ಯುವ ಪ್ರತಿಭೆ ಸುಶಾಂತ್‌


Team Udayavani, Nov 30, 2018, 6:00 AM IST

15.jpg

ಅಧ್ಯಾಪಕನಾದವನಿಗೆ ಸಾಹಿತ್ಯದಲ್ಲಿ ಆಸಕ್ತಿ ಇರಬಹುದು, ವೈದ್ಯನಾದವನಿಗೆ ಯಕ್ಷಗಾನದಲ್ಲಿ ಅಭಿರುಚಿ ಇರಬಹುದು, ಬ್ಯಾಂಕ್‌ ಉದ್ಯೋಗಿಗೆ ಚಿತ್ರಕಲೆಯಲ್ಲಿ ಒಲವಿರಬಹುದು. ಇಂಜಿನಿಯರ್‌ ಆದವನಿಗೆ ಫೋಟೋಗ್ರಫಿಯಲ್ಲಿ ಆಸಕ್ತಿ ಇರಬಹುದು. ಹೀಗೆ ಒಬ್ಬೊಬ್ಬರದ್ದು ಒಂದೊಂದು ಕ್ಷೇತ್ರ. ವೃತ್ತಿಯೇ ಬೇರೆ, ಪ್ರವೃತ್ತಿಯೇ ಬೇರೆ. ವೃತ್ತಿಯೊಂದಿಗೆ ಪ್ರವೃತ್ತಿಯನ್ನು ಮೈಗೂಡಿಸಿಕೊಂಡವರು ನಮ್ಮ ನಡುವೆ ಅನೇಕ ಮಂದಿ ಇದ್ದಾರೆ. ಎಲ್ಲರಲ್ಲೂ ಒಂದೊಂದು ರೀತಿಯ ಪ್ರತಿಭೆ ಇರುತ್ತದೆ. ಆದರೆ, ಆ ಪ್ರತಿಭೆಗೆ ತಕ್ಕ ಪ್ರೋತ್ಸಾಹ ಮತ್ತು ವೇದಿಕೆ ಸಿಕ್ಕಾಗ ಮಾತ್ರ ಪ್ರತಿಭೆ ಅನಾವರಣಗೊಳ್ಳುತ್ತದೆ ಎನ್ನುವುದಕ್ಕೆ ಸಾಕ್ಷಿಯಾಗಿರುವ ಯುವಪ್ರತಿಭೆ ಮಾಡೆಲಿಸ್ಟ್‌ ಸುಶಾಂತ್‌ ದೇವಾಡಿಗ.

ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾದ ಎಸ್‌ಡಿಎಂ ಕಾಲೇಜಿನಿಂದ ಎಂಬಿಎ ಪದವಿ ವಿದ್ಯಾಭ್ಯಾಸವನ್ನು ಮಾಡಿರುವ ಸುಶಾಂತ್‌, ಪ್ರಸ್ತುತ ಫೈನಾನ್ಸ್‌ ಕಂಪೆನಿಯೊಂದರ ಉದ್ಯೋಗಿ. ಇವರ ಆಸಕ್ತಿಯ ಕ್ಷೇತ್ರ ನೃತ್ಯ ಹಾಗೂ ಮಾಡೆಲಿಂಗ್‌. ಬಾಲ್ಯದಿಂದಲೇ ಇವರಿಗೆ ನೃತ್ಯದಲ್ಲಿ ವಿಶೇಷ ಒಲವು. ಇದರ ಜತೆಗೆ ಸಿನೆಮಾದಲ್ಲಿ ನಟಿಸುವ ಆಸಕ್ತಿ. ಅವರಲ್ಲಿ ಈ ಪ್ರತಿಭೆ ಅರಳಲು ಕಾರಣ ಅವರ ತಂದೆತಾಯಿ ಮತ್ತು ಸ್ನೇಹಿತರ ಪ್ರೋತ್ಸಾಹ. ಶಾಲಾ ದಿನಗಳಲ್ಲೂ “ಅತ್ಯುತ್ತಮ ವಿದ್ಯಾರ್ಥಿ’ ಎಂಬ ಮೆಚ್ಚುಗೆಗೆ ಭಾಜನ.

ಅಪಾರ ಆತ್ಮವಿಶ್ವಾಸ, ಆಕಾಂಕ್ಷೆಯುಳ್ಳ ಸುಶಾಂತ್‌ ಬಾಡಿಬಿಲ್ಡಿಂಗ್‌ನಲ್ಲಿ “ಮಿಸ್ಟರ್‌ ಮಂಗಳೂರು 2018ರ ರನ್ನರ್‌ ಅಪ್‌’ ಆದವರಲ್ಲಿ ಮೊದಲಿಗ. ಜತೆಗೆ ಇವರು ದೇಶದ ಟಾಪ್‌ ಮಾಡೆಲಿಸ್ಟ್‌ಗಳಲ್ಲಿ ಒಬ್ಬನಾಗಲು ಹಂಬಲಿಸಿದ್ದೂ ಇದೆ. ತಮ್ಮ ಈ ಎಲ್ಲ ಸಾಧ್ಯಗಳ ಹಿಂದೆ ಪರಿಶ್ರಮ ಮಾತ್ರವಲ್ಲದೆ, ಅಪ್ಪ-ಅಮ್ಮ, ಕುಟುಂಬದವರು ಹಾಗೂ ಸ್ನೇಹಿತರ ಆಶೀರ್ವಾದ ಹಾಗೂ ಪ್ರೋತ್ಸಾಹವಿದೆ ಎಂದು ಹೇಳಲು ಅವರಿಗೆ ಬಹಳ ಹೆಮ್ಮೆ. ಜತೆಗೆ ತಮ್ಮ ಸಲಹೆಗಾರ ನಿತಿನ್‌ ಶ್ರೀಧರ್‌ ಅವರಿಗೂ ಪ್ರೀತಿ-ಕೃತಜ್ಞತೆ ಹೇಳಲು ಮರೆಯುವುದಿಲ್ಲ.

ಪ್ರಸ್ತುತ ಮಂಗಳೂರಿನ ಹೆಸರಾಂತ ಶೇರ್‌ಖಾನ್‌ ಫೈನಾನ್ಸ್‌ ಕಂಪೆನಿಯೊಂದರಲ್ಲಿ ದುಡಿಮೆ. ಮಂಗಳೂರಿನ ಡ್ಯಾನ್ಸ್‌ ಅಕಾಡೆಮಿ “ಅಜೈನ್‌ಶಾಹ್‌’ನ‌ ಟ್ರೈನರ್‌. “ಜಿಮ್‌ ಪಿಜಿಕ್ಯೂ ಹೆಲ್ತ್‌ ಕ್ಲಬ್‌ ಆ್ಯಂಡ್‌ ಬಾಡಿ ಟೋನ್‌’ ಮಂಗಳೂರು ಇಲ್ಲಿ ಜಿಮ್‌ ತರಬೇತಿ. ಈ ನಡುವೆ ಹಲವಾರು ಫೋಟೋ ಶೂಟ್‌ಗಳಲ್ಲಿ ಭಾಗವಹಿಸುತ್ತ ಅಲ್ಲಿಯೂ ಹಲವು ಪ್ರಶಸ್ತಿ-ಪುರಸ್ಕಾರ.

ನಿಮ್ಮ ಆಸಕ್ತಿಯ ಕ್ಷೇತ್ರ ನೃತ್ಯ, ಮಾಡೆಲಿಂಗ್‌, ಸಿನೆಮಾ. ನಿಮಗೆ ಇದರಲ್ಲಿ ವಿಶೇಷ ಆಸಕ್ತಿ ಬೆಳೆಯಲು ಏನು ಕಾರಣ? ಎಂದು ಪ್ರಶ್ನಿಸಿದರೆ, “”ಬಾಲ್ಯದಿಂದಲೂ ನನಗೆ ನೃತ್ಯದಲ್ಲಿ ಬಹಳ ಆಸಕ್ತಿ. ಅದಕ್ಕೆ ಸರಿಯಾಗಿ ನನ್ನ ಅಪ್ಪ-ಅಮ್ಮ ನಾನೊಬ್ಬ ಒಳ್ಳೆಯ ನೃತ್ಯಪಟುವಾಗಬೇಕು ಎಂದು ಆಸೆ ಪಟ್ಟವರು. ಅವರ ಆಶೀರ್ವಾದ ಮತ್ತು ಪ್ರೋತ್ಸಾಹ ನನಗೆ ಈ ಕ್ಷೇತ್ರದಲ್ಲಿ ಬೆಳೆಯಲು ಅವಕಾಶ ಮಾಡಿಕೊಟ್ಟಿದೆ. ಅದಕ್ಕಾಗಿ ಉತ್ತಮ ತರಬೇತಿಯನ್ನೂ ಪಡೆದುಕೊಂಡಿದ್ದೇನೆ” ಎಂದು ಉತ್ತರಿಸುತ್ತಾರೆ.

ನೀವು ಈವರೆಗೆ ಯಾವುದಾದರೂ ಸಿನೆಮಾದಲ್ಲಿ ನಟಿಸಿ ದ್ದೀರಾ? ಎಂದು ಕೇಳಿದರೆ, “”ಇಲ್ಲ , ಇದುವರೆಗೆ ನಟಿಸಿಲ್ಲ. ಆದರೆ, ಮುಂಬರುವ ಚಲನಚಿತ್ರಗಳಲ್ಲಿ ನನಗೆ ಅವಕಾಶಗಳು ಬರುತ್ತಿವೆ. ಈಗ ಅಲ್ಲಿ ಕೆಲಸವನ್ನೂ ಮಾಡುತ್ತಿದ್ದೇನೆ” ಎಂದು ಹೇಳುತ್ತಾರೆ.

ವೃತ್ತಿ ಮತ್ತು ನಿಮ್ಮ ಆಸಕ್ತಿ- ಎರಡನ್ನೂ ಒಟ್ಟಿಗೆ ಹೇಗೆ ನಿಭಾಯಿಯಿಸುತ್ತೀರಿ?  ಕಷ್ಟವೆನಿಸುವುದಿಲ್ಲವೆ? ಎಂದರೂ, “”ನಾವು ಬಯಸಿದ್ದನ್ನು ಸಾಧಿಸಬೇಕಾದರೆ ಸ್ವಲ್ಪ ಕಷ್ಟ ಪಡಬೇಕಾಗುತ್ತದೆ. ಬೆಳಿಗ್ಗೆ ಬೇಗನೆ ಎದ್ದು ಜಿಮ್‌ಗೆ ಹೋಗುತ್ತೇನೆ. ಸಾಯಂಕಾಲ ಕೆಲಸದ ನಂತರ ಫೋಟೋ ಶೂಟ್‌ಗಳಲ್ಲಿ ಭಾಗವಹಿಸುತ್ತೇನೆ. ಜೀವನಕ್ಕೆ ಉದ್ಯೋಗ ಬೇಕೇ ಬೇಕು ಅಲ್ಲವೆ? ನೃತ್ಯ, ಮಾಡೆಲಿಂಗ್‌, ಫೋಟೋ ಶೂಟ್‌ಗಳು ಮನಸ್ಸಿಗೆ ತುಂಬಾ ಸಂತೋಷ ಕೊಡುತ್ತದೆ” ಎಂದೆನ್ನುತ್ತಾರೆ,  ಬಿಡುವಿಲ್ಲದೆ ದುಡಿಯುವ ಈ ಯುವ ಕಲಾವಿದ.

ಸ್ವಾತಿ

ಟಾಪ್ ನ್ಯೂಸ್

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.