ಸಂಗೀತ ಸಮಯ
Team Udayavani, May 5, 2017, 2:51 PM IST
ಕೌಸಲ್ಯ ಸುಪ್ರಜಾ ರಾಮಾ ಪೂರ್ವ ಸಂಧ್ಯಾ ಪ್ರವರ್ತತೇ ಉತ್ತಿಷ್ಠ ನರಶಾದೂìಲ ಕರ್ತವ್ಯಂ ದೈವಮಾಹಿ°ಕಂ… ಆಹಾ! ಮುಂಜಾನೆಯ ಪ್ರಶಾಂತವಾದ ವಾತಾವರಣದಲ್ಲಿ ಕನಸಿನ ಲೋಕದಿಂದ ವಾಸ್ತವದ ಲೋಕಕ್ಕೆ ಬರುವ ಗಳಿಗೆಯಲ್ಲಿ ಇಂತಹ ಸುಮಧುರವಾದ ಸುಪ್ರಭಾತ ಕಿವಿಯ ಮೇಲೆ ಬಿದ್ದಾಗ ಮೈ ಮನಸ್ಸೆಲ್ಲವೂ ಪುಳಕಿತವಾಗುತ್ತದೆ. ಪ್ರತಿ ಮುಂಜಾನೆಯು ಒಂದು ಆರಂಭದಂತೆ. ಈ ಆರಂಭವು ಹಿತಕರವಾಗಿದ್ದರೆ ಮುಂದಿನ ಎಲ್ಲ ಕೆಲಸಗಳು ಸರಾಗವಾಗಿ, ಲವಲವಿಕೆಯಿಂದ ನಡೆಯುತ್ತದೆ.
ಈ ಸಂಗೀತಕ್ಕೆ ಅದರದ್ದೇ ಆದ ವಿಶಿಷ್ಟವಾದ ಶಕ್ತಿಯಿದೆ ; ಒಂದು ಮನಸ್ಸನ್ನು, ಒಬ್ಬ ವ್ಯಕ್ತಿಯನ್ನು ಅಥವಾ ಒಂದು ಆಲೋಚನೆಯನ್ನು ಬದಲಾಯಿಸುವಂತಹ ಶಕ್ತಿ ಇದೆ ಅಂದರೆ ಅದು ಸಂಗೀತಕ್ಕೆ ಮಾತ್ರ. ನಮ್ಮ ಸಂತೋಷದ ಕ್ಷಣಗಳಿಗೆ ಸಾಥ್ ನೀಡಿ ಆಹ್ಲಾದವನ್ನುಂಟುಮಾಡುತ್ತದೆ. ದುಃಖವನ್ನು ಮರೆತು ಖುಷಿಯಾಗಿರಲು ಸಹಾಯ ಮಾಡುತ್ತದೆ. ಸಂಗೀತ ಒಂದೇ ಆದರೂ ಭಿನ್ನವಾದ ಸನ್ನಿವೇಶಗಳಲ್ಲಿ ಭಿನ್ನವಾಗಿ ಇರುತ್ತದೆ. ಇಂತಹ ಸಂಗೀತವನ್ನು ಇಷ್ಟ ಪಡದೇ ಇರುವವರು ಕೇವಲ ಬೆರಳೆಣಿಕೆಯಷ್ಟು ಜನ.
ಬದಲಾವಣೆ ಜಗದ ನಿಯಮ ಎಂಬಂತೆ ಸಮಯ ಬದಲಾದಂತೆ ಸಂಗೀತ ಮತ್ತು ಅದರ ಧಾಟಿ, ರಾಗ, ಸಂಯೋಜನೆ, ರಚನೆ ಎಲ್ಲವೂ ಭಿನ್ನ ರೀತಿಯಲ್ಲಿ ಬದಲಾಗುತ್ತಿದೆ. ಜನರ ಆಸಕ್ತಿ, ಬಯಕೆಗೆ ತಕ್ಕಂತೆ ಹಾಡುಗಳು ಈಗ ರೂಪುಗೊಳ್ಳುತ್ತಿದೆ. ಎಲ್ಲಾ ರೀತಿಯ ಸನ್ನಿವೇಶಗಳಿಗೂ ಅದಕ್ಕೆ ತಕ್ಕಂತೆ ರೂಪುಗೊಂಡಿರುವ ಹಾಡುಗಳಿರುತ್ತದೆ. ಬಹುಶಃ ಸಂಗೀತಕ್ಕೆ ಮಾರು ಹೋಗದವರು ಇರುವುದೇ ಅತಿ ವಿರಳ. ಈಗಿನ ಯುವಜನತೆಯಂತೂ ಮೊದಲಿನವರಿಗಿಂತ ಹೆಚ್ಚಾಗಿ ಸಂಗೀತಪ್ರಿಯರಾಗಿದ್ದಾರೆ. ಈಗಂತೂ ಎಲ್ಲರ ಬಳಿಯೂ ಮೊಬೈಲ್ ಇರುವುದರಿಂದ ಯಾರು ಬೇಕಾದರೂ, ಯಾವಾಗ ಬೇಕಾದರೂ, ಅವರಿಗೆ ಬೇಕಾದ ಹಾಡುಗಳನ್ನು ಆಲಿಸಬಹುದಾಗಿದೆ. ಈಗಿನ ಒತ್ತಡದ ಜೀವನದಲ್ಲಿ ಜನರಿಗೆ ಶಾಂತಿ, ನೆಮ್ಮದಿ ಸಿಗುವುದೇ ಅತಿ ವಿರಳ, ಹೀಗಿರುವಾಗ ಜನರು ತಮ್ಮ ಮನಸ್ಸಿನ ಶಾಂತಿಗಾಗಿ ಏನೇನೋ ದಾರಿ ಹುಡುಕುತ್ತಾರೆ. ಆದರೆ ಸಂಗೀತವು ಮನಸ್ಸಿನ ಶಾಂತಿಗೆ ಸಿಗಬಹುದಾದ ಸುಲಭದ ಮಾರ್ಗವಾಗಿದೆ.
ನಾವು ಕಲ್ಪನಾಶೀಲರು/ಕಲ್ಪನಾಶಾಲಿಗಳು ಏನನ್ನು ಬೇಕಾದರೂ ಕಲ್ಪಿಸಿಕೊಳ್ಳುವ ಶಕ್ತಿ ನಮಗಿದೆ. ನಾವು ಸಂಗೀತವನ್ನು ಕೇವಲ ಆಲಿಸಬಹುದಾಗಿದೆ. ಆದರೆ ನಾವು ಒಂದು ಹಾಡಿನ ಆಳಕ್ಕೆ ಇಳಿದಾಗ ಅದರ ಸಂಪೂರ್ಣ ಚಿತ್ರಣ ನಮ್ಮ ಮನಸ್ಸಿನಲ್ಲಿ ಮೂಡುತ್ತದೆ. ಆ ಹಾಡಿನ ಅರ್ಥ, ಸಂದೇಶ, ಇಂಪಾದ ರಾಗ, ದನಿ ಇವೆಲ್ಲವೂ ಮನಸ್ಸನ್ನು ಆವರಿಸಿದಾಗ ನಮ್ಮನ್ನು ನಾವು ಒಂದು ಕ್ಷಣ ಮರೆಯುವಂತೆ ಮಾಡುತ್ತದೆ. ಈಗಿನ ಜನರಂತೂ ಯಾವಾಗ ನೋಡಿದರೂ ಹೆಡ್‌ಫೋನ್/ಇಯರ್‌ಫೋನನ್ನು ಕಿವಿಗೆ ಸಿಕ್ಕಿಸಿಕೊಂಡು ಹಾಡುಗಳನ್ನು ಕೇಳುತ್ತಿರುತ್ತಾರೆ. ಈ ಹಾಡುಗಳು ಜನರ ಮನಸ್ಸಿನ ಮೇಲೆ ಎಷ್ಟು ಪ್ರಭಾವ ಬೀರುತ್ತದೆ ಅಂದರೆ ಜೀವನದಲ್ಲಿ ಭರವಸೆಯನ್ನು ಕಳೆದುಕೊಂಡಿರುವ ಜನರಿಗೆ ಭರವಸೆಯನ್ನು ಮೂಡಿಸುತ್ತದೆ, ದುಃಖದಲ್ಲಿರುವ ಜನರಿಗೆ ಸಾಂತ್ವಾನವನ್ನು ನೀಡುತ್ತದೆ, ನಮ್ಮ ಆಸೆ, ಆಕಾಂಕ್ಷೆ, ನಿರೀಕ್ಷೆ, ಸಂತೋಷವನ್ನು ವಿವರಿಸುತ್ತದೆ. ಅನೇಕ ಜನರು ತಾವು ಯಾರ ಬಳಿಯೂ ಹೇಳಿಕೊಳ್ಳಲಾಗದ ತಮ್ಮ ಭಾವನೆಗಳನ್ನು, ಆಸೆಗಳನ್ನು, ನಿರೀಕ್ಷೆಗಳನ್ನು ಹಾಡಿನ ಮೂಲಕ ತಿಳಿಸುತ್ತಾರೆ.
ನಮ್ಮ ಧಾರ್ಮಿಕ ಆಚರಣೆಗಳು, ಹಬ್ಬಗಳ ಸಮಯದಲ್ಲಿ ಭಕ್ತಿಗೀತೆಗಳು, ದೇವರ ಸ್ತೋತ್ರಗಳನ್ನು ಕೇಳಿದಾಗ ಮನಸ್ಸಲ್ಲಿ ಭಕ್ತಿ-ಭಾವ ಮೂಡುತ್ತದೆ. ಲೌಕಿಕ ಜೀವನವನ್ನು ಮರೆತು ಆ ಕ್ಷಣದಲ್ಲಿ ನಮ್ಮ ಮನಸ್ಸು ಭಕ್ತಿಪರವಶವಾಗುತ್ತದೆ. ಇನ್ನು ಮದುವೆ, ಹೊಸ ವರ್ಷಾಚರಣೆ, ಬರ್ತ್‌ಡೇ ಇಂತಹ ಸಮಯಗಳಲ್ಲಿ ಜನರು ತಮಗೆ ಇಷ್ಟವಾದ ಹಾಡುಗಳಿಗೆ ಅದಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಸಂತೋಷಪಡುತ್ತಾರೆ. ಅಲ್ಲದೇ ಇತ್ತೀಚಿನ ಹಾಡುಗಳಂತೂ ಯಾರನ್ನೂ ಹುಚ್ಚೆದ್ದು ಕುಣಿಯುವಂತೆ ಮಾಡುತ್ತಿದೆ.
ಕಾಲಚಕ್ರವು ಉರುಳಿದಂತೆ ನಮ್ಮ ಮನಸ್ಸು, ಅಭಿರುಚಿ, ಆಸೆ, ಆಕಾಂಕ್ಷೆಗಳು ಬದಲಾಗುತ್ತಾ ಹೋಗುತ್ತದೆ. ಆದರೆ ನಮಗೆ ಸಂಗೀತದ ಮೇಲಿರುವ ವ್ಯಾಮೋಹ ಎಂದಿಗೂ ಕಡಿಮೆಯಾಗುವುದಿಲ್ಲ.
– ರಕ್ಷಿತಾ ಕುಮಾರಿ ತೋಡಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.