ತಾಯಿಯ ಪ್ರೀತಿಗೆ ಕೊನೆಯಿಲ್ಲ
Team Udayavani, Sep 15, 2017, 6:30 AM IST
ಮನೆಯೇ ಮೊದಲ ಪಾಠ ಶಾಲೆ, ಜನನಿಯೇ ಮೊದಲ ಗುರು’ ಈ ಕವಿ ವಾಣಿ ಎಷ್ಟೊಂದು ಅರ್ಥಗರ್ಭಿತವಾಗಿದೆ. ಮಗು ಹುಟ್ಟುವಾಗ ತಾಯಿ ಎಷ್ಟೊಂದು ನೋವನ್ನು ಅನುಭವಿಸುತ್ತಾಳೆ. ಆದರೆ, ಮಗುವಿನ ನಗು ನೋಡಿದ ತಕ್ಷಣ ತನ್ನ ನೋವನ್ನೇ ಮರೆಯುತ್ತಾಳೆ. ಕೈ ತುತ್ತು ನೀಡಿ, ಅಂಬೆಗಾಲಿಡಿಸಿ ಬದುಕಿನುದ್ದಕ್ಕೂ ಮಗುವಿನ ಏಳಿಗೆಗಾಗಿ ಶ್ರಮಿಸುತ್ತಾಳೆ. ಒಮ್ಮೊಮ್ಮೆ ಬೈಯುತ್ತಾಳೆ ತಕ್ಷಣ ಮುದ್ದು ಮಾಡುತ್ತಾಳೆ. ಅಮ್ಮ ಅಂದರೆ ಹಾಗೇ ತಾನೆ ಪದಗಳಿಗೆ ಸಿಗದ ಮಮತೆಯ ಕಡಲು.
“ಅಂತರಗಳಿಲ್ಲದಿಹ ಎಲ್ಲದಿರ ಅರಿವಿರುವ ಅದ್ವೆ„ತ ಸಂಬಂಧ ತಾಯ್ಗೆ ಮಗುವು ತನ್ನೊಳಗೆ ತನುಗೊಳಿಸಿ ಎದೆಯಿಂದ ಹಾಲಿಳಿಸಿ ಕೈಯಲೂ ತುತ್ತಿಡುವ ಮಮತೆ ಸಿಡಿಲು…’ ಆಹಾ… ಎಷ್ಟೊಂದು ಅಂದವಾದ ಕವಿತೆ. ಸಾವಿರಾರು ಮೈಲಿ ದೊರವಿದ್ದರೂ ತನ್ನ ಮಗು ಸ್ವಲ್ಪ ನೋವಲ್ಲಿದ್ದರೂ ಹೆತ್ತವಳ ಹೃದಯ ಮಿಡಿಯುತ್ತದೆ. ಎಲ್ಲರೂ ದೇವಸ್ಥಾನ, ಮಸೀದಿ, ಚರ್ಚ್‌ನಲ್ಲಿ ದೇವರನ್ನು ಹುಡುಕುತ್ತಿ¨ªಾರೆ ಆದರೆ, ಜೀವ ನೀಡಿದ ತಾಯಿಯನ್ನು ಮರೆಯುತ್ತಿದ್ದಾರೆ. ಇದು ಎಂತಹ ವಿಪರ್ಯಾಸ!
ಜಗತ್ತಿನ ಇತರ ಸಂಬಂಧಗಳು ಭಾವನಾತ್ಮಕ, ಮನಸ್ಸಿನಲ್ಲಿ ಕಲ್ಪಿಸಬಹುದು, ಮಾತಿನಲ್ಲಿ ಹೇಳಬಹುದು ಆದರೆ ಅಮ್ಮನ ಪ್ರೀತಿ, ಕರುಳಬಳ್ಳಿಯ ಸಂಬಂಧ. ಜಗತ್ತಿನ ಅದೆಷ್ಟೋ ಬಗೆಯ ಮೃದು ಮೃದುವಾದ ಹಂಸತುಲಕ ಸಂಬಂಧಗಳಿರಬಹುದು.ಮಾತೆಯ ಮಡಿಲಿನಲ್ಲಿ ಮಗುವ ಹಾಗೆ ಮಲಗುವ ಖುಷಿಯೇ ಬೇರೆಯಲ್ಲವೇ. ತಾಯಿ ಎಂದರೆ ದೇವತೆ. ಮಗುವಿನ ಜನನವಾದ ಕ್ಷಣದಿಂದ ಅದು ಸರ್ವಾಂಗೀಣವಾಗಿ ಬೆಳೆಯುವ ತನಕ ಮಗು ತಾಯಿಯ ರಕ್ಷಣೆಯಲ್ಲಿ ಇರುತ್ತದೆ. ತಾಯಿಯಾದವಳು ತನ್ನ ಮಗುವಿಗೆ ಉದಾತ್ತ ವಿಚಾರಗಳಿಂದಲೂ, ಆದರ್ಶ ವ್ಯಕ್ತಿಗಳ ಚರಿತ್ರೆಗಳನ್ನು ಹೇಳುವುದರಿಂದಲೂ ಮಗುವನ್ನು ಪೋಷಿಸುತ್ತಾಳೆ.
ಪ್ರೀತಿಮೂರ್ತಿಯಾದ ತಾಯಿಯನ್ನು ಉಳಿಸಿಕೊಂಡವರೇ ನಿಜವಾದ ಅದೃಷ್ಟವಂತರು. ದೇವರು ಎಲ್ಲ ಕಡೆಗಳಲ್ಲಿ ಇರಲೂ ಸಾಧ್ಯವಿಲ್ಲವೆಂದು ತಾಯಿಯ ರೂಪದಲ್ಲಿ ಅವನಿರುತ್ತಾನೆ ಎಂಬ ಮಾತಿದೆ, ಈ ಮಾತು ನಿಜನಾ? ಮಾತೆ ಎಲ್ಲ ಸುಖಗಳನ್ನು ಧಾರೆಯೆರೆದೆ ಎನಗೆ… ನಿನ್ನ ಮಮತೆಗೆ ಕೊನೆಯೆಂಬುದು ಎಲ್ಲಿದೆ?
– ಗ್ರೀಷ್ಮಾ
ವಿ. ವಿ. ಕಾಲೇಜು, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.