಡಿಯಲು ಸೂಕ್ತ ವಾದವು ಎಂದು ಅನಿಸಲು ಆರಂಭವಾಯಿತು. ಕವಿಯಾದವರಿಗೆ ಮುಳ್ಳು -ಪೊದೆಗಳಲ್ಲೂ ಜೀವಂತಿಕೆಯನ್ನು ಕಂಡು ಕಾವ್ಯಗಳನ್ನು ಸೃಷ್ಟಿಸುವಷ್ಟು ವಿಭಿನ್ನತೆಯಲ್ಲಿ ಜೀವಂತಿಕೆಯನ್ನು ಕಾಣುತ್ತಾರೆ. ಇದು ಅವರ ನೋಟದ ದೃಷ್ಟಿ ಮತ್ತು ಆಸಕ್ತಿಯ ವಿಚಾರವಾದ ಕಾರಣ ಅದರಲ್ಲೂ ನೈಜತೆಯನ್ನು ಕಾಣುವಂತೆ ನನಗೂ ನೋಡುವ ನೋಟದಲ್ಲೆಲ್ಲಾ ಒಂದೊಂದು ಚಿತ್ತಾರದ ದೃಶ್ಯ ಭಾಸವಾಗುತ್ತದೆ.

ಫೋಟೋ ಸೆರೆಹಿಡಿಯುವ ಹವ್ಯಾಸದಿಂದ ಮನಸ್ಸಿನ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ ಮತ್ತು ವಿಷಯ ಜ್ಞಾನ, ಕುತೂಹಲ, ಆಸಕ್ತಿ ಹೆಚ್ಚುತ್ತದೆ. ಆಧುನಿಕ ಯುಗದಲ್ಲಿ ಎಲ್ಲವೂ ಯಂತ್ರಮಯವಾಗಿ ಯಾಂತ್ರಿಕ ಬದುಕಿನಲ್ಲಿ ಬಾಳುತ್ತಿರುವ ನಮಗೆ ಕಾಲ ಕಳೆಯಲು, ಮನೋರಂಜನೆಯ ಮಾಧ್ಯಮವಾಗಿ ದೃಶ್ಯ ಮಾಧ್ಯಮ, ಮೊಬೈಲ್‌ಗ‌ಳನ್ನು ಬಳಸುತ್ತ ಅದನ್ನೇ ಪ್ರಪಂಚವಾಗಿಸಿಕೊಂಡಿರುತ್ತೇವೆ. ಇದರ ಹೊರತಾದ ಜಗತ್ತನ್ನು ನಾವೆಂದೂ ಕಂಡಿರುವುದಿಲ್ಲ. ಅದರ ಅನುಭವವೂ ಇರುವುದಿಲ್ಲ. ಇದರ ಹೊರತಾಗಿ ಹೊಸದಾದ ಪ್ರಪಂಚವನ್ನು ಈ ನನ್ನ ಹೊಸ ಹವ್ಯಾಸ ಸೃಷ್ಟಿಸಿ ಕೊಟ್ಟಿದೆ. ಕಪ್ಪು -ಬಿಳುಪಿನ ಹಾಳೆಗಳ ಪುಸ್ತಕಗಳನ್ನು ಓದುವ ಹವ್ಯಾಸವಿದ್ದ ನನಗೆ ಬಣ್ಣದ ರಂಗಿನ ಚಿತ್ರಗಳೆಡೆಗೆ ಮನ ಸೆಳೆಯುತ್ತಿರುವ ಹೊಸ ಪ್ರಪಂಚದೊಂದಿಗೆ ನನ್ನನ್ನು ಲೀನವಾಗಿಸುವಂತೆ ಮಾಡಿ ನನ್ನ ಹವ್ಯಾಸಗಳ ಪಟ್ಟಿಗೆ ಹೊಸತಾಗಿ ಸೇರ್ಪಡೆಯಾಗಿದೆ.

ಒತ್ತಡದಿಂದ ಮುಕ್ತವಾಗಿ ಕಾಲ ಕಳೆಯಲು ಜೊತೆಗೆ ಮನಸ್ಸುಗಳಿಗೆ ನಿರಾಳತೆಯನ್ನು ಒದಗಿಸಿಕೊಡಲು ಒತ್ತಡ ನಿಯಂತ್ರಕವಾಗಿ ಈ ಹವ್ಯಾಸ ಕೊಟ್ಟ ಅನುಭವ ನಿಜಕ್ಕೂ ಅದ್ಭುತವೇ ಆಗಿದೆ. ಇದು ನನಗೆ ಭಾವನೆಯನ್ನು ಹಿಡಿದಿಟ್ಟು , ಉತ್ಸಾಹದ ಜೊತೆಗೆ ನೈಜತೆಯೊಡನೆ ಆಡುವ ಕಲೆಯೂ ಆಗಿ ಹೋಗಿದೆ. ಮನಸ್ಸಿನ ಚಂಚಲತೆಯನ್ನು ಹೋಗಲಾಡಿಸಿ ಏಕಾಗ್ರತೆಯನ್ನು ವೃದ್ಧಿಸುತ್ತಿ¤ದೆ.

ಪ್ರತಿಮಾ ಭಟ್‌
ತೃತೀಯ ಬಿ. ಎ.
ವಿವೇಕಾನಂದ ಪದವಿ ಕಾಲೇಜು, ಪುತ್ತೂರು.

ಟಾಪ್ ನ್ಯೂಸ್

1-wewq

Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-wewq

Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

1

Kasaragod: ಬಟ್ಟಿಪದವು; ಪ್ಲೈವುಡ್‌ ಮಿಲ್ಲಿಗೆ ಬೆಂಕಿ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.