ಬದಲಾಗಿಲ್ಲ ಬದಲಾವಣೆಯ ದೃಷ್ಟಿ


Team Udayavani, Aug 9, 2019, 5:10 AM IST

e-11

ಸಾಂದರ್ಭಿಕ ಚಿತ್ರ

ಇತ್ತೀಚಿಗಷ್ಟೇ ಎಂಎಸ್‌ಸಿಯೋ ಎಂಕಾಮೋ ಅಥವಾ ಅಂತಹುದೇ ಇತರ “ಎಮ್‌’ನಿಂದ ಶುರುವಾಗುವ ಪದವಿ ಮುಗಿಸಿದವರನ್ನು ಮಾತನಾಡಿಸಿ ನೋಡಿ, “”ಹೇಗಿದೆ ಜೀವನ?” ಅಂತದ್ರೆ, “”ಹಾಗೇ ಇದೆ. ಏನೂ ಬದಲಾಗಿಲ್ಲ…” ಅನ್ನುತ್ತಾರೆ. ಶಿಕ್ಷಣ ವ್ಯವಸ್ಥೆಯ ದೋಷವೋ, ವಿದ್ಯಾರ್ಥಿಗಳ ದೋಷವೋ, ಅಥವಾ ಹೆಚ್ಚುತ್ತಿರುವ ಭಾರತದ ಜನಸಂಖ್ಯೆಯ ದೋಷವೋ ಗೊತ್ತಿಲ್ಲ, ಶಿಕ್ಷಣ ಪಡೆದೂ ನಮ್ಮ ಜೀವನದಲ್ಲಿ ಏನೂ ಬದಲಾಗಿಲ್ಲ- ಅಂದರೆ ಯೋಚಿಸಬೇಕಾದ ವಿಷಯವೆ!

“”ಪಿ.ಜಿ.ಗೆ ಸೇರುವ ಮುನ್ನ ಎರಡು ವರ್ಷ ಚಿಕ್ಕವರಿದ್ದೆವು. ಈಗ ಎರಡು ವರ್ಷ ದೊಡ್ಡವರಾಗಿದ್ದೇವೆ”- ಇದೇ ಎಮ್‌ಎಸ್‌ಸಿ ಮುಗಿಸಿದ ಮಹಾನುಭಾವರು ಕಂಡುಕೊಂಡ ಬದಲಾವಣೆ. ಯಾವುದೋ ಒಂದು ಪ್ರಕ್ರಿಯೆಗೆ ಒಳಗಾಗುವಾಗ, ವ್ಯವಸ್ಥೆಗೆ ಒಗ್ಗಿಕೊಳ್ಳುವಾಗ, ಮುಂದೇನೋ ಮಹತ್ತರವಾದದ್ದು ಸಂಭವಿಸಲಿದೆ ಅಂತ ಬಹಳ ವಿಶ್ವಾಸ ಇಟ್ಟುಕೊಂಡಿರುತ್ತೇವೆ. ಶನಿಕಥೆ ಪೂಜೆ ಮಾಡಿಸಿದ ಕೂಡಲೇ ಶನಿದೋಷ ಮಾಯವಾಗುತ್ತದೆ, ಗ್ರೀನ್‌ ಟೀ ಕುಡಿಯುತ್ತಿದ್ದರೆ ತೂಕ ಕಡಿಮೆಯಾಗುತ್ತದೆ, ಬಿಸಿಹಾಲಿಗೆ ಅರಸಿನ ಹಾಕಿ ದಿನಾ ಕುಡಿದರೆ ಶೀತ ನಿಯಂತ್ರಣಕ್ಕೆ ಬರುತ್ತದೆ, ಎಲ್ಲಕ್ಕಿಂತ ಮುಖ್ಯವಾಗಿ ಕಲಿತ ಕೂಡಲೇ ಕೆಲಸ ಸಿಗುತ್ತದೆ- ಎಂದೋ ಬರುವ ರಾಮನಿಗಾಗಿ ದಿನವೂ ಹಣ್ಣು ಆಯ್ದಿಡುತ್ತಿದ್ದ ಶಬರಿಯ ಹಾಗೆ, ಎಂದೋ ಘಟಿಸಲಿರುವ ಬಹುನಿರೀಕ್ಷಿತ ಅಂತ್ಯಕ್ಕೆ ಈಗ ಅನುಭವಿಸುತ್ತಿರುವ ಕಷ್ಟಗಳನ್ನೆಲ್ಲ ನುಂಗಿಕೊಂಡು ಕಾಯುತ್ತಿರುತ್ತೇವೆ. ಅಷ್ಟಾದರೂ ಮೊದಲು ಮತ್ತು ನಂತರವನ್ನು ಪ್ರತ್ಯೇಕಿಸಲಾಗದ ಏನೂ ಬದಲಾಗಿಲ್ಲ ಎಂಬ ದುಃಖ ತರುವ ಪ್ರಸಂಗಗಳು ನಡೆಯುತ್ತಲೇ ಇರುತ್ತವೆ.

ಒಮ್ಮೆ ಕಾಲೇಜಿನಲ್ಲಿ ಆಯೋಜಿಸಿದ್ದ ಮೂರು ದಿನದ ಕಾರ್ಯಾಗಾರಕ್ಕೆ ಬಂದಿದ್ದ ಸಂಪನ್ಮೂಲ ವ್ಯಕ್ತಿಯೊಬ್ಬರು, “”ಇವತ್ತು ಕೆಳಹಂತದ ಕೆಲವು ವಿಚಾರಗಳನ್ನು ಹೇಳ್ತೇನೆ, ನಾಳೆ ಮುಂದುವರಿದ ಹಂತದ ಕೆಲವು ವಿಚಾರಗಳನ್ನು ಹೇಳ್ತೇನೆ. ಮೂರನೆಯ ದಿನ ಸೀದಾ ಟೇಕಾಫ್ (ಕೈಯನ್ನು ವಿಮಾನದಂತೆ ಗಾಳಿಯಲ್ಲಿ ಆಡಿಸಿ) ಆಕಾಶದಲ್ಲೆ!” ಅವರ ಮಾತುಗಳನ್ನು ಎಲ್ಲರೂ ಬಾಯ್ಬಿಟ್ಟು ಕಿವಿಕೊಟ್ಟು ಕೇಳಿದ್ದೇ ಕೇಳಿದ್ದು- ಮೂರನೆಯ ದಿನದ ಕಾರ್ಯಾಗಾರದ ಕೊನೆಯವರೆಗೂ ಆಕಾಶ ಬಿಡಿ, ನೆಲದಲ್ಲೇ ನಡೆದಾಡಲು ಕಲಿಸುವ ಲಕ್ಷಣ ಕಾಣಿಸಲಿಲ್ಲ! ಅಂತರ್ಜಾಲದಲ್ಲಂತೂ ಹೆಚ್ಚು ಹಣ ಹಾಗೂ ಕಡಿಮೆ ಬುದ್ಧಿ ಇದ್ದರೆ ಏನೂ ಬದಲಾಗಿಲ್ಲ ಎಂದು ದುಃಖಪಡಲು ಬೇಕಾದಷ್ಟು ಕೋರ್ಸ್‌ಗಳು ಸಿಗುತ್ತವೆ.

ಕೆಲವು ಸಲ ಬದಲಾವಣೆಗಳು ಸಂಭವಿಸುತ್ತವೆ- ಆದರೆ ಅವು ಸಂಭವಿಸಿದ ಸಮಯ ಹಾಗೂ ರೀತಿ ಹೇಗಿರುತ್ತದೆ ಎಂದರೆ ನಮಗಾಗ ಅವುಗಳಲ್ಲಿ ಆಸಕ್ತಿಯೇ ಇರುವುದಿಲ್ಲ. ಹಾಗಾಗಿಯೇ ಏನೂ ಬದಲಾಗಿಲ್ಲ ಅಂತ ಅಂದುಕೊಳ್ಳುತ್ತಿರುತ್ತೇವೆ. ಯಾವುದೋ ಒಂದು ಸಿನೆಮಾ ನೋಡಲು ಎಷ್ಟೋ ಹಂಬಲಿಸಿರುತ್ತೇವೆ- ಎಷ್ಟೋ ದಿನಗಳು ಕಳೆದು ಅದು ಯೂಟ್ಯೂಬ್‌ನಲ್ಲಿಯೋ ಟೆಲಿಗ್ರಾಮ್‌ನಲ್ಲಿಯೋ ಸಿಕ್ಕಾಗ ನೋಡಲು ಆಸಕ್ತಿಯೇ ಇರುವುದಿಲ್ಲ. ತುಳು ಯಕ್ಷಗಾನದಲ್ಲಿ ವಿಲನ್‌ ಅಬ್ಬರಿಸುತ್ತ ರಾಜನನ್ನು ಕೊಲ್ಲುತ್ತಾನೆ, ರಾಜನ ತಂಗಿಯ ಸೆರಗಿಗೆ ಕೈ ಹಾಕುತ್ತಾನೆ, ರಾಣಿಗೆ ಉಣ್ಣಲು ಕೊಡದೆ ಕೊಲ್ಲುತ್ತಾನೆ, ಇವನನ್ನ ಸೋಲಿಸೋರು ಯಾರೂ ಇಲ್ವೆ ಅಂತ ಸಿಟ್ಟು ಬರುತ್ತದೆ- ಯುಗಯುಗಗಳ ನಂತರ ಬೆಳಗಾಗಿ ರಾಜನ ಮಗ ಬಂದು ವಿಲನ್‌ನನ್ನು ಕೊಲ್ಲುವಷ್ಟರ ಹೊತ್ತಿಗೆ ನಿದ್ದೆ ನೆತ್ತಿಗೇರಿರುತ್ತದೆ. ಒಮ್ಮೆ ಮುಗಿಸ್ರೋ- ಅಂತ ಬಡಬಡಿಸುವಂತಾಗುತ್ತದೆ. ಬದಲಾವಣೆಯ ಮೇಲೆ ಆಸಕ್ತಿಯೇ ಇರಲ್ಲ. ಯಾವುದೋ ಒಂದು ಸಮಾರಂಭಕ್ಕೆ ಅಂತರ್ಜಾಲ ಜಾಲಾಡಿ, ಟೈಲರ್‌ಗೆ ಸಾಕಷ್ಟು ಎಚ್ಚರಿಕೆ-ಸೂಚನೆ ಕೊಟ್ಟು ಹೊಲಿಸಿದ ಅಂಗಿ ಇದೇನಾ? ಅಂತ ಅದನ್ನು ಹಾಕಿಕೊಂಡಾಗ ನಗರ ಸುತ್ತಿ ಮರಳಿದ ಬುದ್ಧನಂತಾಗುತ್ತದೆ ಮನಸ್ಸು!

ಇನ್ನು ಕೆಲವು ಬದಲಾವಣೆಗಳಿವೆ- ಅವು ಸಂಭವಿಸಿದರೂ ನಮ್ಮ ಅರಿವಿಗೇ ಬರಲ್ಲ. ಝೆರಾಕ್ಸ್‌ ಅಂಗಡಿಯಲ್ಲಿ ಇವತ್ತು ಇದ್ದವಳು ಯಾವಾಗಲೂ ಇರುವವಳಲ್ಲ, ಅವಳ ತಂಗಿ- ಗೊತ್ತೇ ಆಗಲಿಲ್ಲ, ಹಾಲಿನವ ಬದಲಾದರೂ ಹಾಲು ಸರಿಯಾದ ಸಮಯಕ್ಕೆ ಬರುತ್ತಿದೆ, ಏನೂ ಬದಲಾವಣೆಯಿಲ್ಲ. ಸರ್‌ ತಮ್ಮ ಕೆಂಪು ಪೆನ್‌ ಬದಲಿಸಿದ್ದಾರೆ, ಹಾಗಂತ ಎಲ್ಲೂ ಅಂಕ ಹೆಚ್ಚು ಕಡಿಮೆ ಆಗಿಲ್ಲ. ಇವೆಲ್ಲಕ್ಕಿಂತಲೂ ಸೊಗಸಾಗಿ ಬದಲಾವಣೆ ತರದ ಬದಲಾವಣೆಯನ್ನು ಶ್ರೀಮಂತ ಅತಿಥಿಯ ವಿರೋಧಭಾಸ (ಟಚrಚಛಟx) ಹೀಗೆ ವಿವರಿಸುತ್ತದೆ.

ಬಡಜನರೇ ತುಂಬಿದ್ದ ಒಂದು ಊರಿತ್ತು. ಅಲ್ಲಿ ಎಲ್ಲರೂ ಬಡವರು ಹಾಗೂ ಸಾಲಗಾರರು. ಪ್ರತಿಯೊಬ್ಬರೂ ಮತ್ತೂಬ್ಬರಿಂದ ಯಾವುದೋ ಕಾರಣಕ್ಕೆ ಸಾಲ ತೆಗೆದುಕೊಂಡಿದ್ದರು, ಮರಳಿಸಲು ಯಾರೊಬ್ಬರಲ್ಲಿಯೂ ಹಣ ಇರಲಿಲ್ಲ. ಆ ಊರಲ್ಲಿ ಒಂದು ವಸತಿ ಗೃಹ ಇತ್ತು. ಅದೂ ನಷ್ಟದಲ್ಲೇ ನಡೆಯುತ್ತಿತ್ತು. ಒಂದು ದಿನ ಒಬ್ಬ ಶ್ರೀಮಂತ ಅತಿಥಿ ಅಲ್ಲಿಗೆ ಬಂದ. ವಸತಿ ಗೃಹದಲ್ಲಿ ಉಳಿಯುವ ಇಚ್ಛೆ ವ್ಯಕ್ತಪಡಿಸಿದ. ವಸತಿ ಗೃಹದ ಮ್ಯಾನೇಜರ್‌ ಉಳಿಯುವ ಮುನ್ನ ಅತಿಥಿಯು ಮುಂಗಡವಾಗಿ ಸ್ವಲ್ಪ ಹಣ ಪಾವತಿಸಬೇಕೆಂದೂ, ಅತಿಥಿಗೆ ವಸತಿಗೃಹ ಇಷ್ಟವಾಗದಿದ್ದರೆ ಅದನ್ನು ಮರಳಿಸಲಾಗುವುದು ಎಂದೂ ಹೇಳಿದ. ಅತಿಥಿ ಒಪ್ಪಿ ಮುಂಗಡ ಹಣ ಪಾವತಿಸಿದ. ವಸತಿಗೃಹದ ಅಡುಗೆಯವನ ಮೂರು ತಿಂಗಳ ಸಂಬಳ ಬಾಕಿ ಇತ್ತು ಹಾಗೂ ಆ ಹಣ ಅತಿಥಿ ಪಾವತಿಸಿದ ಮುಂಗಡ ಹಣಕ್ಕೆ ಸಮವಾಗಿತ್ತು. ಮ್ಯಾನೇಜರ್‌ ಅಡುಗೆಯವನಿಗೆ ಮೂರು ತಿಂಗಳ ಸಂಬಳ ತೆಗೆದುಕೊಳ್ಳೆಂದು ಹೇಳಿ ಆ ಹಣ ನೀಡಿದ. ಅಡುಗೆಯವನು ಹಿಂದೊಮ್ಮೆ ದಿನಸಿ ಅಂಗಡಿಯವನ ಬಳಿ ಸಾಲ ಮಾಡಿದ್ದ. ಈಗ ನೋಡಿದರೆ ತನಗೆ ಸಿಕ್ಕ ಸಂಬಳವೂ ದಿನಸಿಯವನ ಸಾಲದ ಹಣವೂ ಸರಿಸಮವಾಗಿದೆ. ಅವನು ಕೂಡಲೇ ದಿನಸಿ ಅಂಗಡಿಯವನ ಸಾಲ ತೀರಿಸಿದ. ದಿನಸಿ ಅಂಗಡಿಯವ ತನ್ನ ಮಡದಿಯ ಕಾಯಿಲೆಗೆ ಮದ್ದು ಮಾಡಿದ ವೈದ್ಯರ ಫೀಸ್‌ ಪಾವತಿಸಿರಲಿಲ್ಲ. ಅಡುಗೆಯವ ತೀರಿಸಿದ ಸಾಲ ಹಾಗೂ ವೈದ್ಯನ ಬಾಕಿ ಹಣ ಸಮವಾಗಿದೆ. ಅವನೂ ಕೂಡಲೇ ವೈದ್ಯನ ಫೀಸ್‌ ಕಟ್ಟಿದ. ವೈದ್ಯ ತನ್ನೊಂದಿಗೆ ಕೆಲಸ ಮಾಡುತ್ತಿದ್ದ ನರ್ಸ್‌ ನ ಸಂಬಳ ಬಾಕಿ ಇಟ್ಟಿದ್ದ. ತನಗೀಗ ಬಂದ ಹಣವೂ ಸಂಬಳದ ಮೊತ್ತವೂ ಒಂದೇ ಆಗಿರೋದನ್ನ ಗಮನಿಸಿದ ಆತ ಕೂಡಲೇ ಅವಳ ಸಂಬಳ ಪಾವತಿಸಿದ. ಆ ನರ್ಸ್‌ ಆ ಊರಿಗೆ ಹೊಸತಾಗಿ ಬಂದಿದ್ದಳು ಹಾಗೂ ಮನೆಯ ವ್ಯವಸ್ಥೆ ಆಗಿರದ ಕಾರಣ ವಸತಿಗೃಹದಲ್ಲಿ ಉಳಿದುಕೊಂಡಿದ್ದಳು, ಸಂಬಳ ಬಾರದೇ ಇದ್ದುದರಿಂದ ಬಾಡಿಗೆ ಕೊಟ್ಟಿರಲಿಲ್ಲ. ಈಗ ಸಂಬಳ ಬಂತು, ಮ್ಯಾನೇಜರ್‌ಗೆ ಬಾಡಿಗೆ ಹಣ ಕೊಟ್ಟಳು. ಅಷ್ಟರಲ್ಲಿ ಶ್ರೀಮಂತ ಅತಿಥಿ ಬಂದ- ತನಗೆ ವಸತಿಗೃಹ ಇಷ್ಟವಾಗಿಲ್ಲ, ಹಣ ಮರಳಿಸಿ- ಅಂತಂದ. ಮ್ಯಾನೇಜರ್‌ ಹಣ ಮರಳಿಸಿ ಕೊಟ್ಟ.

ಹಣ ಒಂದು ಸುತ್ತು ಹಾಕಿ ಬಂದದ್ದರಿಂದ ಅವರೆಲ್ಲರ ಸಾಲ ತೀರಿದಂತಾಯ್ತು. ಆದರೆ, ಅವರಲ್ಲಿ ಯಾರ ಬಳಿಯೂ ಹಣವಿಲ್ಲ. ಹಾಗಾಗಿ, ಸಾಲ ತೀರುವ ಮೊದಲು ಹಾಗೂ ನಂತರದ ಅವರ ಹಣಕಾಸಿನ ಸ್ಥಿತಿ- ಏನೂ ಬದಲಾಗಿಲ್ಲ!

ಯಶಸ್ವಿನಿ ಕದ್ರಿ

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.