ನನ್ನ ಮೊದಲ ಭಾಷಣ


Team Udayavani, Jan 26, 2018, 12:54 PM IST

26-41.jpg

ಪತ್ರಕರ್ತನಾಗಬೇಕೆಂಬ ಹಂಬಲ, ಅದರೊಂದಿಗಿಷ್ಟು ಕ್ರಿಯಾತ್ಮಕ ಬರವಣಿಗೆ, ನಿರರ್ಗಳವಾದ ಮಾತುಗಾರಿಕೆ, ಪೊಟೋಗ್ರಫಿ ಮೇಲೆ ಹಿಡಿತ ಸಾಧಿಸಬೇಕೆಂಬ ಛಲದೊಂದಿಗೆ ನಾನು ಆಯ್ಕೆ ಮಾಡಿಕೊಂಡ ಕಾಲೇಜು ಎಸ್‌.ಡಿ.ಎಂ. ಕಾಲೇಜು ಉಜಿರೆ. ನಮ್ಮ ಪತ್ರಿಕೋದ್ಯಮ ತರಗತಿಯಲ್ಲಿ ಪಠ್ಯದ ಜೊತೆಗೆ ಮಾಧ್ಯಮ ಲೋಕದಲ್ಲಿ ಆಗುತ್ತಿರುವ ಆಗುಹೋಗುಗಳು, ನಮ್ಮ  ಸುತ್ತಮುತ್ತದ ಸುದ್ದಿಗಳ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇರುತ್ತದೆ. ತರಗತಿ ಆರಂಭವಾಗುವುಕ್ಕಿಂತ ಮುಂಚೆ ದಿನಕ್ಕೊಬ್ಬರಂತೆ ಯಾವುದಾದರು ಒಂದು ವಿಷಯದ ಬಗ್ಗೆ ಐದು ನಿಮಿಷ ವೇದಿಕೆ ಹತ್ತಿ ಮಾತನಾಡಬೇಕು.

ಅಂದು ಒಂದು ದಿನ ನಾನು ಬೆಳಗ್ಗೆ ಏಳುವಾಗಲೇ ತಡವಾಗಿತ್ತು, ಇಂದು ನನ್ನ ದಿನಚರಿ ಸರ್‌ನ ಬೈಗುಳದೊಂದಿಗೆ ಶುರುವಾಗುವುದೆಂದು ಅಂಜುತ್ತಲೇ ತರಗತಿಗೆ ತೆರಳಿದೆ. ಆದರೆ, ಅಂದು ಆಗಿದ್ದೇ ಬೇರೆ. ತರಗತಿಗೆ ಪ್ರಾಧ್ಯಾಪಕರು ಆವಾಗತಾನೆ ಬಂದಿದ್ದರು, ಬದುಕಿತೋ ಬಡಜೀವವು ಅಂದುಕೊಳ್ಳುತ್ತಲೇ ಖಾಯಂ ಕುಳಿತುಕೊಳ್ಳುವ ಜಾಗದಲ್ಲಿ ಕುಳಿತುಕೊಂಡೆ.

ಸಂಕಟದಿಂದ ಪಾರು ಮಾಡಿದೆ ಗಣೇಶ ಅಂದುಕೊಳ್ಳುವಷ್ಟರಲ್ಲೇ ಪಕ್ಕದಲ್ಲೇ ಕುಳಿತ  ನನ್ನ ಗೆಳೆಯನ ಅಶರೀರವಾಣಿ ಕೇಳಿಸಿತು, “”ಇವತ್ತು ನಿಂದೇ ಫ‌ಸ್ಟ್‌ ಸ್ಪೀಚ್‌” ಎಂದು. ಮಾತುಗಾರಿಕೆಯೆಂದರೆ ನನಗೆ ಬಲು ಇಷ್ಟ . ಆದರೆ ನನಗೆ ಸ್ವಲ್ಪ$ಸ್ಟೇಜ್‌ಫಿಯರ್‌, ಸ್ಟೇಜ್‌ ಮೇಲೆ ಹತ್ತಿದರೆ ಸಾಕು ಹೇಳಬೇಕೆಂದುಕೊಂಡದ್ದೆಲ್ಲ ಮರೆತು ಹೋಗುತ್ತದೆ. 

ಪ್ರಾಧ್ಯಾಪಕರು ಹಾಜರಿ ಹಾಕುವಷ್ಟು ಸಮಯ ಏನು ಮಾತಾನಾಡುವುದೆಂದು ಯೋಚಿಸಿದೆ.  ಆ ಕ್ಷಣಕ್ಕೆ ಏನೂ ತೋಚಲಿಲ್ಲ, ತರಗತಿಯ ಎಲ್ಲಾ ಸಹಪಾಠಿಗಳು ನನ್ನನ್ನೇ ನುಂಗುವಂತೆ  ನೋಡುತ್ತಿದ್ದರು. ಬೆಳಗೆದ್ದು ಯಾರ  ಮುಖವನ್ನು ನೋಡಿದೊ°à ಗೊತ್ತಿಲ್ಲ. ಮೊದಲೆ ಇಂದು ನನ್ನ ಸರದಿ ಎಂದು ತಿಳಿದಿದ್ದರೆ ಬಂಕ್‌ ಹಾಕಬಹುದಿತ್ತು. ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಬಹುದಿತ್ತು ಎಂದು ಮನಸ್ಸಲ್ಲಿ ಎಲ್ಲಾ ದೇವರನ್ನು ನೆನೆಸಿಕೊಂಡು ವಿಷಯಗಳನ್ನು ಹುಡುಕಾಡುವಾಗ, ನನಗೆ ನೆನಪಿಗೆ ಬಂದಿದ್ದೇ ಎನ್‌.ಎಸ್‌.ಎಸ್‌. ಕಾರ್ಯಕ್ರಮ.

 ನಮ್ಮ ಕಾಲೇಜಿನಲ್ಲಿ ಹಿಂದಿನ ವಾರ ಎನ್‌ಎಸ್‌ಎಸ್‌ವತಿಯಿಂದ ವ್ಯಕ್ತಿತ್ವ ವಿಕಸನ, ಮಾದಕ ವ್ಯಸನ ಮುಕ್ತಿ ಕಾರ್ಯಕ್ರಮ ನಡೆದಿತ್ತು. ನನಗೆ ಆ ಕ್ಷಣಕ್ಕೆ ಸಿಕ್ಕ ವಿಷಯವು ಅದೇ ಆಗಿತ್ತು. ನನ್ನ ಮನಸ್ಸು ಸ್ವಲ್ಪಹಗುರವಾಯ್ತು, ಮನಸ್ಸಿನ ಒಳಗೆ ಕೊಂಚ ಹೆದರಿಕೆ ಆಗುತ್ತಿತ್ತು. ಆದರೂ ಅದನ್ನು ವ್ಯಕ್ತಪಡಿಸದೆ ಸ್ಟೇಜಿನ ಮೇಲೆ ನಿಂತು ಮಾತು ಶುರು ಮಾಡಿದೆ.

ಗಟ್ಟಿ ಧ್ವನಿಯಲ್ಲಿ ಮಾತು ಶುರುಮಾಡಿದೆ. ಹೇಳಿ ಕೇಳಿ ನಾನು ಕುಂದಾಪುರದ ಹೈದ. ನಾನು ಮಾತನಾಡುವ ಕನ್ನಡ ಇವರಿಗೆ ಸರಿಯಾಗಿ ಅರ್ಥ ಆಗಲಿಕ್ಕಿಲ್ಲ ಅನ್ನುವ ಸಣ್ಣ ದುರಾಲೋಚನೆ ಮನದ ಮೂಲೆಯಲ್ಲಿ ಮೂಡಿತು, ನೋಡುಗರಿಗೆ “ಹೋ, ಇವನಿಗೆ ಏನೋ ಗೊತ್ತು’ ಅನ್ನಿಸುವ ಹಾಗೆ ಹಾವ ಭಾವದೊಂದಿಗೆ ಮಾತು ಆರಂಭಿಸಿದೆ. ಅಂತೂ ಇಂತೂ ಕೊನೆಗೂ ಐದು ನಿಮಿಷ ಭಾಷಣ ಮುಗಿಸಿ ನನ್ನ ಜಾಗ ಸೇರುವುದರಷ್ಟರಲ್ಲೇ ಮಳೆಗಾಲದಲ್ಲೂ ಬೆವರಿಳಿದು ಹಾಕಿದ ಅಂಗಿ ಸಂಪೂರ್ಣ ಒದ್ದೆಯಾಗಿತ್ತು.

ಸಹಪಾಠಿಗಳ ಎದುರು ನಿಂತು ನಿರರ್ಗಳವಾಗಿ ಮಾತನಾಡುವುದರಿಂದ ನಮ್ಮಲ್ಲಿ ವಿಷಯ ಸಂಗ್ರಹಣೆ ಮತ್ತು ಮಾತನಾಡುವ ಧೈರ್ಯ ಬರುತ್ತದೆ ಎಂಬುದಂತೂ ನನಗೆ ಅಂದು ತಿಳಿದುಬಂದ ಪಾಠ. ನಮ್ಮ ಪತ್ರಿಕೋದ್ಯಮ ತರಗತಿಯಲ್ಲಿ ಈ ಪಸ್ಟ್‌ ಸ್ಪೀಚ್‌ ಎಂಬುದು ತುಂಬಾ ಉತ್ತಮವಾದ ವೇದಿಕೆ, ಈ ಪರಂಪರೆಯಿಂದ ನನ್ನಂಥ ಎಷ್ಟೋ ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಂಡಿದ್ದಾರೆ ಮತ್ತು ಪಡೆದುಕೊಳ್ಳುವವರು ಇನ್ನೂ ತುಂಬಾ ಮಂದಿ ಇದ್ದಾರೆ, ಸ್ಟೇಜ್‌ಫಿಯರ್‌ ಹೋಗಲಾಡಿಸಲು ಬಳಸುವ ಈ ಅಸ್ತ್ರ ನಿಜಕ್ಕೂ ಶ್ಲಾಘನೀಯ.   

ಬಾಲಚಂದ್ರ ಶೆಟ್ಟಿ ಶೇರ್ಡಿ 
ದ್ವಿತೀಯ ಪತ್ರಿಕೋದ್ಯಮ ಎಸ್‌ಡಿಎಮ್‌ ಕಾಲೇಜು, ಉಜಿರೆ                                                              

 

ಟಾಪ್ ನ್ಯೂಸ್

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Team India; A spinner from the Karnataka coast who joined Team India as a replacement for Ashwin

Team India; ಅಶ್ವಿನ್‌ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್‌

1-cris

Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.